ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಅರಸ ಚಂದ್ರಮಂಡಲಮಂದಿರಾಖಿಳವಂದ್ಯ ಹಯಮುಖಎಂದೆಂದೆನ್ನ ಮನದಿಂದಗಲದಿರುಮಂದರಾದ್ರಿಧರ ಪ. ತುಂಗಮಹಿಮ ತುರಂಗವದನ ಶು-ಭಾಂಗ ರಿಪುಕುಲಭಂಗ ಸುಜನರಸಂಗ ಎನ್ನಂತರಂಗ ಮಲಿನವಹಿಂಗಿಸುವುದೆಂತೊಮಂಗಳಾಬ್ಧಿತರಂಗದುಬ್ಬಿಗೆತಿಂಗಳೆನಿಸುವ ಅಂಗಜನ ತಂದೆರಂಗ ನಿನ್ನ ಪಾದಕೆಂಗಮಲದಲ್ಲಿಭೃಂಗನಪ್ಪುದೆಂತೊ 1 ವಾರಿಜಾಕ್ಷ ಮುರಾರಿ ಮದವೆಂಬೋಮಾರಿ ಮುಸುಕಿತು ಸಾರಿ ಮತ್ಸರಮಾರನೊಡಗೂಡಿ ದಾರಿ ತಪ್ಪಿಸಿಗಾರುಮಾಡಿತೆನ್ನ ನಾ-ನಾರೆ ಕ್ರೋಧಮಹೋರಗನ ವಿಷ-ಧಾರೆಗೆ ಭಯಕಾರಿ ಹರಿ ನಿನ್ನಚಾರುಚರಣವ ಸಾರಿದೆನಿಂದುತೋರಿ ಸಲಹಬೇಕು 2 ಧsÀನ್ಯ ಸುರರಜೀವನ್ನ ಕರುಣಸಂ-ಪನ್ನ ನಿತ್ಯಪ್ರಸನ್ನ ಚಿನುಮಯಪನ್ನಗಾರಿವಾಹನ್ನ ಶಶಿಸಮ-ವರ್ನ ಹಯವದನನಿನ್ನ ಪಾದಪಾವನ್ನಸುರತರು-ವಿನ್ನ ನೆಳಲೊಳಿಟ್ಟೆನ್ನ ಸಲಹಬೇ-ಕನ್ಯಥಾ ಗತಿಶೂನ್ಯ ನಾನೆಲೊಪೂರ್ಣಪುರುಷರನ್ನ 3
--------------
ವಾದಿರಾಜ
ಕತ್ತಲೆಯೊಳಗಣ ಬಾವಿ ಕಾಲ್ದಪ್ಪಿ ಬೀಳಬೇಡಮೃತ್ಯುವಲ್ಲದೆ ಅದು ನಿತ್ಯವಲ್ಲ ಪ ರಾವಣನೆಂಬುವ ಬಿದ್ದು ರಂಗಕ್ಕೆ ಈಡಾದಭಾವಿಸೆ ಜಲಂಧರನು ಬದುಕಲಿಲ್ಲಕೇವಲ ಕೀಚಕನೆಂಬುವವ ಕೇಡ ಹೇಳುವುದೇನುದೇವ ಇಂದ್ರನೆಂಬವನ ದೇಹ ಕೆಟ್ಟಿತು 1 ನಹುಷನೆಂಬುವ ಬಿದ್ದು ನಾಚಿಕೆಗೆ ಈಡಾದಬಹು ಹೇಳುವುದೇನು ವಾಲಿಯುಬದುಕನುಮಹಾಮಾಯಾವಿ ಎಂಬುವನ ಬಣ್ಣ ಕಂಡವರಿಲ್ಲಊಹಿಸೆ ಭಸ್ಮಾಸುರನು ಉರಿದುಹೋದ 2 ಕತ್ತಲೆ ಬಾವಿಯಲಿ ಬಿದ್ದು ಕೆಟ್ಟವರು ಹಲವರುಂಟುಕತ್ತಿಯ ಧಾರೆಗೆ ಇಕ್ಕಿದಾ ಮಧುವದುಚಿತ್ತಶುದ್ಧರು ಚಿದಾನಂದ ಭಕ್ತರು ಕಂಡುಕತ್ತಲೆಯ ಬಾವಿಯಲಿ ಬೀಳಲಿಲ್ಲ 3
--------------
ಚಿದಾನಂದ ಅವಧೂತರು
ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲಮಂಗಳಾರತಿ ಎತ್ತಿರೆಲ್ಲಸಂಗಾತೀತ ಚಿದಾನಂದಾವಧೂತಾಂಗ ಶ್ರೀಬಗಳಾಮುಖಿ ದೇವಿಗೆ ಪ ಕರದೊಳು ಚೂಡೆ ಕಂಕಣವಿಟ್ಟುಕೊರಳೊಳು ಸರಿಗೆಯ ಧರಿಸಿಶಿರದಿ ರತ್ನದ ಕಿರೀಟವಿಟ್ಟು ಸರ್ವಾಭರಣವಧರಿಸಿ ದುರುಳರ ದುಷ್ಟರ ಛೇಧಿಸಿ ಭ-ಕ್ತರ ಪಾಲಿಪ ಬಗಳಾಮುಖಿಗೆ 1 ನಿತ್ಯ ನಿರ್ಗುಣ ನಿರಾಮಯಗೆ ನಿಂದಕವಿದಾರಣೆಗೆಭಕ್ತ ವತ್ಸಲೆ ಭುವನೇಶ್ವರಿ ಮಾತೆಗೆಭಕ್ತಾಧಾರೆಗೆ ಪ್ರತ್ಯಗಾತ್ಮೆಗೆ ಪರಬ್ರಹ್ಮ ರೂಪಿಣಿಭಕ್ತ ಪ್ರಾಣಿಗೆ ಬಗಳಾಮುಖಿಗೆ 2 ಅದ್ವಯ ಆಗಮಗೋಚರಗೆ ಅಚಲಾನಂದಳಿಗೆ ಶುದ್ಧಸಂವಿಜ್ಯೋತಿರ್ಮಯಳಿಗೆಸರ್ವಸಾಕ್ಷಿಗೆ ಸದ್ಗುರು ಚಿದಾನಂದಾವಧೂತಗೆ ಸಿದ್ಧಪರ್ವತವಾಸಿ ಬಗಳಾಮುಖಿಗೆ 3
--------------
ಚಿದಾನಂದ ಅವಧೂತರು
ಹಾಲು ಮಾರಲು ಪೋದೇವಮ್ಮ ಗೋಕುಲದೊಳ- ಗ್ಹಾಲು ಮಾರಲು ಪೋದೆವಮ್ಮ ಹಾಲು ಮಾರುವ ಧ್ವನಿ ಆಲಿಸಿ ಕೇಳುತ ಬಾಲಕೃಷ್ಣ ಬಹು ಲೀಲೆ ಮಾಡುತ ಬಂದಪ ಹಸಿರು ಜರದ ಸೀರೆಯನುಟ್ಟು ಕುಸುರಿಕಂಕಣ ಎಸೆವೊ ಹವಳದ ಹಿಂಬಳೆ ಕಟ್ಟು ಮೊಸರಿನ ಕುಂಭ ಕÀುಸುಮ ಮಲ್ಲಿಗೆಯ ಮುಡಿಯಲ್ಲಿಟ್ಟು ಶಶಿವದನೆಯರೆಲ್ಲ ಚೆಂದದಿ ಬರುತಿರೆ ಕುಸುಮನಾಭ ಮುಸುಗೆಳೆದು ಮೊಸರು ಸುರಿದ1 ಬಣ್ಣ ಬಣ್ಣದ ಸೀರೆಯನುಟ್ಟು ಮುತ್ತಿನ ಬಟ್ಟು ಹೊಳೆವೊ ಕಸ್ತೂರಿ ತಿಲಕವನಿಟ್ಟು ಹಾಲಿನಕುಂಭ ಸಣ್ಣಮಲ್ಲಿಗೆ ಮುಡಿಯಲಿಟ್ಟು ಚೆನ್ನಾರ ಚೆಲುವೇರು ಚೆಂದದಿ ಬರುತಿರೆ ಕಣ್ಣು ಸನ್ನೆಮಾಡಿ ಕರೆದು ಮುದ್ದಿಡುವ 2 ಮುಂದೆ ಮುಂದಾಗಿ ಹೋಗುತಿರಲು ಹಿಂದ್ಹಾಲಿನ್ಹರವಿ- ಗೊಂದೊಂದ್ಹರಳು ಮೀಟುತಿರಲು ಧಾರೆಗೆ ಬಾಯಾ- ನಂದದಿಂದೊಡ್ಡಿ ಕುಡಿಯುತಿರಲು ಸÀಂದಣಿಯೊಳು ನಾವು ಒಂದರಿಯದಲೆ ಬಂದಿಳುಹಲು ಬರೀ ಗಡಿಗೆ ಕಾಣಮ್ಮ 3 ಕಡಗೋಲಿಂದೊಡೆದÀು ಗಡಿಗೆಯನು ಬಡವರ ಬೆಣ್ಣೆ ಒಡಲಿಗೆ ಕದ್ದು ತಿಂಬುವುದೇನು ಕಂಡರೆನಗಂಡ ಬಡಿದÀರಿನ್ನೇನು ಮಾಡುವೆ ನೀನು ಗಡಿಬಿಡಿ ಮಾಡುತ ಕತ್ತಲ ಮನೆಯೊಳು ತÀುಡುಗನಂತೆ ತಿರುಗಾಡುವ ತಾನು 4 ಸಿಟ್ಟು ಮಾಡುವುದ್ಯಾತಕಮ್ಮ ಶ್ರೀ ರಮಣನ ಬಿಟ್ಟು ಬಾಹುವುದೆ ಲೇಸಮ್ಮ ಭೀಮೇಶಕೃಷ್ಣನ ಕಟ್ಟಿ ಹಾಕುವುದೆ ಲೇಸಮ್ಮ ಪಟ್ಟುಮಾಡಿ ಪರಹೆಂಗಳೇರೊಳು ಕ- ಣ್ಣಿಟ್ಟ ಮ್ಯಾಲೆ ಒಂದಿಷ್ಟಾದರು ಬಿಡ5
--------------
ಹರಪನಹಳ್ಳಿಭೀಮವ್ವ