ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆತಿರಲಾರೆ ಮನಸಾರೇ ಹರೇ ಪ ಮರೆತಿರಲಾರೆ ನಾ ಮಹಿತಚಾರಿತ್ರನ ಸರಸಿಜಪತ್ರ ನೇತ್ರನ ಅ.ಪ ಬಗೆಬಗೆ ರತಿಯಲಿ ಜಗವನು ಮೋಹಿಪ ಸುಗುಣನ ಜಗತ್ಪ್ರಾಣನ 1 ಚೇತನರಿಗೆ ಸುಖದಾತನ ದುಃಖ ವಿ ಘಾತನ ಲಕ್ಷ್ಮೀನಾರಾಯಣನ 2 ದಾಸರ ಹೃದಯನಿವಾಸನ ದೋಷನಿರಾಸನ ಶ್ರೀನಿವಾಸನ 3 ವೆಂಕಟರಮಣನ ಕಿಂಕರಶರಣನ ಸಂಕಟಹರ ನಿಷ್ಕಳಂಕನ 4 ಮಾನಿನಿಯ ಅಭಿಮಾನವ ಕಾಯ್ದನ ದೀನರ ಹರ್ಷನಿಧಾನನ 5 ರಾಮನ ದೈತ್ಯವಿರಾಮನ ಪಾವನ ನಾಮನ ಹೃದಯಾರಾಮನ 6 ಧರೆಯೊಳುತ್ತಮಪುಲಿಗಿರಿಯೊಳು ನೆಲಸಿಹ ವರದ ವಿಠಲವರದನ ದೇವನ 7
--------------
ವೆಂಕಟವರದಾರ್ಯರು