ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸ ಕಂಡೆ ನಿನ್ನಿನಿರುಳೊಳು ಕೇಳುಕನಸಿನ ಸೊಗಸನು ತರಳೆಚಿನುಮಯಾತ್ಮಕ ಚಿದಾನಂದ ಅವಧೂತದಿನಕರ ಪ್ರಭಾತೀತ ಗುರುನಾಥ ಬಂದಿಹ ಪ ಕಾಶ ಕೌಪೀನವನುಟ್ಟು ಚೆಲ್ವಬಾಸುರ ಕುಂಡಲವಿಟ್ಟುಕೇಶದ ಜಡೆಗಳು ಥಳಥಳಿಸಲು ಸರ್ವಭೂಷಿತನಾಗಿ ತನ್ನೆದುರಿಗೆ ನಿಂತಿಹ 1 ನೆಟ್ಟನೆ ನಡುಮನೆಯೊಳು ತಾನುನೆಟ್ಟನೆ ಬಂದು ಕುಳಿತಿಹನುಶಿಷ್ಟ ಮೂರುತಿ ತನ್ನ ಕಾಯಬೇಕು ಎಂದುಮುಟ್ಟಿ ಪಾದವ ನಾನು ಶರಣು ಮಾಡಲಿದ್ದೆ2 ಸುಂದರ ಕಳೆಯುಳ್ಳ ಸ್ವಾಮಿತಾನು ಸಿಂಧು ಕೃಪಾಕರನಾಮಿ ಎಂದಡಿಗಡಿಗೆ ಸಾಷ್ಟಾಂಗವೆರಗಿನಿಂದು ಪೂಜಿಸಿ ಕಣ್ತುಂಬ ನೋಡಿನಲಿವ 3 ನಾನಾ ಪೂಜೆಯನೆಲ್ಲವ ಮಾಡಿ ಗುರುಧ್ಯಾನದಿನಾನೋಲಾಡಿ ಮಾನವನಾಗಿನಾನು ನಿಂದಿರಲೆನ್ನ ಕಿವಿಯೊಳುನಾನು ನೀಗಿತ್ತೆಂದು ಉಪದೇಶ ನೀಡುವ4 ಈಪರಿ ಕನಸನು ಕಂಡು ಎಲ್ಲತಾಪವು ಪರಿಹಾರಗೊಂಡುಭೂಪ ಚಿದಾನಂದ ಅವಧೂತ ತಾನಾದರೂಪಾಗಿ ಬೆಳಗಿರೆ ಬೆಳಗಿರೆ ಬೆಳ್ಳನೆ ಬೆಳಕಿತ್ತು5
--------------
ಚಿದಾನಂದ ಅವಧೂತರು
ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು ಮಾಯಾ ಪ್ರಪಂಚವನು ಅನುಗಾಲಾ ನಂಬು ನಮ್ಮಂಬುಜಾಂಬಕನ ಪಾದಾಂಬುಜವ ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ಪ ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ ಒಂದು ದಿನಲಿರಲಾಗಲವರರೇತಸು ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು ರ್ಗಂಧದೊಳು ಬಂದು ನಿಂದೂ ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು ಬಿಂದು ಕೆಳಗೆ ಹೊರಳಿದಿರು ಮರುಳೆ 1 ತಾಮಸವ ಕವಿದು ಕಾವಳಗೊಂಡ ಕತ್ತಲೆಯ ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ ಮುಂಜಿಯನು ಕಟ್ಟಿ ಬಂಧುಬಳಗ ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ 2 ಮದ ಮತ್ಸರ ಲೋಭ ಮೋಹ ಕಾಮಾದಿಯಲಿ ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ ತುಂಬಿ ಕಾಲವನು ಕಳೆದು ಮಕ್ಕಳ ಪಡೆದು ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ ಮುದದಿಂದ ನರಕದೊಳು ಬೀಳುವಾ ಹುರುಳೆ 3 ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ ಬದ್ಧವಿಲ್ಲದಲೆ ಕರಗಾತಿಂದು ಬಡತನಾ ಸಿದ್ಧನಾಗಲು ತಿಂದವರು ಹರದೋಡಿ ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ 4 ಬಿಡು ಬಿಡು ಅಕಟ ಸಂಸಾರ ಸಾಗರದ ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ ಹಿಡಿ ಹಿಡಿ ಪರಮ ಭಾಗವತರ ಸಂಗತಿಯ ಸರ್ವಜ್ಞತೀರ್ಥರ ಮತದ ಕರುಣವನು ಪಡೆಯಲು ಅಧಿಕಾರನಾಗಿ ಸಿರಿದೇವಿಯ ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ ತಡಿಯದಲೆ ಸದ್ಗತಿಗೆ ಸೇರುವದು ಮರುಳೆ5
--------------
ವಿಜಯದಾಸ
ಭಾರತೀಶ ಮದ್ಭಾರ ನಿನ್ನದಯ್ಯ | ಕರುಣದಿ ಪಿಡಿ ಕೈಯ್ಯಾ || ಪೂರೈಸೆನ್ನ ಮನೋಭಿಲಾಷೆ ಗುರುವೆ | ಭಜಕರ ಸುರತರುವೆದ್ಭ ಪ ಹರಿಭಕ್ತಾಗ್ರೇಸರನೆ ಹನುಮಂತಾ | ಹರನುತ ಬಲವಂತಾ | ತರಣಿಕುಲಜ ಶ್ರೀರಾಮನ ಕೈಯಿಂದ | ಬಲುಸಂಭ್ರಮದಿಂದಾ | ರಣದೊಳಗೋಲ್ಯಾಡಿ | ದುರುಳ ರಕ್ಕಸರ ದುಷ್ಟ ದನುಜರ | ತರಿದೆ ಲೋಕೈಕ ಸಮರ್ಥಾ 1 ಕುಂತಿ ಜಠರಾಂಭೋನಿಧಿ ಚಂದ್ರಮನೆ ರಾಜಾಗ್ರೇಸರನೆ | ಕಂತು ಜನತನಿಚ್ಛಾನುಸಾರವಾಗಿ | ರಣದೊಳಗೆ ಚೆನ್ನಾಗಿ | ನಿಂತು ದುಷ್ಟ ದುರ್ಯೋಧನಾದಿಗಳನು ಸಂಹರಿಸಿದಿ ನೀನು | ಬಲ್ಲರಯ್ಯ ಕರುಣದಿ ಪಿಡಿಯೊ ಕೈಯಾ 2 ನಡುಮನೆಯೆಂಬೊ ವಿಪ್ರನ ಮನೆಯಲ್ಲಿ | ಅವತರಿಸಿ ಚೆನ್ನಾಗಿ | ಮೃಡ ಸರ್ವೋತ್ತಮ ಹರಿಯೆ ತಾನೆಂದು | ಮಿಥ್ಯಾಜಗವೆಂದು | ನುಡಿವ ಜನರ ಮತಗಳನೆ ನಿರಾಕರಿಸಿ ಶಾಸ್ತ್ರವ ರಚಿಸಿ |ಒಡೆಯ ತಂದೆ ಶ್ರೀ ವಿಜಯವಿಠಲನ್ನ ಪೂಜಾಸಕ್ತನೇ 3
--------------
ವಿಜಯದಾಸ
ಸೂನು ಪ ನಡೆದು ಬರಲು ಒಬ್ಬ ಮಡದಿಯುಕೊಡಿರಿ ಸ್ಥಳವು ಎಂದು ನುಡಿಯುತಲಿಗಡಿಬಿಡಿಯಲಿ ನಮ್ಮ ನಡುಮನೆಯೊಳು ಬಂದು ಇಂಥಕಡುಮುದ್ದು ಬಾಲನ ಪಡೆದು ತೋರಿದಳಂತೆ 1 ಮಾತೆ ಬಾಣಂತಿಯು ನವಜಾತ ಶಿಶುವು ಸದ್ಯೋಜಾತನ ನಿಶೇಷ ಧಾತ್ರಿಧರನಾಥಾಅತಿಶಯ ಥಂಡಿ ಪ್ರಾತಃಕಾಲವು ತವಸೀತವಾಗಿದೆ ಎಂದು ಭೀತಿ ಉಂಟಾಗಿದೆ 2 ಒಂದು ನಾಲಕು ದಿನ ಸಂಧಿಸಿ ಗುಡಿ ವೃಜದಿಂದ ಕರದಿ ತನ್ನ ಕಂದನ್ನೆತ್ತಿಇಂದಿರೇಶನ ಪ್ರಿಯೇ ಒಂದಿನಿತು ಧ್ಯಾನಮಂದಿರದೊಳು ಬಂದು ಚಂದ ತೋರಿದಳಂತೆ 3
--------------
ಇಂದಿರೇಶರು
ನಡುಮನೆಯೊಳಗೊಂದು ನಾಲ್ಕು ತೆಂಗಿನಮರ -ಹೇ ಗಿಣಿ - ಹೇ ಗಿಣಿಯೇ |ಕಡೆಮೊದಲಿಲ್ಲದೆ ಅದುಕಾತು ಹಣ್ಣಾಯ್ತ - ಹೇಗಿಣಿಪ.ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ - ಹೇ ಗಿಣಿತಲೆಯೆಲ್ಲದವ ಬಂದು ಹೊತ್ತು ಕೊಂಡುಹೋದ - ಹೇ ಗಿಣಿ 1ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ - ಹೇ ಗಿಣಿಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ - ಹೇ ಗಿಣಿ 2ಬಲೆಯ ಹಾಕಿದರು ಬಲೆಯದಾಟುವದಯ್ಯ - ಹೇ ಗಿಣಿಚೆಲುವ ಪುರಂದರವಿಠಲನೇ ಬಲ್ಲ - ಹೇ ಗಿಣಿ 3
--------------
ಪುರಂದರದಾಸರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು
ಸುಲಭಪೂಜೆಯಕೇಳಿ ಬಲವಿಲ್ಲದವರು<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕಾಲಕಾಲದಕರ್ಮಕಮಲಾಕ್ಷಗರ್ಪಿಸಿರಿಪ.ಇರುಳು ಹಚ್ಚುವ ದೀಪ ಹರಿಗೆ ನೀಲಾಂಜನವು |ಮರುವುಡುವ ಧೋತರವು ಪರಮವಸ್ತ್ರ ||ತಿರುಗಾಡಿ ದಣಿಯುವುದು ಹರಿಗೆ ಪ್ರದಕ್ಷಿಣೆಯುಮರಳಿ ಹೊಡಮರುಳುವುದು ನೂರೆಂಟು ದಂಡ 1ನುಡಿವ ಮಾತುಗಳೆಲ್ಲ ಪಾಂಡುರಂಗನ ಜಪವುಮಡದಿ ಮಕ್ಕಳು ಎಲ್ಲ ಒಡನೆ ಪರಿವಾರ ||ನಡುಮನೆಯ ಅಂಗಳವುಉಡುಪಿ ಭೂವೈಕುಂಠಎಡ ಬಲದ ಮನೆಯವರು ಕಡುಭಾಗವತರು 2ಹೀಗೆ ಈ ಪರಿಯಲಿನಿತ್ಯ ನೀವರಿತಿರಲುಜಗದೊಡೆಯ ಶ್ರೀ ಕೃಷ್ಣ ದಯವ ತೋರುವನು ||ಬೇಗದಿ ತಿಳಿದುಕೇಳಿ ಹೋಗುತಿದೆ ಆಯುಷ್ಯಯೋಗಿಪುರಂದರವಿಠಲ ಸಾರಿ ಪೇಳಿದನು3
--------------
ಪುರಂದರದಾಸರು