ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೈವ ಭಕ್ತಿ ಸಂಸಾರದೊಳಿಲ್ಲ ಪ ಜೀವಗಭಿಮಾನವು ಬಿಡದಲ್ಲ ಅ.ಪ ವನಜಲೋಚನನ ಅರ್ಚನೆಗೆ ಆಲಸ್ಯ 1 ದಾನಕ್ಕೆ ದಾರಿದ್ರ್ಯ ತನಗೋಸುಗ ಸಾಲ ಮಾನವ ಜನಕೆ 2 ಮಕ್ಕಳ ಮದುವೆಗೆ ರೊಕ್ಕಸಾವಿರ ಹೊನ್ನು ಪಕ್ಕಿವಾಹನಗೆ ದೊರೆಯದೊಂದು ಕಾಸು 3 ಮತ್ತೆ ತನ್ನ ಹೆಂಡತಿಗೆ ಹತ್ತುವರಹದ ಸೀರೆ ಮುತ್ತೈದೆಗೀವರೆ ಮೂರಾಣೆಯ ಕುಬಸ 4 ಮದುವೆ ಮುಂಜಿಗೆ ಸಾಲ ಮಾಡದಿದ್ದರೆ ಹ್ಯಾಂಗೆ ಬುಧರು ಯಾಚಿಸಿದರೆಯಿಲ್ಲ ಎಂಬುವುದೇ? 5 ಎಷ್ಟು ಬಂದರು ಸಂಸಾರಕ್ಕೆ ಸಾಲದು ಭ್ರಷ್ಟ ಯಾಚಕರಿಗೇತಕೆ ಕೊಡಬೇಕು 6 ಸತಿಸುತನು ನಾವು ಸಲಹಿದರೆ ಸಾಕು ಅತಿಶಯದಾನ ಧರ್ಮಂಗಳು ಬೇಡ 7 ದಾಕ್ಷಿಣ್ಯಗಾರರಿಗೆ ಭಕ್ಷ್ಯ ಭೋಜ್ಯಗಳ ಊಟ ಕುಕ್ಷಿಂಭರರು ಕೇಳೆ ಭಕ್ಷ್ಯವೂ ಇಲ್ಲ 8 ಶ್ರೀನಿಧಿ ಗುರುರಾಮ ವಿಠಲ ವಲಿವನೆ? 9
--------------
ಗುರುರಾಮವಿಠಲ
ನರಕ ಎತ್ತಣದೋ ನರಕ ಎತ್ತಣದೋ ನರ ಕಂಠೀರವನೆಂದು ಸ್ಮರಿಸುವ ಜನರಿಗೆ ಪ ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ ದಾನ ಧರ್ಮಂಗಳು ಮಾಡಲೇಕೆ ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ ತ್ರಾಣದಲಿ ಬಿಡದೆ ಎಣಿಸುವ ಜನರಿಗೆ1 ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ 2 ದೀಪ ಧೂಪಗಳೇಕೆ ನಾನಾ ಪರಿಯಲ್ಲಿ ಸೋಪಸ್ಕರದ ಎಡೆ ಇಡಲೇತಕೆ ಅಪಾರ ಮಹಿಮ ಅನಾಥರೊಡೆಯ ರಂಗ ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ 3 ಭೂತದಯಗಳೇಕೆ ನೀತಿ ಎಂಬುದು ಏಕೆ ಜಾತವೇದಸನಲ್ಲಿ ಕಳವಳವೇಕೆ ಪಿನಾಕಿ ಸಖನೆಂದು ಮಾತು ಮಾತಿಗೆ ನೆನೆದು ಸುಖಿಸುವ ಜನರಿಗೆ 4 ಏನೇನು ಕರ್ಮದಾಚರಣೆ ಮಾಡುವದೇಕೆ ಭಾನು ಉದಯವಿಡಿದು ತೊಳಲಲೇಕೆ ದೀನನಾಗಿ ದಾತಾ ವಿಜಯವಿಠ್ಠಲ ಹರಿಯ ಮಾನಸದಲಿ ಧ್ಯಾನ ಮಾಡುವ ಜನರಿಗೆ 5
--------------
ವಿಜಯದಾಸ