ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದತತಿಗಳ ಕದ್ದೊಯ್ದವನ ಕೊಂದು ಪ್ರಳ ಯೋದಧಿಯೊಳಗೆ ಚರಿಸಿ | ಚರಿಸಿ ವೈವಸ್ವತನ ಕಾಯ್ದ ಮಹಾಮಹಿಮ ದಯವಾಗೊ 1 221ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ ಬೃಂದಾರಕರಿಗೆ ಅಮೃತವ | ಅಮೃತವನುಣಿಸಿದ ಇಂದಿರಾರಾಧ್ಯ ದಯವಾಗೊ 2 222 ಸೋಮಪನ ನುಡಿಕೇಳಿ ಹೇಮಾಂಬಕನ ಕೊಂದಿ ಭೂಮಿಯಾ ನೆಗಹಿದ ದಾಡಿಂದ | ದಾಡಿಂದ ನೆಗಹಿದ ಸ್ವಾಮಿ ಭೂವರಹ ದಯವಾಗೊ 3 223 ಕಂದ ಕರೆಯಲು ಕಂಬದಿಂದುದಿಸಿ ರಕ್ಷಿಸಿದಿ ವಂದಿಸಿದ ಸುರರ ಸಲಹೀದಿ | ಸಲಹೀದಿ ನರಸಿಂಹ ತಂದೆ ನೀನೆಮಗೆ ದಯವಾಗೊ 4 224ವೈರೋಚನಿಯ ಭೂಮಿ ಮೂರುಪಾದವ ಬೇಡಿ ಭೂ ವ್ಯೋಮವಳೆದೆ ಭಾ ಗೀರಥಿಯ ಜನಕÉ ದಯವಾಗೊ 5 225 ಕುವಲಯಾಧೀಶ್ವರರ ಬವರ ಮುಖದಲಿ ಕೊಂದೆ ಅವನಿಭಾರವ ನೀನುಳುಹಿದ | ಇಳುಹಿದಾ ಸ್ವಾಮಿ ಭಾ ರ್ಗವರಾಮ ಎಮಗೆ ದಯವಾಗೊ 6 226 ಶತಧೃತಿಯ ನುಡಿಗೆ ದಶರಥನ ಗರ್ಭದಿ ಬಂದು ದಿತಿಜರನು ಸವರಿ ಸುಜನರ | ಸುಜನರ ಪೊರೆದ ರಘು ಪತಿ ಎನಗೆ ದಯವಾಗೊ 7 227 ವಸುದೇವ ದೇವಕೀ ಬಸುರೀಲಿ ಜನಿಸಿದ ವಸುಧೆ ಭಾರವನು ಇಳುಹಿದಿ | ಇಳುಹಿ ಪಾಂಡವರ ಕ ವಿಸಿದ ಶ್ರೀಕೃಷ್ಣ ದಯವಾಗೊ 8 228 ಜಿನನೆಂಬ ದನುಜ ಸಜ್ಜನ ಕರ್ಮವ ಮಾಡೆ ಜನಿಸಿ ಅವರಲ್ಲಿ ದುರ್ಬುದ್ಧಿ | ದುರ್ಬುದ್ಧಿ ಕವಿಸಿದ ವಿನುತ ಬುದ್ಧ ದಯವಾಗೊ 9 229 ಕಲಿ ವ್ಯಾಪಾರ ವೆಗ್ಗಳವಾಗೆ ತಿಳಿದು ಶಂ ಫಲಿ ಎಂಬ ಪುರದಿ ದ್ವಿಜನಲ್ಲಿ | ದ್ವಿಜನÀಲ್ಲಿ ಜನಿಸುವ ಕಲಿಮಲವ ಹರಿಸುವ ಕಲ್ಕಿ ದಯವಾಗೊ 10 230 ಧಾರುಣಿಯಲ್ಲಿ ಹತ್ತವತಾರದಲಿ ಸುಜ ನರ ರಕ್ಷಿಸಿದೆ ಜಗನ್ನಾಥ | ಜಗನ್ನಾಥವಿಠಲ ಮ ವೈರಿ 11
--------------
ಜಗನ್ನಾಥದಾಸರು
ರಕ್ಷಿಸು ಗುರುನಾಥಾ ಕೇಶವ ನೀನೇ ರಕ್ಷಿಸು ಸಿರಿನಾಥಾ ಪ ಅಕ್ಷಯ ದ್ರೌಪದಿಗಿತ್ತ ಶ್ರೀಕಾಂತನೇ ಶಿಕ್ಷಕ ನೀನೇ ಕನಕ ವಂದಿತನೇ ಅ.ಪ. ತರಳ ಪ್ರಲ್ಹಾದನಿಗೊಲಿದು ಧಾರುಣಿಯಲ್ಲಿ ಮೆರೆದ ಕಶ್ಯಪುವನ್ನು ಕೆಡಹಿದ ಹರಿಯೇ ದುರುಳ ಕಂಸನು ತನ್ನ ಪ್ರಜೆಗಳ ಹಿಂಸಿಸೆ ತರಿದು ಸಜ್ಜನರನ್ನು ಪೊರೆದ ಶ್ರೀಧರನೇ 1 ಭಜಿಸಲು ಕನಕನು ಉಡುಪಿ ಗ್ರಾಮದಲಾಗ ರಜನಿ ಮಧ್ಯದಿ ದಾಸಗೊಲಿದ ಶ್ರೀ ಹರಿಯೇ ಗಜವನ್ನು ರಕ್ಷಿಸಿ ಬಿರುದನು ತೋರಿದ ಭಜಕರ ಲೋಲನೆ ನೆರೆ ನಾರಾಯಣನೇ2 ಕಷ್ಟವ ನೀಗಿ ತಾ ಶಿಷ್ಟರ ಸಲಹಲು ಶ್ರೇಷ್ಠ ಮೂರುತಿ ರಂಗ ಬಹರೂಪವೆತ್ತೀ ಶಿಷ್ಟರ ರಕ್ಷಿಸಿ ಭ್ರಷ್ಟರ ಕೆಡಹಿದ ಸೃಷ್ಟಿಗೀಶನೆ ರಂಗ ಚನ್ನಕೇಶವನೇ 3
--------------
ಕರ್ಕಿ ಕೇಶವದಾಸ