ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಬಿಟ್ಟಿರಲಾರೆ ನೀರಜಾಕ ್ಷ ಪ ಘನ್ನ ಮಹಿಮನೆ ನಿನ್ನ ಸನ್ನಿಧಾನವನೀಯೊ ಅ.ಪ. ಸರ್ವಧರ್ಮಗಳಿಗೆ ನೀನಿಲ್ಲದಿನ್ನಿಲ್ಲ ಉರ್ವಿಕರಿಗೆ ನೀನೆ ಉರ್ವೀಶನೆ ನಿರ್ವಿಕಾರ ಮಹಾತ್ಮ ನಿಖಿಲಾಂತರಾತ್ಮಕನೆ ಪಾದ ಸೇವೆಯೆನಗೀಯೊ 1 ತಡವ್ಯಾಕೆ ಬರಲಿನ್ನು ಪೊಡವೀಶ ಯನ್ನೊಡನೆ ತಡೆಯಲಾರೆನು ನಿನ್ನ ವಿರಹವನ್ನು ನುಡಿಯಬೇಡವೋ ಎನ್ನ ನೀ ಪೋಗು ಎಂದೆನುತ ಕಡು ದಯಾನಿಧಿ ನಿನ್ನ ನಾ ಬಿಡೆನೊ 2 ಆನಂದ ಪರಿಪೂರ್ಣ ಶ್ರೀನಾಥ ನಿನಗೇಕೆ ಕಾನನಾ ವಾಸವು ಕಮಲನಯನ ಜ್ಞಾನದಾಯಕ ನಿನ್ನ ಚರಣ ಶರಣನೊ ನಾನು ದೀನರಕ್ಷಕ ಸ್ವಾಮಿ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ಮಧ್ವರಾಯರ ಕರುಣೆ ಪಡೆಯಿರೊ ಪ ಸಿದ್ಧವು ಇಹಪರದಿ ಸೌಖ್ಯವು ಅ.ಪ ವೀರ ವೈಷ್ಣವ ಮತ ತೋರಿದವರ ನಂಬಿ ವೀರ ವೈಷ್ಣವರಾಗಿ ಬಾಳಿರೊ 1 ಸತ್ಯ ಧರ್ಮಗಳಿಗೆ ಮೂರ್ತಿಗಳಾದ ಜೀ ವೋತ್ತಮರನು ನಂಬಿ ಬಾಳಿರೊ 2 ಉನ್ನತ ಧ್ಯೇಯವ ಸ್ವರ್ಣದಕ್ಷರದಲ್ಲಿ ಚೆನ್ನಾಗಿ ಬೋಧಿಸಿದ ಪ್ರಸನ್ನ ಶ್ರೀ 3
--------------
ವಿದ್ಯಾಪ್ರಸನ್ನತೀರ್ಥರು
ಲಾಲಿಸೆನ್ನ ವೃತ್ತಾಂತ ಲಕ್ಷುಮಿಯ ಕಾಂತ ಬಾಲನೊಳಿಂಥಾ ಪಾಂಥ ಬ್ಯಾಡ ಭೃಂಗಾಳ ಕಾಂತ ಪ. ಮಾನವ ನೀನೆ ಕೊಡರೆ ತಡವರು ಸೃಷ್ಟಿಯ ಒಳಗಾರು ಶ್ರೀ ರಮಣ ವಿಠಲ ನಿನಗಿನ್ನು ವಿವರಿಸಿ ಪೇಳ್ವದೇನು ಭ್ರಷ್ಟಗೊಳಿಸದಿರು ಭಯಹರ ಬೇರಿನ್ನಾರು 1 ಏಸು ತಪ್ಪಿದ್ದರೂ ದಾಸ ಬಿಡನೆಂಬ ಲೇಸಿನ ಬಿರುದೆಂತು ಮಾನುವದು ಈ ಸಮಯದೀ ಕರುಣಾ ಸಮುದ್ರನೆ ಎನ್ನ ಘಾಸಿ ಮಾಡದೆ ಗರುಡಾಸನ ಕೃಪೆದೋರು2 ನಡಿಯುವದಳವಲ್ಲ ತಡೆಯುವರೊಶವಲ್ಲ ನಡಿವ ಕಾರ್ಯಗಳೆಲ್ಲ ನುಗ್ಗಿತಲ್ಲ ಬಿಡದೆ ಮಾಡುವ ದಾನ ಧರ್ಮಗಳಿಗೆ ಇಂಥ ತೊಡಕು ಬಂದರೆ ಮುಂದೆ ತಾಳುವದೆಂತೋ ತಂದೆ 3 ಮಾನವರೊಳಗೊಬ್ಬ ಮರುಳುಗೊಂಡಾದರು ತಾನಿಟ್ಟ ತರುವನು ತೆಗಿಯನೆಂಬ ಮಾನಿತ ನುಡಿಯಿದ್ದು ಮೊದಲಿನಿಂದ ನೀನು ಕಾದು ದೀನನ ಬಿಡದಿಂದು ದಯದೋರು ಕೃಪಾಸಿಂಧು 4 ತೋರುವದಿಲ್ಲುಪಾಯ ಭೋರೆನುತಿದೆ ಮಾಯ ಕಾಯ ಕರ ಕರಿಯಾ ಹಾರಿಸು ಹಲಧರನನು ವೆಂಕಟರಾಯ ದೂರು ನಿನ್ನ ಪದಕೆ ಬಾರದಂದದಿ ಜೀಯ 5
--------------
ತುಪಾಕಿ ವೆಂಕಟರಮಣಾಚಾರ್ಯ