ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಧಾನವೆ ಕೇಳಿ ಸಜ್ಜನವೇ ಇಂದು ಜಿನ ಶಕ್ತಿಯಾನಂದದಾರಾಧನ ಪ ಒಂದು ಮನದಲಿ ವದಗಿನ್ನು ಒಂದು ಮನದಲಿ ವದಗಿನ್ನು ನೀವೆಲ್ಲಾ ವಂದದಾರುತಿಯಾ ಬೆಳಗುವಾ 1 ಒಂದು ಮಾರ್ಗವಿಡಿದು ಬಂದು ಗುರುಮುಖದಿಂದ ಒಂದನೆ ಭಕ್ತಿ ತಿಳಿದಿನ್ನು ಒಂದನೆ ಭಕ್ತಿ ತಿಳಿದು ಪರೀಕ್ಷಿತಿಯಂತೆ ವಂದನಾರುತಿಯಾ ಬೆಳಗುವಾ 2 ಎರಡಕ ಮೀರದಾ ಎರಡಕ್ಷರದಿಂದ ಎರಡನೆ ಭಕ್ತಿ ತಿಳಿದಿನ್ನು ಎರಡನೇ ಭಕ್ತಿ ತಿಳಿದು ನಾರದರಂತೆ ಎರಡನಾರತಿಯಾ ಬೆಳಗೀರೇ 3 ಮೂರು ಬಲಿಯನೆದಾಟಿ ಮೂರು ರತ್ನವಗಂಡು ಮೂರನೇ ಭಕ್ತಿ ತಿಳಿದಿನ್ನು ಮೂರನೇ ಭಕ್ತಿ ತಿಳಿದು ಪ್ರಲ್ಲಾದನಂತೆ ಮೂರನಾರತಿಯಾ ಬೆಳಗೀರೇ 4 ನಾಕುಸ್ಥಾನವ ಮುಟ್ಟಿ ನಾಕರಂತವ ನೋಡಿ ನಾಕನೇ ಭಕ್ತಿ ತಿಳಿದಿನ್ನು ನಾಕನೇ ಭಕ್ತಿ ತಿಳಿದು ಜನಕನಂತೆ ನಾಕನಾರತಿಯಾ ಬೆಳಗೀರೇ 5 ಐದುಕ್ಲೇಶಗಳ್ಹಿಂಗಿ ಐದರೊಂದನೆ ಮಾಡಿ ಐದನೇ ಭಕ್ತಿ ತಿಳಿದಿನ್ನು ಐದನೇ ಭಕ್ತಿ ತಿಳಿದು ಗರುಡನಂತೆ ಐದನಾರತೀಯ ಬೆಳಗೀರೆ 6 ಆರನೇ ಭಕ್ತಿ ಆರು ಸಂಗವ ಮೀರಿ ಆರು ಪರಿಯಾಗದೇ ಆರನೇ ಭಕ್ತಿ ತಿಳಿದಿನ್ನು ಆರನೇ ಭಕ್ತಿ ತಿಳಿದು ಪುಂಡಲೀಕನಂತೆ ಆರನಾರತಿಯಾ ಬೆಳಗೀರೆ 7 ಏಳು ವ್ಯಸನವ ಬಿಟ್ಟು ಏಳು ಧಾತುವ ಕಂಡು ಏಳನೇ ಭಕ್ತಿ ತಿಳಿದಿನ್ನು ಏಳನೇ ಭಕ್ತಿ ತಿಳಿದು ಹನುಮಂತನಂತೆ ಏಳನಾರತಿಯಾ ಬೆಳಗೀರೆ 8 ಎಂಟು ಮದಗಳ ಜರಿದು ಎಂಟು ಸಿದ್ಧಿಯ ತೊರೆದು ಎಂಟನೆ ಭಕ್ತಿ ತಿಳಿದಿನ್ನು ಎಂಟನೇ ಭಕ್ತಿ ತಿಳಿದು ಅರ್ಜುನ ನಂತೆ ಎಂಟನೇ ಭಕ್ತಿ ಯಾರತಿಯಾ ಬೆಳಗೀರೆ 9 ಒಂಭತ್ತರನೇ ಬಲಿದು ಒಂಭತ್ತರ ನೆಗೆಲಿದು ಒಂಭತ್ತರನೇ ಭಕ್ತಿ ತಿಳಿದಿನ್ನು ಒಂಭತ್ತರನೇ ಭಕ್ತಿ ತಿಳಿದು ಬಲಿಯಂದದಿ ಒಂಭತ್ತನಾರತಿಯಾ ಬೆಳಗೀರೆ 10 ಗುರು ಮಹಿಪತಿ ಸುತಬ ಹೊರವ ದೇವಿಗೆ ಧರಿಯೊಳೀಪರಿಯಲಿ ನೀವು ಧರಿಯೊಳೀಪರಿ ನೀವು ಮಾಡಲಿಕೀಗ ಪರಮ ಆನಂದಾದೋರುವದು 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುಕ್ತಿ ದೊರಕಿತು ಗುರುಕೃಪೆಯಿಂದಲಿ ಪ ಒಮ್ಮನದಿಂದಲಿ ವಿವರಿಸಿ ನೋಡಲುಕರ್ಮ ಬ್ರಹ್ಮಾಗಿ ತೋರಿತಕ್ಕ |ಅಮ್ಮಾ ಅಮ್ಮಾ ಈ ಮಾತು ಏನಂತ ಹೇಳಲಿನಿರ್ಮಳ ನಿಜ ವಸ್ತು ಕಾಣ ಬಂತಕ್ಕ 1 ಮಾತು ಮಾತಿನಲಿ ಸಪ್ತಧಾತುವಿನಲಿಮತ್ತೊಂದು ತೋರಿದ ಭುವನದಲಿ |ಎತ್ತ ನೋಡಿದರತ್ತ ವಸ್ತುವೇ ಪರಿಪೂರ್ಣವಿಚಾರದಿಂದಲಿ ಅನುಭವದಿಂದಲಿ2 ಇಂದು ಜ್ಞಾನಬೋಧಗೆ ಆನಂದವಾಯಿತುಸಂದೇಹ ಹೋಯಿತು ಮನಸಿನಲಿ |ಎಂದಿಗೂ ಅಳಿಯದ ಸೌಭಾಗ್ಯ ದೊರಕಿತುತಂದೆ ಗೋವಿಂದನ ವಾಕ್ಯದಲಿ 3
--------------
ಜ್ಞಾನಬೋದಕರು
ವಾಸುದೇವನನಾ ಶ್ರೈಸದಿಹ ಉಪಾಸನ್ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ಧ್ರುವ ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲೀಹ್ಯ ವಸ್ತುಗಾಣದ ಜ್ಞಾನವ್ಯಾತಕೆ ಉದರ ಕುದಿಯು ಶಾಂತ ಹೊಂದದ ಸಾಧನ್ಯಾತಕೆ ಬುಧರ ಸೇವೆಗೊದಗದೀಹ ಸ್ವಧನವ್ಯಾತಕೆ 1 ಭಾವ ನೆಲಿಯುಗೊಳ್ಳ ದೀಹ್ಯ ಭಕುತಿದ್ಯಾತಕೆ ಕಾವನಯ್ಯನ ಕಾಣದೀಹ್ಯ ಯುಕತದ್ಯಾತಕೆ ದೇವದೇವನ ಸೇವೆಗಲ್ಲದ ಶಕುತ್ಯದ್ಯಾತಕೆ ಹ್ಯಾವ ಹೆಮ್ಮೆ ಅಳಿಯದೀಹ್ಯ ವಿರುಕಿತ್ಯಾತಕೆ 2 ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದ ಲಾಚರಿಸದಿಹ್ಯ ಕವಿತ್ಯವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತ ಆಶೆಯು ಅಳಿಯದಿಹ ಸಿದ್ಧತ್ವವ್ಯಾತಕೆ 3 ನೀತಿಮಾರ್ಗವರಿಯದೀ ಹ ರೀತ್ಯದ್ಯಾತಕೆ ಮಾತುಮಿತಿಗಳಿಲ್ಲದವನು ಧಾತುವ್ಯಾತಕೆ ಅಮೃತ ಊಟವ್ಯಾತಕೆ ಜ್ಯೋತಿ ತನ್ನೊಳರಿಯದಲೆ ಉತ್ತಮದ್ಯಾತಕೆ 4 ನಿತ್ಯ ಶ್ರವಣವ್ಯಾತಕೆ ನೆನವು ನೆಲೆಯಾಗೊಳ್ಳದಿಹ ಮನನವ್ಯಾತಕೆ ತನುವಿನಲ್ಲಿ ಘನವು ಕಾಣದನುಭವ್ಯಾತಕೆ ದೀನಮಹಿಪತಿಸ್ವಾಮಿಗಾಣದ ಜನಮವ್ಯಾತಕೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೇದವನಿದನವಧರಿಸು ಮಂತ್ರಭೇದವಾದರು ಮತ ಬೇರಲ್ಲವೆನಿಸು ಪಆದಿಯೊಳ್ ಋಗ್ವೇದದಲ್ಲಿ ಅಗ್ನಿಯಾದನು ದೇವತೆಯಾ ಯಜ್ಞದಲ್ಲಿಈದೇವ ಋತ್ವಿಕ್ಕಿನಲ್ಲಿ ಹೊಂದಲಾದರಿಸುತಲಾಗ ಹೊಗಳ್ವರೆಂಬಲ್ಲಿ 1ಹೋತೃತ್ವದಲ್ಲಿಯು ನಿಂದು ಸ್ವರ್ಣಧಾತುವು ತಾನಾದ ದಕ್ಷಿಣೆಗೆಂದುಈ ತೆರದಲಿ ದೇವ ಬಂದು ವಿಪ್ರವ್ರಾತಸ್ತೋತ್ರಕೆ ುೀತ ನೋಡಲಾದನೆಂದು 2ಸುರರಿಗೀತನು ಮುಖ್ಯ ಸಖನು ದ್ವಿಜವರರ್ಕೊಟ್ಟಾಹುತಿಯವರ್ಗಿತ್ತು ವ್ಟೃಯನುಬರಿಸುವನೆಂದೀತನನ್ನು ನೀನೆಇರಿಸಿದೆ ತಿರುಪತಿಯಾಳ್ವ ವೆಂಕಟನು 3ಓಂ ಮುಚುಕುಂದಪ್ರಸಾದಕಾಯ ನಮಃ
--------------
ತಿಮ್ಮಪ್ಪದಾಸರು