ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿಜನಾಭನ ವನಜಾಂಘ್ರಿಗಳಿಗೆ ಕರವ ಕೊಂಡಾಡುವೆ ಪದವ 1 ದೇವದೈತ್ಯರು ಕೂಡಿ ಪಾಲಾಂಬುಧಿಯಲ್ಲಿ ಮೇರು ಮಂದರವ ಕಡೆಗೋಲು ಮಾಡಿದರು2 ವಾಸುಕಿ ಶರಧಿ ಮಧ್ಯದಲಿ ಹರಿ ಕೂರುಮನಾಗಿ ಮಂದರವನೆತ್ತಿದನು3 ಕಾಲಕೂಟ ವಿಷವಾಯು ಪಾನಮಾಡುತಲಿ ಮಹದೇವ ಕೋಪದಿ ನುಂಗಿ ನೀಲಕಂಠೆನಿಸೆ 4 ಕೌಸ್ತುಭ ಕಾಮಧೇನು ಸುರತರುವು ಹಸ್ತಿ ತೇಜಿಯು ಕಲ್ಪವೃಕ್ಷ ಸುಧೆ ಉದಿಸೆ 5 ಸಿಂಧು ಮಥನವ ಮಾಡಲು ಶ್ರೀದೇವಿ ಜನಿಸೆ ಮಂದಾರಮಾಲೆ ಕೈಯಿಂದಲಿ ಪಿಡಿದು 6 ಅರ್ಕಚಂದ್ರರ ಕಾಂತಿಗಧಿಕಾದ ಮುಖವು ದಿಕ್ಕು ದಿಕ್ಕಿಗೆ ಮಿಂಚಿನಂತೆ ಹೊಳೆಯುತಲಿ 7 ವಜ್ರಾಭರಣವು ಕಾಲಗೆಜ್ಜೆ ಸರಪಳಿಯು ಮಲ್ಲಿಗೆ ಕುಸುಮಗಳೊಂದೊಂದ್ಹೆಜ್ಜೆಗುದುರುತಲಿ 8 ಕುಡಿಹುಬ್ಬು ಕಡೆಗಣ್ಣ ನೋಡುತಲಿ ನಡೆದು ಬಂದಳು ತಾ ಬಡನಡುವಿನ ಒಯ್ಯಾರಿ 9 ಅತಿಹಾಸ್ಯಗಳಿಂದ ದೇವತೆಗಳ ಮಧ್ಯೆ ಈ ಪತಿ ಎಲ್ಲಿಹನೋ ತಾ 10 ಅರ್ಕನ್ವಲ್ಲೆನೆ ಅಗ್ನಿಯಂತೆ ಸುಡುತಿರುವನ ಶಕ್ರನ ಒಲ್ಲೆ ಮೈಯೆಲ್ಲ ಕಣ್ಣವಗೆ 11 ಸೋಮನ ಒಲ್ಲೆ ಕಳೆಗುಂದಿ ತಿರುಗುವನ ಪಾವನ ನಮ್ಮ ಗಾಳಿರೂಪದವನ12 ರುದ್ರನ್ವಲ್ಲೆನೆ ರುಂಡಮಾಲೆ ಹಾಕುವನ ಮುದಿಹದ್ದಿನಂದದಲಿ ಗರುಡ ಹಾರ್ಯಾಡುವನಲ್ಲೆ 13 ಶೇಷನ ಒಲ್ಲೆ ವಿಷದ ದೇಹದವನ ಗ- ಣೇಶನ್ವಲ್ಲೆನೆ ಡೊಳ್ಳು ಹೊಟ್ಟೆ ಗಜಮುಖನ 14 ಬ್ರಹ್ಮ ನಾಲಕು ಮೋರೆಗುಮ್ಮನಂತಿರುವ ಯಮ- ಧರ್ಮನ ಒಲ್ಲೆ ನಿಷ್ಕರುಣ ಘಾತಕನ 15 ಸುರಜನರ ನೋಡಿ ಗಾಬರ್ಯಾಗುವೆನು 16 ಮಂದ ಹಾಸ್ಯಗಳಿಂದ ಮಾತನಾಡುತಲಿ ಇಂದಿರೆಪತಿ ಪಾದಾರವಿಂದ ನೋಡುತಲಿ 17 ಗುಣದಲಿ ಗಂಭೀರ ಮಣಿಕೋಟಿತೇಜ ಎಣಿಕಿಲ್ಲದ ಚೆಲುವ ನೋಡೆನ್ನ ಪ್ರಾಣನಾಥ 18 ಹದಿನಾಲ್ಕು ಲೋಕ ತನ್ನುದರದಲ್ಲಿರುವ ಪದುಮಾಕ್ಷಗ್ವನಮಾಲೆ ಮುದದಿಂದ್ಹಾಕುವೆನು 19 ಕರ ವೈಜಯಂತಿ ಸರ ಮಣಿ ನಾ ಇರುತಿರೆ ವಕ್ಷಸ್ಥಳವು 20 ಶ್ಯಾಮವರ್ಣನ ಮುದ್ದು ಕಾಮನಜನಕ ಪ್ರೇಮದಿಂದ್ವೊಲಿವೆ ನಾ ಕಾಮಿಸಿ ಹರಿಯ 21 ಕಮಲಮುಖಿ ಬ್ಯಾಗ ಕಮಲಾಕ್ಷನ್ನ ನೋಡಿ ಕಮಲಮಾಲೆಯ ತಾ ಕಂದರದಲ್ಹಾಕಿದಳು 22 ಅಂಗನೆ ರಚಿಸಿ ತಾ ನಿಂತಳು ನಗುತ 23 ರತ್ನ ಮಂಟಪ ಚಿನ್ನ ಚಿತ್ರ ಪೀಠದಲಿ ಲಕ್ಷ್ಮೀನಾರಾಯಣರು ಒಪ್ಪಿ ಕುಳಿತಿರಲು 24 ಸಾಗರರಾಜ ತನ್ನ ಭಾಗೀರಥಿ ಕೂಡಿ ಸಿರಿ ಧಾರೆಯನೆರೆದ 25 ಅಚ್ಚುತ ಲಕುಮಿಗೆ ಕಟ್ಟಿದ ನಗುತ 26 ಮೇಲು ಕರಿಮಣಿ ಮಂಗಳ ಸೂತ್ರವ ಪಿಡಿದು ಶ್ರೀ ಲೋಲ ಲಕುಮಿಗೆ ತಾ ಕಟ್ಟಿದ ನಗುತ 27 ವಂಕಿ ಕಂಕಣ ಮುತ್ತಿನ ಪಂಚಾಳಿಪದಕ ಪಂಕಜಮುಖಿಗೆ ಅಲಂಕರಿಸಿದರು 28 ಸರಿಗೆ ಸರಗಳು ನಾಗಮುರಿಗೆ ಕಟ್ಟಾಣಿ ವರಮಾಲಕ್ಷುಮಿಯ ಸಿರಿಮುಡಿಗೆ ಮಲ್ಲಿಗೆಯ 29 ನಡುವಿನ್ವೊಡ್ಯಾಣ ಹೊಸ ಬಿಡಿಮುತ್ತಿನ ದಂಡೆ ಸಿರಿ ಪರಮಾತ್ಮನ ತೊಡೆಯಲ್ಲೊಪ್ಪಿರಲು 30 ಇಂದಿರೆ ಮುಖವ ಆ- ನಂದ ಬಾಷ್ಪಗಳು ಕಣ್ಣಿಂದಲುದುರಿದವು 31 ರಂಗನ ಕಂಗಳ ಬಿಂದು ಮಾತ್ರದಲಿ ಅಂಗನೆ ತುಳಸಿ ತಾನವತರಿಸಿದಳು32 ಪಚ್ಚದಂತ್ಹೊಳೆವೊ ಶ್ರೀ ತುಳಸಿ ದೇವಿಯರ ಅಚ್ಚುತ ತನ್ನಂಕದಲ್ಲಿ ಧರಿಸಿದನು 33 ಮಂಗಳಾಷ್ಟಕ ಹೇಳುತ ಇಂದ್ರಾದಿ ಸುರರು ರಂಗ ಲಕ್ಷುಮಿಗೆ ಲಗ್ನವ ಮಾಡಿಸಿದರು 34 ಅಂತರಿಕ್ಷದಿ ಭೇರಿನಾದ ಸುರತರುವು ನಿಂತು ಕರೆದಿತು ದಿವ್ಯ ಸಂಪಿಗೆ ಮಳೆಯ 35 ಲಾಜಾಹೋಮವ ಮಾಡಿ ಭೂಮವನುಂಡು ನಾಗಶಯನಗೆ ನಾಗೋಲಿ ಮಾಡಿದರು 36 ಸಿಂಧುರಾಜನ ರಾಣಿಗೆ ಸಿಂಧೂಪವನಿತ್ತು ಗಜ ಚೆಂದದಿ ಬರೆದು 37 ಚೆಲುವೆ ನೀ ಬೇಕಾದರೆ ಹಿಡಿಯೆಂದನು ರಂಗ 38 ಅಚ್ಚುತ ಎನ್ನಾನೆ ಲೆಕ್ಕಿಲ್ಲದ್ಹಣವ ಕೊಟ್ಟರೆ ಕೊಡುವೆನೆಂದಳು ಲಕ್ಷುಮಿ ನಗುತ 39 ತುಂಬಿ ಮರದ ಬಾಗಿನವ ಸಿರಿ ತಾ ಋಷಿಪತ್ನೇರನೆ ಕರೆದು40 ತುಂಬಿ ಮರದ ಬಾಗಿನವ ಹರದಿ ಕೊಟ್ಟಳು ತಾ ಋಷಿಪತ್ನೇರನೆ ಕರೆದು 41 ಕುಂದಣದ್ಹೊನ್ನಕೂಸಿನ ತೊಟ್ಟಿಲೊಳಿಟ್ಟು ಕಂದನಾಡಿಸಿ ಜೋಜೋ ಎಂದು ಪಾಡಿದರು42 ಕರಿ ಎಂದನು ರಂಗ 43 ಸುರದೇವತೆಗಳಿಗೆ ಸುಧೆ ಎರೆಯಬೇಕಿನ್ನು ಕರಿ ಎಂದಳು ಲಕ್ಷ್ಮಿ 44 ಹೆಣ್ಣನೊಪ್ಪಿಸಿಕೊಟ್ಟು ಚಿನ್ನದಾರತಿಯ ಕರ್ನೆ(ನ್ಯ?) ಸರಸ್ವತಿ ಭಾರತಿ ಬೆಳಗಿದರಾಗ 45 ಈರೇಳು ಲೋಕದೊಡೆಯನು ನೀನಾಗೆಂದು ಬಹುಜನರ್ಹರಸ್ಯೆರೆದರು ಮಂತ್ರಾಕ್ಷತೆಯ 46 ಪೀತಾಂಬರಧಾರಿ ತನ್ನ ಪ್ರೀತ್ಯುಳ್ಳಜನಕೆ ಮಾತುಳಾಂತಕ ಮಾಮನೆ ಪ್ರಸ್ತ ಮಾಡಿದನು 47 ಸಾಲು ಕುಡಿಎಲೆ ಹಾಕಿ ಮೇಲು ಮಂಡಿಗೆಯ ಹಾಲು ಸಕ್ಕರೆ ಶಾಖ ಪಾಕ ಬಡಿಸಿದರು 48 ಎಣ್ಣೋರಿಗೆ ಫೇಣಿ ಪರಮಾನ್ನ ಶಾಲ್ಯಾನ್ನ ಸಣ್ಣಶ್ಯಾವಿಗೆ ತುಪ್ಪವನ್ನು ಬಡಿಸಿದರು 49 ಏಕಾಪೋಶನ ಹಾಕಿದ ಶೀಕಾಂತಾಮೃತವ ಆ ಕಾಲದಿ ಸುರರುಂಡು ತೃಪ್ತರಾಗಿಹರು 50 ಅಮೃತ ಮಥನವ ಕೇಳಿದ ಜನಕೆ
--------------
ಹರಪನಹಳ್ಳಿಭೀಮವ್ವ
ಕಾಮನ ಪಿತ ಕೃಷ್ಣ ಕಾಮಿನಿಯಾದನು ಕಾಮನ ಪಿತ ಕೃಷ್ಣ ಕಾಮಿನಿ ಆಗುವೊ ಕಾರಣ ಕೇಳಿರಿ ಕಾಮಿಸಿ ಶ್ರೀಹರಿ ಆ ಮಹಾಸುರರಿಗೆ ಸುಧೆಯನ್ಹಂಚುಣಿಸಲು ಶ್ರೀ ಮಾಯಾಪತಿಯು ತಾ ಸ್ತ್ರೀಯಾದ ಚೆಲುವಿಕೆ ಪ ರುಳಿ ಲುಲ್ಲು ಗೆಜ್ಜೆ ಪೈಜಣ ಪಾಗಡವನಿಟ್ಟು ಚರಣದಿ ಕಾಲುಂಗರ ಪಿಲ್ಯ ಮೆಂಟಿಕೆ ಝಣ ಝಣ ನಾದ ಕಾಳಿಯ ಫಣ ತುಳಿದಂಥ ಖಳರ ಮರ್ದನ ದಿವ್ಯ ತರುಣಿ ತಾನಾದನು 1 ಸೆರಗು ನಿರಿಯು ಜರತಾರಿ ಪೀತಾಂಬರ ಬಿಡಿ ಮುತ್ತಿನುಡಿಗಂಟೆ ನಡುವಿನ್ವೊಡ್ಯಾಣ ಸಡಗರದಿಂದ್ವೊಪ್ಪೊ ತಾಳಿ ಪದಕವಿಟ್ಟು ಮೃಡನ ಪ್ರಿಯನು ಮುದ್ದು ಮಡದಿ ತಾನಾದನು 2 ಕಂಚುಕ ತೋಳಿನಲ್ವಂಕಿ ಬÁಜುಬಂದು ಮಿಂಚಿನಂದದಿ ನಲಿದಾಡುತ ಗೊಂಡ್ಯವು ಕಂಕಣ ತೋಡ್ಯ ವಜ್ರದ್ವಾರ್ಯ ಹರಡಿಯು ಪಂಚ ಬೆರಳಿನಲ್ಲುಂಗುರವನಿಟ್ಟು ಸೊಬಗಲಿ 3 ಚಿಂತಾಕು ಸರಿಗೆ ಚಿನ್ನದ ಗುಂಡು ಹವಳವು ಕೆಂಪು ಏಕಾವಳಿ ಮಲಕು ತಾಯಿತ ಮುತ್ತು ಮಿಂಚುವೋ ಪದಕ ಮುತ್ತಿನ ಕಟ್ಟಾಣಿಯು ಪಂಚರತ್ನದ ಹಾರ ಪರಮಾತ್ಮಗಲೆಯುತ4 ಉಂಗುರ ಕೂದಲು ಶೃಂಗಾರ ಕ್ಯಾದಿಗೆ ಚಂದ್ರ ಚೌರಿ ಜಡೆಬಂಗಾರ ರಾಗಟೆ ಮುಂದೆ ಮುತ್ತಿನದಂಡೆ ಮುಡಿಯಲ್ಲೆ ಒಪ್ಪಿದ ದುಂಡು ಮಲ್ಲಿಗೆ ದÉೂೀಷದೂರನಿಗಲೆವುತ 5 ವಾಲೆ ಬುಗುಡಿ ಬಾಳ್ಯ ಚಳತುಂಬು ಚಂದ್ರ ಮುರುವು ಚಿನ್ನದ ಕಡ್ಡಿ ಕಿವಿಯಲ್ಲಿ ಕುಂದಣ ಕುಸುರು ವಜ್ರಗಳು ಕೆಂಪ್ಹೊಳೆವಂಥ ದುಂಡು ಮುತ್ತಿನ ಮುಕುರ್ಯವ ಮೂಗಿನಲ್ಲಿಟ್ಟು 6 ಅಚ್ಚ ಮುತ್ತಿನ ದಂಡೆ ಕುಚ್ಚು ತೊಂಡಿಲುಗಳು ಹಚ್ಚೆಯ ಬೊಟ್ಟು ಕಸ್ತೂರಿ ಕುಂಕುಮನಿಟ್ಟು ಪಚ್ಚೆ ಮಾಣಿಕ್ಯದರಳೆಲೆ ಚಂದ್ರ ಸೂರ್ಯರು ನಿತ್ಯ ತೃಪ್ತನು ನೀಲವರ್ಣದಂತ್ಹೊಳೆಯುತ 7 ಆ ಮಹಾವೈಕುಂಠಪುರದರಸಾದ ಈ ಮಹಾ ರಜತ- ಪೀಠ ಪುರದಲಿ ಬಂದು ಪ್ರೇಮದಿ ನಿಂತು ನೋಡುತ ಬಂದ ಜನರಿಗೆ ಕಾಮಿತ ಫÀಲ ಮುಕ್ತಿ ಕೊಡುವ ಕಮಲಾಪತಿ 8 ಅಷ್ಟಯತಿಗಳಿಂದಲಿ ಪೂಜೆಯಗೊಂಬೊ ಲಕ್ಷ್ಮಿಯ ಪತಿಯು ಸ್ತ್ರೀರೂಪವ ಧರಿಸಿರೆ ದೃಷ್ಟಿಂದೆ ನೋಡದಿನ್ನಿರುವೋರೆ ಭೀಮೇಶ- ಕೃಷ್ಣ ನಿನ್ನ ಮನದಲ್ಲಿಟ್ಟು ಸ್ತುತಿಸುವೆನು 9
--------------
ಹರಪನಹಳ್ಳಿಭೀಮವ್ವ