ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರಾಕ್ಷಿ ಸಲಹೆ ಬಂದು | ಸಂರಕ್ಷಿಸಿ ಇಂದ್ರಾಕ್ಷಿ ಸಲಹೆ ಬಂದು ಪ ಚಂದ್ರಶೇಖರನಂಕ ಸಂಸ್ಥಿತೆ ಚಂದ್ರ ಬಿಂಬಾನನೆ ದಯಾನ್ವಿತೆ ಇಂದ್ರ ಮುಖ ಸುರಗಣ ಸಮರ್ಚಿತೆ ತಂದ್ರ ಪರಿಹೃತೆ ಭಕ್ತತತಿ ಹಿತೆ ಅ.ಪ. ಅರಿಯದ ತರಳನಮ್ಮ | ನಿನ್ನಂಘ್ರಿ ಸೇವಿಪ ಮೆರೆವ ಭಾಗ್ಯವ ನೀಡಮ್ಮ | ಮರೆಯದಿರಮ್ಮಾ ಶರಣ ಜನರನು ಪೊರೆವೆನೆನ್ನುತ ಕರದಿ ಪಿಡಿದಿಹೆ ಬಿಡದೆ ಉನ್ನತ ದರವಿಯನು ಸಿದ್ದಾನ್ನ ಪಾತ್ರೆಯ ಕರುಣಿ ತ್ರಿಜಗಜ್ಜನನಿ ಸುಗುಣಿಯೆ 1 ನಿತ್ಯಾನಂದಿನಿ ಮೋಹಿನಿ | ಸುಗತಿ ಪ್ರದಾಯಿನಿ ಭೃತ್ಯಾನುಗ್ರಹ ಕಾರಿಣಿ | ಬುಧ್ಯಾಭಿಮಾನಿ ನಿತ್ಯಮಂಗಳೆ ಭೃತ್ಯವತ್ಸಲೆ ಸತ್ಯರೂಪಿಣಿ ಮೃತ್ಯುನಾಶಿನಿ ನಿತ್ಯತ್ವತ್ಪದ ಭಜಿಪ ಸಂಪದ- ವಿತ್ತು ಪಾಲಿಸೆ ಶ್ರೀ ಕಾತ್ಯಾಯಿನಿ 2 ಭೀಮಾ ಭೈರವನಾದಿನಿ | ಕುಮಾರ ಜನನಿ ಕಾಮನಿಗ್ರಹನ ರಾಣಿ | ವರವರ್ಣಿನಿ ಬ್ರಾಹ್ಮಿ ವೈಷ್ಣವಿ ಬ್ರಹ್ಮಚಾರಿಣಿ ಚಾಮುಂಡೇಶ್ವರಿ ಕೋಲರೂಪಿಣಿ ಭ್ರಮರಿ ಶಾಕಾಂಬರಿ ನೃಸಿಂಹಿಣಿ ಅಮಿತರೂಪಿಣಿ ಅಹಿತ ಮಾರಿಣಿ 3 ಸರ್ವಮಂಗಳ ಮಾಂಗಲ್ಯೆ | ಸರ್ವಾರ್ಥದೆ ಶಿವೆ ಶರ್ವನರ್ಧಾಂಗಿಯೆ | ಪರ್ವತನ ತನಯೆ ಶರ್ವಬ್ರಹ್ಮರ ವರದಿ ಕೊಬ್ಬಿ ಸು- ಪರ್ವರನು ಕಂಗೆಡಿಸೆ ದನುಜರು ಸರ್ವಶಕ್ತಳೆ ಮುರಿದು ಖಳರನು ಉರ್ವಿಭಾರವ ನಿಳುಹಿ ಪೊರೆದೌ 4 ಅಜಿತೆ ಭದ್ರದೆ ಆನಂದೆ | ನಿನ್ನನು ಬಿಡದೆ ಭಜಿಪರ ಪೊರೆವಳೆಂದೆ | ನಾನಿಂದು ಬಂದೆ ಕುಜನಮರ್ಧಿನಿ ಕುಟಿಲ ಹಾರಿಣಿ ಗಜಗಮನೆ ಗಂಭೀರೆ ಗುಣಮಣಿ ವೃಜಿನ ಪರಿಹರೆ ವಿಘ್ನಸಂಹರೆ ನಿಜ ಪದಾಂಬುಜ ಭಜಕನೆನಿಸಿ 5 ಶಿವದೂತಿ ಪರಮೇಶ್ವರಿ | ರುದ್ರಾಣಿ ಚಂಡಿಕೆ ಶಿವೆ ಭವೆ ಜ್ಞಾನೇಶ್ವರಿ | ಸೌಂದರ್ಯಲºರಿ ಭುವನ ಮೋಹಿನಿ ದೈತ್ಯನಾಶಿನಿ ತಾಪ ಜ್ವರ ನಿವಾರಿಣಿ ಕವಿಭಿರೀಡಿತೆ ದೇವ ಪೂಜಿತೆ ವಿವಿಧ ಫಲಗಳ ಒಲಿದು ಕೊಡುವಳೆ 6 ಶೃತಿ ಸ್ಮøತಿ ಶ್ರದ್ಧೆ ಮೇಧಾ | ವಿದ್ಯಾಸರಸ್ವತಿ ಧೃತಿ ಶಾಂತಿ ಕಾಂತಿ ವಾದಾ | ಎನಿಸುತ್ತ ಮೆರೆವ ವಿತತ ಮಹಿಮಳೆ ವಿಶ್ವತೋಮುಖೆ ಅತುಳ ಭುಜಬಲೆ ಭದ್ರಕಾಳಿಯೆ ಪಾವನಿ ಸತ್ವಶಾಲಿನಿ ಸತಿ ಶಿವಪ್ರಿಯೆ ನೀಡಿ ಸುಮತಿಯ 7 ಅರಿದರಾಂಕುಶ ಮುಸಲ | ಮುದ್ಗರಚಾಪ ಮಾರ್ಗಣ ಪಾಶ ಪರಶು ಘಂಟಾ ಶಕ್ತಿ ಪಾತ್ರೆಯು ವರಗದಾಭಯ ಕರದೊಳೊಪ್ಪುತ ದುರುಳರನು ಸಂಹರಿಸಿ ಸಂತತ ಸುರನರೋರಗರನ್ನು ಪೊರೆಯುವ 8 ಮಾರಿ ಮಸಣಿ ಹೆಮ್ಮಾರಿ | ಕರೆಕರೆದುಗೊಳಿಸುವ ಕ್ರೂರ ಶಾಕಿನಿ ಡಾಕಿನಿ | ಪೂತಣಿಯೆ ಮುಖರು ಘೋರ ರೂಪದಿ ಬಂದು ಪೋರರ ಗಾರುಗೊಳಿಸುತ್ತಿರಲು ತವಪದ ಸಾರಿ ನೆನೆದರೆ ತೋರಿ ಹಿಮ್ಮಡಿ ದೂರ ಸರಿವರು ಮುಗಿದು ಕರಗಳ 9 ತಾಪತ್ರಿತಯ ತಪ್ತರ | ಆಹ್ಲಾದಪಡಿಸಲು ಗೋಪತಿ ಮುಖವ ತೋರ | ಕೃಪಾಂಬುನಿಧಿಯೆ ತಾಪಸಾರಾಧಿತ ಪದಾಂಬುಜೆ ಶ್ರೀಪತಿಯ ಸೊದರಿಯೆ ನೀ ನಿಜ- ರೂಪುದೋರಲು ಪಾಪತಾಪ ಪ್ರ- ಳಾಪ ಮಾಡದೆ ರಾಪುಗೈವುದೆ 10 ದುರ್ಗಮ ಸಂಕಟದಿ | ಬಿದ್ದಿಹೆನಮ್ಮಾ ನಿರ್ಗಮ ಕಾಣೆನಮ್ಮಾ | ಉದ್ಧರಿಸಮ್ಮಾ ದುರ್ಗದಿಂತಾರಿಸುವೆ ಭಕ್ತರ ದುರ್ಗೆ ನಾಮಾಂಕಿತದಿ ಎಂಬರು ಕರವ ಸು- ಮಾರ್ಗ ತೋರಿಸೆ ದುರ್ಗೆ ಜನನಿಯೆ 11 ಸುರಾಸುರ ಸಂಗ್ರಾಮದಿ | ಮುರವೈರಿ ದಯದಿ ಸುರರು ಗೆಲ್ಲರು ಮುದದಿ | ಗರ್ವಿಸಲು ಭರದಿ ಹರಿಯ ರೂಪಾಂತರದಿ ತೃಣವನು ಧರೆಯೊಳಿರಿಸುತ ಬಲ ಪರೀಕ್ಷಿಸಿ ಸುರರು ಜಯಿಸದೆ ಮರುಳರಾಗಲು ಬರದೆ ಪರತತ್ವವನು ಕರುಣದಿ 12 ಕಿಂಕರ ಶಂಕರಿಯೆ | ಶತ್ರು ಭಯಂಕರೆ ಓಂಕಾರೆ ಹೂಂಕಾರೆಯೇ | ಸ್ಮಿತ ಅಟ್ಟಹಾಸೆ ಪಂಕಜಾಂಬಕಿ ರಕ್ತನಯನ ಕ ಳಂಕಮುಖಿ ಅತ್ಯುಗ್ರವದನೆ ನಿ ಶ್ಯಂಕ ಬಿಂಕದಿ ಬಂದೆ ಕಾಲದಿ ಮಂಕುಹರೆ ಸಂಕಟದೆಯೆನಿಸುವೆ 13 ರಕ್ತಬೀಜಾಸುರನ | ರಕ್ತವನು ಹೀರಿದ ಶಕ್ತಳೆಂದೆನುತ ನಿನ್ನ | ನಂಬಿದೆನು ಎನ್ನ ಉಕ್ತಿಲಾಲಿಸಿ ಒತ್ತಿ ವಿಘ್ನವ ಇತ್ತು ಜ್ಞಾನ ವಿರಾಗ ಭಕ್ತಿಯ ಮುಕ್ತಪಾವನ ಮಾಡಿ ಸಂತತ ಮುಕ್ತಿಕಾಂತನ ಸ್ಮರಣೆ ಪಾಲಿಸಿ14 ಮಹಿಷನ ಸಂಹರಿಸಿ | ಮಹಿಯನ್ನು ಪಾಲಿಸಿ ಮಹಿಸೂರೆ ನೆಲೆಯೆನಿಸಿ | ಪತಿಸಹಿತವಸಿಸಿ ಮಹಿಪತಿಗಳಾದಿಯಲಿ ಸರ್ವರಿಂ ಅಹರಹರ್ ಸೇವೆಯನು ಕೊಳುತ ಮಹಿಮೆ ತೋರುತಿರುವೆ ಪ್ರತಿದಿನ ಅಹಹ ಬಣ್ಣಿಸಲೊರೆವೆ ನರರಿಗೆ 15 ಚಂಡ ಮುಂಡರ ಮರ್ದಿಸಿ | ಚಾಮುಂಡಿಯೆನಿಸಿ ಖಂಡೆಯವನು ಝಳಪಿಸಿ | ಪುಂಡರನು ವಧಿಸಿ ಖಂಡ ಪರುಶುವಿನಂತೆ ಅದÀಟರ ರುಂಡಮಾಲೆಯ ಕೊಂಡು ಭೂತಗ- ಳ್ಹಿಂಡು ಡಿಂಡಿಮ ಡಂಡೆಣಿಸಲು ತಾಂಡವಾಡಿದ ಚಂಡಕಾಳಿಯೆ 16 ಶುಂಭ ನಿಶುಂಭರನು | ಕುಂಭಿಣಿಗೆ ಕೆಡಹೆ ಸುರರು | ಕುಂದುಭಿಯ ಹೊಡೆಯೆ ಡೊಂಬ ಕೊಳಾಸುರನ ಸೂಕರ ಡಿಂಬ ತಾಳುತ ಸೀಳಿ ದೈತ್ಯ ಕ- ದಂಬವೆಲ್ಲಕೆ ಕಂಭ ಸಂಭವ ನಿಂಬು ರೂಪವ ನಂಬಿ ತೋರಿದೆ 17 ಸಕಲ ಶಕ್ತ್ಯಾತ್ಮಕಳೆ | ಭುವಿಯಲಿ ಈ ಪರಿ ಪ್ರಕಟಳಾಗುತ ಖಳರ | ಕಟಕವನು ತರಿದು ಭಕುತವರ್ಗಕೆ ಬಂದ ಸಂಕಟ ನಿಕರ ಪರ್ವತ ವಜ್ರವೆನಿಸುತ ಮುಕುರದಂದದಿ ಪೊಳೆದು ಪೊರೆಯುವೆ ವಿಕಟನಾಮದಿ ನಿಕಟದಿರುತ 18 ಜ್ಞಾನೇಚ್ಚಾ ಕ್ರಿಯ ರೂಪಳೆ | ನಿನ್ನನು ನುತಿಸಿ ಆನತಿಸಿದವರಿಗೆ | ಪ್ರಸನ್ನಳಾಗಿ ಮಾನ ಸತಿಸುತ ಧ್ಯಾನ ಧನಮನೆ ಜ್ಞಾನ ಭಕ್ತಿ ವಿರಕ್ತಿ ಮುಂತವ ದೇನು ಬೇಡಲು ಕೊಡುವೆ ನಿನ್ನ ಸಮಾನರಾರನು ಕಾಣೆ ಜಗದೊಳು 19 ಅಂಗನಾಮಣಿಯರಿಗೆ | ಮಾಂಗಲ್ಯವೃದ್ಧಿಗೆ ಮಂಗಳಗೌರಿಯೆಂದು | ಪ್ರಸಿದ್ಧಿಗೊಂಡು ರಂಗುಮಾಣಿಕದ್ಹಸೆಯ ಪೀಠದಿ ಮಂಗಳದ್ರವ್ಯಗಳಿಂದೊಪ್ಪುತ ಮಂಗಳೇಕ್ಷಣದಿಂದ ಕುಳಿತಿಹೆ 20 ವೈದ್ಯ ಜ್ಯೋತಿಷ ಪುರಾಣ | ವೇದಾಂತ ಮುಂತಹ- ಗಾಧ ಗ್ರಂಥಗಳನು | ನಿಜಪತಿಯ ಮುಖದಿ ಸಾಧಿಸಿದೆ ಸಜ್ಜನರಿಗೋಸುಗ ಬೋಧಿಸಿದೆ ಗುಹ ಗಣಪ ಮುಖರಿಗೆ ಆದಿದೇವನ ಒಲಿಮೆ ಪಡೆಯಲು ಹಾದಿ ತೋರಿದೆ ಹೇ ದಯಾನಿಧೆ 21 ಅಷ್ಟಬಾಹುಗಳಿಂದಲಿ | ಅಷ್ಟಾಯುಧಂಗಳ ದಿಟ್ಟತೆಯಿಂ ಧರಿಸಿ | ಅಷ್ಟಾತ್ಮನಂವೆರಸಿ ಶಿಷ್ಟ ನಾಲ್ಮಡಿ ಕೃಷ್ಣ ಭೂಪನ ಇಷ್ಟದೇವತೆಯಾಗಿ ನೆಟ್ಟನೆ ಬೆಟ್ಟದಲಿ ರಂಜಿಸುವೆ ಭಕ್ತರಿಷ್ಟ ಹರಿಸುತ ಕೊಟ್ಟಭೀಷ್ಟವ 22 ಸಂತರ ನುಡಿಗಳು | ನಾನಾಂತು ನಿನ್ನಯ ಚಿಂತಿತಾರ್ಥದ ಪದವ | ಸ್ವಾಂತದಲಿ ತಂದು ಇಂತು ತುತಿಸಿದೆನರಿಯೆನನ್ಯಯಥ ಪಂಥವನು ಎನ್ನಂತರಂಗವ ನಂತು ತಿಳಿದಿಹೆ ಜನನಿ ಕೊಡು ಶ್ರೀ- ಕಾಂತ ಭಕ್ತಿಯ ಮುಂತೆ ಕರುಣದಿ 23
--------------
ಲಕ್ಷ್ಮೀನಾರಯಣರಾಯರು
ಏಳು ಲೋಕದಲಿ ಹೇಳುವರು ಅವರಕೀರ್ತಿಕೇಳಿ ಕೇಳಿ ಬಲ್ಲೆವಮ್ಮ ದೂತೆ ಬಹಳ ಬಹಳ ಭಾಗ್ಯವೇನೆ ದೂತೆ ಹೇಳಲ್ವಶವಲ್ಲವೇನೆ ದೂತೆ ಪ. ಕೃಷ್ಣನಂಘ್ರಿ ಕಮಲದಲೆ ನಿಷ್ಠನಾಗಿ ಧರ್ಮರಾಯ ಅಷ್ಟು ರಾಜ್ಯನಾಳುವನೇನ ದೂತೆ 1 ದಿಟ್ಟ ಧರ್ಮರಾಯ ದ್ರವ್ಯ ಶ್ರೇಷ್ಟ ದ್ವಿಜರಿಗೆ ಕೋಟಿಕೊಟ್ಟು ಕೊಟ್ಟು ಕಳಿಸೋನೇನೆ ದೂತೆ 2 ಮಾಧವನ ಭಕ್ತರಿಗೆ ಆದರದಿ ದ್ರವ್ಯ ಸಹಿತಗೋದಾನಗಳು ಕೊಡುವೊನೇನೆ ದೂತೆ 3 ನೀಲವರ್ಣನ ಭಕ್ತರಿಗೆ ಸಾಲಿಗ್ರಾಮ ಕೋಟಿ ಲಕ್ಷಮ್ಯಾಲೆ ದ್ರವ್ಯ ಕೊಡುವೋನೇನೆ ದೂತೆ 4 ಶ್ಯಾಮವರ್ಣನ ಭಕ್ತರಿಗೆ ಪ್ರೇಮದಿಂದ ದ್ರವ್ಯ ಸಹಿತ ಭೂಮಿದಾನ ಕೊಡುವೊನೇನೆ ದೂತೆ5 ಪನ್ನಂಗಶಯನನ ಭಕ್ತರ ಮನ್ನಿಸಿ ದ್ರವ್ಯಗಳಿಂದ ಕನ್ಯಾದಾನ ಮಾಡೋನೇನೆ ದೂತೆ 6 ಉತ್ತಮ ದ್ವಿಜರಿಗೆ ರಾಯ ಮುತ್ತು ಮಾಣಿಕರತ್ನ ಸಹಿತಛತ್ರ ಚಾಮರ ಕೊಡುವೋನೇನೆ ದೂತೆ 7 ಆನೆ ಕುದುರೆ ಅಂದಣವು ನಾನಾ ಭೂಷಣಗಳು ವಸ್ತ್ರಜ್ಞಾನಿಗಳಿಗೆ ಕೊಡುವೊನೇನೆ ದೂತೆ 8 ಸಂಪತ್ತು ದ್ವಿಜರಿಗೆ ಕೊಟ್ಟು ದಂಪತ್ತು ಪೂಜೆಗಳ ಮಾಡಿಗುಂಪು ಗುಂಪು ಕಳುಹೋನೇನೆ ದೂತೆ 9 ಮಿತಿ ಇಲ್ಲದೆ ಅನ್ನ ಮಧ್ವಮತದ ಜನಕೆ ಕೊಟ್ಟುಲಕ್ಷ್ಮೀಪತಿಗೆ ಅರ್ಪಿಸುವನೇನೆ ದೂತೆ 10 ಯದುಪತಿಯ ಭಕ್ತರಿಗೆ ಉದಕ ಪಾತ್ರೆ ಕೊಟ್ಟುರಾಯ ಅಧಿಕ ಕೀರ್ತಿ ಪಡೆಯುವನೇನೆ ದೂತೆ11 ತುಷ್ಟರಾಗಿ ಆಶೀರ್ವಾದ ಕೊಟ್ಟುರಾಯಗೆ ದ್ವಿಜರು ಕೃಷ್ಣಗರ್ಪಿಸೆಂಬೋರೇನೆ ದೂತೆ 12 ರತಿ ಇಟ್ಟು ರಾಮೇಶನಲ್ಲೆ ವ್ರತವ ಕೋಟಿ ಮಾಡಿರಾಯಕೃತ ಕೃತ್ಯನಾಗುವನೇನ ದೂತೆ13
--------------
ಗಲಗಲಿಅವ್ವನವರು
ಪಾದಕಂಡು ಪಾವನಾದೆನು ಶ್ರೀಗಿರಿಯ ನಿಲಯನಪಾದಕಂಡು ಪಾವನಾದೆನು ಪಪಾದಕಂಡು ಪಾವನಾದೆನುಮಾಧವನ ಪ್ರಸಾದ ಪಡೆದೆನುಹಾದಿಗಾಣದೆಪರಮದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇದಿನಿಯೊಳು ಜನುಮ ತಾಳಿಭೇದಮತದ ಹಾದಿಬಿಟ್ಟು ಅ.ಪನೀಲಬಣ್ಣದೊಪ್ಪುವ ಸುಂದರ ಶುಭಕಾಯಇಂದಿರೆಲೋಲತ್ರಿಜಗಮೋಹನಾಕಾರ ಕೊರಳಪದಕಮಾಲಕೌಸ್ತುಭಮುಕುಟಮಣಿಹಾರ ರತ್ನದುಂಗುರಕಾಲೊಳ್ಹೊಳೆಯುವ ಗೆಜ್ಜೆಸರಪಳಿಶೀಲವೈಷ್ಣವ ನಾಮ ಪಣೆಯಲಿಕಾಳರಕ್ಕಸಕುಲಸಂಹಾರನಪಾಲಸಾಗರಕನ್ನೆವರನಪಾಲಮೂಲೋಕಸಾರ್ವಭೌಮನಮೇಲು ಭೂವೈಕುಂಠದಲ್ಲಿ 1ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣಪಟ್ಟ ರತ್ನದ ನಡುವಿಗುಡಿದಾರ ವರ್ಣಿಸುವರಾರುಸೃಷ್ಟಿಯೊಳಗೀತ ಮೀರಿದವತಾರ ಇನಕೋಟಿ ಪ್ರಭಾಕರಬಿಟ್ಟು ವೈಕುಂಠ ಇಹ್ಯಕೆ ಸಾಗಿಬೆಟ್ಟದ ಮೇಲೆ ವಾಸನಾಗಿಕೊಟ್ಟು ವರಗಳ ಮೂರು ಜಗಕೆಶೆಟ್ಟಿಯಂದದಿ ಕಾಸುಕೊಳ್ಳುವದುಷ್ಟಭ್ರಷ್ಟ ಶಿಷ್ಟರೆಲ್ಲರಇಷ್ಟದಾಯಕದಿಟ್ಟ ದೇವನ 2ಒಂದೆ ಮನದಲಿ ಸಕಲ ಸೇವಕರು ಭಯಭಕುತಿಯಿಂದಬಂದು ಹರಕೆಯ ತಂದು ನೀಡುವರು ತುಂಬರನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರುಹೊಂದಿ ಭಜಿಸುತ ಸಪ್ತಋಷಿಗಣಬಂದು ಇಳಿವರು ಬಿಡದೆಅನುದಿನವಂದ್ಯ ನಿಗಮಾದಿಬಂಧು ಭಜಿಪರಕಂದುಗೊರಳಾದಿ ಬ್ರಹ್ಮಸುರರಿಂಗಂಧಪರಿಮಳಕುಸುಮದ್ರವ್ಯಗಳಿಂದ ಸೇವೆಯ ಗೊಂಬದೇವನ 3ಉದಯಕಾಲದಿ ಬಾಲನವತಾರ ಮಧ್ಯಾಹ್ನಕಾಲದಿಸದಮಲಾಂಗ ಯೌವನಾಕಾರಸುಸಂಧ್ಯಾಕಾಲದಿಮುದುಕನಾಗಿ ಕಾಂಬ ಮನೋಹರ ಬಹುಮಹಿಮಗಾರಪದುಮವದನ ಮದನನಯ್ಯಪದುಮವತಿಯ ಪ್ರಾಣಪ್ರಿಯಒದಗಿಬಂದ ಭಕುತಜನರನುಸುದಯದಿಂದ ಕರೆದು ಪ್ರಸಾದಮುದದಿ ನೀಡುತ ಕೃಪೆಯದೋರಿಸದಮಲಸಂಪದವನೀವನ 4ತೀರದೀತನ ಲೋಕಶೃಂಗಾರ ಏರಿ ನೋಡಲುಪಾರಗಿರಿತುದಿ ಗಾಳಿಗೋಪುರ ಮುಂದೆ ನಡೆಯಲುದಾರಿಯಲಿಕೊಳ್ಳಏಳು ವಿಸ್ತಾರ ಪರಮಪರತರತೋರುವ ಮಹ ಗುಡಿಯು ಗೋಪುರದ್ವಾರ ಚಿನ್ನದ ಕಳಸ ಬಂಗಾರಗಾರುಮಾಡದೆ ದಾಸಜನರನುತಾರತಮ್ಯದಿ ಪೊರೆಯಲೋಸುಗುಸೇರಿಧಾರುಣಿ ವೈಕುಂಠವೆನಿಸಿದಧೀರವೆಂಕಟ ಶ್ರೀಶ ರಾಮನ 5
--------------
ರಾಮದಾಸರು