ಒಟ್ಟು 11 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ರುವ ತಾಳ ದಾಸ ನಿನಗೆ ನಾನು ಲೇಸಿನವನೆಂದು ಆಶೆಯಿಂದಲಿ ಗತಿ ಬೇಡಲಿಲ್ಲ ದಾಸತನ ಎನಗೆಲ್ಲಿಹುದು ಶ್ರೀನಿ- ವಾಸನೆ ಅನಂತ ಕಲ್ಪದಲ್ಲಿ ನಾಶನ ಮಾಡಿಕೊಂಬ ದಾಸ ನಾನು ದಾಸನೆನಿಸಿಕೊಂಡು ತಿರುಗುವ ಜನಕ್ಕೆ ಲೇಸಾಗಿ ದಂಡಿಸಿ ಮೆದಿಯ ಬೇಕು ಕೇಶವ ವಿಜಯವಿಠ್ಠಲನೆ ನಿನ್ನ ಮರೆದು ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ 1 ಮಟ್ಟತಾಳ ತಿರಕದಾಸ ನಾನು ಹರಕ ದಾಸ ನಾನು ಕರಕರಿಯನು ಮಾಡಿ ಪರರ ಪೀಡಿಸಿ, ಉ- ದರ ಪೊರೆವ ದಾಸನು ನಾನು, ಬರಿಯ ದಾಸ ನಾನು ಅರಿಮರ್ದನ ಹರಿ ವಿಜಯವಿಠ್ಠಲ ನಿನ್ನ ಪರಮ ಭಕ್ತನೆಂದು ತಿರಿದುಣ್ಣ ಮೆಚ್ಚಿದೆನು 2 ತ್ರಿವಿಡಿ ತಾಳ ಕೊಟ್ಟರೆ ಹರಸುವೆನು, ಕೊಡದಿದ್ದರೆ, ಬೆರ ಳಿಟ್ಟು ಬಗಳುವಂಥ ಭ್ರಷ್ಟ ದಾಸನು ನಾನು ಸೃಷ್ಟಿಯೊಳಗೆ ಬಹು ಧನವಂತರ ಮನೆಯ ಮೆಟ್ಟು ಕಂಡರೆ ಬಿಡದಿಪ್ಪ ದಾಸ ನಾನು ನಷ್ಟ ವಾಗಿದ್ದ ಉಚ್ಛಿಷ್ಟ ದಾಸನು ನಾನು ದೃಷ್ಟಿಯಿಂದಲಿ ನೋಡೊ, ವಿಜಯವಿಠ್ಠಲ ಕೇಳೊ ಎಷ್ಟೊ ಕಾಲದ ಪಾಪಿಷ್ಠ ದಾಸನು ನಾನು 3 ಅಟ್ಟತಾಳ ಕುರುಡ ದಾಸನು ನಾನು ಕುಂಟ ದಾಸನು ನಾನು ಹುರಡಿಗೆ ಮಾಡುವ ಹುರಳಿಲ್ಲದ ದಾಸ ಸರಿಯವರನು ಕಂಡು ಮರಗುವ ದಾಸನು ಎರಡು ಕಡೆ ಕೆಟ್ಟ ಭರಡಿ ದಾಸನು ನಾನು ಗರಕೆ ಕರದಾರೆ ಹಿಗ್ಗುವ ದಾಸನು ನಾನು 4 ಆದಿತಾಳ ಹೀನ ದಾಸನು ನಾನು, ನೀಚ ದಾಸನು ನಾನು ಹಾನಿವೃದ್ಧಿಗಳೆಲ್ಲ ತಿಳಿಯದ ದಾಸನು ನಾನಾ ದುಷ್ಕರ್ಮ ಮಾಳ್ಪ ದಾಸನೊ ನಾನು ಮಾನವಿಲ್ಲದೆ ಅಪಮಾನ ದಾಸ ನಾನು ದಾನ ಧರ್ಮವಿಲ್ಲದ ಹೀನ ದಾಸನು ನಾನು ಅನಂತ ಜನನಕ್ಕೆ ಹೊಲೆದಾಸನು ನಾನು ಶ್ರೀನಿವಾಸ ತಿರುಮಲೇಶ ವಿಜಯವಿಠ್ಠಲ ಬ್ಯಾನೆ ಇದ್ದಲ್ಲಿ ಬಿಡುವ ಬಕ್ಕದಾಸನು ನಾನು 5 ಜತೆ ಹೊಟ್ಟೆಕಿಚ್ಚಿನ ದಾಸ-ಹಲುಬಿ ಪೋಗುವ ದಾಸ ದಟ್ಟದಾರಿದ್ರ ದಾಸನು ವಿಜಯವಿಠ್ಠಲರೇಯ 6
--------------
ವಿಜಯದಾಸ
(ಈ) ಲೋಕನೀತಿಯನ್ನು ಕುರಿತ ಕೃತಿಗಳು ಏನಯ್ಯ ದೊರೆಯೆ ನಿನಗಾನಂದವೆ ದೊರೆಯೆ ಪ ಮಾನಿತ ಜನರವಮಾನವ ನೋಡದೆ ಹೀನ ಜನರ ನುಡಿ ನೀನಿಲಿದಾಲಿಪುದು ಅ.ಪ ಜಾತಿಧರ್ಮವಿಲ್ಲಾ ಶಾಸ್ತ್ರದ ರೀತಿ ನಡತೆಯಿಲ್ಲ ಮಾತಿದು ಪುಸಿಯಲ್ಲಾ ಮಾನದ ಭೀತಿಯು ಮೊದಲಿಲ್ಲಾ ನೀತಿಯನರಿಯದ ಕೋತಿಗಳಂದದ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು ದೋಷ ವಿವರ್ಜಿತರನ್ನು ಜರಿದು ಲಜ್ಜೆಯ ನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಗಿಎ ಕುಲ ಕಜ್ಜಳರವಮತಿಗುಜ್ಜುಗಿಸುತ್ತಿಹ 2 ಗಂಡಬಿಟ್ಟಿಹರು ಗರತಿಯ ಕಂಡು ನಗುತಿಹರು ಮಿಂಡರ ಬೆರೆದಿಹರು ಮೇಲತಿ ದಿಂಡೆಯರಾಗಿಹರು ಭಂಡತನದಿ ಪರಗಂಡಸರೊಳು ಸಮ- ದಂಡೆಯೆನಿಸಿ ಬಲು ಚಂಡಿಸುತಿರ್ಪರೋ 3 ಕೇಳು ಹಂದೆಯಾಳು ಕ್ಲೇಶವ ಪೇಳಲು ಮತಿತಾಳು ಕೀಳುಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಕಾಳಮೂಳಿಯರ ಮೇಳದಿ ಹಿಗ್ಗುವ ಬಾಳುಗೇಡಿ ಜನರೊಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀಪುಲಿಗಿರಿಯೊಳು ನೆಲೆಯಾದ ಸಿರಿವರ ನಿಜಪಾದ ಸೇವೆಯ ಕರುಣಿಸು ಬಹುಮೋದ ಶರಣಾಭರಣ ನಿಜಕರುಣವ ತೋರಿಸು ವರದವಿಠಲ ದೊರೆ ವರದದಯಾನಿಧೆ 5
--------------
ವೆಂಕಟವರದಾರ್ಯರು
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಪ ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು ಅ ಕುಹಕ ಯುಕುತಿಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣುಸೇವೆಯರಿಯದ ದಣಿಯು ಕಲ್ಲಿನಾ ಕಣಿಯು1 ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸುನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸುಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡುಮರ್ಮವಿಲ್ಲದ ಮಾತು ಒಡಕು ಮಡಕೆ ತೂತು 2 ಭೃತ್ಯ ಅವ ಕ್ರೂರ ಕೃತ್ಯ 3 ಬಂಟ ಒಡಕು ಹರವಿಯ ಕಂಠಗಂಡಗಂಜದ ನಾರಿ ಅವಳೆ ಹೆಮ್ಮಾರಿ 4 ದಾತ ಅವ ಹೀನ ಜಾತಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿಮುಟ್ಟಿ ಭಜಿಸದ ನರನು ಅವನೆ ವಾನರನು 5
--------------
ಕನಕದಾಸ
ಆವ ಕರ್ಮವಿಲ್ಲ ಆವ ಧರ್ಮವಿಲ್ಲವೋ |ಕೇವಲಾನಂದಭಾವ ಬೋಧದಲ್ಲಿ ಬೆರೆಯಲು ಪ ತನುವು ಬೇರೆ ಮನವು ಬೇರೆ | ಮನದ ಒಳಗೆ ನೆನಹು ಬೇರೆ | ತನುವು ಮನವು ನೆನವಿಗಿನ್ನು | ಸಾಕ್ಷಿಯಾಗಿಹ | ಚಿನುಮಯಾತ್ಮ ತಾನೆ ತನಗೆ | ಜನನ ಮರಣ ಎಂಬುದೆಲ್ಲ | ಮನದ ಆಟವೆಂದು ತಿಳಿದು | ಉನ್ಮನದಿ ಘನದಿ ನಲಿವಗೆ 1 ಸತ್ಯ ಶರಣರಡಿಯ ಪಿಡಿದು | ತತ್ತ್ವ ಶಾಸ್ತ್ರವನ್ನು ತಿಳಿದು |ನಿತ್ಯಾನಿತ್ಯವನು ವಿವರಿಸುತಲಿ | ಭಕ್ತಿಯಿಂದಲಿ ||ನಿತ್ಯ ಪೂರ್ಣ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು |ಚಿತ್ತದಲ್ಲಿ ತಿಳಿದುಕೊಂಡು | ಮಿಥ್ಯವೆಲ್ಲ ಕಳೆದಗೆ 2 ಹಿಂದಾದುದ ನೆನಿಸಲಿಲ್ಲ | ಮುಂದೆ ಒಂದು ಬಯಸಲಿಲ್ಲ |ಬಂದುದೆಲ್ಲ ಸುಖವು ಎಂದು ಶಾಂತದಿಂದಲಿ ||ತಂದೆ ಭವತಾರಕನ | ಹೊಂದಿ ಪೂರ್ಣ ವಸ್ತುವಾಗಿ |ಬಂಧನವನು ಕಡಿದು ಕೊಂಡು | ಆನಂದದಲಿರುವವಗೆ 3
--------------
ಭಾವತರಕರು
ಏನಯ್ಯ ಧೊರೆಯೆ-ನಿನಗಾನಂದವೆ ಧೊರೆಯೇ ಪ ನುಡಿನೀನೊಲಿದಾಲಿಪುದುಅ.ಪ. ಜಾತಿಧರ್ಮವಿಲ್ಲಾ-ಶಾಸ್ತ್ರದರೀತಿನಡತೆಯಿಲ್ಲ ಮಾತಿದುಪುಸಿಯಲ್ಲಾ-ಮಾನದ-ಭೀತಿಯುಮೊದಲಿಲ್ಲಾ ನೀತಿಯನರಿಯದ-ಕೋತಿಗಳಂದವ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು-ದೋಷವಿ ವರ್ಜಿತರನ್ನು ಜರಿದು ಲಜ್ಜೆಯನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಿಗೆ ಕುಲಕಜ್ಜಳರವ ಮತಿ ಗುಜ್ಜುಗಿಸುತ್ತಿಹ 2 ಗಂಡನ ಬಿಟ್ಟಿಹರು-ಗರತಿಯ-ಕಂಡು ನಗುತ್ತಿಹರು ಮಿಂಡರ ಬೆರೆದಿಹರು-ಮೇಲತಿ-ದಿಂಡೆಯರಾಗಿಹರು ಚಂಡಿಸುತಿರ್ಪರೋ 3 ಕೇಳುಹಂದೆಯಾಳು-ಕ್ಲೇಶವ ಪೇಳಲು ಮತಿತಾಳು ಕೀಳು ಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಜನರೂಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀ ಪುಲಿ-ಗಿರಿಯೊಳು ನೆಲೆಯಾದ ಸಿರಿವರ ನಿಜಪಾದ-ಸೇವೆಯ-ಕರುಣಿಸು ಬಹುಮೋದ ಶರಣಾಭರಣ ನಿಜ ಕರುಣವ ತೋರಿಸು ವರದ ವಿಠಲಧೊರೆ ವರದದಯಾನಿಧೆ 5
--------------
ಸರಗೂರು ವೆಂಕಟವರದಾರ್ಯರು
ಜ್ಞಾನವಂತರ ಸಂಗವಿರಲು ಸ್ನಾನವ್ಯಾತಕೆ ಪ ನಾನು ಎಂಬುದ ಬಿಟ್ಟ ಮೇಲೆ ನರಕವ್ಯಾತಕೆ ಅ.ಪ. ಮೃತ್ತಿಕೆ ಶೌಚ ಮಾಡದವನ ಆಚಾರವ್ಯಾತಕೆಸತ್ಯವಾದಿ ಆಗದವನ ನಂಬಿಗೆ ಯಾತಕೆ ||ಚಿತ್ತಶುದ್ಧಿ ಇಲ್ಲದವನ ವೈರಾಗ್ಯವ್ಯಾತಕೆಉತ್ತಮ ಹಿರಿಯರಿಲ್ಲದಂಥ ಸಭೆಯು ಯಾತಕೆ 1 ಪತಿಯ ಆಜ್ಞೆ ಮೀರಿದವಳ ವ್ರತಗಳ್ಯಾತಕೆಸತಿಗೆ ಅಳುಕಿ ನಡಿಯುವವನ ಸಾಹಸವ್ಯಾತಕೆ ||ಯತಿಯ ನಿಂದೆ ಮಾಡುವವನ ಮತಿಯು ಯಾತಕೆಅತಿ ವಿರೋಧ ಬಡಿಸುವಂಥ ಅಣ್ಣನ್ಯಾತಕೆ 2 ಹರಿಕಥೆಯ ಕೇಳದವನ ಕಿವಿಯು ಯಾತಕೆಮುರಹರನ ಮೂರ್ತಿಯ ನೋಡದಂಥ ಕಂಗಳ್ಯಾತಕೆ ||ಮರುತ ಮತವ ಪೊಂದದವನ ಬಾಳ್ವೆ ಯಾತಕೆಎರಡಾರು ನಾಮವಿಡದ ಶರೀರವೇತಕೆ3 ತಂದೆ ತಾಯಿ ಮಾತು ಕೇಳದ ಮಕ್ಕಳ್ಯಾತಕೆಬಂಧು ಬಳಗ ಉಳ್ಳದವನ ಭಾಗ್ಯವ್ಯಾತಕೆ ||ಬಂದ ಅತಿಥಿಗನ್ನವನಿಕ್ಕದ ಸದನವೇತಕೆ ಗೋ-ವಿಂದನಂಘ್ರಿ ಸ್ಮರಿಸದಂಥ ನಾಲಿಗ್ಯಾತಕೆ 4 ಮಕ್ಕಳನ್ನ ಮಾರಿಕೊಂಬ ತಂದೆಯಾತಕೆರೊಕ್ಕಕಾಗಿ ಬಡಿದಾಡುವ ತಮ್ಮನ್ಯಾತಕೆ ||ಕಕ್ಕುಲಾತಿ ಬಡುವ ಸಂನ್ಯಾಸವ್ಯಾತಕೆಠಕ್ಕು ಭಕುತಿ ಮಾಡುವಂಥ ದಾಸನ್ಯಾತಕೆ 5 ಆಗಿ ಬರದವರ ಅನ್ನ ಉಣ್ಣಲ್ಯಾತಕೆರೋಗವಾದ ನರಗೆ ಹೆಣ್ಣಿನ ಭೋಗವ್ಯಾತಕೆ ||ಯೋಗಿಯಾದ ಮೇಲೆ ದ್ರವ್ಯದ ಆಶೆಯಾತಕೆಭಾಗೀರಥಿಯ ಮಿಂದ ಮೇಲೆ ಪಾಪವ್ಯಾತಕೆ 6 ವೇದವನ್ನು ಓದದಂಥ ವಿಪ್ರನ್ಯಾತಕೆಕಾದೊ ರಣಕೆ ಅಂಜುವಂಥ ಕ್ಷತ್ರಿಯನ್ಯಾತಕೆ ||ವಾದವನ್ನು ಮಾಡುವಂಥ ಬಂಟನ್ಯಾತಕೆಸಾಧುಗಳಿಗೆ ಎರಗದವನ ಶಿರವಿದ್ಯಾತಕೆ 7 ಯಾತ್ರೆ ತೀರ್ಥ ಮಾಡದಂಥ ಪಾದವ್ಯಾತಕೆಪಾತ್ರರ ಸಂಗವಾಗದವನ ಜನ್ಮವ್ಯಾತಕೆ ||ಸ್ತೋತ್ರಕೆ ಮರುಳಾಗುವವಗೆ ಸಾಧನ್ಯಾತಕೆಪಾರ್ಥ ಸಖನ ತಿಳಿಯದವನ ಜ್ಞಾನವ್ಯಾತಕೆ 8 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆಅರಿತು ವಿದ್ಯ ಪೇಳದ ಉಪಾಧ್ಯನ್ಯಾತಕೆ ||ಹರುಷವನ್ನು ತಾಳದಂಥ ಜ್ಞಾನಿ ಯಾತಕೆಕರಣ ಶುದ್ಧಿ ಇಲ್ಲದವನ ಸ್ನೇಹವ್ಯಾತಕೆ 9 ಗಾಣ ಕಟ್ಟಿದೆತ್ತಿಗೆ ಗೆಜ್ಜೆಯಾತಕೆ ||ರಾಣಿ ಇಲ್ಲದವನು ಮಾಡುವ ಬದುಕು ಯಾತಕೆತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ 10 ಧರ್ಮವಿಲ್ಲದೆ ರಾಜ್ಯ ಆಳುವ ಪ್ರಭುವಿದ್ದ್ಯಾತಕೆಮರ್ಮವರಿತು ನಡೆಯದಂಥ ಹೆಣ್ಣು ಯಾತಕೆ ||ನಿರ್ಮಲಾಂಗನಾದ ಮೋಹನ ವಿಠಲನ ಗುಣಕರ್ಮ ಕ್ರಿಯಾ ತಿಳಿದ ಮ್ಯಾಲೆ ನಿರ್ಣಯವ್ಯಾತಕೆ 11
--------------
ಮೋಹನದಾಸರು
ದಾನವಿಲ್ಲ ಧರ್ಮವಿಲ್ಲ ಜ್ಞಾನವಿಲ್ಲಏನು ಹೇಳಿದರೇನು ವಿಷಯಮೆಚ್ಚಿದವಗೆ ಪ. ಕಂಡಕಂಡವರ ಅನ್ನಕೆ ಸಿಲುಕಿ ಅನುಗಾಲಭಂಡತನದಲಿ ಕಾಲವ ಕಳೆಯುತತಂಡ ತಂಡದಿ ಬಾಹ ಔತಣಕೆ ಮೈಯ್ಯುಬ್ಬಿಉಂಡು ಎನಗಿಂದಧಿಕ ಯೋಗ್ಯನಿಲ್ಲವೆಂದು 1 ಪರ್ವಕಾಲ ಪಿತೃದಿವ್ಸ ಗುರುಗÀಳ ಪುಣ್ಯದಿನಸರ್ವಕರ್ಮವ ತ್ಯಜಿಸಿ ಅತಿಥಿಗೀಯದೆಪರರ ಅನ್ನವ ಬಿಡದೆ ಉತ್ಸಾಹದಲಿ ಪೋಗಿನಲಿನಲಿದುಂಡು ಸ್ತೋತ್ರವ ಮಾಡಿ ದಿನಕಳೆವೆ 2 ಅನ್ಯರೊಡವೆಯು ತನಗೆ ಬಂದರೆ ಸಂತೋಷತನ್ನೊಡವೆ ಒಬ್ಬರಿಗೆ ಕೊಡಲು ಕ್ಲೇಶಉನ್ಮತ್ತನಾಗಿ ಉದರವ ಪೊರೆವ ಈ ದೋಷಮನ್ನಿಸಿ ದಯಮಾಡಿ ಸಲಹೋ ಹಯವದನ3
--------------
ವಾದಿರಾಜ
ಗಾಳಿ ಬಂದ ಕೈಯಲಿ ತೂರಿಕೊಳ್ಳಿರೊ |ನಾಲಗೆಯಿದ್ದ ಕೈಯಲಿ ನಾರಾಯಣನೆನ್ನಿರೊ ಪ.ಕದ್ದು ಹುಸಿಯನಾಡಿಅಪಾರ |ಬುದ್ದಿಯಿಂದ ಕೆಡಲು ಬೇಡಿ ||ಬುದ್ದಿವಂತರಾಗಿ - ಅನಿ |ರುದ್ಧನ ನೆನಯಿರೊ 1ನಿತ್ಯವಿಲ್ಲ ನೇಮವಿಲ್ಲ |ಮತ್ತೆ ಧಾನಧರ್ಮವಿಲ್ಲ ||ವ್ಯರ್ಥವಾಗಿ ಕೆಡದೆ - ಪುರು |ಷೋತ್ತಮನೆನ್ನಿರೊ 2ಭಕ್ತಿಕೊಡುವ ಮುಕ್ತಿಕೊಡುವ |ಮತ್ತೆ ದಾಯುಜ್ಯ ಕೊಡುವ ||ಕರ್ತೃ ಪುರಂದರವಿಠಲನ |ನಿತ್ಯನೆನೆಯಿರೊ3
--------------
ಪುರಂದರದಾಸರು
ಮರೆಯದಿರೆಲೆ ಮನವಿಲ್ಲಿ - ಯಮಪುರಿಗೆ ಒಯ್ದು ಬಾಧಿಸುತಿಹರಲ್ಲಿ ಪ.ಪರನಾರಿಯರ ಸಂಗವಿಲ್ಲಿ - ಉಕ್ಕುಎರೆದ ಸತಿಯರ ತಕ್ಕೈಸುವರಿಲ್ಲಿಗುರು - ಹಿರಿಯರ ನಿಂದೆಯಿಲ್ಲಿ - ಬಾಯೊಳೆರದು ಸೀಸವ ಕಾಸಿ ಹೊಯಿಸುವರಿಲ್ಲಿ 1ಉಂಡ ಮನೆಯ ಕೊಂಬುದಿಲ್ಲಿ - ಎದೆಗುಂಡಿಗೆಯನು ಸೀಳಿ ಕೊಲುತಿಹರಲ್ಲಿಗಂಡನ ದಣಿಸುವುದಿಲ್ಲಿ - ಯಮಕುಂಡದೊಳಗೆ ಹಾಕಿ ಕುದಿಸುವರಲ್ಲಿ 2ಚಾಡಿಯ ಹೇಳುಸುದಿಲ್ಲಿ - ನುಡಿದಾಡುವ ನಾಲಿಗೆ ಕೇಳುವರಲ್ಲಿಬೇಡಿದರಿಗೆ ಧರ್ಮವಿಲ್ಲಿ - ಇದನೀಡದಿರಲು ಒದ್ದು ನೂಕುವರಲ್ಲಿ 3ಪುಸಿ - ಠಕ್ಕು - ಠವುಳಿಗಳಲ್ಲಿ -ಕಟ್ಟಿಎಸೆದು ಕೊಲ್ಲುವರೊ ನಿನ್ನವರು ಕೇಳಿಲ್ಲಿಅಶನಪ್ರಭದಿಗಳಲ್ಲಿ - ಮಾಡೆಬಿಸಿಯ ಕೆಂಡವ ತಂದು ತಿನಿಸುವರಲ್ಲಿ 4ಸಿರಿಮದದೊಳಗಿಹುದಿಲ್ಲಿ - ಸೊಕ್ಕಮುರಿದು ಹಲ್ಲುಗಳ ಕಳಚುವರಲ್ಲಿಪುರಂದರವಿಠಲನ ಇಲ್ಲಿ - ನೆನೆಯಸ್ಥಿರವಾದ ಮುಕುತಿ ಪಡಕೊಂಬುವರಲ್ಲಿ 5
--------------
ಪುರಂದರದಾಸರು
ಹರಿಕಥಾ ಶ್ರವಣ ಸಾಧನವೆ ಮುಕುತಿ ಇದಕೆಸರಿ ಧರ್ಮವಿಲ್ಲೆಂದು ಪೇಳ್ವವು ಶ್ರುತಿತತಿ ಪ.ಶ್ರವಣದಿಂದಲಿ ಸಕಲ ಸದ್ಧರ್ಮ ಸಾಧನವುಭುವಿಯಲ್ಲಿ ಪೂಜ್ಯರಾಹೋರು ಸುಜನರುಸವೆಯದಾನಂದಮಯ ಭಕುತಿಸಿರಿದೊರಕುವುದುಅವರೇವೆ ಸೂಜÕರಾಗ್ವರು ಹರಿಯ ದಯದಿ 1ಅನವರತಶ್ರವಣವೆ ಮನನ ಮೂಲವು ಗಡಮನನದಲಿ ಹರಿಧ್ಯಾನ ಖಚಿತಾಹುದುಘನಪರಾತ್ಪರ ತತ್ವ ತಿಳುಹಿ ವಿರಕುತಿ ಭಾಗ್ಯವನು ಕೊಟ್ಟು ಶ್ರೀ ವಿಷ್ಣು ತೋರ್ವಗತಿಈವ2ಶ್ರವಣದಲಿ ನಾರದಗೆ ಗತಕಲ್ಪದ್ಯಪರೋಕ್ಷಸವಿಯಾದ ಸಾಮ್ರಾಜ್ಯ ಲೆಕ್ಕಿಸದ ಪ್ರಿಯವ್ರತಅವನಿಪರುವನಪೊಕ್ಕು ಹರಿಯನಾಶ್ರಯಸಿದರುದಿವಸೇಳರಲಿ ವಿಷ್ಣುರತನಿಗೆ ಮೋಕ್ಷ 3ದಿವಿಜಋಷಿ ಗಂಧರ್ವ ನೃಪರು ಮನುಜೋತ್ತಮರುವಿವಿಧ ತಿರ್ಯಗ್ಜಾತಿ ಸಜ್ಜೀವರುಶ್ರವಣಮಾತ್ರದಲಿ ಕಂಡರು ಸದ್ಗತಿಯನವರುದಿವಸಗಳೆಯದಲೆ ಆದರದಿಂದ ಬುಧರು 4ಹರಿಕಥಾಶ್ರೋತರಿಗೆ ಕರತಲವು ಮೋಕ್ಷ ಗಡಗುರುದ್ವಾರದಲಿಹರಿದೊರಕುವನು ಸತ್ಯಗುರುಮಧ್ವವರದ ಶ್ರೀಪ್ರಸನ್ವೆಂಕಟ ಕೃಷ್ಣಕರವಿಡಿದು ಪೊರೆವ ಸದ್ಗುರು ಪ್ರಿಯಜನಕೆ 5
--------------
ಪ್ರಸನ್ನವೆಂಕಟದಾಸರು
ಹುಚ್ಚು ಹಿಡಿದು ಕೆಟ್ಟಯೋಗಿಹುಚ್ಚು ಹಿಡಿದು ಕೆಟ್ಟನೋನಿತ್ಯನಿತ್ಯಕಾಲದಲ್ಲಿನಿಜನಾದ ಕೇಳಲಾಗಿಪಇಂದ್ರಪದವಿಯನ್ನು ಒಲ್ಲ ಈಸಪದವಿ ಮೊದಲೆ ಒಲ್ಲಹಿಂದ ಮುಂದಣ ವಿಚಾರ ಹೀನಮಾಡಿ ಮರೆತನಯ್ಯೋ1ಮಾತನಾಡೆ ಮಾತನಾಡ ಮನಕೆ ಹಿಡಿದುದನ್ನ ಬಿಡಯಾತ ಯಾತರಲ್ಲೂ ಕಿವಿಯ ನಿಡ ಯತ್ನ ಬೇರಾಯಿತಯ್ಯೋ2ಅರಿವುಮರೆವು ಆಗಿ ಇಹನು ಅರಕೆಯಿಲ್ಲದೆ ಸುಮ್ಮನಿಹನುಮರುಳು ಮರುಳು ಆಗಿ ಬುದ್ಧಿ ಮಂದನಾಗಿ ಹೋಯಿತಯ್ಯೋ3ಶರೀರ ಪರವೆಯಿಲ್ಲ ಯಾವುದರ ನಿಷೇಧವಿಲ್ಲಅರಿಯದವರು ಅದರಲ್ಲಿ ಅನ್ನ ಉಂಟೆನೆಂಬನಯ್ಯೋ4ದಯೆಯು ಇಲ್ಲ ಧರ್ಮವಿಲ್ಲ ದುಷ್ಟತನಗಳೇನು ಇಲ್ಲಬಯಲು ಚಿದಾನಂದಗುರುಬಯಲು ಕೂಡಿ ಬಯಲೆ ಆದ5
--------------
ಚಿದಾನಂದ ಅವಧೂತರು