ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ಶ್ರೀ ಪತಿಯೆ ನಿನ್ನ ದಯವೆಂತಾಹದೋ ಪಾಪಕರ್ಮವ ಮಾಡಿ ಜೀವಿಸುವೆ ನಿರುತ ಪ ಬಾಲತನವನು ಬಾಲಲೀಲೆಯಿಂದಲಿ ಕಳೆದೆ ಕೀಳು ಜನರೊಡನೆ ಸ್ನೇಹವ ಬೆರಸಿದೆ ಹಾಳು ಹರಟೆಗೆ ಹೊತ್ತು ಸಾಲದೋಯಿತು ಯನಗೆ ಶ್ರೀ ಲೋಲ ನಿನ್ನಡಿಗೆ ದೂರಾದೆ ನಾನು 1 ಬುದ್ಧಿ ಪೂರ್ವಕದಿ ಸದ್ವಿದ್ಯೆಯನು ಕಲಿಯದಲೆ ಶುದ್ಧ ತಾಮಸ ವಿದ್ಯದೊಳು ರಮಿಸಿದೆ ಮಧ್ವಶಾಸ್ತ್ರದಸಾರವನ್ನು ತಿಳಿಯದೆ ನಾನು ಕದ್ದಕಳ್ಳನ ತೆರದಿ ಬಾಳಿದೆನು ಬರಿದೆ 2 ಪ್ರಾಯತನವೆ ವಿಷ ಪ್ರಾಯವಾಯಿತು ಎನಗೆ ಕಾಯಜನ ಉಪಟಳದಿ ಮತ್ತನಾದೆ ತೋಯಜಾಕ್ಷಿಯರ ದುರ್ಮಾಯ ಜಾಲಕೆ ಸಿಲುಕಿ ನೋಯಿಸಿದೆ ನಿಜ ಸತಿಯ ಪರಿಪರಿಯಲಿಂದ 3 ಮದನ ಜನಕನೆ ನಿನ್ನ ಮಧುರನಾಮವ ಮರೆದು ಸುದತಿಯರ ಅಧರಾಮೃತಕೆ ಬೆರೆದು ವಿಧಿಕುಲಾಚರಣೆ ಜರೆದ್ಹÀÀಗಲಿರುಳು ನಾರಿಯರ ವದನವನು ನೋಡಿ ಮೋದಿಪನರಾಧಮನೊಳ್ 4 ಉದರ ಗೋಸುಗ ಪರರ ಹೃದಯ ದ್ರವಿಸುವ ತೆರದಿ ವಿಧ - ವಿಧದಿ, ಆತ್ಮ ಸ್ತೊತ್ರವನೆ ಪೊಗಳಿ ಸದ-ಸದ್ವಿ ವೇಕವನು ತೊರೆದನ್ಯರ್ಹಳಿದು ಬಲು ಚದುರ ನಾನೆಂಧೇಳಿ ಮೋಸಗೊಳಿಸುತ ಜನರ 5 ಸಿರಿ ಚರಣಕ್ಕೆ ಶಿರ ಬಾಗ ದ್ಹರಿ ಭಕುತರಿಗೆ ವಿನಯದಿಂದೆರಗದೆ ನಿರುತದಲಿ ನಾಚಿಕಿಲ್ಲದಲೆ ಭೂದನುಜಯ ವಾನರಿಗೆ ಕರಮುಗಿದು ಜೀವಿಪÀಖೂಳ ಮನುಜನೊಳು 6 ಸತ್ಯಧರ್ಮವÀ ತ್ಯಜಿಸಿ ಮತ್ತೆಯುತ್ತಮರಜಾ - ನ್ನತ್ಯವನು ಸಹಿಸದಲೆ ತತ್ತಳಿಸುವೆ ಪೆತ್ತವರ ಸೇವಿಸದೇ ಮಿಥ್ಯವನೆ ಬೊಗಳಿದು - ಷ್ಕøತ್ಯದಿಂಬಾಳ್ವ ಉನ್ಮತ್ತನರ ಪಶುವಿನೊಳು 7 ಹರಿಗೆರಗದಿರುವÀÀ ಶಿರ ಹರಿಯ ಸ್ಮರಿಸದ ಜಿಂಹೆ ಹರಿವಾರ್ತೆಯಾಲಿಸದ ಕರ್ಣಂಗಳು ಕರ ಹರಿಯ ನೋಡದ ಚಕ್ಷು ಸರುವ ಪರಿಯ ಪವಿತ್ರದೇಹಧರಿಸಿದ ನರಗೆ 8 ವಿತ್ತ ಪಹರಿಸಿ ಪರರ ನಿಂದಿಸಿ ಪರರ ಬಲುವಂಚಿಸಿ ಪರಮೇಷ್ಟಿ ಜನಕನೆ ಪರತರ ಪರಂಜ್ಯೋತಿ ಪರದೈವನೆಂದರಿಯದಿರುವ ಪಾಮರನಿಗೆ 9 ನಾಮಾಡದಿಹ ಪಾಪ ವೀಮಹಿಯೊಳೊಂದಿಲ್ಲ ಸೀಮೆಗಾಣಲು ರವಿಜನಿಗೆ ಸಾಧ್ಯವಿಲ್ಲ ಆ ಮಹಾನರಕÀಂಗಳೆನಗೆÀ ತಕ್ಕವು ಅಲ್ಲ ಸ್ವಾಮಿ ನೀಪೊರೆಯದಿರೆ ಯನಗಾರು ಗತಿಯಿಲ್ಲ 10 ಏನಾದರೊಳಿತೆ ವರದೇಶ ವಿಠಲ ನಿನ್ನಾ ಙÁ್ಞನುಸಾರದಿ ಕರ್ಮಗಳ ಮಾಡಿದೆ ಧೀನರಕ್ಷಕನೆಂಬ ಬಿರಿದು ನಿಜ ವಿದ್ದರಾ - ದೀನನಾದವನನುದ್ಧರಿಸಲರಿಯಾ 11
--------------
ವರದೇಶವಿಠಲ
ಸ್ವಾಮಿ ಸತ್ಯಾಧಿರಾಜ ಮುನಿಗೆಣೆಗಾಣೆ ನಾಭೂಮಿಯ ಮೇಲೆ ಚತುರನಸಾಮಥ್ರ್ಯ ನೋಡಿರಿ ಭಕುತಿಯನರಿಯದಪಾಮರನನು ಬಾಗಿಸುವನ ಪ.ಗುರುಸತ್ಯಾಭಿನವರಾಯನ ಪಟ್ಟದಾನೆಯುಧÀರೆಯ ಮೇಲೋಡಾಡುವಂತೆಚರಿಸುತ ಖಳರನಂಜಿಸಿ ತಪ್ಪ ಕೈಕೊಂಡುಗುರುಪಾದಕೊಪ್ಪಿಸಿ ನಿಂತ 1ಕಲ್ಲು ಕರಗುವುದು ಕೆಚ್ಚು ಮಣಿವುದು ಇದೆಲ್ಲಿಯ ಗಾದೆಯೆಂದೆನಲುಕಲ್ಲೆದೆ ಮಾನಿಸರ ದ್ರವಿಸುವ ಕೆಚ್ಚೆದೆಕ್ಷುಲ್ಲರ ಮಣಿಸುವಕೇಳಿ2ಆಲಸ್ಯವೆ ಮೋಕ್ಷೋಪಾಯ ದಹನೆಂದುಕಾಲವ ಕಳೆಯನು ವ್ಯರ್ಥಮೂಲ ರಘುಪತಿ ಪಾದಾರವಿಂದವ ಮೇಲೆಮೇಲರ್ಚಿಪ ಸಮರ್ಥ 3ಜ್ಞಾನ ಭಕುತಿ ವೈರಾಗ್ಯಪ್ರಣವಜಪಧ್ಯಾನ ಮೌನ ಪರಿಪೂರ್ಣಆನಂದತೀರ್ಥ ಶಾಸ್ತ್ರಾಂಬುಧಿ ತಿಮಿಂಗಿಲದೀನರಸುರತರುಜಾಣ4ತಂದೆ ಸತ್ಯಾಭಿನವ ತೀರ್ಥ ಕರಜಾತಎಂದೆಂದು ಸುಜನರ ಪ್ರಿಯಇಂದಿರೆರಮಣ ಪ್ರಸನ್ವೆಂಕಟೇಶನಹೊಂದಿದ ಸದ್ಗುಣಗೇಹ5
--------------
ಪ್ರಸನ್ನವೆಂಕಟದಾಸರು