ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದ್ರಪ್ರಸ್ಥದಲ್ಲೆ ಕುಂತಿ ನಂದ(ನ) ರಾಜಸೂಯ್ಯಾಗವನು ಆ- ನಂದದಿ ಮಾಡಿಂದಿರೇಶಗರ್ಪಿಸಿದನು 1 ಮಂದಬುದ್ಧಿ ಕೌರವನು ಚೆಂದನೋಡಿ ಸೈರಿಸದೆ ಪಾಂಡವರ ಪಟ್ಟಣದಿಂದ್ಹೊರಗ್ಹಾಕುವೆನೆಂದನು 2 ಘಾತಕ ದುರ್ಯೋಧನ ತನ್ನ ಮಾತುಳ ಶಕುನಿಯ ಕೇಳಿ ಪ್ರೀತಿಂದೆ ಪಾಂಡವರ ಕರೆಸಿ ದ್ಯೂತವಾಡಿದ 3 ಆಗ್ರಾದಿಂದಾಟಗಳ ಸೋಲಿಸಿ ಶೀಘ್ರದಿಂದ್ವನವಾಸವ ಚರಿಸಿ ಅಜ್ಞಾತ್ವಾಸೊಂದೊ(ದ್ವ?) ರುಷವೆಂದು ಪ್ರತಿಜÉ್ಞ ಮಾಡಿದ 4 ಸೋತು ಧರ್ಮ ಸಕಲೈಶ್ವರ್ಯ ಸಾದೇವ ನಕುಲ ಭೀಮರ ಪಾರ್ಥ ದ್ರೌಪದಿಯ ಪಣಕಿಟ್ಟು ಕೂತನಾಗಲೆ 5 ಆನೆ ಕುದುರೆ ಅಷ್ಟೈಶ್ವರ್ಯ ಬ್ಯಾಗೆ ತನ್ನಿರಿ ಭಂಡಾರವನು ಹೋಗಿ ದ್ರೌಪದಿ ಕರೆಯಿರೆಂದು ಹೇಳಿದನಾಗ 6 ಕರವ ಮುಗಿದು ನಿಂತು ಇಂದು ನಮ್ಮ ರಾಜಸಭೆಗೆ ಬನ್ನಿರೆಂದರು 7 ದಾಯವಾಡಿ ಸೋತರಿನ್ನುಪಾಯವಿಲ್ಲೀಗೆ 8 ಇಂದಿರೇಶನ ದಯವು ನಮ್ಮಲ್ಲಿದ್ದ ಕಾರಣದಿಂದೀಗ ದುರಿತ ಬಯಲಾಗುವುದ್ಹ್ಯಾಗೆಂದು ನುಡಿದಳು 9 ಚಂದ್ರ ಜ್ಯೋತಿಯಂತೆ ಹೊಳೆವೊ ಮಂದಗಮನೆ (ಇ)ಂದು ವದನೆ ದುಂಡು ಮಲ್ಲಿಗೆಶಿರವ ಬಾಗಿ ಬಂದು ನಿಂತಳು 10 ಕಂಡು ದುರ್ಯೋಧನ ದ್ರೌಪದಿ ನಿನ್ನ ಗಂಡರಡವಿಗೈದುವೋರು ಹೆಂಡತ್ಯಾಗಿರೆನ್ನ ಬಳಿಗೆ ಬಾರೆ ಎಂದನು 11 ಕೆಂಡ ತುಂಬಿದ ಕೊಂಡದೊಳು ಕಂಡೂ ನೀ ಹಾರುವರೇನೊ ತುಂಡು ಮಾಡಿ ಕಡಿವೋರೈವರು ಬ್ಯಾಡೋಯೆಂದಳು 12 ಪತಿಗಳಿಂದೆ ರಹಿತಳೆ ದ್ರೌಪದಿಯೆ ನೀನತಿ ಹರುಷದಿಂದೆ ಸತಿಯಾಗಿ ಬಾಳ್ಹಿತದಿಂದೆನ್ನಕೂಡೇಯೆಂದನು 13 ಪತಿಯಿಂದೆ ರಹಿತಳು ಭಾನುಮತಿಯೋ ಧೃತರಾಷ್ಟ್ರ ಗಾಂಧಾರಿ ಸುತಹೀನರಾಗುವರತಿ ಬ್ಯಾಗೆ ಮತಿಗೇಡಿ ಕೇಳೊ 14 ಪಟ್ಟೆ ಮಂಚಕ್ಕೊಪ್ಪುವ್ಯಂತೇ ಬಾರೇಯೆಂದನು 15 ಅಷ್ಟ ಬಡವರೈವರು ನಿನ ಶಿರ ಕುಟ್ಟಿ ಯಮಪಟ್ಟಣಕ್ಕೆ ಅಟ್ಟಿ ರಾಜ್ಯಕ್ಕಧಿಕಾರ್ಯವರು ಕೇಳೋಯೆಂದಳು 16 ಹೇಮ ಇಚ್ಛ ಮಾಡಿದ್ದೇನೀಗೆನ್ನ ಕೂಡೆ ಎಂದನು 17 ಹುಚ್ಚು ಹಿಡಿದಿತೇನೋ ನಿನಗೆ ಉಚ್ಚು ಬಡಿದು ನಿನ್ನ ಹಲ್ಲು ನುಚ್ಚು ಮಾಡಿ ಕೊಲ್ಲೋರೈವರು ಬ್ಯಾಡೋಯೆಂದಳು 18 ಬಡನಡುವಿನ ವೈಯಾರಿ ಕಡುಚೆಲ್ವೆ ದ್ರೌಪದಿಯೆ ಎನ್ನ ತೊಡೆಯಮ್ಯಾಲೆ ಒಪ್ಪುವ್ಯಂತೆ ಬಾರೆಯೆಂದನು 19 ಕಡುಪಾಪಿ ನೀ ನುಡಿವೋ ನಾಲಿಗೆ ಕಡಿದು ಭೀಮನ ಗದೆಯು ನಿನ್ನ ಉರ ಭೇದಿಸುವೋದನು ನೋಡೇನೆಂದಳು 20 ಅಂಗನೆ ನಿನ್ನಂಗಸಂಗವಾಗದಿದ್ದರೆ ನಿನ್ನ ಮಾನ- ಭಂಗ ಮಾಡಿ ಬತ್ತಲೆ ನಾ ನಿಲಿಸೇನೆಂದನು 21 ಪುಂಡ ಖಳ ನಿನ್ನುದರ ಓಕುಳಿಕೊಂಡಮಾಡೋಕುಳಿಯನಾಡಿ ಚೆಂಡನಾಡಲು ನಿನ್ನ ಶಿರವ ನೋಡೇನೆಂದಳು 22 ಪಾಪಿ ದುಶ್ಶಾಸನನು ಬಂದು ದ್ರೌಪದಿಯ ಮುಂದೆ ನಿಂತು ನೂತನದ ನಿರಿಯ ಪಿಡಿದು ಸೆಳೆಯುತಿದ್ದನು 23 ನಿಲ್ಲೊ ಪಾಪಿ ನಿನ್ನ ರಕ್ತ ಎರೆದು ಹಲ್‍ಹಣಿಗಿಯಲ್ಹಿಕ್ಕಿ ಎಲ್ಲ ಕರುಳ್ವನಮಾಲೆಯ ಮಾಡಿ ಮುಡಿವೆನೆಂದಳು 24 ಮಂಗಳ ಮೂರುತಿ ಮಾರಜನಕ ಎನ್ನ ರಕ್ಷಿಸೆಂದು ಕರವ ಮುಗಿದು ನಿಂತಳು 25 ಮಡುವಿನಲ್ಲೆ ಮುಚ್ಛನಾಗಿ ಬಿಡದೆ ವೇದವ ತಂದು ಕ್ಷೀರ- ಕಡಲ ಕಡೆದ ಕೂರುಮ ಎನ್ನ ಕಾಯೋಯೆಂದಳು 26 ಕಡುಕ್ರೂರ ವರಾಹಾವತಾರ ಹಿಡಿದು ಹಿರಣ್ಯಾಕ್ಷನ ಕಂಬ ವೊಡೆದು ಬಂದಾರ್ಭಟಿಸುವ ಸಿಂಹ ಕಾಯೊ ಎಂದಳು 27 ಬಡವನಾಗಿ ಬಲಿಯ ದಾನ ಬೇಡಿಕೊಂಡ್ವಾಮನನೆ ದೊಡ್ಡ ಕೊಡಲಿ ಪಿಡಿದು ಕ್ಷತ್ರಿಯರನೆ ಕಡಿಬ್ಯಾಗೆಂದಳು 28 ಹತ್ತು ತಲೆಯ ರಾವಣನ ಹತವಮಾಡಿದ್ದವನೆ ಗೋಪೀ ಪುತ್ರನಾದ ಕೃಷ್ಣ ಎನ್ನ ರಕ್ಷಿಸೆಂದಳು29 ಬತ್ತಲಿದ್ದ ಬೌದ್ಧ ನೀ ಬಿಟ್ಟೊ ್ವಸ್ತ್ರ ಎನಗುಡುಗೊರೆಯ ಕೊಟ್ಟು ಹತ್ತಿ ತೇಜಿ ಹರುಷದಿಂದ ಬಾರೋಯೆಂದಳು 30 ಕ್ಷೀರಸಾಗರದಲ್ಲೆ ನೀ ಶ್ರೀಲಕ್ಷ್ಮೀ ಸಹಿತ ಇದ್ದರೇನು ಭೂ ವೈಕುಂಠವಾಸಿ ಎನ್ನ ಕಾಯೋಯೆಂದಳು 31 ಅನಂತಾಸನದಲ್ಲೆ ಆದಿಲಕ್ಷ್ಮೀ ಸಹಿತಾಗಿದ್ದರೇನು ಸೇತೂ(ಶ್ವೇತ?) ದ್ವೀಪವಾಸಿಯೆನ್ನ ಕಾಯೋಯೆಂದಳು 32 ಮಧುರಾ ವಾಸಿ ವೃಂದಾವನ ಗೋವ್ರಜದಲ್ಲಿದ್ದರೇನೊ ಕೃಷ್ಣ ಒದಗಿಬಂದೀಗೆನ್ನಭಿಮಾನ ಕಾಯೋಯೆಂದಳು 33 ಬ್ಯಾಗೆ ಬಿಟ್ಟೀಗೆನ್ನ ಬಳಿಗೆ ಬಾರೋಯೆಂದಳು 34 ಕಾಂತ ಅಕ್ಷಯವೆಂದ ವಸ್ತ್ರಾನಂತವಾದುವು 35 ಕೆಂಪು ಹೂವು ಇರುವಂತಿಗೆಯು ಪಂಚಪೈಠಣಿ ಪಗಡಿ ಬಣ್ಣ ಚಿಂತಾಕು ಪೈಠಣಿಯ ನಿರಿ ಸೆಳೆಯುತಿದ್ದನು 36 ಕರಿಯ ಹೂವು ಕಡ್ಡಿಪೈಠಣಿ ಸೆರಗು ಜರದ ಚಾರಖಾನಿ ಪರಿಪರಿ ಪತ್ತಲಗಳ ತಾ ಸೆಳೆಯುತಿದ್ದನು 37 ಬಿಳಿಯ ಹೂವು ಬಟ್ಟ ಮುತ್ತಿನ ಹೊಳೆವೊ ನಿಂಬಾವಳಿಯು ಚಂದ್ರ ಕಳೆಯ ಸೀರೆಗಳನೆ ಪಿಡಿದು ಸೆಳೆಯುತಿದ್ದನು 38 ಸೂರೂತಿ ಸುಗುತೀಯ ಬಣ್ಣ ಭಾರಿ ಬಾಳೆಪಟ್ಟೆಗಳನು ದ್ವಾರ್ಯಾಮನಿ ಖಂಬಾವತಿ ಸೀರೆ ಸೆಳೆಯುತಿದ್ದನು 39 ತಬಕಾದ್ಹೂವೆಳ್ಳ್ಹೂವು ಗೆರೆ ಸಾಸಿವೆಯ ಚಿಕ್ಕಿ ಸರಪಳ್ಯಂಚು
--------------
ಹರಪನಹಳ್ಳಿಭೀಮವ್ವ
ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ ಪಘನಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |ಧ್ವನಿ ಮಾಡೆ ಹುಲಿ ತಾಯಿ ನಡುಗಿ ಬಿಸುಟೀ ||ತನುವು ನಿನ್ನದು ಸೋಂಕೆ ನಗವೊಡೆದು ಶತಶೃಂಗ- |ವೆನಿಸಿಕೊಂಡಿತೋ ದ್ವಾಪರದಿ ಬಲವಂತ 1ಲೋಕದೊಳು ಮನುಜರಾ ಶಿಶುಗಳಂದದಿ ಬೆಳೆದು |ಪಾಕಶಾಸನಿ ಯಮಜ ಯಮಳರ ಜನನೀ |ಯಾ ಕೂಡಿಕೊಂಡು ಇಭಪುರಿಗೈದಿ ಮೋದದಲಿ |ಸಾಕಿಕೊಂಡೆಯಂಬಿಕೆಯ ಮಗನಿಂದಾ 2ಚಿಕ್ಕವರೊಡನೆ ಚಂಡು ಬುಗುರಿ ಈಸಿರೆ ಓಟ |ತೆಕ್ಕೆ ಮುಷ್ಟಿ ಮರಗಳನೇರುವಲ್ಲಿ ||ಸೊಕ್ಕಿದವನಿವನೆಂದು ಆವಾಗಲೆಲ್ಲರಿಗೆ |ಬಿಕ್ಕಿ ಬಾಯ್ದೆರೆವಂತೆ ಮಾಡಿ ತೋರಿಸಿದೆ 3ಅಹಿತರಾದವರು ನೀರೊಳಗೆ ಕೆಡಹಲು ಎದ್ದೆ |ಅಹಿಗಳಿಂ ಕಟ್ಟಿಸಲು ನೋಯದಿದ್ದೆ ||ಸಹಿಸದಲೇ ವಿಷಹಾಕಿ ಬದುಕಲ್ಕೆ ಹೊರಘಾಕೆ |ಮಹಮೋಸ ಮಾಡೆ ಗೆದ್ದು ಧರಿಯೊಳು ಮೆರೆದೆ 4ಸೋಕಿಯಸುರಿಯ ಮಗನ ಪಡೆದು ಖಲನನು ತರಿದು |ಏಕಚಕ್ರ ನಗರದಲ್ಲಿದ್ದು |ಬೇಕೆಂದು ನೀನಾಗಿ ಪೋಗಿ ಬಕನನು ಕೊಂದೆ |ಈ ಕುಂಭಿಣೀಯೊಳು ನಿನಗಿದಿರಾರು ದೇವಾ 5ಪಾಂಚಾಲಿಯನು ಗಳಿಸೆ ಕೋಪದಿಂ ಬಂದಹರಿ|ವಂಚಕರ ದರ್ಪವ ಭಂಗಿಸಿ ಲೀಲೆಯಿಂ |ಮಿಂಚುವಾ ಗದೆಲಿಹ ನಿಶ್ಚಿಂತ ಬಲವಂತ |ಮುಂಚಿನಜ ಪ್ರಣತ ಸುರಭೂಜ ರವಿತೇಜ 6ಈ ಪರಿಯಿಂದ ಕೆಲಕಾಲವಲ್ಲೆಲ್ಲ |ಕಾಪಾಡಿ ವಜ್ರಿಪ್ರಸ್ಥಕೈ ತಂದು ||ಪಾಪಿ ಜರಿಜನ ಕೊಂದು ರಾಜಸೂಯವ ಮಾಡಿ |ನೀಂ ಪಾಲಿಸಿದೆಯವನಿ ಸದ್ಧರ್ಮದಿಂದ 7ದ್ಯೂತವಾಡಿದ ಸಮಯದಲ್ಲಿ ದ್ರೌಪದಿಯಳನು |ಪಾತಕಿವಸವೆಳೆಯೆ ಕೋಪದಿಂದ ||ಘಾತಿಸುವೆನೆಂದಬ್ಬರಿಸಿ ಪಲ್ಗಡಿದು ಲಕ್ಷ್ಮೀ |ನಾಥನಿಚ್ಛೆಂಗೆ ಈಗೇಂದು ಕೈಮರೆದೇ 8ತಮೋ ಯೋಗ್ಯನಾ ಪಾಪಪೂರ್ಣದಾಹದಕೆ ಬ- |ಹು ಮಿತಿಯಿಂದ ವನವಾಸ ಪತ್ಕರಿಸಿದೆ ||ಸಮರಾಂಗಣದೊಳಿವರ ಹೀಗೆ ಸವರುವೆನೆಂದು |ಸುಮನಸಾರಾಧ್ಯ ಬಾಹುಗಳೆತ್ತಿ ನಡೆದೆ 9ಕಾನನದಿ ಕಿರ್ಮೀರನಂ ಕೊಂದು ಋಷಿಯಿಂದ |ಮಾನವಂ ಕೈಕೊಂಡು ಮತ್ತೆ ಮುಂದೆ ||ಆ ನಗದಿ ಬಹುಕಾಲ ಸೇರಿಕೊಂಡಿದ್ದಂಥ |ದಾನವರ ಮಡುಹಿ ಸೌಗಂಧಿಕವ ತಂದೆ 10ನಿನ್ನೊಳಗೆ ನೀಂ ಲೀಲೆ ಮಾಡಿದ್ಯಾ ಸಮಯದಲಿ |ಚಿನ್ನದೋಪಮ ಪುಷ್ಪವೊಂದು ಬೀಳೆ ||ನಿನ್ನರಸಿಯಿದು ಎನಗೆ ಇಷ್ಟವೆನಲವಳ ನುಡಿ |ಮನ್ನಿಸುತೆ ಪೋಗಿ ಮಣಿಮಂತನೊಂಚಿಸಿದೆ 11ದ್ವೈತ ವನದೊಳು ಬಂದುಮೃಗಬೇಟೆಯಾಡೆ ಪುರು |ಹೂತ ಪದವಾಳ್ದವನು ಮೆಯ್ಯ ಸುತ್ತಲ್ ||ನೀತವಕಬೀಳದೆ ಅವನ ಪುನೀತನ ಮಾಡಿ |ಖ್ಯಾತಿ ತಂದಿತ್ತೆಯಂತಕನ ಸುತಗಂದು 12ಮತ್ಸ್ಯ ದೇಶಾಧಿಪನ ಮನೆಯಲ್ಲಿ ಇದ್ದಾಗ |ಹೆಚ್ಚಿನಾ ಬಲದ ಮಲ್ಲನ ಕೆಡಹಿದೆ ||ಅಚ್ಚ ಪಾಪಾತ್ಮ ಕೀಚಕನನ್ವಯ ತಂದೆ |ಅಚ್ಯುತನ ನಿಜದಾಸ ಭಕ್ತರಘನಾಶ 13ಎಂಟೈದು ವರುಷ ಈ ರೀತಿಯಲಿ ಕಳೆದು ವೈ- |ಕುಂಠಪತಿ ದಯದಿಂದ ಉಪಪ್ಲಾವ್ಯದಿ ||ಗಂಟು ಹಾಕಿದಿ ದುರಾತ್ಮನ ಕೂಡ ಸಂಗರಕೆ |ಕಂಠೀರವರವದಿಂ ತಲೆದೂಗಿ ನಡೆದೆ 14ಮುತ್ತೆ ಭೀಷ್ಮಗೆ ವಂದು ಸ್ವಲ್ಪಮಾತ್ರಕೆಮಾನ|ವಿತ್ತಂತೆ ತೋರಿ ಎಲ್ಲರ ರಥವನೂ |ಕತ್ತರಿಸಿ ಹಿಂದಕ್ಕೋಡಿಸಿದೆ ನಿನ್ನಾರ್ಭಟಕೆ |ಹತ್ತು ದಿಕ್ಕಿನೊಳೊಬ್ಬರಿದಿರಾಗಲಿಲ್ಲ 15ಪ್ರಹ್ಲಾದನವತಾರ ಬಾಹ್ಲೀಕನನು ಗೆದ್ದು |ಮಹೀಜಸುತನಾನಿಮಸ್ತಕಶೀಳಿದೆ ||ಬಹುಖೋಡಿಧಾರ್ತರಾಷ್ಟ್ರರ ಕೊಂದು ಹರೆಬಿಟ್ಟ |ಅಹಿಯಂತೆ ರಣರಂಗದಲ್ಲಿ ಸಂಚರಿಸಿದೆ 16ಕಡು ಕೋಪದಿಂದ ಹೂಂಕರಿಸಿಯುರಿಯುಗುಳುತಲಿ |ಪೊಡವಿ ನಡುಗಿಸಿನಭಬೇಯಿಸುತ್ತಲಿ ||ಪಿಡಿದು ದುಶ್ಶಾಸನನ ತೊಡೆಯಲ್ಲಿ ನೆರೆಗೆಡಹಿ |ಒಡಲ ಛೇದಿಸಿ ರಕ್ತಮಜ್ಜನವಗೈದೆ 17ಕರುಳ ದಂಡೆಯ ಮಾಡಿ ಅರಸಿ ಮಂಡೆಗೆ ಮುಡಿಸಿ |ಖರೆಯ ಮಾಡಿದೆ ಉಭಯತರ ಶಪಥವ ||ಕರೆದೆ ಕುರು ಪಾಂಡವರ ಬಿಡಿಸ ಬನ್ನೀರೆಂದು |ಮರುಳಗೊಂಡರೆಲ್ಲ ನಿನ್ನರೂಪನೋಡುತಲಿ 18ಸ್ವಾಮಿ ಪ್ರಾಣೇಶ ವಿಠಲನ ಆಜೆÕಯ ವಹಿಸಿ |ಭೂಮಿ ಭಾರಿಳುಹುದಕೆ ಅವತರಿಸಿದೆ ||ನಾ ಮಾಡುವೆನೆ ಪೂರ್ತಿ ನಿನ್ನ ಮಹಿಮೆಯ ಸಮರ |ಭೀಮಕರಪಿಡಿದು ಸಲಹುವದೋ ಪ್ರತಿದಿನದಿ 19
--------------
ಪ್ರಾಣೇಶದಾಸರು