ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪೆಯಿರಲಿ ಸ್ವಾಮಿ ಕೃಪೆಯಿರಲಿ ಅಪರಿಗಣ್ಯ ಸುಗುಣಾಂಬುಧಿ ಹರಿ ನಿನ್ನ ಪ. ಬೇರಿಗೆ ದಿವ್ಯ ಕಾವೇರಿ ನದಿಯ ಜಲ ಧಾರೆಯಿರಲು ಕೊಂಬೆಗಳುಬ್ಬಿ ಸಾರಭರಿತ ಫಲದೋರುವ ತರುವಂತೆ ಧಾರುಣಿಪರು ಕೈ ಸೇರುವರು 1 ಶತ್ರುಗಳಂಜಿ ಬಗ್ಗುವರು ಕಾಳ ಕೂಟ ಪಥ್ಯವಾಗುವುದು ನಿನ್ನಣುಗರಿಗೆ ನಿತ್ಯ ಮಾಡುವಾ ದುಷ್ಕøತವೆಲ್ಲವು ಪರ- ಮೋತ್ತಮ ಧರ್ಮಕರ್ಮಗಳಾಹಲೂ 2 ಕನಸು ಮನಸಿನಲ್ಲಿ ನೆನೆಸುವ ಕಾರ್ಯಗ- ಳನುಕೂಲವಾಗುವದನುದಿನವು ಮನಸಿಜನಯ್ಯ ನೀನನುವಾಗಿರೆ ಸರ್ವ ಜನರೆಲ್ಲರು ಬಹು ಮನ್ನಿಸುವರು 3 ಋಗ್ಯಜುಸ್ಸಾಮಾಥರ್ವಣಗಳೆಂಬ ವೇದ ಸ- ಮಗ್ರ ನೀ ಕರುಣಿಸಿ ಒಲಿದಿರಲು ಸುಜ್ಞಾನ ಭಕ್ತಿ ವೈರಾಗ್ಯ ಸಹಿತವಾಗಿ ಭಾಗ್ಯದೇವತೆ ಕೈ ಸೇರುವಳು 4 ಈ ಕಾರಣದಿಂದನೇಕರ ಬಯಸದೆ ಶ್ರೀಕರ ನೀ ಕರುಣಿಸಿದರಿಂದು ಸಾಕೆಂದೊದರುವೆನೇಕಮನದಲಿ ದ- ಯಾಕರ ವೆಂಕಟರಮಣನಿಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಧರ್ಮದ ನೀತಿಯ ಅರಿತೇನು ಮರ್ಮದ ರೀತಿಯ ತಿಳಿದೇನು ಪ ಧರ್ಮಕರ್ಮಗಳು ಹರಿಗರ್ಪಣವೆಂದು ನಿರ್ಮಲಚಿತ್ತದಿ ಧ್ಯಾನಿಸದವನು ಅ.ಪ ಗಂಗಾಸ್ನಾನವ ಮಾಡಿದರೇನು ಅಂಗುಲಿಯೂರುವ ಯೋಗದೊಳೇನು ಪಂಗನಾಮ ಬೂದಿಯ ಬಳಿದೇನು ರಂಗನ ಸ್ಮರಿಸದ ಮನವಿದ್ದೇನು 1 ದೇಶ ದೇಶಂಗಳ ತಿರುಗಿದರೇನು ಆಶೆಯ ಬಿಡದ ಕಾಷಾಯದಿಂದೇನು ಕಾಶಿರಾಮೇಶ್ವರಕೋಡಿದರೇನು ಶ್ರೀಶನನಾಮವೇ ಗತಿಯೆನದವನು 2 ಚಿತ್ತದಿ [ನೆನೆದರೆ] ಹರಿ ಕಿರಿದೇ ಸತ್ತು ಹುಟ್ಟುವುದೇ ಜಗದೊಳು ಹಿರಿದೇ ಎತ್ತೆತ್ತಲು ಹರಿಯಿಹನೆನಬಾರದೇ ಕರ್ತಶ್ರೀ ಮಾಂಗಿರಿರಂಗನ ನೆನೆಯದೆ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮೂಳಾ ಹರಿದ್ಹಾಕೆಲೋ ಮಾಯದ ಜಾಲ ಹಾಳುಜಗದ ಮಾತಿಗ್ವ್ಯಾಕುಲವ್ಯಾಕೆಲೋ ಪ ಅನ್ಯಗುಣಗಳನು ಅನ್ನಗೇಡಾಗಿ ಬಲು ಭಿನ್ನ ಭೇದದಧೋಪಾತದುರುಳತಿರು ಕುನ್ನಿಮಾನವರ ಭಿನ್ನಭೇದಕಂಡು ನಿನ್ನ ಗುಣವ ಬಿಟ್ಟು ಬನ್ನಬಡಲಿಬೇಡ 1 ಕರ್ಮಿಲೋಭಿಗಳ ಮೋಹದಿಂದ ದು ಷ್ಕರ್ಮದಿ ಬಿದ್ದು ಕುಂಭೀಪಾಕಕ್ಕಿಳಿದರೇನು ಧರ್ಮಕರ್ಮಗಳ ಮರ್ಮ ತಿಳಿದು ಸ ದ್ಧರ್ಮದೊಳಾಡುತ ನಿರ್ಮಲನಾಗಿ ಬಾಳು 2 ಶಿಷ್ಟಪದ್ಧತಿಗಳ ಬಿಟ್ಟುಕೊಟ್ಟು ಮಂದಿ ಕೆಟ್ಟಪದ್ಧತಿ ಸುದ್ದಿಯಾಡುವುದ್ಯಾಕೆಲೋ ಸೃಷ್ಟಿಯೊಳಗೆ ನಮ್ಮ ಶಿಷ್ಟ ಶ್ರೀರಾಮನ ಮುಟ್ಟಿಪೂಜಿಸಿ ಮುಕ್ತಿಪಟ್ಟಕ್ಕೆ ಕೂಡ್ರೆಲೋ 3
--------------
ರಾಮದಾಸರು
ಸಂತರೆನಬಹುದು ಸಜ್ಜನರಿವರನಾ ಪ ಇಂಥ ಗುಣಗಳಿಂದ ಯುಕ್ತರಾಗಿಪ್ಪರ ಅ.ಪ. ಸ್ವಾಂತಸ್ಥಾ ನುತ ಸರ್ವಾಂತರಾತ್ಮಕನೆಂದು ಚಿಂತಿಸುತ ಮನದೊಳು ನಿರಂತರದಲಿ ನಿಂತಲ್ಲಿ ನಿಲ್ಲದೆ ದುರಂತ ಮಹಿಮನ ಗುಣವ ಸಂಸ್ತುತಿಸುತನವರತ ಶಾಂತರಾಗಿಹರಾ 1 ಲೇಸು ಹೊಲ್ಲೆಗಳು ಪ್ರದ್ವೇಷ ಗೇಹಗಳು ಸಂ ತೋಷ ಕ್ಲೇಶಗಳಿಗವಕಾಶ ಕೊಡದೆ ದೋಷ ವರ್ಜಿತ ಹೃಷಿಕೇಶ ಮಾಡುವನೆಂದು ಭೇಶನಂದದಲಿ ಪ್ರಕಾಶಿಸುತಲಿಹರಾ 2 ಮೇದಿನಿ ದಿವಿಜರೊಳು ಸಾಧು ಜನರೊಳು ಧರ್ಮಕರ್ಮಗಳೊಳು ಶ್ರೀದನೊಳು ಗೋವುಗಳೊಳಗೆ ದ್ವೇಷಿಪರಿಗೆ ಅ ನ್ನೋದಕಗಳೀಯದೆ ನಿಷೇಧಗಯ್ಯುತಲಿಹರಾ 3 ಎನ್ನ ಪೋಲುವ ಪತಿತರಜ್ಞಾನಿಗಳು ಜಗದೊ ಳಿನ್ನಿಲ್ಲ ಪತಿತ ಪಾವನನೆನಿಸುವ ಜಾಹ್ನವೀ ಜನಕಗಿಂದಧಿಕರ್ಯಾರಿಲ್ಲೆಂದು ಉನ್ನತೋತ್ಯಂಶದಿಂದ ಸನ್ನುತಿಸುತಿಪ್ಪವರ 4 ಸತ್ಯ ಸಂಕಲ್ಪ ಏನಿತ್ತಿದ್ದೆ ಪರಮ ಸಂ ಪತ್ತು ಎನಗೆನುತ ಸದ್ಭಕ್ತಿಯಿಂದಾ ನಿತ್ಯದಲಿ ಕೀರ್ತಿಸುತ ಪುತ್ರಿಮಿತ್ರಾದಿಗಳು ಭೃತ್ಯಾನುಭೃತ್ಯರೆಂದರ್ತಿಯಲಿ ಸ್ಮರಿಸುವರಾ 5 ಜನುಮ ಜನುಮಗಳಲ್ಲಿ ಎನಗೆ ಜನನೀ ಜನಕ ಅನುಜ ತನುಜಾಪ್ತ ಪೋದನ ಭೂಷಣಾ ಅನಿಮಿತ್ತ ಬಂಧು ಒಬ್ಬನೇ ಎನಿಸುತಿಪ್ಪ ಸ ಪರ ಸೌಖ್ಯ ರೂಪನೆಂಬುವರಾ 6 ನಾಗೇಂದ್ರಶಯನ ಭವರೋಗಾಪಹರ್ತ ಪಾ ವಜ್ರ ಅಮೋಘ ಶೌರ್ಯ ತ್ರೈಗುಣ್ಯ ವರ್ಜಿತ ಜಗನ್ನಾಥ ವಿಠಲಗೆ ಕೂಗಿ ಕೈಮುಗಿದು ತಲೆಬಾಗಿ ನಮಿಸುವರಾ 7
--------------
ಜಗನ್ನಾಥದಾಸರು
ಹೊಟ್ಟೆಪಾಡಿನ ಕೃತ್ಯವಲ್ಲವಿದು ವಿಠ್ಠಲನ ಸೇವೆ ಪ. ಶ್ರೇಷ್ಠ ಗುರುಗಳ ಆಜ್ಞೆಯಿಂದ ಮನ ಮುಟ್ಟಿ ನಡೆಸುವ ದಾಸವೃತ್ತಿಯು ಅ.ಪ. ವಂದನೆ ನಿಂದ್ಯಗಳನ್ನು ಗಮನಿಸದೆ ಇಂದಿರೇಶನ ಪದಕರ್ಪಿಸುತ ಮಂದಭಾಗ್ಯರ ಮಾತನೆ ಗಣಿಸದೆ ಬಂದ ಭಯಗಳ ದೂರೋಡಿಸುತಲಿ 1 ಆಶಪಾಶಗಳ ನಾಶಗೈಸಿ ಮನ ಕ್ಲೇಶಪಡದೆ ಸಂತೋಷಿಸುತ ವಾಸುದೇವ ಆನಂದಪೂರ್ಣ ಸ ರ್ವೇಶ ನಿನಗೆ ನಾ ದಾಸನೆಂತೆಂಬುದು 2 ಗೆಜ್ಜೆ ಕಾಲಿಗೆ ಕಟ್ಟಿ ತಾಳವ ಲಜ್ಜೆಯ ತೊರೆದು ಬಾರಿಸುತ ಮೂರ್ಜಗದೊಡೆಯ ಜಗಜ್ಜನ್ಮಾಧಿಕಾರಣನೆಂದು ಘರ್ಜಿಸುತಲಿ ಸಂಚಾರಮಾಳ್ಪುದೆ 3 ಇಂದು ನಾಳೆಗೆಂಬೋ ಮಂದಬುದ್ಧಿಯ ಬಿಟ್ಟು ಬಂದದರಿಂದಾನಂದಿಸುತ ತಂದೆ ಮುದ್ದುಮೋಹನದಾಸರ ಪದ ದ್ವಂದ್ವವ ಭಜಿಸುತ ಮುಂದೆ ಸಾಗುವುದು 4 ಗುರುಗಳ ಕರುಣದಿ ಅಂಕಿತ ಪಡೆಯಲು ದೊರೆವುದು ದಾಸತ್ವದ ಸಿದ್ಧಿ ಅರಿಯದೆ ವೇಷವ ಧರಿಸಿ ಮೆರೆದರೆ ಸಿರಿವರ ಮೆಚ್ಚನು ಗುರುವು ಒಲಿಯನು 5 ಉಚಿತ ಧರ್ಮಕರ್ಮಗಳನೆ ಮಾಡುತ ಖಚಿತ ಜ್ಞಾನ ಮನದಲಿ ತಿಳಿದು ವಚನದಿ ಹರಿನಾಮಗಳನೆ ನುಡಿಯುತ ಶುಚಿರ್ಭೂತರಾಗಿ ಆನಂದಪಡುವುದು 6 ದುಷ್ಟರ ತೊರೆದು ಶಿಷ್ಟರೊಳಾಡುತ ಶ್ರೇಷ್ಠವಾದ ದಾಸತ್ವದಲಿ ಬಿಟ್ಟು ಪ್ರಪಂಚವ ಸೃಷ್ಟೀಶ ಗೋಪಾಲ ಕೃಷ್ಣವಿಠಲನು ಶ್ರೇಷ್ಠದಿ ಭಜಿಪುದು 7
--------------
ಅಂಬಾಬಾಯಿ