ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದಿರು ಮರೆಯದಿರು ಮಾರಮಣನೇ ಪ ಗುರು ಸತ್ಯಬೋಧಾರ್ಯ ವರದ ರಘುರಾಮಾ ಅ.ಪ. ವನ ವನಂಗಳ ತಿರುಗಿ | ಹಣ್ಣು ಹಂಪಲ ಮೆದ್ದುದಣುವಾದ ಪಾಡು ನಿನಗರಿಕಿಲ್ಲವೇ ||ದಿನ ದಿನದಿ ಚಿತ್ರ ವಿಚಿತ್ರ ಭೋಜ್ಯಗಳನ್ನುಕ್ಷಣ ಬಿಡದೆ ಕೈಕೊಂಬ | ಘನ ಗರ್ವದಿಂದೆನ್ನ1 ವಜ್ರ ಮಣಿ ಮಕುಟಗಳಭಾರವನು ನೀ ವಹಿಸಿ | ಬಹು ಬಿಂಕವನೆ ತಾಳೀ 2 ಹೇಮ ತೊಟ್ಟಿಲೊಳು ನೀ ಮಲಗಿಉಬ್ಬಿ ಓಲಗಗೊಂಬ ಉತ್ಸಾಹದಿಂದೆನ್ನ 3 ಹೆಂಡತಿಯ ಕಳಕೊಂಡು | ಕಂಡ ಕಂಡವರಿಗೇಅಂಡಲಿದ ಮಾತುಗಳು ಅನಲೇತಕೇ ||ಮಂಡಿತಾದಾಭರಣ | ಮತ್ತೆ ಎಡದಲಿ ಸತಿಯುಕಂಡು ಸುಖ ಬಡುವಂಥ | ಕಳವಳಿಕೆಯಿಂದೆನ್ನ 4 ಈಗಲೀ ಸತ್ಯಬೋಧರ ಬಳಿಯಲಿರಲಾಗಿನೀಗಿ ಹೋಯಿತೆ ನಿನ್ನ ಪಡಿಪಾಟಲೂ ||ಆಗೀಗಲೆನ್ನದೇ ಕ್ಷಣ ಬಿಡದೆ ಕೈಕೊಂಡು ವೈಭೋಗ ಬಡುವುದೂ ಮೊದಲಿಗಿದ್ದಿಲ್ಲ 5 ನಮ್ಮ ಗುರುಗಳು ನಿಮಗೆ | ಈ ಪರೀಯುಪಚಾರಘಮ್ಮನೇ ಮಾಡಲೂ ಘನತೆಯಿಂದಾ ||ನಮ್ಮ ಸಾಕದೆ ಇನಿತು ದೂರ ಮಾಳ್ಪುದು ನಿನಗೆಧರ್ಮವಲ್ಲವೊ ಸ್ವಾಮಿ ದಯದದಿಂದ ನೋಡೆಮ್ಮ 6 ಪರಿ ಭಾಗ್ಯವೂ ||ಯಾಕೆ ಭಕುತರ ಮಾತು ನಿರಾಕರಿಸಿ ಬಿಡುವುದೂಶ್ರೀಕಾಂತ ಎರಗುವೆ ವ್ಯಾಸ ವಿಠಲ ರೇಯಾ 7
--------------
ವ್ಯಾಸವಿಠ್ಠಲರು
ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ - ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ ಮುಂದೆ ಗತಿ ಏನಯ್ಯ ಮುಕುತರ ಹಿಂದುಳಿದವನಲ್ಲದಲೆ ತನು ಸಂ - ಬಂಧಿಗಳ ವಶನಾಗಿ ದುರ್ವಿಷ - ಯಾಂಧಕಾರದಿ ಮುಳುಗಿದೆನೊ ನಾ ಅ.ಪ. ಹಲವು ಜನ್ಮದ ನೋವಾ ನಾ ಹೇಳಿಕೊಳಲೇನೆಲವೊ ದೇವರ ದೇವಾ ನೀ - ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ ಸುಲಭರೊಳಗತಿ ಸುಲಭನೆಂಬುವ ಅಲವಬೋಧಮತಾನುಗರು ಎನ - ಗೊಲಿದು ಪೇಳಲು ಕೇಳಿ ನಿಶ್ಚಂ - ಚಲದಿ ನಿನ್ನನೆ ಧೇನಿಸುವೆ ನಾ ಕಲುಷ ಸಂಸ್ಕಾರಗಳ ವಶದಿಂ ಹೊಲಬುಗಾಣದೆ ಹರುಷಗುಂದುವೆ ಹೊಲೆ ಮನದ ಹರಿದಾಟ ತಪ್ಪಿಸಿ ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1 ಭಾರತೀಪತಿಪ್ರೀಯಾ ಎಂದೆಂದು ಭಕುತರ ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ - ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ ತಾರಕನು ನೀನೆಂದು ತಿಳಿಯದ ಕಾರಣದಿ ಸುಖ ದುಃಖಮಯ ಸಂ - ಸಾರ ದುಸ್ತರ ಶರಧಿಯೊಳು ನಾ ಪಾರಗಾಣದೆ ಪರಿದು ಪೋಪೆನೊ ದೂರನೋಳ್ಪದು ಧರ್ಮವಲ್ಲವೊ ದ್ವಾರಕಾಪುರನಿಲಯ ಪರಮೋ - ದಾರ ತನುವೆಂದೆನ್ನ ಪಾಲಿಗೆ ಬಾರದಲ್ಲದೆ ಭವವಿಮೋಚನ 2 ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ - ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ - ಸುಖಗುಣಾರ್ಣವ ಶ್ರೀದವಿಠಲಪ್ರಸೀದ ಸಕಲ ಕ್ರಿಯ ಯೋಗಗಳು ತನು ಬಂ- ಧಕವು ನಿನಗೊಪ್ಪಿಸದಿರಲು ಎನೆ ನಿಖಿಳ ಜೀವರ ಭಿನ್ನ ನಿನ್ನಯ ಯುಕುತಿಗೆ ನಮೊ ಎಂಬೆನಲ್ಲದೆ ಯುಕುತ ಯುಕ್ತಿಗಳೊಂದರಿಯದ - ರ್ಭಕನ ಬಿನ್ನಪ ಸಲಿಸಿ ನವವಿಧ ಭಕುತಿ ಭಾಗ್ಯವ ಕೊಟ್ಟು ತವ ಸೇ - ವಕರ ಸೇವಕನೆನಿಸದಿರ್ದೊಡೆ 3
--------------
ಶ್ರೀದವಿಠಲರು
ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ. ಲಕ್ಷ್ಮೀಶ ಪಾಲಿಸೊ ಎನ್ನ | ಜಗ ದ್ರಕ್ಷಕ ಪರಮಪಾವನ್ನ ಈಕ್ಷಿಸು ಕರುಣ ಕಟಾಕ್ಷವ ಬೀರುತ ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ. ನಾಗರಾಜನ ಗಿರಿವಾಸ | ಭೋಗ ಆಗುಮಾಡೆಲೊ ಸರ್ವೇಶ | ನಿನಗೆ ಬಾಗಿ ನಮಿಸುವೆ ಜಗದೀಶ | ಭವ ರೋಗ ಹರಿಸು ಕ್ಲೇಶನಾಶ | ಆಹ ಕೂಗಿದರು ನಿನಗೀಗ ಕೇಳಿಸದೇನೊ ಜಾಗುಮಾಡದೆ ನೀಡೊ 1 ಸೃಷ್ಟಿಗೆ ಎನ್ನನು ಕರೆದೆ | ಭವ ಕಷ್ಟದಿ ಬಂಧಿಸಿ ತಂದೆ | ಇನ್ನು ಘಟ್ಯಾಗಿ ಕಾಪಾಡು ಎಂದೆ | ಮೊರೆ ಮುಟ್ಟದೆ ನಿನಗಿನ್ನು ತಂದೆ | ಆಹ ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2 ಕರ್ಮಬಂಧನಗಳ ಕಡಿಯೊ | ಶ್ರೀಶ ನಿರ್ಮಲರೂಪ ಕೈಪಿಡಿಯೊ | ಬೇಗ ಧರ್ಮ ಅಧರ್ಮವ ತಿಳಿಯೊ | ಜಗ ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3 ಶ್ರೀನಿವಾಸ ಬಾರೊ ಬೇಗ | ನಿನ್ನ ನಾನು ನಂಬಿದೆನೊ ಶ್ರೀ ಭೋಗ | ನೀಗು ನೀನೆ ತ್ರಿಕರ್ಮದ ಭೋಗ | ಬೇಗ ಭವ ರೋಗ | ಆಹ ಪೋಗುತಲಿದೆ ದಿನ ಜಾಗುಮಾಡಲು ಸಲ್ಲ ನಾಗಶಯನ ಎನ್ನ ಬೇಗನೆ ರಕ್ಷಿಸೊ 4 ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ ಬೆನ್ನ ಭಾರವಿದಿನ್ನೇನು | ಕೋರೆ ಮಣ್ಣು ಆರ್ಭಟಿಸುವೆ ನೀನು | ವಟು ಚಿಣ್ಣ ಭಾರ್ಗವ ನೀನು | ಆಹ ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ ಬಣ್ಣಗೆಟ್ಟು ಹಯವನ್ನೇರಿದ ಧೀರ 5 ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ ತತ್ವಾಧಿಪತಿಗಳು ಮುದದಿ | ಜಗ ತ್ಕರ್ತನೆ ಕಾಯ್ವ ದಯದಿ | ಬೇಗ ಇತ್ತು ಮತಿಯ ಸಲಹೊ ದೃಢದಿ | ಆಹ ಸತ್ಯರೂಪನೊ ನೀ ಸತ್ಯ ಸಂಕಲ್ಪನೊ ನಿತ್ಯ ನಿಂತು ಕಾಯೊ 6 ಗೋಪಾಲಕೃಷ್ಣ ವಿಠ್ಠಲ | ಭವ ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ ರಾಪು ಮಾಡುವುದುಚಿತಲ್ಲ | ಜಗ ದ್ವ್ಯಾಪಕ ಭಕ್ತವತ್ಸಲ | ಆಹ ಈ ಪಯೋಜಜಾಂಡದಿ ರೂಪ ರೂಪಾಂತರದಿ ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
--------------
ಅಂಬಾಬಾಯಿ