ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ತುಳಸೀ ದೇವಿ ಪ್ರಾರ್ಥನೆ)* ಮದ್ದಾನಿಕ್ಕಿದೇನೆ ಹರಿಗೆ ಮುದ್ದು ತುಳಸಾ ದೇವಿ ಶುದ್ಧಾಮನದಿ ಪೂಜಿಸುವರಾ ಸಿದ್ಧವಾಗಿ ಕಾಯುವಿ ಪ. ಕಮಲ ಮಲ್ಲಿಕಾದಿ ನಾನಾ ಸುಮನ ತತಿಗಳಿಂದಾ ನಿತ್ಯ ನಮಿಸೆ ಭಕ್ತಿಯಿಂದಾ ಅಮಿತ ಮಹಿಮ ನಿನ್ನ ಹೊರತು ಕ್ಷಮಿಸನು ಮುಕುಂದಾ ಭ್ರಮಿತನಾದ ನಿನ್ನ ಮೇಲೆ ಕಮಲೇಶ ಗೋವಿಂದ 1 ಆದಿ ಲಕ್ಷ್ಮಿದೇವಿಯನ್ನು ಉರದೊಳಿಟ್ಟು ನಿನ್ನ ಪಾದದಲ್ಲಿ ಧರಿಸಿದನೆಂದಾದಿಪುರಷನನ್ನ ಬೋಧಿಸಿ ಕರ್ಣದಲ್ಲಿ ಮಸ್ತಕಾಧಿರೋಹವನ್ನ ಸಾಧಿಸಿ ತದ್ಭಕ್ತಜನರಿಗಾದಿ ಬಹು ಪಾವನ್ನ 2 ಸಂತತ ಹನ್ನೆರಡು ಕೋಟಿ ಸ್ವರ್ಣಪುಷ್ಪದಿಂದಾ- ನಂತಾಭವದಿ ಪೂಜಿಸುವುದಕ್ಕಿಂತಲಧಿಕಾನಂದಾ ಕಂತುಜನಕಗಹುದು ಕೋಮಲಾಂಶದಳಗಳಿಂದಾ ಇಂತು ಶೇಷಗಿರೀಶಗಾದಿ ಕಾಂತೆ ಮೋಹದಿಂದಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆವಾವ ಬಗೆಯಿಂದ ಹರಿಗರ್ಪಿಸೊ ಭಾವ ಶುದ್ಧನಾಗಿ ಮುಖ್ಯತ್ವ ವಹಿಸದೆ ಪ ನೋಡುವ ನೋಟಗಳು ಹರಿಯೆ ನೋಡಿದನೆನ್ನಿ ಆಡುವ ಮಾತುಗಳು ಹರಿಯೆ ಆಡಿದನೆನ್ನಿ 1 ನಡಿವ ನಡಿಗೆ ಎಲ್ಲ ಹರಿಯೆ ನಡೆದನೆನ್ನಿ ಕೊಡುವ ದಾನಗಳು ಹರಿಯೆ ಕೊಟ್ಟನೆನ್ನಿ ಒಡನಾಡುವ ಲೀಲೆ ಹರಿಯೆ ಆಡಿದನೆನ್ನಿ ಪಿಡಿವ ಚೇಷ್ಟೆಗಳೆಲ್ಲ ಹರಿಯೆ ಪಿಡಿದನೆನ್ನಿ 2 ಕೇಳುವ ಶಬ್ದಗಳು ಹರಿಯೆ ಕೇಳಿದನೆನ್ನಿ ಹೇಳುವ ವಿಧವನಿತು ಹರಿಯೆ ಎನ್ನಿ ಮಾಲೆ ಧರಿಸುವುದು ಹರಿಯೆ ಧರಿಸಿದನೆನ್ನಿ ಮೇಲು ಸುಖ ಬಡುವುದು ಹರಿಯೆ ಎನ್ನಿ3 ಕೊಂಡ ಎನ್ನಿ ಭೂಷಣವಿಡುವುದು ಹರಿಯೆ ಎನ್ನಿ ಲೇಸು ಬಯಸುವುದು ಹರಿಯೆ ಬಯಿಪನೆನ್ನಿ ಗ್ರಾಸ ಮೆಲುವದೆಲ್ಲ ಹರಿಯೆ ಎನ್ನಿ 4 ಸತಿಯ ಕೂಡುವದೆಲ್ಲ ಹರಿಯೆ ಕೂಡಿದನೆನ್ನಿ ಹಿತವಾಗಿಪ್ಪದು ಹರಿಯೆ ಎನ್ನಿ ಸುತರ ಪಡೆದಾದಲ್ಲಿ ಹರಿಯೆ ಪಡೆದನೆನ್ನಿ ಪ್ರತಿಕೂಲವಾಗುವುದೆ ಹರಿಯೆ ಎನ್ನಿ 5 ಬಳಗ ಸಾಕುವುದೆಲ್ಲ ಹರಿಯೆ ಸಾಕಿದನೆನ್ನಿ ಸುಲಭನಾದರೆ ಹರಿಯಾದನೆನ್ನಿ ಗಲಭೆ ಮಾಡುವುದೆಲ್ಲ ಹರಿಯೆ ಮಾಡಿದನೆನ್ನಿ ಸುಳಿದಾಡುವುದೆಲ್ಲ ಹರಿಯೆ ಎನ್ನಿ 6 ಏನೆಂಬೆ ಹರಿ ಲೀಲೆ ನಿರ್ದೋಷ ನಿಸ್ಸಂಗ ಅನಂತಕಾಲಕ್ಕೂ ಎಲ್ಲಿದ್ದರು ಕಾಯ ವಿಜಯವಿಠ್ಠಲರೇಯ ನಾನಾ ವ್ಯಾಪಾರಗಳ ಮಾಳ್ಪನೆನ್ನಿ 7
--------------
ವಿಜಯದಾಸ
ಶರಣು ನಿನಗೆ ಶರಣೆಂದೆನೊ ಹರಿಯೇ ಕರುಣಿಸಿ ಕಾಯೋ ಎನ್ನಧೊರಿಯೆ ಪ ಪರಮಕೃಪಾಕರ ಪಾವನ ನರಹರಿ ಪಾಲಿಸೊ ಎನ್ನನಿ--- ಶರಣೆಂದ ವಿಭೀಷಣನ ಆದಿಭಕ್ತರ ಶ್ರಮ ಪರಿಹರಿಸಿದಂಥ ಶ್ರೀಧರಾ 1 ಭಕ್ತಾ ಪಾಂಡವ ಪಕ್ಷಾ ಬಲಿಯ ಭೂಮಿಯ ಭಿಕ್ಷಾ ಯುಕ್ತಿಲಿ ನೀ ಸಾಧಿಸಿದ ಯೋಧನೆ ಮುಕ್ತಿದಾಯಕ ದೇವ ಮುರಹರ ಮಾಧವನೆ ಮೌಕ್ತಿಕ ಮುಕುಟ ಧರಿಸಿದನೆ 2 ಸುಂದರ ಮೂರುತಿ-----ಜಗತ್ಪತಿ ಇಂದಿರಾ ಹೃದಯಾನಂದನೆ ಬಂದ ಭಕ್ತರ ಬಿಡದೆ ಅಂದಿಗೆ ನೀನೆ ಪೊರೆದೆ----ಹೆನ್ನ ವಿಠ್ಠಲಾ ಸಲಹೋ ಎನ್ನ 3
--------------
ಹೆನ್ನೆರಂಗದಾಸರು
ಹೊಡೆಯಿರೋ ನಗಾರಿ ಗಡಗಡನೆ ಮೂರು ಬಾರಿ ಪ ದೃಢಭಕ್ತ ಸಮೂಹವ ಸಿರಿ ಯೊಡೆಯನು ಕೈಬಿಡನೆಂದು ಅ.ಪ ವಿಧಿಸೃಷ್ಟಿಯೊಳಿಲ್ಲದರೂ- ಪದಿ ಬಂದು ನಖದಿ ಅಸುರನ ಉದರ ಬಗೆದು ಕರುಳ ತೆಗೆದು ಮುದದಿ ಗಳದಿ ಧರಿಸಿದನೆಂದು 1 ಪರರು ತನ್ನ ಹಿಂಸೆಗೈ ದರು ಸಹಿಸಿ ಸಮಾಧಾನದಿ ಸಿರಿಯರಸನ ನೆನೆವಗೆ ಭಯ ವಿರದಿರದಿರದಿರದೆಂದು 2 ದ್ವೇಷಿಗಳನುದಿನ ಯೋಚಿಪ ಮೋಸಗಳನು ತಿಳಿಯುತ ಲ- ಕ್ಷ್ಮೀಶನು ಪರಿಹರಿಸಿ ತನ್ನ ದಾಸರಿಗೊಶವಾಗುವನೆಂದು 3 ತಿಳಿಯಗೊಡನು ಸತ್ಯವಿದೆಂದು 4 ಕಾಮಾದಿಗಳನು ಗೆದ್ದು ಮ- ಹಾಮಹಿಮರೆನಿಸುವರ ಯೋಗ- ಕ್ಷೇಮವನ್ನು ವಹಿಸಿಹ ಗುರು- ರಾಮವಿಠಲ ನರಹರಿಯೆಂದು 5
--------------
ಗುರುರಾಮವಿಠಲ