ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಕಜಕಾರ್ಕನು ಉದಯಿಸಿದಂತೆ ಮಧುರಿಪು ನೀ ಬಂದೊದಗಿದೆ ಸಲಹೈ ಪ ಗಾದೇಯ ನಾಮಕ ಗಾದೆ ಪ್ರಭುವೆ ಖಳಾ ಭಾದೆ ಬಿಡಿಸೊ ಖಲ | ಪರಮಾದರದಿ ಪ್ರಹ್ಲಾದನ ಪೋಷಿಪ 1 ಮನೆ ಧನ ಬಿಟ್ಟು ನಿಮ್ಮನು ಭಜಿಸುವ ನಮ್ಮನು ಬಾಧಿಪ ಖಳನನು ಶಿಕ್ಷಿಸು ಹೇ ವನಜನಯನ ಹರಿ 2 ಆವನು ನಿನ್ನುಳಿದೀ ವಸುಧರೆಯೋಳು ಜೀವರ ಸಲಹುವ ದೇವದೇವ ಶಿರಿಗೋವಿಂದ ವಿಠಲ 3
--------------
ಅಸ್ಕಿಹಾಳ ಗೋವಿಂದ
ಗುರುರಾಜಾ ಗುರು ಸಾರ್ವಭೌಮ ಪ ಗುರುರಾಜಾ ಗುರಸಾರ್ವಭೌಮ ನಿನ್ನಯ ಪಾದ ಸರಸಿಜಯುಗಕಭಿ ನಮಿಸುವೇ ಅ.ಪ ಕರುಣ ಸಾಗರನೆಂದು ಚರಣವ ನಂಬಿದೆ ಶರಣನ ಪಾಲಿಸು ಕರುಣಿಯೇ 1 ಅನ್ಯರ ಭಜಿಸದೆ ನಿನ್ನನ್ನೆ ಭಜಿಸುವೆ ಎನ್ನ ಮರೆವೊದಿದು ನ್ಯಾಯವೇ 2 ಪರಮ ಪುರುಷನೆ ನಿನ್ನನು ಚರನೆನಿಸಿ ಧರೆಯೋಳು ನರರÀನ್ನ ಬೇಡೊದು ಘನತೆಯೆ 3 ಸುರನು ಮನೆಯಲ್ಲಿ ಸ್ಥಿರವಾಗಿ ಇರಲಿನು ತಿರಕ ತಕ್ರಕೆ ಬಾಯಿ ತೆರೆವೋರೇ 4 ಬೇಡಿದ ಮನೋರಥ ನೀಡುವ - ನೀನಿರೆ ಬೇಡೆನೆ ನರರನ್ನ ನೀಡೆಂದೂ 5 ಸಂತತ ಎನ ಕಾರ್ಯ ವಂತರಿಲ್ಲದೆ ನೀ - ನಿಂತು ಮಾಡುವದು ಪುಶಿಯಲ್ಲ 6 ಕಾಲಕ್ಕೆ ಸುಖದುಃಖ - ಮೇಲಾಗಿ ಬರುತಿರೆ ಪೇಳಿ ಎನ್ನನು ನೀ ಪಾಲಿಸುವಿ 7 ನಿನ್ನ ಸೇವಿಪರಿಗೆ ಇನ್ನುಂಟೆ ಭಯ ಶೋಕ ಉನ್ನತ ಸುಖದೊಳಗಿರುವರೋ 8 ಭವ ಬನ್ನ ಬಡುವದಿದು ಎನ್ನಪರಾಧವದೇನಯ್ಯಾ 9 ಕುಚ್ಛಿತ ಜನರನ್ನ - ತುಚ್ಛ ಮಾಡದÀಲವರ ಇಚ್ಛೆಕಾರ್ಯವ ಮಾಡಿ ಸಲಿಸುವಿ 10 ಜನನಿ ಪುತ್ರಗೆ ವಿಷsÀ - ವಿನಯದಿ ನೀಡಲು ಜನಕ ತನಯನ ತಾ ಮಾರಲು 11 ವಸುಧೀಶ ವೃತ್ತಿಯ - ಕಸಕೊಂಡ ವಾರ್ತೆಯ ವ್ಯಸನದಿ ಆರಿಗೆ ಉಸರೋದೋ12 ಇದರಂತೆ ನೀ ಮಾಡು - ವದು ಏನು ನ್ಯಾಯವೊ ಪದುಮನಾಭನ ಪ್ರಿಯ ಗುರುರಾಯ 13 ಮೂಕ ಬಧಿರ ಕುರುಡಾ - ನೇಕ ಜನಕೆ ಕಾರ್ಯವಿ - ವೇಕ ಮಾಡಿ ನೀ ಸಲಹಿದಿ 14 ಬಂದು ಬೇಡಿದ - ಮಹ - ವಂಧ್ಯಜನರಿಗೆ ಸು - ಕಂದರ ನೀನಿತ್ತು ಸಲಹುವೀ 15 ಭೂತಾದಿ ಬಾಧವ - ನೀತರಿದು ಸುಖಗಳ ವ್ರಾತವ ಸಲಿಸೀ ಪಾಲಿಸುವಿ 16 ಹಿಂದಿನ ಮಹಿಮ - ದಿಂದೇನು ಎನಗಯ್ಯ ಇಂದು ಮಹಾ ಮಹಿಮೆ - ತೋರಿಸೋ 17 ಯಾತಕೆ ಈ ತೆರ ಮಾಡಿದೀ 18 ಎಲ್ಲೆಲ್ಲಿ ನಾ ಪೋದ - ರಲ್ಲಲ್ಲೆ ನೀ ಬಂದು ಎಲ್ಲ ಕಾರ್ಯಗಳನ್ನು ಮಾಡಿದೀ 19 ಇತರರಿಗಸಾಧ್ಯ ಅತಿಶಯ ಚರ್ಯವ ಯತನಿಲ್ಲದಲೆ ನೀ ಮಾಡಿದಿ 20 ಪೇಳಲೆನ್ನೋಶವಲ್ಲ ಭಾಳ - ನಿನ್ನಯ ಚರ್ಯ ಕೀಳುಮಾನವ ನಾ ಬಲ್ಲೇನೆ 21 ಜ್ಞಾನಿಗಳರಸನೆ ಮೌನಿ ಶಿರೋಮಣಿ ಧ್ಯಾನವ ಸಂತತ ನೀಡಯ್ಯಾ 22 ಸಂತತ ಎನ ಮನೊ - ಅಂತರದಲಿ ನೀ ನಿಂತು ಪಾಲಿಸೊ ಎನ್ನ ಮಹರಾಯಾ 23 ಎಂತೆಂಥ ಭಯ - ಬರೆ - ನಿಂತು ತಳೆದ್ಯೊ ದಯ - ವಂತ ನಿನಗೆಣೆಗಾಣೆನಯ್ಯಾ 24 ನಿನ್ನಲ್ಲಿ ಹರಿ ದಯ - ಉನ್ನತ ಇರಲಿನ್ನು ಎನ್ನಲ್ಲಿ ನಿನ ದಯ ಇರಲಯ್ಯ 25 ದಾತಗುರು ಜಗನ್ನಾಥ ವಿಠಲ ನಿನ್ನ ಮಾತು ಲಾಲಿಸಿದಂತೆ ಪೊರೆ ಎನ್ನಾ 26
--------------
ಗುರುಜಗನ್ನಾಥದಾಸರು
ತುರುಕರಿಲ್ಲದ ಊರೊಳು ಇರಬಾರದು ಪ ತುರುಕರು ಜಗದೊಳು ಪರಮ ಶ್ರೇಷ್ಠರು ಕಾಣೋ ಅ.ಪ. ತುರುಕರು ಕರೆದರೆ ಉಣಬಹುದು ಉಡಬಹುದುತುರುಕರಿಂದಲಿ ಜಗಕೆ ಪರಮ ಸೌಖ್ಯಾ ||ತುರುಕರ ಸೇವೆ ಮಾಡಿದ ಮಾನವೋತ್ತಮನುಎರಡೊಂದು ಋಣದಿಂದ ಮುಕ್ತನಾಹಾ 1 ತುರುಕರಾ ನಿಂದಕನು ಪರಮ ದುಃಖಿಯು ಸಿದ್ಧತುರುಕರ ಅರ್ಚಿಸಿದವಗೆ ಪರಮ ಪದವೀ ||ತುರುಕರಿಗೆ ಗ್ರಾಸವಿತ್ತವನ ಫಲಕೆಲ್ಲು ಸರಿಗಾಣೆಸರಿಗಾಣೆ ಧರೆಯೋಳು ಅವನೆ ಧನ್ಯಾ 2 ಪತಿ ಬೈಗು ಬೆಳಗೂ ||ತುರುಕರಾ ಪಾಲ ಶ್ರೀ ಗೋಪಾಲಕೃಷ್ಣನ್ನಸ್ಮರಣೆ ಮಾಡುತಲಿರೆ ಮೋಹನ್ನ ವಿಠಲ ಒಲಿವಾ 3
--------------
ಮೋಹನದಾಸರು
ಸೇರಿ ಸುಖಿಸು ಮಾನವ ಗುರು ಚರಣ ಸರೋಜವ ಪ ಸೇರಿದ ಶರಣರ ಘೋರ ಪಾತಕವೆಂಬ ವಾರಿಧಿ ಭವಕೆ ಸಮೀರ ಜಗನ್ನಾಥ ಸೂರಿವರ್ಯ ದಾಸಾರ್ಯರಂಘ್ರಿಯನು 1 ತಾರತಮ್ಯವ ತಿಳಿಯದೆ ಕಲಿಯುಗದಿ ಮುಕ್ತಿ- ದಾರಿಕಾಣದೆ ಭವದಿ ಬಿದ್ದ ಜ- ನರುದ್ಧಾರ ಮಾಡಲು ದಯದಿ ಬ್ಯಾಗವಾಟದಿ ನರಸಿಂಗಾಖ್ಯ ವಿಪ್ರಗಾರ ದೋಳುದ್ಭವಿಸಿ ಚಾರು ಕಥಾಮೃತ ಸಾರವ ಧರೆಯೋಳು ಬೀರಿದಂಥವರ 2 ಮೇದಿನಿಯೊಳು ಚರಿಸಿ ವಾಕ್ಯಾರ್ಥದಿ ಬಹು ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ ಬೋಧ ಮತಾಬ್ಧಿಗೆ ಶಶಿನೃಪ ಮಾನ್ಯರೆನಿಸಿ ಶ್ರೀದ ಪ್ರಹ್ಲಾದನನುಜ ಸಹ್ಲಾದರೆ ಇವರೆಂದು ಸಾದರ ಬಿಡದ ಪಾದಪಂಕಜಾರಾಧಕರಿಗೆ ಸುರಪಾದರೆನಿಪರ 3 ಕ್ಷೋಣಿ ವಿಬಂಧ ಗಣದಿ ಸೇವೆಯಗೊಂಡು ಮಾನವಿ ಎಂಬ ಕ್ಷೇತ್ರದಿ ಮಂದಿರ ಮಧ್ವ ಸ್ಥಾಣುವಿನೊಳು ಮುದದಿ ಕಾರ್ಪರವೆಂಬ ಕಾನನದಲ್ಲಿ ಕೃಷ್ಣವೇಣಿ ಕುಲದಿ ಮೆರೆವ ಶ್ರೀನಿಧಿ ನರಪಂಚಾನನಂಘ್ರಿಯುಗ ಧ್ಯಾನದಿ ಕುಳಿತ ಮಹಾನುಭಾವರನು 4
--------------
ಶ್ರೀನಿಧಿವಿಠಲರು