ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು - ಜಗ ಪ ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ ಅ ಗುರು ಹಿರಿಯರನು ಕಂಡು ಮುರುಕಿಸುವ ಮೋರೆಯಲಿಅರೆಮತಿಯ ಕೊಂಕು ಮಾತುಗಳನಾಡಿಚರಣಕೆರಗದ ಮನುಜರಿರಬಾರದೆಂದೆನುತಮರಮುರಿದು ಒರಗಿ ಸಾಯಲಿ ಎಂದು ನಡುಗಿದೆಯ1 ಉತ್ತಮರ ಹೊಟ್ಟೆಯಲಿ ಬಗಳೊ ಶ್ವಾನವು ಹುಟ್ಟಿಹೆತ್ತವರ ನಿರ್ಬಂಧಕೊಳಗು ಮಾಡಿಅತ್ತೆ ಮಾವರ ಕೀರ್ತಿಯ ಕೊಂಡಾಡುವಧಮರಹೊತ್ತು ಇರಲಾರೆನೆನುತ ಮತ್ತೆ ನಡುಗಿದೆಯ2 ಕಳ್ಳತನವನು ಕಲಿತು ಕಾಲೋಚಿತವ ಕೇಳ್ದುಸುಳ್ಳು ಮಾತುಗಳಾಡಿ ಒಡಲ ಪೊರೆದುಕೊಳ್ಳಿ ದೆವ್ವಗಳಂತೆ ಅಲೆದಾಡುತಿರುವಂಥಸುಳ್ಳು ಮನುಜರ ಹೊರಲಾರೆನೆಂದು ನಡುಗಿದೆಯ 3 ಕಲಿಯುಗದಿ ಮುರಹರನ ಸ್ಮರಣೆಯನು ಮಾಡದೆಯೆಸಲೆ ಭಕ್ತಿಯಿಂ ವೇದಶಾಸ್ತ್ರವನೋದದೆಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾ-ನೊಲಿದು ಹೊರಲಾರೆನೆಂದು ನಡುಗಿದೆಯ 4 ಧರೆಯೊಳಗೆ ಕರ್ಮಿಗಳು ಹೆಚ್ಚಿ ಕವಿತ್ವವ ಕಲಿತುನರಕುರಿಗಳೆಲ್ಲರು ನಡೆಗೆಟ್ಟರೆಂದುಗುರುವೆ ಕೇಳಯ್ಯ ಕನಕ ಪ್ರಿಯ ತಿರುಪತಿಯಗಿರಿಯಾದಿಕೇಶವನೆ ಒಲಿದು ನಿಲ್ಲಿಸಿದ 5
--------------
ಕನಕದಾಸ
ಕೆಟ್ಟದು ಮೋಹ ಕೆಟ್ಟದು ಈ ನಷ್ಟ ವಿಷಯಕೆ ಬಿದ್ದು ನಾರಿ ಪಾಲಾಗೋದು ಪ ಕರುಳ ಭಾವಕೆ ಸೋತು ಕುಚದ ಭಾರಕೆ ಸೋತುಸಿರಿಮುಡಿ ವೇಣಿ ಶಿಸ್ತಿಗೆ ಸೋತುಕಿರುನಗೆಗೆ ತಾ ಸೋತುಉರಿಯ ಮೋಹಕೆ ಬಿದ್ದ ಚಿಟ್ಟೆಯಂತೊರಲುವುದು 1 ಕಣ್ಣ ಭಾವಕೆ ಸೋತು ಕದಪುಗಳಿಗೆ ಸೋತುನುಣ್ಣನೆಯ ಮೋರೆಯ ನುಣುಪಿಗೆ ಸೋತುಸಣ್ಣ ಹಲ್ಲಿಗೆ ಸೋತು ಸುಮನಾಸಿಕಕೆ ಸೋತುಸುಣ್ಣ ನೀರಲಿ ಕೂಡಿ ಕುದಿವಂತೆ ಕುದಿವುದು 2 ಬಳಲು ನಡೆಗೆ ಸೋತು ಬಡ ನಡುವಿಗೆ ಸೋತುಸುಳಿನಾಭಿಗೆ ಮೆರೆವ ಸುತ್ರಿವಳಿಗೆ ಸೋತುಸುಲಭ ಚಿದಾನಂದ ಸುಪಥವ ಕಾಣದೆತಲೆ ಕೆಳಕಾಗಿ ನರಕಕ್ಕೆ ತೆರಳುವುದು3
--------------
ಚಿದಾನಂದ ಅವಧೂತರು
ಎಂಥ ಉಪಕಾರಿಗಳು ಸುಜನರು ಶ್ರೀಕಾಂತ ನಿನ್ನೊಲುಮೆಯ ಉಪಾಯದೋರುವರು ಪ.ಅಜ್ಞಾನ ಕತ್ತಲೆಯೊಳು ಎಡಹಿ ನಡೆಗೆಟ್ಟಡಿ ಯವÀ? ರಿಗೆಸುಜ್ಞಾನವೆಂಬ ಅಂಜನವನಿಟ್ಟುಪ್ರಜ್ಞಾಪೂರ್ಣರ ಶಾಸ್ತ್ರಪ್ರಭೆಯಲ್ಲಿ ಪಥವಿಡಿಸಿಯಜೆÕೀಶ ನಿನ್ನ ಬಳಗವ ಕೂಡಿಸುವರೊ 1ಭವತಾಪದಲಿ ಬಳಲಿ ಎದೆಯಾರಿದರಿಗೆ ಸನ್ನವಭಕ್ತಿಯಮೃತ ರಸವಾರಿನಿಧಿಯಸವಿದೋರಿ ಸ್ನಾನಪಾನವ ಕಲಿಸಿ ಸುಖವಿತ್ತುಸವಿಯದಾನಂದ ಉರದಲಿ ಪೊಯ್ದಿಡುವರು 2ವಿಷಮ ವಿಷಯ ಧ್ಯಾನ ದಾರಿದ್ರ್ಯ ಪೀಡಿತಮಾನುಷರ ಜಂಗುಳಿಗೆ ವೈರಾಗ್ಯವೆಂಬಅಸಮಭಾಗ್ಯವನಿತ್ತುಭವಬಿಡಿಸಿ ಸಲಹಿ ಅಕಲ್ಮಷ ಪ್ರಸನ್ನವೆಂಕಟಪತಿಯ ನಂಬಿಸಿದರು 3
--------------
ಪ್ರಸನ್ನವೆಂಕಟದಾಸರು