ಯಾತರ ಸುಖವೆಂದು ಸುರುವಿ ಈ
ಭೂತದೊಳಗಿನ್ನು ಬಿನುಗುಮಾನವರಿಂಗೆ ಪ
ನೆತ್ತಿಯ ಮೇಲೊಂದು ಕೆರೆಯುಂಟು ಅದು ತುಂಬಿ
ಸುತ್ತಲು ಹರಿ ನೀರು ಹರಿದಾಡಿತು
ಬತ್ತಿತು ಮೂಗಿನೊಳುಸುರನು ಕಿವಿಯನು
ಕುತ್ತಿತು ಪರರೆಂದ ಮಾತು ಕೇಳಿಸದಂತೆ 1
ಘೃತ ಮಧು
ಕೈಟಭಾರಿಯ ಮನೆಯೊಳಗುಂಟು
ತೋಟದೊಳಿಹ ಬಾಳೆದಿಂಡು ಕುಂಡಿಗೆತಿಂದು
ಪಾಟಿಸಿ ಸರ್ವಾಂಗವನು ಧಾತುಗೆಡಿಸಿಹುದು 2
ಶಯನ ವೆಂದರೆ ಪರರ ಸುಲಿಗೆಯಿಂದ ಭೂ
ಶಯನವೇಶಯನ ನಿಶ್ಚಯವಾಯಿತು
ನಯನ ಮೂರುಳ್ಳ ದೇವನ ಮಿತ್ರ ಶ್ರೀ ಲಕ್ಷ್ಮೀ
ರಮಣನೊಬ್ಬನೆ ಬಲ್ಲ ನಾನೊಬ್ಬನು ಬಲ್ಲೆನು3