ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಟ್ಟಿದ್ದು ಫಲವೇನು ಮನುಜನು | ಮುಟ್ಟದೆ ಗುರುಪದವನು ಪ ಬೀರಿ ವಾಗ್ಜಾಲ ಆರಿಗೆ ಸೋಲಾ | ಮೆರೆದನು ಬಹಳ ಮರೆದ ಸ್ಮರಣ ಕೀಲಾ 1 ಪರರುಪಕಾರಾ ಬಾರದಾ ಶರೀರಾ | ಸಿರಿಗಂಧ ಸಾರಾ ಧರಿಸಿದರೇನು ಪೂರಾ 2 ಹವಣಿಸಿಗಾಢಾ ಶ್ರವಣವ ಮಾಡಾ | ಕುಂಡಲ ನೋಡಾ 3 ತನ್ನ ತಾ ಮರೆವಾ ಅನ್ಯರಾ ಜರಿವ | ಮನ್ನಣೆ ತೋರುವಾ ಕನ್ನಿಯ ಪರಿಲಿರುವಾ 4 ನಂದನ ಪ್ರಾಣಾ ತಂದೆ ಮಹಿಪತಿ ಜನಾ | ಹೊಂದನು ಚರಣಾ ಮಂದಗಾಣದ ಕೋಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿನ ಒಲುಮೆಯು ಆಗುವ ತನಕ |ದೊರೆಯದಣ್ಣ ಮುಕುತಿ ಪ.ಪರಿಪರಿ ಶಾಸ್ತ್ರವನೇಕವನೋದಿ |ವ್ಯರ್ಥವಾಯಿತು ಭಕುತಿ ಅಪಆರು ಶಾಸ್ತ್ರಗಳನೋದಿದರೇನು |ಮೂರಾರು ಪುರಾಣವ ಮುಗಿಸಿದರೇನು ||ಸಾರಿ ಸಜ್ಜನರ ಸಂಗವ ಮಾಡದೆ |ಧೀರನಾಗಿ ತಾ ಮೆರೆದರೇನು ? 1ಕೊರಳೊಳು ಮಾಲೆಯ ಧರಿಸಿದರೇನು |ಕರದಲಿ ಜಪಮಣಿ ಎಣಿಸಿದರೇನು ||ಮರುಳನಂತೆ ತಾ ಶರೀರಕೆ ಬೂದಿಯ |ಒರಸಿಕೊಂಡು ತಾ ತಿರುಗಿದರೇನು 2ನಾರಿಯರ ಸಂಗವ ಅಳಿದರೇನು|ಶರೀರಕೆ ದುಃಖವ ಪಡಿಸಿದರೇನು|ಮಾರಯ್ಯ ಶ್ರೀ ಪುರಂದರವಿಠಲನ |ಮರೆಯದೆ ಮನದೊಳು ಬೆರೆಯುವ ತನಕ 3
--------------
ಪುರಂದರದಾಸರು