ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋತ್ರ ಪ್ರವರ ಉಚ್ಚಾರಣೆ ವಂದೇ ಕಾಣೊ ಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ | ಲತ್ರಯದ ಸಂಧ್ಯಾವೆಲ್ಲ ಎಂದಿಗೂ ಭೇದವಿಲ್ಲಾ ಪ ಮಾತ್ರ ನುಡಿಸುವ ಬುದ್ಧಿ ಪೇಳಿ | ಚಿತ್ರವ ಗೋಡೆಯ ಮೇಲೆ ರಚಿಸಿರಲು ನೋಡಿ ಸ್ತೋತ್ರ ಮಾಡಿದರೆ ಯೇನಾಹದೋ1 ಚಿತ್ರಿಕ ಬಲು ವಿವೇಕ ಉಳ್ಳವನೆಂದು ಪಾತ್ರರ ಮುಂದೆ ಕೊಂಡಾಡಿದಂತೆ | ಧಾತ್ರಿಯೊಳಗೆ ನಮ್ಮ ಪುರಂದರದಾಸರ ಸ್ತೋತ್ರ ಮಾಡಿರಯ್ಯ ಸಚಲರಾಗೀ 2 ಗಾತ್ರ ನಿರ್ಮಲವಕ್ಕು ಯೆಂದೆಂದಿಗೆ ದಿವ್ಯ | ನೇತ್ರದಿಂದಲಿ ಹರಿಯ ಸರಿದರುಶನಾ | ರಾತ್ರಿಂಚರೆಯೆಂದು ಪೆಸರುಳ್ಳವು ಕುಮುದ ಮಿತ್ರಗೆ ಸರಿಯೇನು ಉಳದಾದವು 3 ಸ್ತೋತ್ರಾಭರಣವಾದ ದಾಸರ ಶವನಕ್ಕೆ ಅ ನ್ಯತ್ರ ನುಡಿವದು ಧಿಕ್ಕರಿಪದು | ನಿತ್ರಾಣವಾದ ಮನುಜ ಹಿರಿಯರ ವಿತ್ತದಿಂದ ಯಾತ್ರಿ ಮಾಡಿ ಪುಣ್ಯ ಘಳಿಸಿದಂತೆ 4 ಸ್ತೋತ್ರ ಮಿಟಮ್ಯಾಲೆ ಪಂಗ್ತಿ ಹಾಕಿ ಕೊಡಲು ಮಾತ್ರೆಗಳ ನೋಡಿ ಬರದಂತೆ ವೋ | ಶತ್ರು ಸಂಹಾರ ನಮ್ಮ ವಿಜಯವಿಠ್ಠಲನಂಘ್ರಿ ಶತ ಪತ್ರ ಬಲ್ಲವರಿಗೆ ಯಿದೆ ವಿಸ್ತಾರ ನಿರ್ಮಾಣ 5
--------------
ವಿಜಯದಾಸ
ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾ-ವಣ್ಯದ ಕಣಿಯಾದ ಉಡುಪಿನ ಕೃಷ್ಣನ ಪ. ಕರಗುವ ಮಿಸುನಿಯ ಕಾಂತಿಯಿಂ ಗರುಡನಗರಿಗಳ ಇರವ ಧಿಕ್ಕರಿಪ ಪೀತಾಂಬರಎರಡು ಪಾಶ್ರ್ವಗಳಲ್ಲಿ ಶಿರದ ಕಿರೀಟವುಕೊರಳಹಾರದ ಜೋಡು ಇರಲು ಈ ಪರಿಯಿಂದಮರೆಯಲಬ್ಜದ ಕಂಕಣ ಭೂಮಿಗೈದುವವರ ಸೂರ್ಯನಾರಾಯಣ ಬಾಹುಗಳುಳ್ಳಮಕರಕುಂಡಲ ಬಾಹುಪುರಿಗಳಿಂದೆಸೆವನ1 ಪಾದ ಕಂಸೆಯಗಲಿ ಇಂದ್ರ ನೀಲದದಾಳ ದಿಕ್ಕುಗಳನೆಬೆಳಗುತಲೆ ಬಹಳ ಲೀಲೆಯ ತೋರ್ಪಖಳರೆದೆ ಶೂಲನ ಚೆಲುವ ಗೋಪಾಲನ 2 ಜಾತಿಮುತ್ತಿನ ಚುಂಗು ಖ್ಯಾತಿಯಿಂದೊಪ್ಪುವಚಾತುರ್ಯದಿ ವಾರೆಗೊಂಡೆಯ ಕಟ್ಟಿಆ ಜೂತದಿಂದಲಿ ಅತಿ ಮೈಜೋಡು ತೊಟ್ಟು ಈ-ರೀತಿಯಿಂದೆಡಗೈಯ ವಂಕಿ ಮಧ್ಯದೊಳಾನುಚ್ಚುತ ಖಡ್ಗದಿಂದೊಪ್ಪುವ ಭೂತಳದಿವಿಖ್ಯಾತಿ ಪಡೆದು ಮೆರೆವÀ ದುಷ್ಟಮೃಗವಘಾತಿಸಿ ಬಿಡುವ ಕಿರಾತÀ ಸ್ವರೂಪನ್ನ 3 ಮಿಸುನಿಯ ಮುಂಡಾಸು ಪೊಸರವಿಯಂತಿರೆಶಶಿಯ ಪ್ರಭೆಯಂತೆ ಪಸರಿಸಲಂಗಿಯುಹಸನಾದ ನವರಂಜು ವಶದಲ್ಲಿ ತುಂಬಿರೆಕುಸುಮನಂದದಿ ಧೋತ್ರವ ಉಟ್ಟುವೈರ್ವಸನವ ಸುತ್ತಿ ಗಾತ್ರದಿ ಕುಲಾಯಿ ಒಪ್ಪಿನಸುನಗೆಯಿಂದೊಪ್ಪುವ ನವವಿಪ್ರವೇಷನ್ನ 4 ಕಡೆದ ಬೊಗರಿಯಂತೆ ಕಡೆದು ಮಾಡಿದ ಬಾಹುದೃಢವಾದ ಕುಚಗಳು ದುರಿತದುನ್ನತವಾದಬಡನಡು ಬಳುಕಲು ಕಡೆಗಣ್ಣ ನೋಟದಿಮೃಡ ಮುಖ್ಯರ್ಮೋಹಿಸಿ ಒಡಲ ಮಾರದಿರಲುಮುಡಿಯ ನೋಡುತ ನವಿಲು ನಾಚಿ ಮೊಗಗೊಡದಡವಿಯ ಸೇರಲು ಭೂಷಣಗಳುಜಡಿವುತ್ತ ಜಗದೊಳು ಕಡುಮೋಹಿನೀ ಬಲು 5 ಕರ್ಮ ಕಿಂಕರರೊಳಗಾಗಿಟೊಂಕದಿ ಕೈಯಿಟ್ಟು ಶಂಕಿಸಲು ತನ್ನಂಘ್ರಿಪಂಕಜಂಗಳ ಬೇಡಿ ಪುರುಷಾರ್ಥ ಪಡೆಯಿರೊಶಂಕೆ ಬೇಡವೊ ಎಂದು ಲೆಂಕರಿಗೆ ಸೂಸಿಪ್ಪ-ಸಂಖ್ಯಾತ ಕರಯುಗಳದಿಂದೊಪ್ಪುವಶಂಖ ಚಕ್ರ ಆಯುಧಂಗಳ ಪಿಡಿದು ಸರ್ವಾಲಂಕಾರದಿಂ ವೆಂಕಟೇಶನ ರೂಪ6 ಈ ವಿಧ ತಪ್ಪದೆ ಏಳು ವಾರಗಳಲ್ಲಿಪಾವನಮತ ಗುರು ಬಳಿಗೆ ಬಂದವರೆಲ್ಲಶ್ರೀವರ ಹಯವದನನ ಸೇವೆಗೊಳ್ಳಿರೋ ನಿತ್ಯಆವಾವ ನಾಡಿನ ಆಶ್ರಿತ ಜನರನ್ನುಭಾವಶುದ್ಧಗಳರಿತು ಕೋರಿಕೆಗಳಈವ ಭಕ್ತರಿಗೊಲಿದು ಪಾಷಂಡಾದಿಶೈವರ ತರಿದ ಸದ್ವೈಷ್ಣವರ ದೇವÀನ್ನ7
--------------
ವಾದಿರಾಜ
ಶ್ರೀ ವೇಣುಗೋಪಾಲ ಶುಕಮುನಿಯ ಬಿಂಬ ಪ ಧ್ಯಾನ ಪಾಲಿಸು ನಿನ್ನದೀನಭವದಿ ನೆಲಸಿ ಅ.ಪ. ಜ್ಞಾನ ಮನ ದಶ ಕರಣ ಪ್ರಾಣ ಪಂಚಕರಲ್ಲಿ ಭಾನುತೇಜನೆ ನೆಲಿಸಿ ತಿಳಿಸದಲೆ ನಾನಾ ಬಗೆಯಲಿ ದಣಿಸಿ ನೀನಾಟ ಆಡುತಿಹೆ ಮರವೆ ಬಿಡಿಸಿ ಪೊರೆಯೊ 1 ಕೋಟಿ ಸೂಂiÀರ್iರ ಕಾಂತಿ ಧಿಕ್ಕರಿಪ ಚಿನ್ಮಯನೆ ಮಾಟ ಮಾಡದೆ ನಿನ್ನ ಲೀಲೆ ತೋರೊ ನಾಸಿಕ ಶ್ರವಣ ತನುಮನದಿ ಸಾಯುಜ್ಯ ಬೇಟೆಯಲಿ ಇದ್ದೆನ್ನ ಕಣ್ಣು ಕಟ್ಟುವುದ್ಯಾಕೆ 2 ಶತಕೋಟಿ ಬ್ರಹ್ಮಾಂಡ ಗತ ಜೀವಗಣಕಮೃತ ಸತತ ಪಾಲಿಪ ಕರುಣ ನಿನದಲ್ಲವೇನೊ ಹಿತಮಾಡು ಜಯೇಶವಿಠಲನೆ ಮದ್ಭಿಂಬ ಪ್ರತಿಬಿಂಬ ಭಾವದಲಿ ಬೆಳೆಸೆನ್ನ ಉದ್ಧರಿಸೊ 3
--------------
ಜಯೇಶವಿಠಲ
ಹಿಗ್ಗಿದಳು ನಂದನ ಸತಿ ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ ಕಾಲುಗಳನೆಂದು ಕರಗಳಲಿ ಪಿಡಿದು ನೀಲಮೇಘಶ್ಯಾಮ ಶ್ರೀಲಕುಮಿಯರಸನನು ಬಾಲನೆಂದರಿತು ಆಲಿಂಗನದಿ ಮೈ ಮರೆತು1 ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು ನಂಬಬಹುದೇ ಮೋಹಜಾಲವಿರಲು ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ ಮೋದ ಕಂಬನಿಯ ಸುರಿಸುತ್ತ 2 ಓರೆಗಣ್ಣಿನ ನೋಟ ನಾರಿಯರ ಪೇಚಾಟ ಮೂರು ಲೋಕಕೆ ಹರ್ಷಕರ ಮಂದಹಾಸ ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ ಚಾರುಮುಖಿ ಸುತನ ಮನಸಾರ ದರುಶನದಿಂದ 3 ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ ಸಿಂಧು ಶ್ರೀರಂಗನ್ನ ನೋಡುತಲಿ ಅಂಗನಾಮಣಿ ಅಂತರಂಗ ಪ್ರೇಮದ ಭರದಿ 4 ತನ್ನ ಉದರದಿ ನಳಿÀನಜಾಂಡವನೆ ಪೊತ್ತಿರುವ ಉನ್ನತೋನ್ನತ ಸುಗುಣ ಜ್ಞಾನಮಯನ ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ 5
--------------
ವಿದ್ಯಾಪ್ರಸನ್ನತೀರ್ಥರು