ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಘವೇಂದ್ರ ರಾಯರೆಂಬೋ ಮಹಾಯೋಗಿವರರ ನೋಡೈ ಪ ಭಾಗವತರು ಶಿರಬಾಗಿ ಕರೆಯಲತಿವೇಗದಿ ರಥದೊಳು ಸಾಗಿಬರುವ ಶ್ರೀ ಅ.ಪ. ಮಿನಗುವ ಘನವಾಹನಗಳ ರಥ ಶೃಂಗರವೋ ಕರದೊಳುಕನಕಛಡಿ ಕೊಡಿಗಳನುಪಮ ಭಾರವೊಅನಿಳ ನಿಗಮದಿ ನಿಪುಣ ಸುಜನರ ಪರವಾರವೋ ಪರಸ್ಪರಪಣದ ವೇದ ಘೋಷಣ ಸುಸ್ವರ ಗಂಭೀರವೋಘನ ಗುಣ ಗಣಮಣಿ ಮುನಿರಾಯನ ಮನದಣಿಯ ಪಾಡಿ ಕುಣಿಕುಣಿದಾಡಿ ಶಿರವಮಣಿಸುವರೋ ಗುಣವೆಣಿಸುವರೋ ದ-ಕ್ಷಿಣದಿಂ ತೆರಳಿ ವರುಣನ ಬೀದಿಯೊಳು 1 ಧರಣಿ ಸುರವರನಿಕರ ಕುಮುದೋದಯ ಚಂದ್ರನ ಮದ (ನ) ದು-ರ್ಧರ ದ್ವಿರದನ ತೆರಸಿ ಮೆರೆದ ಅಪ್ರತಿಮ ಮುನೀಂದ್ರನಸರಸ ಸುಧಾ ಪರಿಮಳ ಬೆರೆದ ಸುಗುಣಸಾಂದ್ರನ ಧರೆಯೊಳುಸಿರಿ ವಿಜಯೀಂದ್ರರ ಕುವರನೆನಿಪ ಸುಧೀಂದ್ರನಸರಸಿಜ ಸಂಭವ ಶರಣ್ಯ ಸುಂ-ದರ ನಿಜಾಂಘ್ರಿ ಭಜಕರ ಭಾಗ್ಯೋದಯಸುರರ ಸುರಭಿಗೆ ಸಮರೆಂದು ಸಾರಿ ಡಂಗುರ ಹೊಯಿಸುತ್ತ ಉತ್ತರ ಬೀದಿಯೊಳು 2 ವೆಗ್ಗಳ ವಾದ್ಯಗಳ ಸುವಾದ್ಯವೋ ಆರುತಿಯಬೆಳಗುವರು ಹಗಲ ದೀಪಗಳಗಾಧವೋಇಳೆಯೊಳು ಜನುಮ ಸಫಲವೆಂಬುವರ ವಿನೋದವೋ ಹಾಸ್ಯದಲಲಿನೆಯರಡಿ ಘಿಲಘಿಲಕೆಂಬುವ ನಟನ ಭೇದವೋಭಳಿರೆ ಭಳಿರೆ ಭಜಿಸುವರ ಭಕುತಿಬಲಿಗೊಲಿದ ಇಂದಿರೇಶನ ಕರದರಗಿಳಿಯೊ ನಳಿಯೊ ನಳಿನಾಂಘ್ರಿಯುಗದಿನಲಿಯುತ ಸುರರಾಜನ ಬೀದಿಯೊಳು 3
--------------
ಇಂದಿರೇಶರು
ಕೃಷ್ಣೇತಿ ಮಂಗಳಂ ದಿವ್ಯನಾಮ ಪಇಷ್ಟರಿಂದಲಿ ಭವಬಂಧನನಷ್ಟವಾಗಿ ಹೋಹುದೋ ಅ.ಪನಾರದಮುನಿ ತಾನು ನರಕ ಪಟ್ಟಣಕೆ ಹೋಗಿವಾರೀಜನಾಭ ಎಂದು ಒದರಿದಾಗ ||ಘೋರ ಪಾತಕವೆಲ್ಲ ದೂರವಾಗಿ ಹೋಯ್ತುಸೂರೆಯಾಯಿತು ಸ್ವರ್ಗಲೋಕವೆಲ್ಲ 1ಅಜಮಿಳನು ಈ ನಾಮ ಅಂತ್ಯಕಾಲಕೆ ಸ್ಮರಿಸೆನಿಜಪದವಿಯೈದಿದನು ನಿಮಿಷದಲಿ ||ಭುಜಗಭೂಷಣನು ತಾ ಶ್ರೀರಾಮನಾಮವನಿಜಕಾಂತೆಯನು ಕರೆದು ಉಪದೇಶವಿತ್ತ 2ಪಂಚಪಾಂಡವರನು ಪರಿಪಾಲಿಸಿತು ನಾಮಪಾಂಚಾಲೀ ಮೊರೆಕೇಳಿ ಪೊರೆಯಿತು ನಾಮ ||ವಂಚನೆ ಮಾಡಿ ಕೌರವರ ಮಡುಹಿ ನಿ -ಶ್ಚಿಂತೆಯಲಿ ಪಾಂಡವರ ಪಟ್ಟಗಟ್ಟಿದ ನಾಮ 3ಸರಸಿಯೊಳಗೆ ಮುಳುಗಿ ಅರಿಯ ಬಾಧೆಗೆ ಸಿಲುಕಿಕರಿರಾಜ ಹರಿಯೆಂದು ಮೊರೆಯಿಡಲು ||ತ್ವರಿತದಿಂದಲಿ ಬಂದು ಕರಿಯನುದ್ಧರಿಸುತಕರಿರಾಜವರದನೆಂದೆನಿಸಿಕೊಂಡ ನಾಮ 4ಧ್ರುವ ತನ್ನ ತಂದೆ ತೊಡೆಯ ಮೇಲೇರಲು ಪೋಗೆಅವನ ಮಲತಾಯಿ ಗರ್ಜಿಸಿದಳಾಗ ||ಧ್ರುವ ಸುಖಬಿಟ್ಟು ವನಕೆ ಪೋಗಿ ತಪ ಮಾಡಿಸವಿಯಾದಚಲಪದವ ಪಡೆದನಾಗ 5ಹಿರಣ್ಯಕಶಿಪು ತನ್ನ ಮಗನ ಬಾಧೆಯ ಪಡಿಸೆಗಿರಿಯ ಶಿಖರದಿಂದೀಡಾಡಲು ||ನರಹರೆ ನರಹರೆ ರಕ್ಷಿಸೆಂದನ್ನಲುನರಸಿಂಹ ರೂಪದಿಂದವನ ಪಾಲಿಸಿದ 6ಕಂದನ ಅಪರಾಧವ ಕೇಳದೆ ನೃಪನು ತಾನಂದತಿ ದಾರುಣ ಕಡಹದೋಳು ಕೆಡಹೆ ||ಅಂದು ಸುಧನ್ವ ಶ್ರೀಕೃಷ್ಣನೆಂದೆನಲಾಗಿಬೆಂದು ಕಂದಿವ ಎಣ್ಣೆ ತಣ್ಣೀರಾಯಿತು 7ಅಸುರ ಬಾಧೆಗೆ ಸಿಲುಕಿ ಅಶೋಕವನದಲಿಶಶಿಮುಖಿ ಬೀಜಮಂತ್ರವ ಜಪಿಸೆ ||ಅಸುರನ ಕೊಂದು ಅಶೋಕವನವ ಬಿಡಿಸಿವಸುಧೀ ಸುತೆಯ ಸಲಹಿದ ರಾಮನಾಮ 8ಪರಿಪರಿ ಭಕ್ತರನು ಪಾಲಿಸಿತು ಈ ನಾಮಪರಮ ಮಂಗಲವು ಪಾವನವು ಈ ನಾಮ ||ಸುರರು ಬ್ರಹ್ಮಾದಿಗಳು ಸ್ರೋತ್ರ ಮಾಡುವ ನಾಮಧರೆಯೊಳುಸಿರಿಪುರಂದರ ವಿಠಲ ನಾಮ9
--------------
ಪುರಂದರದಾಸರು