ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧೂಪವಿದು ದೇವ ನೀನಾಘ್ರಾಣಿಸುತಾಪಹರವಾಗಿರುವ ಸೂಕ್ಷ್ಮಗಂಧದ ದಿವ್ಯ ಪಪಾವಕನು ನಿನ್ನ ಮುಖದಲಿ ಜನಿಸಿ ಬ್ರಹ್ಮಾದಿದೇವತಾಮುಖನಾಗಿ ಲೋಕಗಳನುಪಾವನವ ಮಾಡುತ್ತ ದಶವಿಧದ ದ್ರವ್ಯವನುತಾ ವಹಿಸಿ ನಿನ್ನ ಪಾದದ ಮುಂದೆ ನಿಂದಿಹನು 1ಸೋಮಷೋಡಶ ಕಲೋತ್ಪನ್ನ ವಾಗಿಹ ಧೂಪಸೋಮ ನಿನ್ನಯ ಮನದಿ ಜನಿಸಲೀ ಧೂಪಸೋಮನನು ಪುನಹ ಮನದಲಿ ನಿಲಿಸುತಿಹ ಧೂಪಕಾಮಿತಾರ್ಥಪ್ರದವು ಭಾವಿಪರಿಗೀ ಧೂಪ 2ಪರಿಪೂರ್ಣನಾಗಿ ಜಗದೊಳ ಹೊರಗೆ ನೆಲಸಿರುತಪರಿಪರಿಯ ಪೂಜೆಗಳ ತೆಗೆದುಕೊಳುತಶರಣಾಗತರ ಸಲಹಿ ಮಹಿಮೆಗಳ ಬೀರುತ್ತತಿರುಪತಿಯಲಿರುತಿರುವೆ ವೆಂಕಟೇಶ್ವರನೆನುತ 3 ಓಂ ನಂದವ್ರಜ ಜನಾನಂದಾಯ ನಮಃ
--------------
ತಿಮ್ಮಪ್ಪದಾಸರು
ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯಅಚ್ಯುತನ ನಾಮವನು ನೆನೆದು ಸುಖಿಯಾಗೊ ಪ ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನುಗಳಿಸದಿರು ನೀ ದುರಿತರಾಶಿಗಳನುನಳಿನನಾಭನ ದಿವ್ಯ ನಾಮವನು ನೆನೆನೆನೆದುನೆಲೆಯಾದ ಪರಮ ಪದವಿಯ ಪಡೆಯೊ ಮನವೆ 1 ನೋಡದಿರು ಪರಸತಿಯ ಕೂಡದಿರು ದುರ್ಜನರಆಡದಿರು ಮಾತುಗಳ ಗರ್ವದಿಂದಬೇಡದಿರು ಕೈಯ ಹಿಂದೆಗೆವ ಲೋಭಿಯನು, ಕೊಂ-ಡಾಡದಿರು ಬೀದಿಗೂಳುಂಬ ದೈವಗಳ 2 ನಾನಾ ಜನ್ಮದಿ ಬಂದ ನಾಟಕದ ಬೊಂಬೆಯಿದುಮಾನಕ್ಕೆ ಮೆಚ್ಚಿ ನೀ ಮರುಳಾಗದೆಜಾಣತನದಿಂ ಕಾಗಿನೆಲೆಯಾದಿಕೇಶವನಮಾನಸದಲಿ ನೆನೆದು ಸುಖಿಯಾಗು ಮನುಜ 3
--------------
ಕನಕದಾಸ
ಪೇಳ ಸುಲಭವೆ ಜಗದಿ ಕಾಲಮಹಿಮೆಯ ನಮ್ಮ ಮೂಲ ಪುರುಷನ ದಿವ್ಯ ಲೀಲೆಯಲ್ಲವೆ ಎಲ್ಲ ಅ.ಪ ಮುಂದೆ ಸ್ತುತಿಪರು ಜನರು ಹಿಂದೆ ಜರಿವರು ಬಹಳ ತಂದೆ ಬಡವನ ನೀನ್ಯಾರೆಂದು ಕೇಳ್ವರು ಮನದಿ 1 ನೀಚಕೃತ್ಯವ ಮನದಿ ಯೋಚಿಸುತ್ತಲಿ ಸತತ ನಾಚಿಕೆಯನು ಪೊಂದದೆಲೆ ಯಾಚಿಸುವರು ದ್ರವ್ಯವನು 2 ಸತಿಯರೆಲ್ಲರು ಶುದ್ಧಮತಿಯ ತೊರೆಯುತ ತಮ್ಮ ಪತಿಯ ಜರಿವರು ಮುದದಿ ಇತರರನ್ನು ಕೋರುವರು 3 ಕಾಲ ಕಳೆದು ಖ್ಯಾತಿ ಪಡೆವರು ಬಹಳ ಸೋತು ತಮ್ಮ ದ್ರವ್ಯಗಳ ಪಾತಕಗಳ ಮಾಡುವರು4 ಸ್ನಾನ ಜಪತಪ ಪೂಜೆ ಏನನರಿಯರು ದುಷ್ಟ ಪಾನಗಳನು ಸೇವಿಸುತ ಮಾನ ದೂರ ಮಾಡುವರು 5 ಹರಿಯ ಮಹಿಮೆಗಳನ್ನು ಅರಿಯದಂತೆ ಸಂತತವು ಧರೆಯ ದುಷ್ಟ ಭೋಗದಲಿ ಕುರಿಗಳಂತೆ ಬೀಳುವರು 6 ಘನ್ನ ಧರ್ಮಗಳೆಲ್ಲ ಶೂನ್ಯವಾಗಿರೆ ಸುಪ್ರ ಸನ್ನ ಹರಿಯ ಸೇವಕರು ಇನ್ನು ಇರುವುದಚ್ಚರಿಯು7
--------------
ವಿದ್ಯಾಪ್ರಸನ್ನತೀರ್ಥರು