ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚನ್ನಕೇಶವ ನಿನ್ನ ಭಜನೆಯೊಂದುಳಿದು ನಾ ನನ್ಯರ ನಂಬೆನು ಸಲಹಯ್ಯ ಹರಿಯೇ ಪ ತರಳಾ ಧೃವನಂತೆ ತಪಸ ನಾನರಿಯೆನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಸರಸ ಜಾಂಬುಕಿಯಂತೆ ಸೇವೆಯನರಿಯೆನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೇ 1 ದಾಸ ಕನಕನಂತೆ ಭಕ್ತಿಯ ನರಿಯೆನು ವಾಸುಕಿಯಂತೆ ನಾ ಯಾಚನೆಯರಿಯೇ ದಾಸ ಮಾರುತಿಯಂತೆ ದಾನತ್ವವರಿಯೆನು ವಾಸವನಂತೆ ನಾ ಕೀರ್ತನೆಯರಿಯೇ 2 ಹರಿಯ ಲೀಲೆಗಳನ್ನು ಒಂದಿಷ್ಟನರಿಯೆನು ಹರಿ ಪೂಜೆ ಸೇವೆಯ ಸ್ಮರಣೆಯನರಿಯೇ ಹರಿಯ ಮನೆ ಘಂಟೆಯ ಬಾರಿಸಲರಿಯೆನು ಸಿರಿ ಚನ್ನಕೇಶವ ಮಹಿಮೆಯನರಿಯೇ 3
--------------
ಕರ್ಕಿ ಕೇಶವದಾಸ
ದಯಮಾಡೆನಗೇ ಕೃಷ್ಣದಯ ತೋರನಗೇ ರಂಗ ದಯ ಮಾಡೆನಗೆ ಶ್ರೀ ಚನ್ನಕೇಶವನೇ ಪ ಧರಣಿ ಪಾಲಕನಂತೆ ಮೃತವ ನಾನರಿಯೆನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಕರಿರಾಜನಂತೆ ನಾ ಮರೆಹೊಕ್ಕಲರಿಯೆನು ತರಳ ಧೃವನಂತೆ ತಪ ಮಾಡಲರಿಯೇ 1 ಪರೀಕ್ಷಿತನಂತೆ ಶ್ರವಣವ ಮಾಡಲರಿಯೆನು ವರಶುಕರಂತೆ ಕೀರ್ತನೆ ಮಾಡಲರಿಯೇ ತರಳ ಪ್ರಲ್ಹಾದನಂದದಿ ಸ್ಮರಿಸಲರಿಯೆನು ಚರಣವ ರಮೆಯಂತೆ ನಾ ಭಜಿಸಲರಿಯೇ 2 ಹರಿಯನ ಕ್ರೂರನಂತೇ ನಮಿಸಲರಿಯೆನು ಹರಿಯ ಪೃಥುವಿನಂತೆ ಪೂಜಿಸಲರಿಯೇ ಮರುತಜನಂತೆ ನಾ ದಾಸ್ಯತ್ವವರಿಯನು ನರನಂತೆ ಮಿತ್ರತ್ವ ಪಡೆಯಲಿಕ್ಕರಿಯೇ 3 ಆತ್ಮವ ಬಲಿಯಂತೆ ಅರ್ಪಿಸಲರಿಯೆನು ನಿತ್ಯವು ನರಕದಿ ಮುಳುಗಿ ನಾನಿರುವೇ ಮತ್ಸ್ಯಾದಿ ದಶರೂಪವೆತ್ತಿದ ರಂಗನೆ ಬೃತ್ಯರ ಸಲಹಯ್ಯ ಸ್ವಾಮಿ ದೂರ್ವೇಶಾ 4
--------------
ಕರ್ಕಿ ಕೇಶವದಾಸ