ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಸಂಭ್ರಮದೊಳಗೆ ನೀನೆ ಇರುತಿರುವಿ ಎನ್ನಯ್ಯ ಮರೆದೇನು ಮುನ್ನಾದ ಬವಣೆ ಪ ಅನ್ನವನು ಕಾಣದೆ ಅನ್ನದಿಕ್ಕಿಲ್ಲದೆ ಉನ್ನತೋನ್ನತವಾದ ಚಿನ್ನದರಮನೆಯಲ್ಲಿ ಬಿನ್ನವಿಲ್ಲದೆ ಸಿರಿಯರನ್ನಬಡಿಪ ಮದವೋ 1 ಮಡದಿಯನು ಕಳಕೊಂಡು ಎಡೆಬಿಡದೆ ಅಡವ್ಯಡವಿ ಹುಡುಹುಡುಕಿ ಬೇಸತ್ತು ಕಡುಬಾಯ ಬಿಡುವಗೆ ಮೃಡಮಹಾದೇವತೇರು ಸಡಗರದಿ ನಿನ್ನಡಿಯ ದೃಢದಿ ಪೂಜಿಪರೆಂಬ ಕಡುಗರವದಿರವೇ 2 ನೀರೊಳ್ಜೀವಿಸಿ ಬಲು ನಾರುತಲಿರುವವಗೆ ಹಾರ ಹೀರಾವಳಿ ಗಂಧ ಕಸ್ತುರಿಯ ಮದವೋ ಸಾರಿ ಮನು ಮುನಿಗಳು ಸೇರಿ ನಿಮ್ಮಯ ಚರಣ ವಾರಿಜ ಭಜಿಪ ಮದ ಮೀರಿಹ್ಯದೋ ನಿನಗೆ 3 ತಿರುಕನು ತಾನಾಗಿ ಧರೆಯ ದಾನವ ಬೇಡಿ ಧರೆವರನ ಬಾಗಿಲವ ನಿರುತ ಕಾಯ್ದವಗೆ ಸುರರು ಗಂಧರ್ವ ತುಂಬುರರು ಸಂಗೀತದಿಂ ಹರುಷಗೊಳಿಪುದಕೆ ನೀ ನೇತ್ರ ಮುಚ್ಚಿರುವ್ಯೋ 4 ಭಾರಬೆನ್ನಲಿ ಪೊತ್ತು ಘೋರ ಬಡುತಿರುವವಗೆ ಈರೇಳುಲೋಕದ ದೊರೆಯೆಂಬಹಂಕಾರವೋ ಮಾರಪಿತ ಗತಿಯೆಂದು ಸೇರಿ ಭಜಿಸುವ ದಾಸರರಿಕೆ ಪೂರೈಸದಿದು ತರವೆ ಶ್ರೀರಾಮ 5
--------------
ರಾಮದಾಸರು
ಸ್ಮರಿಸುವ ದಾಸರ ಮೊರೆ ಕೇಳದಿರೆ ಹರಿ ಕರುಣಾಳು ನೀನೆಂಬ ಭರವಸಿನ್ಹ್ಯಾಗೆ ಪ ಕರಿಧ್ರುವ ಬಲಿ ಪಾಂಚಾಲಿಯ ಪೊರೆದಂತೆ ಸ್ಮರಿಪರ ಬಿಟ್ಟರೆಘಳಿಗಿರಲಾರಂತೆ ಅರಿತು ವಿಚಾರಿಸು ನೋಡಿದವರಿಗಿದು ಸರಿಬರುವುದೆ ನರಹರಿಯೆ ನೀನರಿಯೆ 1 ಕರುಣಾಕರನು ನೀ ನಿಜವಾಗಿರ್ದರೆ ತ್ವರಿತದಿ ಬಂದೆನ್ನ ಮೊರೆ ಪಾಲಿಸೆಲೊ ದುರಿತಭಯನಿವಾರ ನೀನಾದರೆ ದುರಿತರಾಶಿ ಗಡ ಪರಿಹರಿಸಭವ 2 ಧರೆವರ ಧರ್ಮಗರಣ್ಯದಿ ಮುಗಿದ ಪರುಷದನ್ನವನಿತ್ತು ನೀ ರಕ್ಷಿಸಿದೆ ವರ ಬಿರುದು ನಿನಗಿರಬೇಕಾದರೆ ತ್ವರಿತದಿ ಸಲಹೊ ಶ್ರೀಗುರು ರಾಮ 3
--------------
ರಾಮದಾಸರು