ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಕಿಂತ ಗುಣವಿಲ್ಲ ನರಗೆ ದಯಕೆ ನಿರ್ಬಂಧವಿಲ್ಲಣ್ಣ ಜಗದಿ ಪ ಹೃದಯ ಮಂದಿರದಲಿ ನೆಲೆಸಿಹ ದಯೆಯು ಮೃದು ಮಳೆಹನಿ ತೆರದಲಿ ಸುರಿಯುವುದು ಅ.ಪ ಬಾರಿಯ ಸ್ಥಾನಕೆ ಈ ದಯೆ ಗುಣವು ಭಾರಿಯ ಶಕುತಿಯ ನೀಡುವುದು ಚಾರು ಕಿರೀಟವ ಮೀರಿದ ಕಾಂತಿಯ ಬೀರುವುದೀ ದಯೆ ನರಪತಿಗೆ 1 ರಾಜನ ದಂಡವ ನೋಡುತ ನೋಡುತ ಈ ಜಗವೆಲ್ಲವು ನಡುಗುವುದು ರಾಜನ ಕಾರ್ಯಗಳೆಲ್ಲಕೆ ದೈವಿಕ ತೇಜವ ಕೊಡುವುದು ದಯೆ ಗುಣವು 2 ನಶ್ವರವೆಲ್ಲವು ಪ್ರಾಕೃತವು ಈಶ್ವರ ಧರ್ಮವೆ ಈ ದಯೆಯು ಶಾಶ್ವತ ಧರ್ಮಗಳೆಲ್ಲವು ದಯದಿ ಮಿಶ್ರಿತವಾದರೆ ಸುಖಮಯವು 3 ಪರಮ ಪುರುಷ ದಯೆ ತೋರದಿರೆ ವರಗತಿ ಪಡೆಯಲು ನರಗಳವೆ ಕರುಣೆ ಪ್ರಸನ್ನನ ಮೊರೆ ಹೋಗದೆ ನೀ ಅರಿಯಲು ಸಾಧ್ಯವೆ ಕರುಣೆಯ ಬೆಲೆಯ 4
--------------
ವಿದ್ಯಾಪ್ರಸನ್ನತೀರ್ಥರು
ಎರಡು ದಿನ ಎರಡು ದಿನ ಸಂಸಾರ ಎರಡು ದಿನಎರಡು ದಿನವೆನ್ನದೇ ಕಡುತಲಿಹೆ ಮನುಜ ಪ ಪೋರತನದಿ ಕುಣಿಯುವುದು ಎರಡು ದಿನನಾರಿ ಹಿಂದೆ ತಿರುಗುವುದು ತಾನು ಎರಡು ದಿನಸೇರಿ ಮನೆಯಗ್ಗಳಿಕೆ ಮೂಡುವುದು ತಾನು ಎರಡು ದಿನಜಾರಿ ಸತ್ಯವು ನಡುಗುವುದು ತಲೆಯು ಎರಡು ದಿನ1 ಸಿರಿಯು ಬಂದು ಹಿಂದಕೆ ಸೆಲೆಯುವುದು ತಾನು ಎರಡುದಿನದೊರೆತನವು ದೌಲತ್ತು ತಾನದು ಎರಡು ದಿನಹಿರಿಯ ಆಕೆಯು ಮನೆಯು ಸೇರಿ ಬಳಲುವುದು ಎರಡು ದಿನತೆರಳುವುದು ದೊಡ್ಡ ಯಾತ್ರೆಗೆ ತಾನು ಎರಡು ದಿನ 2 ಬ್ರಹ್ಮಜ್ಞಾನ 3
--------------
ಚಿದಾನಂದ ಅವಧೂತರು
ಹೆದರಿಕೆ ಯಾತರದೋ ತ್ರಿಜಗದಿ ಪಾದ ಸದಮಲದಾಸರಿಗೆ ಪ ಗರುಡನ ಮಂತ್ರಕೆ ಉರಗನ ಭಯವುಂಟೆ ದುರಿತದಂಜಿಕೆಯುಂಟೆ ನರಹರಿಸ್ಮರಣೆಗೆ 1 ಬಿರುಗಾಳಿ ಬೀಸಲು ಗಿರಿ ನಡುಗುವುದುಂಟೆ ಪರಿಭವ ಬಂಧಮುಂಟೆ ಸಿರಿವರನರ್ಚಕರಿಗೆ 2 ಶ್ರೀರಾಮನಡಿವಾರಿಜಭಜಕರ್ಗೆ ಸಾರಮೋಕ್ಷಂಗಳು ದೂರವಿನ್ನುಂಟೆ 3
--------------
ರಾಮದಾಸರು