ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ಗುರುವಿಷ್ಣು ತೀರ್ಥರ ಪ ಕರುಣದಿ ಜನಿಸಿ ತರಿದ ಭೀಷ್ಠೆಯ ಗರಿವರಂಘ್ರಿಯ ಅ.ಪ ತರುಣಿ ಗರ್ಭದಿ ಜನಿಸಿ ವಟು ವ್ರತವ ಧರಿಸಿ ವೇದವೇದಾಂತ ಶಾಸ್ತ್ರವ ಹರಣ ಮಂತ್ರವ ಜಪಿಸಿದವರನು 1 ಗುರುತುರಗವನುಸರಿಸಿ ಬರುತಿರಲು ಬಿಸಿಲೊಳು ಗುರುಪ್ರೀತಿಯನು ಬಯಸಿ ಗುರುವಿತ್ತ ಪಾದುಕವೆರಡು ಶಿರದಲಿ ಧರಿಸಿ ಮಹಿಮೆಯನು ತಿಳಿಸಿ ಧರಿಸಿ ದ್ವಿತಿಯಾ ಶ್ರಮದಿ ನೋಡಲು ಪರಮ ಸತ್ಕುಲ ಜಾದಿ ಗುಣಯುತ ತನದೋಳ್ಮೆರೆವರಂಘ್ರಿಯ2 ತಿರೆ ಮೃಗಲಾಂಚನ ಮುಖಸಹಿತದಿ ಹರಿದಾಸ ಪಾಡಿದ ಮಾಡಿರಿ ಧರ್ಮವೆಂಬುವ ಸುಖವನು ತ್ಯಜಿಸಿಪೊರಟರ 3 ಚರಿಸುತ ಗಮನ ಸ್ವಪ್ನದಿ ಸೂಚಿತ ಪ್ರವಚನ ವಿಜಯ ಮುನಿ ಮುನಿಯವಲ್ಲಿ ಯೊಳಿರುವ ಗುರುಗಳ 4 ಕುಮಾರಕರೆಂದೆನಿಸಿ ಸುಕ್ಷೇತ್ರ ಧ್ಯಾನಿಸಿ ಸೇರಿದವರ ಘ ಚಾರು 'ಕಾರ್ಪರ ನಾರಶಿಂಹ' ವಲಿಮೆ ಪಡೆದ ಚಾರು ಚರಣವ5
--------------
ಕಾರ್ಪರ ನರಹರಿದಾಸರು
ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ ಪ ಯಾರಯ್ಯ ಬಾಗಿಲ ಹೊರಗೆ ನಿಂತಿರುವನು ಜಾರ ಪುರುಷನಂತೆ ತೋರುವೆ ನೀನು ಅ.ಪ ಜಾರನಾದರೆ ನಿಂಗೆ ಜಾರನಲ್ಲವೆ ಮೀನಾ ಕಾರ ಧರಿಸಿರುವ ಹರಿಯಲೆ ಭಾಮೆ ಮೀನನಾದರೇ ಬಲು ಮೌನದಲಿರದಂತೆ ಮಾನವರಂತೆ ಮಾತು ಯಾವುದೋ ನಿನಗೆ 1 ಮಂದರಗಿರಿಯ ಬೆನ್ನಿಂದ ಧರಿಸಿರುವ ಅಂದ ಕೂರ್ಮನಲ್ಲವೇನೆ ಭಾಮೆ ಕೂರ್ಮ ನೀನಾದರೆ ಕೂಪದೊಳಿರುವುದೆ ಧರ್ಮವೆಂಬುವುದನು ಮರೆತೆಯಾ ನೀನು 2 ನೀಲವೇಣಿಯೆ ಕೇಳೆ ಕೋಲರೂಪದಿ ಬಂದು ಕ್ಷಿತಿ ತಂದೆನೆ ಭಾಮೆ ಪೋತರೂಪನೇ ನಿಜ ಧಾತ್ರಿಯ ಭೇದಿಸಿ ಗಾತ್ರ ರಕ್ಷಣೆ ಮಾಡು ಹೋಗೆಲೊ 3 ಸ್ತಂಭ ಭೇದಿಸಿ ರಿಪು ಡಿಂಭನ ಕಾಯಲು ಜಂಭದಿ ಖಳನನು ಕೊಂದೆನೇ ಭಾಮೆ ಸ್ಥಂಭ ಭೇದಿಸಿದ ನಾ ನಂಬುವುದಿಲ್ಲವೊ ಡಂಭದಿ ಬಾಗಿಲು ಭೇದಿಸಿ ಬಾರೊ 4 ವಾಮನನೆಂದು ವಟುರೂಪದಿ ಬಂದು ಸಾರ್ವ ಭೌಮನಲ್ಲಿ ಭೂಮಿ ಬೇಡಿದೆ, ಭಾಮೆ ವಟುರೂಪನಾದರೆ ಕುಟಿಲಾಕ್ಷಿಯರಲಿಂಥ ಚಾಟುವಚನಗಳು ಯಾಕೆಲೊ 5 ದುರುಳನೃಪರ ಪರಿಹರಿಸಿದ ಭೃಗುಮುನಿ ವರಕುಲಜಾತ ಶ್ರೀ ರಾಮನೇ ಭಾಮೆ ಮುನಿವರಸುತನಾಗಿ ಸ್ವನಿಯಮಗಳ ಬಿಟ್ಟು ವನಿತೆಯರಲ್ಲಿಂಥಾ ಸರಸವೆ ನಿನಗೆ 6 ದಶರಥ ನೃಪತಿಯ ಮನೆಯೊಳವತರಿಸಿ ದಶಶಿರರನು ಕೊಂದ ರಾಮನೆ ಭಾಮೆ ಪರ ಕಾಮಿನಿಯರೊಳಿಂಥಾ ಪ್ರೇಮ ಮಾಡುವುದುಂಟೆ ಯೋಚಿಸೊ ನೀನು 7 ನೀರಜಾಕ್ಷಿ ಕೇಳೆ ಜಾರಚೋರತೆಯಲ್ಲಿ ಸಿರಿ ಕೃಷ್ಣನೇ ಭಾಮೆ ಚೋರನಾದ ಮೇಲೆ ಸೇರಿಸುವುದು ಹೇಗೆ ಭಾರಿ ಆಭರಣಗಳಿರುವುವೊ 8 ಮುಗ್ಧೆ ಕೇಳೆ ಇದಬದ್ಧವಲ್ಲದೆ ಅತಿ ಶುದ್ಧನಾದ ಬುದ್ಧರೂಪನೆ ಬುದ್ಧರೂಪನೆ ನಿನ್ನ ನಡತೆಯ ಕೇಳಲು ಶುದ್ಧಿಯು ಲೋಕಪ್ರಸಿದ್ಧವು9 ಸರಸಿಜಮುಖಿ ವರತುರಗವನೇರಿದ ನೃಪರ ಗೆಲ್ವ ಕಲ್ಕಿಯೇ ಭಾಮೆ ದುರುಳ ಜನರು ಇಲ್ಲಿ ಸೇರುವುದಿಲ್ಲವೊ ತರಳೆಯರಲಿ ದುಷ್ಟ ಕಾರ್ಯವೇ ಪೋಗೊ10 ಪರಿ ಸರಸವನಾಡುವ ನಾಮಗಿರಿ ನರಹರಿ ರೂಪ ರಮಾ ರಮೇಶರು ವಿಹರಿಪ ಬಗೆಯನು ಸ್ಮರಿಸುವ ಸುಜನರ ಪರಮಪುರುಷ ಹರಿ ಪೊರೆವುದು ನಿಜ 11
--------------
ವಿದ್ಯಾರತ್ನಾಕರತೀರ್ಥರು