ಶ್ರೀ ಮನೋಹರ ಸಲಹೋ ಎನ್ನ
ಕಾಮಿತ ಫಲವಿತ್ತು ಸಾಮಜಪತಿ
ಪರಿಪಾಲಕ ನಂಬಿದೆ ಪ
ಅಂಡಜಗಮನ ದಶರುಂಡವೈರಿ ರಾಜೀವಾಕ್ಷ
ಕುಂಡಲಿಶಯನ ಕೋದಂಡ ಪಾಣಿಯ
ತೋಂಡಮಾನಗೊಲಿದ ಮಾರ್ತಂಡ ತೇಜ
ಪಾದ ಪುಂಡರೀಕ ಸೇವಿಸುವ
ತೋಂಡರೊಳಿಡು ಪಾಂಡವಪಕ್ಷ1
ನಾಳಿತ ಸಂಭವಪಿತ ಶೈಲಜಾವಲ್ಲಭನುತ
ಭಂಜನ ವನಮಾಲಿ ಭೂಲೋಲ
ಕಾಲ ಕೋಲರೂಪಿ ಕೋಮಲಾಂಗ
ತಾಲ ಕೇತನನುಜ ಕೀಲಾಲಜ ಬಾಂಧವ ಬಾಲಕ ಪೋಷಕ 2
ಇಂದು ಕೋಟಿ ನಿಭ ನರಸಿಂಧುರಾರಿ ಸಿಂಧುಶಾಯಿ
ದಾತ ನಂದಕ ಹಸ್ತ
ನಂದಮುನಿವಂದಿತ ಸಂಕ್ರಂದನ ನಂದನವರದ
ಬಂಧನ ಬಿಡಿಸೋ ಶಾಮಸುಂದರವಿಠಲ ಬಂಧುರ ಮಹಿಮ 3