ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಣಿದಾಡೊ ರಂಗ ನಲಿದಾಡೊ ಪ. ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ ಅ.ಪ. ಪತಿಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂಧಿಮಿಕೆನ್ನುತ 1 ಗಕ್ಕಸದಿಂ ಶಕಟಾಸುರನಸೊಕ್ಕ ಮುರಿದು ಬಂಡಿಯನೊದೆದುಚೊಕ್ಕ ಶ್ರೀಚರಣಾರವಿಂದಧಿಕ್ಕಿಟ ಧಿಮಿಕಿಟ ಝಂಕಿಟವೆನ್ನುತ 2 ಬಲಿಯ ಮೆಟ್ಟಿ ಕಾಳಿಂಗನ ಹೆಡೆಯತುಳಿದು ನಾಟ್ಯವನಾಡಿಚೆಲುವ ಶ್ರೀಹಯವದನ ನಿಮ್ಮಘಲುಘಲು ಗೆಜ್ಜೆ ಘಿಲುಘಿಲುಕೆನ್ನುತ 3
--------------
ವಾದಿರಾಜ
ತುಂಗ ಭುಜಂಗನ ಫಣಿಯಲಿ ಕುಣಿದನು ಪ ಮಂಗಳ ಮೂರುತಿ ರಂಗ ಶ್ರೀ ಕೃಷ್ಣನು ಅ.ಪ ಕಿಣಿ ಕಿಣಿ ತಾಳ ಝೇಂಕರಿಸುವ ತಂಬೂರಿ ಕಣ ಕಣವೆಂಬ ಸುನಾದ ಮೃದಂಗವ ಝಣಿ ಝಣಿಸುವ ಕಂಜರಿ ನಾದಗಳನು ಅನುಸರಿಸುತ ಧಿಕ್ಕಿಟತ ಧಿಕ್ಕಿಟ ಎಂದು 1 ತುಂಬಿ ತುಂಬುರು ಗಂಧರ್ವರು ಶಹನ ಅಠಾಣ ಶಂಕರಾಭರಣಗಳಿಂದ ಸೊಗಸಿನಿಂದಲಿ ಗುಣಗಾನವ ಮಾಡಲು ನಗಧರ ಕೃಷ್ಣನು ನಗು ಮೊಗದಿಂದಲಿ 2 ಪನ್ನಗ ಸತಿಯರು ಚಿನ್ನರ ತವಕದಿ ಸನ್ನುತಿಸುತ ಆರತಿಯ ಬೆಳಗುತಿರೆ ಉನ್ನತ ಗಗನದಿ ಸುಮನಸರೆಲ್ಲ ಪ್ರ ಸನ್ನ ಹರಿಗೆ ಸುಮಮಳೆಗರೆಯುತಲಿರೆ3
--------------
ವಿದ್ಯಾಪ್ರಸನ್ನತೀರ್ಥರು