ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ದೇವ ಶರಣ ಸಂಜೀವ ಮರೆಯದಿರೆನ್ನನು ಮನೆಯೊಳಗಿರುವ ಪ. ಸಿರಿನಲ್ಲ ನೀ ಬೆಂಬಲ ವಲ್ಲದೆ ಬೇರೆ ದಾತರಿಲ್ಲವೆಂಬುದು ಸಿದ್ಧ 1 ಆದರು ಲೌಕಿಕವಾದ ಲಾಭಗಳನ್ನು ನೀ ದಯಮಾಡುವ ಹಾದಿಯನರಿಯೆನು ವ್ಯರ್ಥಹಂಕೃತಿಯಿಂದ ಧೂರ್ತನಾದೆನು ಕೃಷ್ಣ ಕರ್ತ ನೀ ಕರುಣದಿ ಕರಸಿಕೊ ಬೇಗ 2 ಚಂದನ ವಿಗ್ರಹ ಚೆಲುವ ಶೋಭಿತ ಗ್ರಹ ಹೊಂದದಿರಾಗ್ರಹ ಹರಿಸು ಸರ್ವಾಗ್ರಹ 3 ನೋಡದೆ ನಿನ್ನನು ನಡುವಿಲಿ ನೆನೆದೆನು ಬೇಡಿಕೊಂಬೆನು ಶ್ರೀಶ ಮೂಡಲಭೂಧರೇಶ 4
--------------
ತುಪಾಕಿ ವೆಂಕಟರಮಣಾಚಾರ್ಯ
ಬಂದಾ ಗೋವಿಂದನು ಗೋಕುಲದಿಂದ ಆನಂದ ಮುಕುಂದನು ಪ ಅಂದಿಗೆ ಕಿರುಗೆಜ್ಜೆಯು ಘಲುಘಲುರೆನೆ ಮಂದಹಾಸನಗೆಯಿಂದಲಿ ಶ್ರೀಹರಿ ಅ.ಪ ಕರದಿ ಕಂಕಣ ವಂಕಿಯು ಹೊಳೆಯುತಲಿ ಸಿರದಿ ಕಿರೀಟ ಮುಂ- ಗುರುಳು ಮುಖ ಬೆವರಿನ ಹೊಸ ಕಾಂತಿಯಲಿ ಬೆರಳುಗಳಲಿ ಉಂಗುರ ಥಳಥಳಥಳ ಹೊಳೆಯುವ ಸೊಬಗಿನಲಿ ಕೊರಳೊಳು ಸರಿಗಿಯ ಸರ ಪರಿ ಸರ ಪದಕಗಳ್ಹೊಳೆಯುತಲಿ ಜರಿ ಪೀತಾಂಬರದ ನಡುವಿಲಿ ಕಿರು ಗೆಜ್ಜೆಗಳ್ಹೊಳೆಯುತಲಿ ತರುತುರು ತರುಣೇರು ಮರುಳಾಗುವ ತೆರ ಪರಿಪರಿ ರಾಗದಿ ಮುರಳಿಯ ನುಡಿಸಲು ಸುರರು ಪುಷ್ಪ ವೃಷ್ಟಿಯ ಸುರಿಸುತಲಿರೆ ತುರುಕರು ಮಧ್ಯದಿ ಪೊಳೆವೊ ಚಂದ್ರಮನಂತೆ1 ತುಂಬುರು ನಾರದರೆಲ್ಲರು ಕೂಡಿ ಅಂಬರದಲಿ ನೆರೆದರು ಗಂಧರ್ವಪ್ಸರ ಸ್ತ್ರೀಯರು ಕುಣಿದಾಡಿ ಪರಮಾತ್ಮನ ಸ್ತುತಿಸುತ ರಂಭೆ ಊರ್ವಶಿ ಮೇನಕೆಯರು ಕೂಡಿ ಆನಂದದಿ ನರ್ತಿಸೆ ಇಂದಿರೆ ರಮಣನ ಗುಣಗಳ ಪಾಡಿ ಅಂಬರದಲಿ ದೇವ ದುಂದುಭಿಗಳು ಮೊಳಗಲು ಕಂದರ್ಪನ ಪಿತ ಕರುಣದಿ ಭಕುತರ ಚಂದದಿ ದುರ್ಮತಿ ನಾಮ ವತ್ಸರದಲಿ ಕುಂದಿಲ್ಲದೆ ಸಲಹುವೆನೆನುತಲಿ ತ್ವರ 2 ಸೃಷ್ಟಿಗೀಶನ ಗುಣಗಳ ಪಾಡುತಲಿ ವ- ಶಿಷ್ಠರು ವಿಶ್ವಾಮಿತ್ರ ಕಶ್ಯಪ ಭಾರದ್ವಾಜ ಮುನಿಗಳು ದೇವೇಶನ ಸ್ತುತಿಸುತ ಅತ್ರಿ ಜಮದಗ್ನಿ ಜಾಬಾಲಿಗಳು ಶ್ರೀಕೃಷ್ಣನೆ ಪರನೆಂದು- ತ್ತಮ ಋಷಿಗಳು ಪೊಗಳುತಲಿರಲು ಪರಮೇಷ್ಠಿ ಪಿತನ ತ- ನ್ನಿಷ್ಟ ಭಕುತರನು ಸಲಹಲು ಕಂಕಣ ಕಟ್ಟಿಹ ಕಮಲನಾಭವಿಠ್ಠಲ ತ್ವರ ಶಿಷ್ಟರ ಸಲಹಲು ಸರಸರ ಓಡುತ 3
--------------
ನಿಡಗುರುಕಿ ಜೀವೂಬಾಯಿ
ಬಾರೈ ರಂಗ ಬಾರೈ ಕೃಷ್ಣ ಬಾರೈ ದೇವ ಕೃಷ್ಣತೋರೈ ನಿನ್ನಯ ಚಾರುಚರಣವತೋಯಜಾಕ್ಷಪಘಲು ಘಲುರೆನ್ನುತ ರುಳಿಗೆಜ್ಜೆಯನಿಟ್ಟು ಬಾರೈ ದೇವ ಕೃಷ್ಣಕುಣಿಕುಣಿಯುತ ಬಾ ಕುಂತಿಸುತರಪ್ರಿಯ ಬಾರೈ ದೇವ ಕೃಷ್ಣಥಳಥಳಿಸುವ ಪೀತಾಂಬರ ಹೊಳೆಯುತ ಬಾರೈ ದೇವ ಕೃಷ್ಣನಡುವಿಲಿ ಹೊಳೆಯುತ ಪಟ್ಟೆವಲ್ಲಿಯು ಬಾರೈ ದೇವ ಕೃಷ್ಣ 1ಕಂಕಣ ಕರಭೂಷಣಗಳು ಹೊಳೆಯುತ ಬಾರೈ ದೇವ ಕೃಷ್ಣಪಂಕಜನಾಭಪಾರ್ಥಸಖನೆ ಕೃಷ್ಣ ಬಾರೈ ದೇವ ಕೃಷ್ಣಶಂಖ ಚಕ್ರಗಳ ಧರಿಸುತ ಮುದದಲಿ ಬಾರೈ ದೇವ ಕೃಷ್ಣಶಂಕಿಸದೆಲೆ ಬಾ ಬಿಂಕವ ತೊರೆದು ಬಾರೈ ದೇವ ಕೃಷ್ಣ 2ಮುಂಗುರುಳಲಿ ಮುತ್ತಿನರಳೆಲೆ ಹೊಳೆಯುತಬಾರೈ ದೇವ ಕೃಷ್ಣಶೃಂಗಾರದ ಕಿರೀಟವು ಹೊಳೆಯುತಬಾರೈ ದೇವ ಕೃಷ್ಣಸುಂದರ ಕಸ್ತೂರಿ ತಿಲಕವು ಹೊಳೆಯುತಬಾರೈ ದೇವ ಕೃಷ್ಣಕಂಧರದಲಿ ಶೋಭಿಪ ಪದಕಗಳಿಂದಬಾರೈ ದೇವ ಕೃಷ್ಣ 3ಪೊಂಗೊಳಲೂದುತ ಹೆಂಗಳರೊಡನೆಬಾರೈ ದೇವ ಕೃಷ್ಣಮಂಗಳ ಮಹಿಮ ವಿಹಂಗವಾಹನ ಕೃಷ್ಣಬಾರೈ ದೇವ ಕೃಷ್ಣಅಂಗಳದೊಳಗಾಡುತ ನಲಿಯುತ ಬಲು ಚಂದದಿಬಾರೈ ದೇವ ಕೃಷ್ಣಇಂದಿರೆಯರಸನೆ ವಂದಿಸಿ ಬೇಡುವೆ ಬಾರೈ ದೇವ ಕೃಷ್ಣ 4ಕಿಲಿಕಿಲಿನಗುತಲಿ ಕುಣಿಕುಣಿಯುತಬೇಗ ಬಾರೈ ದೇವ ಕೃಷ್ಣಕನಕಾಭರಣಗಳಿಂದೊಪ್ಪುತ ಬೇಗ ಬಾರೈದೇವ ಕೃಷ್ಣನಲಿನಲಿಯುತ ಬಾ ಮಣಿಯುತ ಬೇಡುವೆಬಾರೈ ದೇವ ಕೃಷ್ಣದಣಿಸದೆ ಕಮಲನಾಭವಿಠ್ಠಲ ಬೇಗ ಬಾರೈ ದೇವ ಕೃಷ್ಣ 5
--------------
ನಿಡಗುರುಕಿ ಜೀವೂಬಾಯಿ