ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಪಾಲಿಸುವುದಾನಂತ ಶಯನ | ಚನ್ನ ಗರುಡವಾಹನಾ | ಮುನಿಗೊಲಿದನಂತ ಗುಣಾರ್ಣವಾ ಪ ದೇವಾ ನಂಬಿದವರ ನೋವ ಕಳೆದು ಬಿಡದೆ | ಕಾವ ಬೇಡಿದ ವರವ ನೀವ ಮೂರು | ಭುವನ ಜೀವ ವಿಮಲರಾ | ಜೀವ ನಯನ ವಸುದೇವ ದೇವಕಿತನು | ಭವನೆ ಭವದೂರ ದುರ್ಜನ ಸಂಹಾರ | ದೇವತಾ ವರ ಸಂಜೀವಾ ಪ್ರಭಾವಾ1 ಸೂರ್ಯಕೋಟಿ ಪ್ರಕಾಶಾ | ಚಾರ್ಯನಾ ನಾಯಕಾಧೀಶಾ | ಧೈರ್ಯವುಳ್ಳ ಸರ್ವೇಶಾ | ಕಾರ್ಯರೊಳು ವಿಶೇಷಾ | ಕಾರ್ಯವಂತನೆ ಈಶಾ | ತುರ್ಯಮಹಿಮಾ ಸುರ ಮರ್ಯಾದಿಯಲಿ ಬಲು | ವೀರ್ಯದಲಿ ಮತಿ | ಧಾರ್ಯನ ಮಾಡೋದು | ನಿರ್ಯಾಣ ಸಮಯಕ್ಕೆ 2 ಬಂದು ಮತ್ಸ್ಯಾದಿ ತೀರ್ಥ | ಬಂದು ಬಲು ಸಮರ್ಥ | ಇಂದು ಕರುಣಿಸು ಕರ್ತಾ | ಬೆಂದು ಪೋಗಲಾರ್ಥ | ಮುಂದುಣಿಸು ಸುಧಾರ್ಥ | ತಂದು ನೀನೆ ಮುಕ್ತ್ತಾರ್ಥ | ಬಂದು ವೈತಿರುವಾ ನಂದು ರೂಪವನೆ | ಸಿಂಧುಶಯನ ಆ ನಂದ ವಿಜಯವಿಠ್ಠಲೆನ್ನ ಪಾಲಿಸೋ3
--------------
ವಿಜಯದಾಸ
ವಾತನ್ನ ಜಯಾಜಾತನ್ನ ಲೋಕ- ಪ್ರೀತನ್ನ ಸ್ತುತಿಸಿ ಖ್ಯಾತನ್ನ ಪ ವಿಷವ ನುಂಗಿದ ಮಹಾಶೌರ್ಯನ್ನ ನಿತ್ಯ ಅಸಮ ಸುಂದರ ಮತಿಧಾರ್ಯನ್ನ ನಿಶಾಚರ ಕುಲದೋಷ ಸೂರ್ಯನ್ನ ಆರಾ ಧಿಸುವ ಭಕ್ತರ ಸುಕಾರ್ಯನ್ನ 1 ವಾನರ ಕುಲದೊಳು ಧೈರ್ಯನ್ನ ಮುದ್ದು ಆನನ ಗೀರ್ವಾಣವರ್ಯನ್ನ ಆನಂದ ವಿಜ್ಞಾನ ಚರ್ಯನ್ನ ದುಷ್ಟ - ದಾನವರಳಿದತಿ ವೀರ್ಯನ್ನ 2 ದ್ವಿಜರಾಜ ಕುಲಾಗ್ರಣಿ ಭೀಮನ್ನ ಮಹ ದ್ವಿಜಕೇತ ನಂಘ್ರಿಗೆ ಪ್ರೇಮನ್ನ ದ್ವಿಜರ ಪಾಲಿಸಿದ ನಿಸ್ಸೀಮನ್ನ ಕುರು ವ್ರಜವ ಸದೆದ ಸಾರ್ವಭೌಮನ್ನ 3 ಅದ್ವೈತ ಮತ ಕೋಲಾಹ ಲನ್ನ ವೇದ ಸಿದ್ಧಾಂತ ಶುಭಗುಣ ಶೀಲನ್ನ ಸದ್ವೈಷ್ಣವರನ್ನು ಪಾಲನ್ನ ಗುರು ಮಧ್ವಮುನಿ ಗುಣಲೋಲನ್ನ 4 ಚಾರುಚರಿತ ನಿರ್ದೋಷನ್ನ ಲೋಕ ಮೂರರೊಳಗೆ ಪ್ರಕಾಶನ್ನ ಧೀರ ವಿಜಯವಿಠ್ಠಲೇಶನ್ನ ಬಿಡದೆ ಆರಾಧಿಪ ಭಾರತೀಶನ್ನ 5
--------------
ವಿಜಯದಾಸ