ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿರೆ ಬಗಳಾಶ್ಚರ್ಯವ ಕಂಡಿರೇ ಬಗಳಾಶ್ಚರ್ಯವದಿಂಡೆಯರಾದವರನ್ನೆಲ್ಲ ತುಂಡು ಮಾಡಿಶುಂಭ ನಿಶುಂಭರಸುವ ಕೊಂಡವಳ ಪ ಕ್ರೂರ ಧೂಮ್ರಾಕ್ಷ ಶುಂಭರಾಜನ ನೇಮದಿಂದಸಾರಿ ದೇವಿಯನ್ನು ಮುಂದಲೆ ಹಿಡಿದು ಎಳೆವೆನೆನಲುವೀರಳೀಗ ಕೇಳಿ ಅವಡುಗಚ್ಚಿ ಕಣ್ಣು ತೆರೆಯೆಹಾರಿದನು ಧೂಮ್ರಾಕ್ಷನುರಿದು ಭಸ್ಮವಾದನು1 ಚಂಡ ಮುಂಡಗಪ್ಪಣೆಯನುದ್ದಂಡ ಶುಂಭನೀಗ ಕೊಡಲುಖಂಡೆಯವನೆ ಹಿರಿದು ಮುಂಕೊಂಡು ದೇವಿ ಬಲಕೆ ನಿಂದುಗುಂಡೆಯರ ಕೂದಲು ಹಿಡಿದು ತುಂಡು ಮಾಡಿಯೆ ತಿಂದುಚಂಡ ಮುಂಡರ ತಲೆಯ ಖಂಡಿಸಿದ ವೀರಳ 2 ರಕ್ತ ಬೀಜನ ರಕ್ತದಿಂದ ರಕ್ತಬೀಜರಾಗೆರಕ್ತನಯನಿ ಹಾಸಿದಳು ನಾಲಿಗೆಯ ಭೂಮಿಗೆರಕ್ತ ಬೀಜರನ್ನು ಕಡಿದು ನುಣ್ಣಗೆ ನುಂಗಿ ಆದಿ-ರಕ್ತ ಬೀಜನನ್ನು ಶೂಲದಿಂದ ತಿವಿದು ತಿಂದಳು 3 ಅಂಬನ ಮೇಲೆ ನಿಶುಂಭನೆರಡು ಹಸ್ತ ಹೋಗಿಎಂಬೆನೇನು ಒದಯಲಾಗ ಅಂಬುಜಾಕ್ಷಿ ತೊಡೆಯ ಕಡಿಯೆತುಂಬಿ ಕೋಪದಿಂದಲವನು ತಿಂಬೆನೆಂದು ಮುಂದೆ ಬರಲುಅಂಬಿನಿಂದ ತಲೆಯ ಕಳೆದಳಂಬರದಲುಘೇ ಎನಲು 4 ತಕ್ಕೆಯಲ್ಲಿ ಬಿದ್ದು ದೆಕ್ಕಬುಕ್ಕಿಯಾಡೆ ಶುಂಭನನ್ನುನಕ್ಕು ಶಿವನ ಶೂಲದಿಂದಲಿಕ್ಕಿದಳು ಖಳನ ಎದೆಯಉಕ್ಕಿ ಹರುಷ ದೇವತೆಗಳು ಓಲಗವನೆ ಮಾಡಿದರುದುಃಖಾತೀತ ಚಿದಾನಂದ ತಾನಾದ ಬಗಳೆಗೇ5
--------------
ಚಿದಾನಂದ ಅವಧೂತರು
ದೇವಿ ಭಜನೆ ಓಂ ನಮೋ ಓಂ ನಮೋ ಓ ನಮೋ ದೇವಿ || ಓಂ ನಮೋ ಓಂ ನಮೋ ಭಕ್ತ ಸಂಜೀವಿ ಪ. ಶಂಭು ಮನೋಹರೆ | ಶಾಂಭವಿ ದೆÉೀವಿ || ಜಂಭಾರಿ ಸುರನರ | ವಂದಿತೆ ದೇವಿ ಅ.ಪ. ಮಧುಕೈಟಭಾಖ್ಯರ ವಧಿಸಿದ ದೇವಿ || ಮುದದೊಳೀ ಮಹಿಯ | ನುದ್ಧರಿಸಿದ ದೇವಿ 1 ಮಹಿಷಾಖ್ಯ ದಾನವ ಮರ್ದಿನಿ ದೇವಿ || ದಹಿಸಿದೆ ಧೂಮ್ರಾಕ್ಷ | ನನು ಮಹಾದೇವಿ 2 ಚಂಡಮುಂಡಾಖ್ಯರ | ಖಂಡಿಸಿ ಶಿರಗಳ || ಚೆಂಡಾಡಿದ ಶ್ರೀ ಚಾಮುಂಡಿ ದೇವಿ 3 ರುಧಿರಬೀಜಾಖ್ಯನ | ರುಧಿರವ ಹೀರಿ || ವಧಿಸಿದೆ ಅದ್ಭುತ | ಮಹಿಮೆಯದೋರಿ 4 ಶುಂಭ ನಿಶುಂಭ ನಿ | ಷೂದಿನಿ ದೇವಿ || ಕುಂಭಿನಿ ಭಾರವ | ಹರಿಸಿದ ದೇವಿ 5 ಅರುಣಾಸುರ ಸಂ | ಹಾರಿಣಿ ದೇವಿ || ಶರಣರಿಗೊಲಿದ ಶ್ರೀ | ಭ್ರಾಮರಿ ದೇವಿ6 ನಂದಿನಿ ನದಿಯೊಳು | ನೆಲೆಸಿದ ದೇವಿ || ಕಂದರಂತೆಮ್ಮನು | ಸಲಹುವ ದೇವಿ7 ನಂಬಿದ ಭಕ್ತರ | ವೃಂದವ ದೇವಿ || ಅಂಬಿಕೆ ಪಾಲಿಸು | ಜಗದಂಬ ದೇವಿ 8 ಜಟಾಧರೇಶನ | ರ್ಧಾಂಗಿನೀ ದೇವಿ || ಕಟಿಲೊಳು ಮೆರೆದ | ಭ್ರಮರಾಂಬ ದೇವಿ9
--------------
ವೆಂಕಟ್‍ರಾವ್
ಅದ್ರಿಸಂಭವೆ ಸರ್ವಸಂಭ್ರಮದೊಳುಭಾದ್ರಪದ ಶುದ್ಧ ತದಿಗೆಯ ದಿವಸದಿಸದ್ರಾಜಮಾರ್ಗದಿ ನಡೆತರಲುನಡೆತರೆ ಸತ್ಯಭಾಮೆ ರುಕ್ಮಿಣಿಯೊಳೀಭದ್ರೆ ಯಾರೆಂದು ನುಡಿದಳು 1 ಕೋಟಿ ಸೂರ್ಯಕಾಂತಿಯ ನವರತ್ನ ಕಿರೀಟಾಗ್ರದಿ ಚಂದನ ರೇಖೆಯಮೀಟೆನೆ ತಳೆದು ಬಾಹವಳಾರೆ ಅಕ್ಕಕೈಟಭವೈರಿಯ ಸತಿಕೇಳೆ ಮಧುಕೈಟಭ ದಾನವರ ಗೆಲಿದ ಶಶಿಜೂಟನ ವಲ್ಲಭೆ ಶಂಕರಿ ಶಾಕಂಬರಿಯೀಕೆ ಕಾಣೆ 2 ಸತಿ ಕೇಳೆಚಂಡಾಮುಂಡಾಸುರರನು ಗೆಲಿದು ಭೂಮಂಡಲವ ಕಾಯ್ದ ದೇವಿ ಭವಾನಿಯೀಕೆ ಕಾಣೆ 3 ವೀರಮುದ್ರಿಕೆ ಕಂಕಣ ಕಡಗವದೋರೆ ಹಿಂಬಳೆ ದಂಡು ಮುತ್ತಿನಹಾರವ ಧರಿಸಿ ಬಾಹವಳಾರೆ ಅಕ್ಕನಾರಾಯಣನರಸಿ ನೀ ಕೇಳೆಧೀರನಿಶುಂಭನ ಗೆಲಿದಮರರ ಪರಿವಾರವ ಪೊರೆದ ಪರಶಿವೆ ಪರಮೇಶ್ವರಿ ಕಾಣೆ 4 ಮೆರೆವೇಕಾವಳಿಗುಂಡಿನಸರಪರಿಪರಿ ಚಕ್ರಸರ ನಕ್ಷತ್ರದಸರಗಳ ಧರಿಸಿ ಬಾಹವಳಾರೆ ಅಕ್ಕಕರಿವರದನ ಅರಸಿ ನೀ ಕೇಳೆಧುರದೊಳೆ ಧೂಮ್ರಾಕ್ಷನ ವಧಿಸಿದಗಿರಿರಾಜ ಕುಮಾರಿ ಮಂಗಳಗೌರಿ ದೇವಿ ಈಕೆ ಕಾಣೆ5 ಅಚ್ಚ ಮುತ್ತಿನ ಸರಗಳ ನಡುವೆಪಚ್ಚೆಯ ರತುನದ ಪಂಚಸರಗಳನಿಚ್ಚಳದಿ ಧರಿಸಿ ಬರುವವಳಾರೆ ಅಕ್ಕಅಚ್ಚುತನ ಅರಸಿ ನೀ ಕೇಳೆಅಚ್ಚರಿಯನೆ ಶುಂಭ ನಿಶುಂಭರಕೊಚ್ಚಿದ ರುದ್ರಾಣಿ ಶಿವೆ ಶರ್ವಾಣಿ ಈಕೆ ಕಾಣೆ 6 ಚೆಂಗಾವಿಯ ಸೀರೆಯನುಟ್ಟುರಂಗುರತುನದೊಡ್ಯಾಣವನುಟ್ಟುಭೃಂಗಕುಂತಳನರ್ತಿಸೆ ಬಾಹಳಾರ ಅಕ್ಕಅಂಗಜನ ಮಾತೆ ನೀ ಕೇಳೆಸಂಗರದಲಿ ರಕ್ತಬೀಜನ ಗೆಲ್ದಗಂಗಾಧರನರಸಿ ಕಾಳಭುಜಂಗವೇಣಿ ಈಕೆ ಕಾಣೆ 7 ಝಗಝಗಿಸುವ ಕುಂಕುಮರೇಖೆಮಗಮಗಿಸುವ ಮೃಗಮದ ತಿಲಕದಿಅಗಿಲುಗಂಧದೊಳೊಪ್ಪುತ ಬಾಹಳಾರೆ ಅಕ್ಕನಗಧರನಂಗನೆ ನೀ ಕೇಳೆಜಗಳದೆ ಮಹಿಷನ ಮಿಗೆ ಮರ್ದಿಸಿದಗಣಿತ ಸನ್ಮಹಿಮಾಸ್ಪದೆ ಸರ್ವೇಶ್ವರಿ ಈಕೆ ಕಾಣೆ8 ಕೆಂದಾವರೆಯಂದವ ನಿಂದಿಪಬಂಧುರಪದದಂದುಗೆ ಕಲಿರೆನೆಕುಂದಣದ ಸರಪಣಿಯಿಟ್ಟು ಬಾಹಳಾರೆ ಅಕ್ಕಮಂದರಧರನಂಗನೆ ಕೇಳರ-ವಿಂದಜ ಸಂಕ್ರಂದನಮುಖಿ ಸುರವೃಂದವ ಪೊರೆವ ಮಾಹೇಶ್ವರಿ ಈಕೆ ಕಾಣೆ 9 ಮರುಗ ಮಲ್ಲಿಗೆ ಸುರಗಿ ಸೇವಂತಿಗೆಪರಿಮಳಿಸುವ ಸಂಪಗೆ ಕೇದಗೆ-ಯರಳನೆ ಮುಡಿದು ಬಾಹವಳಾರೆ ಅಕ್ಕಮುರಹರನಂಗನೆ ನೀ ಕೇಳೆವರ ಕೆಳದಿಯ ಪುರದೊಳು ನೆಲಸಿದವರದ ರಾಮೇಶ್ವರನಂಗನೆ ಪಾರ್ವತಿ ಈಕೆ ಕಾಣೆ 10
--------------
ಕೆಳದಿ ವೆಂಕಣ್ಣ ಕವಿ
ಪೊರೆಯುವಳು ದೇವಿ ಪೊರೆಯುವಳು|| ಕರುಣದಿಂದ ನಮ್ಮ ಪೊರೆಯುವಳು ಪ ಶರಣರಿಗೊಲಿದವರಿಷ್ಟವ ಸಲಿಸುವ| ಪರಮಪಾವನೆ ದೇವಿ ಪೊರೆಯುವಳು ಅ ಪ ತೋಷದಿಂದಲವಳಾಶ್ರಿತ ಜನರಭಿ| ಲಾಷೆಯ ಸಲಿಸುತ ಪೊರೆಯುವಳು|| ವಾಸವಾದಿ ಸುರವಂದಿತೆ ಶ್ರೀ ಪರ| ಮೇಶ್ವರಿದೇವಿಯು ಪೊರೆಯುವಳು 1 ಮಹಿಷಾಸುರನನು ಮಹಿಯೊಳು ಕೆಡಹಿದ| ಮಹಿಷಮರ್ದಿನಿದೇವಿ ಪೊರೆಯುವಳು|| ಮಹಿಮೆಯದೋರುತ ಖಳ ಧೂಮ್ರಾಕ್ಷನ| ದಹಿಸುತ ಮಹಿಯನು ಪೊರೆದವಳು 2 ಚಂಡ ಮುಂಡ ಖಳ ತಂಡವಳಿಸಿ ಬ್ರ | ಹ್ಮಾಂಡದ ಭಾರವ ಕಳೆದವಳು|| ರುಂಡವ ತರಿಯುತ ಚೆಂಡಾಡಿದ ಶ್ರೀ| ಚಾಮುಂಡೇಶ್ವರಿ ಪೊರೆಯುವಳು 3 ಭಕ್ತರ ಪೊರೆಯಲು ರಕ್ತಬೀಜಾಖ್ಯನ| ರಕ್ತ ಪಾನÀವನು ಗೈದವಳು|| ಯುಕ್ತಿಯಿಂದಲಾ ನಕ್ತಂಚರನನು| ಶಕ್ತಿಸ್ವರೂಪಿಣಿ ತರಿದವಳು 4 ಶುಂಭ ನಿಶುಂಭರ ವಧಿಸಿದ ಶ್ರೀ ಜಗ| ದಂಬಾದೇವಿಯು ಪೊರೆಯುವಳು|| ಅಂಬುಜಲೋಚನೆ ಶಂಭುಮನೋಹರೆ | ಇಂಬುಗೊಡುತ ನಮ್ಮ ಪೊರೆಯುವಳು 5 ದುರುಳರ ಬಾಧೆಗೆ ಬೆದರುತ ಸುರತತಿ | ಮೊರೆಯಿಡಲಭಯವನಿತ್ತವಳು|| ಅರುಣಾಸುರನ ಸಂಹರಿಸುತ ನಂದಿನಿ| ನದಿಯೊಳು ಶರಣರಿಗೊಲಿದವಳು 6 ಪರಿಪರಿ ವಿಧದಲಿ ಧರಣಿಯ ಭಾರವ ಪರಿಹರಿಸುತಲಿ ಪೊರೆದವಳು|| ಪರಮಕೃಪಾಕರಿ ಶ್ರೀ ಜಗದೀಶ್ವರಿ ಶರಣರಾದ ನಮ್ಮ ಪೊರೆಯುವಳು 7 ಶಂಕರಿ ಶುಭಕರಿ ಕಿಂಕರಪ್ರಿಯಕರಿ|| ಪಂಕಜಲೋಚನೆ ಪೊರೆಯುವಳು|| ಶಂಖಚಕ್ರಾಂಕಿತೆ ಶ್ರೀ ದುರ್ಗಾಂಬಿಕೆ| ಕಿಂಕರರೆಮ್ಮನು ಪೊರೆಯುವಳು 8 ಕೈಟಭಾದಿ ಖಳಸಂಕುಲವಳಿಸಿದ| ನಿಟಿಲಾಂಬಕಿ ಶಿವೆ ಪೊರೆಯುವಳು|| ಜಟಾಮಕುಟ ಸುರತಟನೀಧರಸತಿ| ಕಟಿಲಪುರೇಶ್ವರಿ ಪೊರೆಯುವಳು9
--------------
ವೆಂಕಟ್‍ರಾವ್