ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಪೋಗುವೆ ರಂಗಾ, ರಂಗಯ್ಯ ರಂಗ ಪ ಏಕಾಂತದೊಳು ಪೇಳ್ವ ವಾಕ್ಕುಗಳನು ಕೇಳಿ ಅ.ಪ ಮುನಿಸತಿ ಶಿಲೆಯಾಗಿ ವನಜನಾಭಾಯೆಂದು ನೆನೆಯುತಲಿಲ್ಲವೋ ಮನ ಮೋಹನಾ ತನಯ ಪ್ರಹ್ಲಾದ ತಾ ಜನಕಾ ಬಾರೆನಲಿಲ್ಲ 1 ದುರುಳ ಮಕರಿಯಿಂದೆ ಪರಿತಾಪವಾಂತಿಲ್ಲ ಸ್ಮರಿಸಲಿಲ್ಲ ದುರುಳ ಕದ್ದೊಯ್ಯಲಿಲ್ಲ ಸರಸಿಜಾನನನೀಗ ಚರಣಕೆರಗಲಿಲ್ಲ 2 ಹದಿನಾರು ಸಾವಿರ ಸುದತೀ ಮಣಿಯರೆಲ್ಲ ಮದನಾಂಗ ಬಾರೆಂದು ಕರೆಯಲಿಲ್ಲ ಉದಧಿ ನಿನ್ನರಸಲಿಲ್ಲ ಪದುಳದೆ ಬಲಿ ನಿನ್ನ ಚದುರ ಬಾರೆನಲಿಲ್ಲ 3 ಕರದೆ ಕೊಡಲಿಯ ಪಿಡಿದು ಮರದೆ ನಿ[ಲ್ಲೆನುತಲಿ] ನೂರಾರು ಕೈಯವ ಕರೆಯಲಿಲ್ಲ ಹರನೀಗ ತ್ರಿಪುರರ ತರಿಯೆ ಬಾರೆನಲಿಲ್ಲ ವರತುರುಗವೇರಿ ಧುರಕೆ ಬಾರೆಂಬರಿಲ್ಲ4 ಕಾಮಿತವೀಯೆಂದು ಪ್ರೇಮದಿ ಭಜಿಸುವ ಪಾಮರರಿಲ್ಲಿಗೇ ಬರುತಿರ್ಪರೋ ಶಾಮನೆ ಮಾಂಗಿರಿಗಾಮಿಯಾಗಿಹೆಯೇಕೆ ಕಾಮಹರನೆ ಬಾರೊ ರಾಮದಾಸಜೀವ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವತಾಸ್ತುತಿ ಅಂಜಿಕೆ ಬರುತಾದವ್ವ ನಿನ್ನನು ನೋಡ ಲಂಜಿಕೆ ಬರುತಾದವ್ವ ಪ ಅಂಜಿಕೆ ಬರುತಿದೆ ಮಂಜುಳಾಂಗಿಯೆ ನಿನ್ನ ಮಂಜುಳ್ವಾಕ್ಯಕೆ ತಪಭಂಗವಾದದ್ದು ಕೇಳಿ ಅ.ಪ ಪತಿಗೆ ನೀ ಮೃತ್ಯುವಾದೆವ್ವ ಮತ್ತು ನೀನು ಸುತರಿಗೆ ಕಷ್ಟಕೊಟ್ಟೆವ್ವ ಸತಿಯಾಗಿ ತಮ್ಮಗೆ ಭಾವನ್ನ ಕೊಲ್ಲಿಸಿದಿ ಮತಿಗೇಡಿ ಅಣ್ಣನ ಸತ್ಯನಾಶನ ಗೈದಿ 1 ಶಾಪಕೊಡಿಸಿದೆವ್ವ ಪತಿಯಿಂದ ಶಾಪವ ಪಡಕೊಂಡೆವ್ವ ಶಾಪಕೊಡಿಸಿ ಮುಖ ಕಪ್ಪು ಮಾಡಿಟ್ಟೆವ್ವ ಬಸಿರು ಮಾಡಿಟ್ಟೆವ್ವ 2 ಪತಿಗೆ ವಂದಕಳಾದೆವ್ವ ಮೀರಿದ ತಾಯಿ ಪತಿ ಪ್ರೀತಿ ಕಳಕೊಂಡೆವ್ವ ಸುತನ ಕತ್ತಿಯಿಂದ ಕುತ್ತಿಗೆ ಕೊಯ್ಸಿಕೊಂಡು ಪತಿತಪಾವನಳಾಗಿ ಮತ್ತೆ ಮುಂದಕೆ ಬಂದಿ 3 ಗರಡಿಯ ಮನೆ ಹೊಕ್ಕೆವ್ವ ಪತಿಯಕೈಲೆ ದುರುಳನ್ನ ವಧಿಸಿದವ್ವ ಧುರಕೆ ನಿಲ್ಲನೆ ಮತ್ತೆ ಕುರುಪನ ಕುಲಮೂಲ ತರಿಸಿದಂಥ ಮಹಮರಗಿ ನೀನವ್ವ 4 ಮಾತ್ಯಾಗಿ ಪಡೆದ್ಹಡದವ್ವ ಮತ್ತು ನೀನು ಸತಿಯಾಗಿ ನಡೆದೆ ಅವ್ವ ರೀತಿ ತಿಳಿಯಿತು ನಿನ್ನದ್ಯಾತರ ಭೀತಿನ್ನು ದಾತ ಶ್ರೀರಾಮನ ಪ್ರೀತಿ ದಾಸರಿಗೆ 5
--------------
ರಾಮದಾಸರು
ಭಕುತರಪರಾಧವ ಬಗೆಯನೀ ದೇವಭಕುತರು ತಪ್ಪಿದರೆ ಬಲು ಭಯವೀವ ಪ . ಇಟ್ಟುಣಿಸಿದ ಬಲಿ ಕಟ್ಟಿದ ಯಶೋದೆಗೆಇಷ್ಟಾರ್ಥಗಳನಂದು ಕೊಟ್ಟು ಕಾಯನೆದುಷ್ಟತನದಿ ಧೃತರಾಷ್ಟ್ರತನಯ ತನ್ನಕಟ್ಟಲು ಹವಣಿಸೆ ಕಷ್ಟವನುಣಿಸನೆ 1 ಕಾಲಲಿ ತನ್ನ ಅಂಗವನೊದ್ದ ಮುನಿಪನಮೂಲೋಕವರಿಯೆ ಮುದ್ದಿಸಿ ಮೆರೆಯನೆತಾಳದೆ ನೃಪತಿಯ ತಾನೆಂದು ತಿಳಿಯನುಕಾಲಯವನ ಬಂದು ಕಾಳು ಮಾಡಿಸನೆ 2 ಪರವಶಚಿತ್ತನಾಗಿಫಲುಗುಣ ಜರೆಯಲುಹರಿ ದೂರಾಗದೆ ಹರಣವ ಕಾಯನೆಅರಸೆಂಬ ಗರ್ವದಿಂದ ಅರಿಭಟ ಪೌಂಡ್ರಕನಧುರಕೆ ಗುರಿಯ ಮಾಡಿ ಧುರದಿ ಕೊಲಿಸನೆ3 ಶರಕೆ ಗುರಿಯ ಮಾಡಿ ಸಮರದೊಳೊಡ್ಡಿದಸುರವ್ರತÀಗಂದು ಶುಭವನೀಯನೆಹರನ ಮೆಚ್ಚಿಸಿ ತನ್ನ ಗೆಲುವ ಬಿಲ್ಲ ಬೇಡಿದಶರೀರ ಸಂಬಂಧಿಯ ಕೊಲಿಸನೆ 4 ಮಕುಟವ ಕದ್ದೊಯ್ಯಲು ಮಹಾಬಲಿಯ ಬಾಗಿಲಅಕಳಂಕನಂದು ಕಾವುದ ಬಿಟ್ಟನೆಈ ಕೃಷ್ಣ ಹಯವದನನಿಂದುಡುಪಿನ ಜನಕೆಶೋಕವಿತ್ತ ಕಳ್ಳನಿಗೆ ಶೂಲಗತಿಯೀಯನೆ5
--------------
ವಾದಿರಾಜ
ಸಡಿಲ ಬಿಡದೆ ಕೈಯ ಪಿಡಿದು ಉದ್ಧರಿಸಯ್ಯ ಬಡವನು ನಾನೈಯ್ಯ - ಕೊಡು ನಿನ್ನ ಸೇವೆಯ ಪ ಒಡಲಿಗೋಸುಗ ಪರರಡಿಗಳ ಪಿಡಿಯುತೆ ಭವ ಕಡಲಿನೊಳಗೆ ಅ.ಪ. ಪಡೆದು ವರಗಳನು ಕಡು ಖೂಳ ರಾವಣ ನಡುಗಿಸಿ ಸುರನರ ಭುಜಗರೊಡೆಯರನ್ನು ಹಿಡಿದು ಮುನೀಶರ ಹೊಡೆದು ಬಡಿದು ಹಿಂಸೆ - ಪಡಿಸುತ್ತ ಯುವತೇರ ದುಡುಕು ಮಾಡುತ್ತಲಿರೆ ಗಡಣೆಗಾರದೆ ಪಾಲ ಕಡಲ ತಡಿಗೆ ಬಂದು ದೃಢ ಭಕ್ತಿಯಲಿ ನಿಂದು ಜಡಜ ಭವಾದ್ಯರು ಪೊಡಮಟ್ಟು ಬೇಡಲು ಕೊಡುತೆ ಅಭಯವನು ಮಡದಿಯನೊಡಗೂಡಿ ಪೊಡವಿಗಿಳಿದು ಬಂದೆ 1 ಸತಿ ಕೌಸಲ್ಯದೇವಿಯ ಬಸುರೊಳು ಸಂಜನಿಸಿ ದಶದಿಶದೊಳು ಯಶ ಪಸರಿಸಿ ಅಸುರೆಯ ಅಸುವನು ಹಾರಿಸಿ ಕುಶಿಕ ಸುತನ ಯಜ್ಞ ಹಸನಾಗಿ ಪಾಲಿಸಿ ನಸುನಗುತಲಿ ಪದಸರಸಿಜ ಸೋಕಿಸಿ ಅಶಮವಾಗಿದ್ದ ಮುನಿಸತಿಯನುದ್ಧರಿಸಿ ಪಶುಪತಿ ಧನುಭಂಗವೆಸಗಿ ಸೀತೆಯ ಕರ ಬಿಸಜವ ನೊಶಗೈದ ಅಸಮ ಸಮರ್ಥ 2 ಚಂದದಿಂ ಶಾಙ್ರ್ಞವನೊಂದಿ ಅಯೋಧ್ಯೆಗೆ ಬಂದು ಪತ್ನಿಯಗೂಡಿ ನಂದದಿಂದಿರುತಿರ್ದು ಬಂದ ಕಾರ್ಯಕೆ ನೆವ ತಂದು ವನಕೆ ಬಂದು ನಿಂದಿರೆ ಜಾನಕಿ ಲಕ್ಷ್ಮಣರೊಡಗೊಂಡು ನೊಂದು ನೃಪನು ದಿನವನ್ನು ಹೊಂದಲು ಕರೆ- ತಂದು ಭರತನಿಗೆ ಅಂದು ರಾಜ್ಯವನೀಯೆ ಬಂದೊಲ್ಲದೆ ಬೇಗ ಬಂದು ವಂದಿಸೆ ಪದ ದ್ವಂದ್ವದ ಪಾದುಕವಂದದಿಂದೊಲಿದಿತ್ತೆ 3 ಚಿತ್ರಕೂಟಾದ್ರಿಯಿಂದತ್ತ ನಡೆದು ನೆಲ ಕೊತ್ತಿ ವಿರಾಧನ್ನ ವತ್ಸ ಲಕ್ಷ್ಮಣ ಸೀತಾ ಯುಕ್ತನು ನೀನಾಗಿ ಪೊರೆಯಲು ಇತ್ತು ಅಭಯವನ್ನು ಉತ್ತಮ ದಂಡಕದಿ ಸ್ತುತ್ಯ ಕುಂಭಜ ಮುನಿಯಿತ್ತ ಧನುವನಾಂತು ಕುತ್ಸಿತ ದನುಜೆಯ ಶಿಕ್ಷಿಸಿ ಖರ ಬಲ ಕತ್ತರಿಸುತೆ ಬೆನ್ಹತ್ತಿ ಮಾರೀಚನ್ನ ತುತ್ತು ಮೂರಾಗಿಸಿದತ್ಯಂತ ಶಕ್ತ 4 ಮೈಥಿಲಿಯಾಡಿದ ಮಾತಿಗೆ ಸೌಮಿತ್ರಿ ಪಾತಕಿ ದಶಮುಖ ಸಾತ್ವೀಕ ವೇಷದಿ ಸೀತೆಯ ನೊಯ್ದೆನೆಂದು ಆರ್ತ ಸ್ವರದಿ ಪೇಳಿ ಮೃತಿಯೊಂದೆ ಖಗಪತಿ ಆತಗೆ ಸದ್ಗತಿಯಿತ್ತು ನಡೆದು ಖಳ ಪೋತಕ ಬಂಧನ ತೋಳ್ಗಳ ಖಂಡಿಸಿ ಪ್ರೀತಿಲಿ ಶಬರಿಗೆ ಮುಕ್ತಿಯ ಪಾಲಿಸಿ ವಾತಸುತನ ಮನ ಪ್ರಾರ್ಥನೆ ಸಲಿಸಿದೆ 5 ಚರಣದಿಂದೊಗೆದು ದುಂದುಭಿಯ ಶರೀರವನ್ನು ತರುಗಳೇಳನು ಒಂದೇ ಸರಳಿನಿಂದುರುಳಿಸಿ ತರಣಿಸುತನ ಭಯ ಹರಿಸಿ ವಾಲಿಯ ಗರ್ವ ಮುರಿಸಿ ವಾನರ ರಾಜ್ಯ ದೊರೆತನ ಸಖಗಿತ್ತೆ ತರುಚರ ತತಿಗಳ ಕೆರಳಿಸಿ ಹರುಷದಿ ಪರನು ಭಕುತನನ್ನು ಕರೆದು ಕುರುಹುಗಳ ನೊರೆದು ಮುದ್ರಿಕೆಯಿತ್ತೆ ಕರುಣವಾರಿಧಿಯೆ 6 ತಿಂಗಳು ಮೀರಿತೆಂದು ಅಂಗದ ಪ್ರಮುಖರು ಕಂಗೆಟ್ಟು ಕುಳಿತಿರೆ ಭಂಗನ ಕಳೆದು ತ - ರಂಗಿಣಿ ಪತಿಯನ್ನು ಲಂಘಿಸಿ ಹನುಮನು ಕಂಗೊಳಿಸುವ ಲಂಕಾ ಪ್ರಾಂಗಣದಲಿ ನಿಂದು ಭಂಗಿಸಿ ಲಂಕಿಣಿಯನು ಸೀತಾಂಗನೆ - ಗುಂಗುರವಿತ್ತುತ್ತಮಾಂಗದ ಮಣಿಯಾಂತು ಕಂಗೆಡಿಸ್ಯಸುರರ ಜಂಗುಳಿಯನು ಭಕ್ತ ಪುಂಗವ ಬರೆ ನಿನ್ನಂಗ ಸಂಗವನಿತ್ತೆ 7 ಹರಿವರರನು ಕೂಡಿ ಶರಧಿಗೆ ಪಯಣಮಾಡಿ ಶರಣ ವಿಭೀಷಣನಿಗೆ ಸ್ಥಿರ ಪಟ್ಟವನು ನೀಡಿ ಭರದಿ ಸೇತುವೆಗಟ್ಟಿ ಅರಿಯ ಪಟ್ಟಣ ಮುಟ್ಟಿ ಧುರಕೆ ದೂತನ್ನ ಅಟ್ಟಿ ಪರಬಲವನು ಕುಟ್ಟಿ ಪುರಕೆ ಉರಿಯನಿಕ್ಕಿ ಶರವರ್ಷಂಗಳ ಕರಿ ರಥಾ ತುರಗ ಪದಾತಿಗ- ಳುರುಳಿಸಿ ದಶಶಿರನುರವನು ಇರಿದು ಪರಮ ಸಾಧ್ವಿಯ ಕರಸರಸಿಜ ಪಿಡಿದೆ 8 ಭಕ್ತ ವಿಭೀಷಣಗೆ ದೈತ್ಯಾಧಿಪತ್ಯವಿತ್ತು ಕೃತ್ತಿವಾಸನ್ನ ಸೇತು ಹತ್ತಿರ ಸ್ಥಾಪಿಸಿ ಪತ್ನಿ ಸಹೋದರ ಮಿತ್ರ ಭೃತ್ಯರ ಕೂಡಿ ಉತ್ತಮ ಪುಷ್ಪಕದಿ ಚಿತ್ರಕೂಟಕೆ ಬಂದೆ ಭಕ್ತನ ಕಳುಹಿ ಸದ್ವøತ್ತವ ಭರತಗೆ ಬಿತ್ತರಿಸಿ ಮಹದುತ್ಸವದಿ ಪುರ ಮತ್ತೆ ಪ್ರವೇಶಿಸಿ ರತ್ನ ಸಿಂಹಾಸನ ಹತ್ತಿ ಶ್ರೀಕಾಂತನೆ ನಿತ್ಯದಿ ಸಲಹುವೆ 9
--------------
ಲಕ್ಷ್ಮೀನಾರಯಣರಾಯರು