ಗುರುನಾಥ ಗುರುನಾಥ ಹೇಳಿದ ಮಾತು ಮಾತೆನ್ನ ಬಹುದು ಮಾತುವೊಂದೇಪ
ವೇದಕ್ಕೆ ನಿಲ್ಲದು ವಿವರಕ್ಕೆ ತೋರದುಆದಿ ಪುರಾಣದ ಅರ್ಥ ಅರ್ಥ ಅದುವಾದಕ್ಕೆ ದೂರದು ಕರವಶವಾಗದುಸಾಧಿಸಿ ತನಗೆ ತಿಳಿದು ಹೇಳಿದ ಮಾತು ಮಾತು ವೊಂದೇ 1
ಮೂರರ ನಡುವದು ಮೂಲವೆ ತಾನದುಧೀರ ಧೀರರೆಲ್ಲ ದಿಟ್ಟಿಪುದುಬೇರೆ ಮತ್ತಿಲ್ಲದು ಬೆಗಡಾಗಿ ಇಹುದು 2
ಸಾರಾಯದಿಂದೆನಗೊಲಿದು ಹೇಳಿದ ಮಾತು ಮಾತುವೊಂದೇಮಾತಿನ ಮಹಿಮೆಯ ಮತ್ತೇನ ಹೇಳಲಿಪ್ರೀತಿ ಎಂಬವೆಲ್ಲ ಪೀಡೆಯಾದವುಭೂತನಾಥ ಚಿದಾನಂದ ಭೂಪತಿಯಾದಈ ತೆರದಲಿ ತಾನಿಂತು ಹೇಳಿದ ಮಾತು ಮಾತುವೊಂದೇ3