ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಯಲಿ ಕೌರವರ ಪಾಂಡವಮೇದಿನೀಶರ ಜನನ, ವಿದ್ಯವನೋದಿದುದು ಲಾಕ್ಷಾನಿವಾಸದಲಗ್ನಿ ಸಂಬಂಧವೇದವಿದರೂಪದಲ್ಲಿ ಧರ್ಮಸುತಾದಿಗಳು ತಾÀವಿದ್ದು ದ್ರೌಪದಿಗಾದರೈವರು ಪತಿಗಳೆಂಬುದು ಭಾರತಾಖ್ಯಾನ 1ದ್ಯೂತದಲಿ ರಾಜ್ಯವನು ಸ್ತ್ರೀಯನುಸೋತು ವನದಲಿ ನಿಂದು ಗುಪ್ತದಿದೂತರಾದರು ಮತ್ಸ್ಯನೃಪತಿಯ ಮೆರೆವ ನಿಳಯದಲಿಮಾತ ಸಲಿಸೆ ಮಹಾತ್ಮ ಕೃಷ್ಣಪ್ರೀತಿಯಲಿ ಪಾಂಡವರ ಕಾರ್ಯಕ್ಕೀತ ಸಂಧಿಗೆ ನಡೆದನೆಂಬುದು ಭಾರತಾಖ್ಯಾನ 2ಮುರಿದು ಸಂಧಿಯನುಭಯರಾಯರನೆರಹಿ ಪಾರ್ಥಾಸ್ತ್ರದಲಿ ಸರ್ವರತರಿದು ಯಮಸುತನಿರಿಸಿ ರಾಜ್ಯದ ಪರಮ ಪೀಠದಲಿಎರೆದನಭಿಷೇಕವನು ಭಕ್ತರಹೊರೆದ ತಿರುಪತಿ ವೆಂಕಟೇಶನುಮೆರೆದ ಮಹಿಮೆಯನೆಂಬುದಿದು ತಾ ಭಾರತಾಖ್ಯಾನ 3ಓಂ ಅನಂತಾಯ ನಮಃ
--------------
ತಿಮ್ಮಪ್ಪದಾಸರು
ಬಿಡಿ ಬಿಡಿ ಸಂದೇಹವನು ಪೊಡವಿ ಮನುಜರೆಲ್ಲಒಡೆಯನೊಬ್ಬನೆ ಜಗಕೆ ರಂಗವಿಠಲ ಪ ಹರಿಹರವಿರಿಂಚರೊಳು ಪರದೈವವಾರೆಂದುಪರಮ ಮುನಿಗಳು ವಿವಾದವನು ಮಾಡೆಸರಸಿಜಾತನ ಸುತನ ಭೃಗುವನಟ್ಟಲು ಪೋದಅರಿದು ಬಹೆನೆಂದು ಪದ್ಮಜನ ಸಭೆಗೆ1 ಮುನಿವರನು ಕಂಡು ಪದ್ಮಜಗೆ ವಂದಿಸದಿರಲುವನಜಭವ ಕೋಪವನು ಮಾಡಿ ಜರಿಯೆಮುನಿ ಪರಮ ತತ್ತ್ವ ಇವನಲ್ಲವೆಂದೆನೆ ಕನಲಿಮನಸಿಜವೈರಿಯ ಲೋಕಕೆ ಪೋದನು 2 ಹರ ಕಂಡು ಭೃಗುಮುನಿ ಬರಲು ತನ್ನನುಜನೆಂದುಭರವಸೆಯಲೆದ್ದು ತಕ್ಕೈಸ ಪÉÇೀಗೆ ಜರಿದು ಹರನನು ಮುಟ್ಟದಿರೆ ಶಂಕರನು ಕನಲಿಕರೆದ ಶೂಲವ ಜಡಿದು ಕೊಲಲುಬಗೆದ 3 ಹರನ ಕೋಪವ ಕಂಡು ಗಿರಿಜೆ ಚರಣವ ಪಿಡಿದುಕರುಣಿ ಮುನಿಯನು ಕಾಯಬÉೀಕೆಂದೆನಲುಮರಣ ಭಯದಿಂದ ನಿರ್ಮುಕ್ತನಾಗಿ ಮುನಿವರನು ಸರಸಿಜನಯ್ಯನಿಪ್ಪ ವೈಕುಂಠಕೆ ಪೋದನು 4 ಅಲ್ಲಿ ಮಹಲಕ್ಷುಮಿಯ ತೊಡೆಯಲ್ಲಿ ಪವಡಿಸಿ ಇರಲುಫುಲ್ಲನಾಭನ ಚರಣದಿಂದಲೊದೆಯೆಮೆಲ್ಲನೆ ಪಾದವ ಪಿಡಿದು ಮುನಿವರಗೆ ಪೊಡಮಟ್ಟುಇಲ್ಲಿ ಬಿಜಯಂಗೈಸಬೇಕೆಂದನು 5 ಪರಮ ಮುನಿ ನಿಮ್ಮ ಪದ ಸೋಂಕಲು ಪಾವನನಾದೆಚರಣರಜ ಪರಮ ಪಾವನ ಸುಲಭವೆಸಿರಿಗೆ ನೆಲೆವನೆಯಾದೆ ಪದಸಂಗದಿಂದಲೆನೆಪರಮ ಹರುಷದಲಿ ಮುನಿತನುವ ಮರೆದ 6 ಪರತತ್ವವನು ಕಂಡು ಬಂದು ಮುನಿವರನಂದುಒರೆಯೆ ಋಷಿವರರಿಗವರವರ ಪರಿಯಅರಿದರಾ ಮುನಿವರರು ಹರಿಯೆ ಪರದೈವವೆಂದುನೆರೆ ತಿಳಿದು ಭಜಿಸಿ ನರಹರಿಯ ಹರಿಯ 7 ಸುರರು ಕಡೆಯೆ ಕಡಲೊಳಗಿರ್ದಮಡದಿ ಮಹಾಲಕ್ಷುಮಿ ಅವತರಿಸಿ ಬರಲುಮೃಡ ಕಮಲಜ ಸುರಮುಖ್ಯರನು ಜರಿದು ಸಿಂಧುವಿನದಡದಲ್ಲಿ ಹರಿಯ ವರಿಸಿದಳು ವರನೆಂದು 8 ಕರಿಪತಿಯ ಸರಸಿಯೊಳು ಮೊಸಳೆ ಪಿಡಿಯಲು ಭರದಿಪರಮ ಪುರುಷ ಜಗತ್ಪತಿಯೆನಲುಗರುಡವಾಹನನಾಗಿ ಹರಿ ಬಂದವನ ಕಾಯ್ದಪರದೈವವಾರು ಜಗದೊಳಗೆ ಪೇಳಾ9 ರಾಜಸೂಯವ ಧರ್ಮಸುತ ಮಾಡೆ ಅವನಗ್ರ-ಪೂಜೆಗರುಹರು ಸುರರೊಳಾರೆಂದೆನಲುಭಾಜನನು ಸದ್ಗುಣನು ಕೃಷ್ಣನೊಬ್ಬನೆಯೆಂದುರಾಜಸಭೆಯಲಿ ದೇವವ್ರತ ನುಡಿದನು 10 ಗಂಗೆ ಈತನ ಪಾದಸಂಗದಿ ಪಾವನವೆನಲುಗಂಗಾಧರನು ಪರಮ ದಾಸನೆನಲುಮಂಗಳಾತ್ಮಕ ವಿಶ್ವಜನ್ಮಾದಿ ಕಾರಣನುರಂಗವಿಠಲರೇಯನ ನೆರೆನಂಬಿರೋ 11
--------------
ಶ್ರೀಪಾದರಾಜರು