ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ನೋಡಿರೋ ನಿಜನೋಡಿರೋ ಧ್ರುವ ನೋಡಿನೋಡಿ ನೋಡಿ ನೋಡುದರೊಳು ಕೂಡಿ ನೋಡುವದೇನೆಂದು ನೋಡಿ ನೋಡಿದ ಮ್ಯಾಲಿನ್ನು ಮೂಡಿಬಂದರ ಘನ ನೋಡುವದೇ ಖೂನ ಮಾಡಿ ಮಾಡಿದ ಮಾಟವು ಕೂಡಿಬಂದರೆ ಕೈಯ ನಾಡಗೂಡ ಹೇಳಬ್ಯಾಡಿ ಗೂಢ ಗುಹ್ಯದ ಮಾತು ಒಡೆದು ಹೇಳುವದಲ್ಲಾ ನೋಡಿ ನಿಮ್ಮೊಳು ಬೆರೆದಾಡಿ 1 ಓದಿದರೋದಬೇಕಿದೊಂದೇ ಅಕ್ಷರ ಭೇದಿಸುವಂತೆ ಬ್ರಹ್ಮಾಂಡ ಇದೇ ಸಾಧಿಸಿನ್ನು ಮೂಲವ ತಿಳಿಯದೆ ಓದುವದ್ಯಾಕೆ ಉದ್ದಂಡ ಹಾದಿ ತಿಳಿಯದಿದ್ದರೆ ಹೇಳಿಕೊಡುವನು ಸದ್ಗುರು ಘನಪ್ರಪಂಚ ಭೋದಿಸಿ ಬ್ರಹ್ಮಾನುಸಂಧಾನದ ಸುಖ ಉದಯ ಮಾಡುವ ಅಖಂಡ 2 ನಾನ್ಯ ಪಂಥವೆಂಬ ಮಂತ್ರದನುಭವ ಚನ್ನಾಗ್ಯಾಗಬೇಕು ಖೂನ ಇನ್ನೊಂದು ಬ್ಯಾರೆಂಬ ಭಿನ್ನವಳಿದ ಮ್ಯಾಲೆ ತನ್ನೊಳಾಯಿತು ಸಮ್ಯಕಙÁ್ಞನ ಧನ್ಯ ಧನ್ಯ ಧನ್ಯ ಧನ್ಯಗೈಸುವದಿದು ಕಣ್ಣಾರೆ ಕಾಂಬೊ ಸಾಧನ ಉನ್ಮತವಾಗದೆ ಸನ್ಮತದೋರದು ಇನ್ನೊಬ್ಬರ ಕೇಳುವದೇನ 3 ಸರ್ವಮಿದಂ ಖಲು ಬ್ರಹ್ಮವೆಂಬುವ ಮಾತು ದೋರ್ವಾಂಗೆ ನೆಲೆಗೊಳಬೇಕು ಸರ್ವ ಸಾಕ್ಷಿ ಸರ್ವಾಧಾರವು ತಿಳಿಯದೆ ಗರ್ವಿತಲ್ಯಾಡುವ ಮಾತು ಹೋತು ಗುರ್ವಿನಂಘ್ರಿಗಿನ್ನು ಗುರುತವ ಕೇಳದೆ ಮವ್ರ್ಹಿನೊಳೀಹುದು ಮುಸುಕು ನಿರ್ವಿಕಲ್ಪನ ನಿಜ ಸ್ಮರಿಸುವಾಂಗೆ ಕಣ್ಣ ದೆರ್ವದಿದೊಂದೇ ಸಾಕು 4 ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎಂದು ಗುರುವಿಗೆ ಕೇಳಿ ನಿಜ ವಂದ ದೇಹದ ಒಳಗಿಹ್ಯ ದ್ಯಾವರ ತಿಳಿದರ ಜನ್ಮಕೆ ಬಂದುದು ಚಂದ ಸೋಹ್ಯ ಸೊನ್ನೆಯ ಗುಹ್ಯವ ತಿಳಿದರ ಭವ ಮೂಲದಿಂದ ಬಾಹ್ಯಾಂತ್ರ ಪರಿಪೂರ್ಣ ಭಾಸುತಲ್ಯದೆ ಮಹಿಪತಿಗಿದೆ ಬ್ರಹ್ಮಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆ ನಾನೊಂದು ಕೌತುಕವ ಧ್ರುವ ಭೂಮಿಯ ವೇದನೋದುದ ಕಂಡೆ ರಾಗಭೆÉೀದ ಮಾಡುದಕಂಡೆ ಪಾಡುದು ನಾಕಂಡೆ 1 ಆಕಾಶ ಮಾತುಕೇಳುದು ಕಂಡೆ ಪುರಾಣ ದೃಷ್ಟಿಸುವದು ಕಂಡೆ ಶಬ್ದ ಭೇದಗ್ರಹಿಸುದು ಕಂಡೆ ಪುಣ್ಯ ಶ್ರವಣವು ಕೇಳುದುಕಂಡೆ 2 ಖಣಿಯವಾದುದು ಕಂಡೆ ನಿರ್ಮಿತವಾಗಿಹ ರೂಪವ ಕಂಡೆ 3 ಅಗ್ನಿ ದೃಷ್ಟಿಸುವದು ಕಂಡೆ ಸೃಷ್ಟಿನೆಲ್ಲ ನೋಡುವದು ಕಂಡೆ ದೈವದ್ಯಾವರ ನೋಡುದು ಕಂಡೆ 4 ಗಾಳಿ ಘ್ರಾಣಿಸುವದು ಕಂಡೆ ಪರಿಪರಿವಾಸನೆ ಕೊಂಬುದುಕಂಡೆ ಬೀಜಾಕ್ಷರವು ನುಡಿವದು ಕಂಡೆ 5 ಎರಗಿತು ಪುಣ್ಯಶ್ರೀ ಚರಣದಲಿ ತ್ರಾಹಿಯೆಂದು ಪೊಡವಿಯಲಿ 6 ಬೆರಗಾದನು ಗುರುಕರುಣದಲಿ ಬೆಡಗವ ಕಂಡಿನ್ನು ಬೆರದಾದೆನಯ್ಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಸ್ವರಸತಿ ಜಯವರ ಪೂರಣಮತಿ ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ ಧ್ರುವ ವಿದ್ಯಾವರದಾಯಿನಿ ಸಿದ್ಧಿಗೆ ಶಿಖಾಮಣಿ ಬುದ್ಧಿ ಪ್ರಕಾಶಿನಿ ಸದ್ಭೂಷಿಣಿ 1 ಕರಕಮಲದಲಿ ವೀಣೆ ಸುರಸ ಅಮೃತವಾಣಿ ವರವಿದ್ಯದಲಿ ದಾನಿ ಸುಪ್ರವೀಣೆ 2 ಪ್ರಸನ್ನವದನಿ ವಿಶ್ವದಲಿ ನೀ ಪೂರ್ಣೆ ಹಂಸವಾಹಿನಿ ಪೂರ್ಣಿ ಸ್ವಸಿದ್ಧಿಣಿ 3 ಸದಾ ಸದ್ಗುರುಸ್ತುತಿ ಒದುಗುವ್ಹಾಂಗ ಸ್ಫೂರ್ತಿ ಇದೇ ಮಹಿಪತಿ ಕುರ್ತಿ ಬೋಧಿಸುವ ಮತಿ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ಪ ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ1 ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ 2 ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ 3 ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ4 ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ 5 ತಾಯ ಮಾತನು ಕೇಳಿ ಸಾಸಿರ ತೋಳಿನಆವಿನ ಕಳ್ಳನ ಕೊಂದಾನ್ಮ್ಯಾಆವಿನ ಕಳ್ಳನ ಕೊಂದು ಭೂಮಿಯಅವನಿಸುರರಿಗೆ ಇತ್ತಾನ್ಮ್ಯಾ 6 ಪಿಂಗಳ ಕಣ್ಣಿನ ಕೊಂಗಗಳ ಕೂಡಿಛಂಗನೆ ಲಂಕೆಗೆ ಪೋದಾನ್ಮ್ಯಾಛಂಗನೆ ಲಂಕೆಗೆ ಪೋಗಿ ನಮ ರಂಗಹೆಂಗಸುಗಳ್ಳನ ಕೊಂದಾನ್ಮ್ಯಾ7 ಕರಿಯ ಹೊಳೆಯ ಬಳಿ ತುರುಗಳ ಕಾಯುತಉರಗನ ಮಡುವ ಧುಮುಕ್ಯಾನ್ಮ್ಯಾಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗವರವ ನಾರೇರ್ಗೆ ಕೊಟ್ಟಾನ್ಮ್ಯಾ 8 ಭಂಡನಂದದಿ ಕುಂಡೆಯ ಬಿಟುಗೊಂಡುಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ 9 ಚೆಲುವ ಹೆಂಡತಿಯ ಕುದುರೆಯ ಮಾಡಿಒಳ್ಳೆ ರಾಹುತನಾದಾನ್ಮ್ಯಾಒಳ್ಳೆ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ 10 ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನುತಾಳವ ಶಿವನಪ್ಪ ತಟ್ಟಾನ್ಮ್ಯಾಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನುಚೆಲುವ ಕನಕಪ್ಪ ಕುಣಿದಾನ್ಮ್ಯಾ11
--------------
ಕನಕದಾಸ
ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ ಧುಮ್ಮಸಾಲೆನ್ನಿ ಸದ್ಗುರುವಿನ ಬಳಗವೆ ಧ್ರುವ ಗುರುವಿನ ಬಳಗವೆಂದು ಗುರುತುವಿಟ್ಟು ನೋಡಿರ್ಯೋ ಅರುಹಿನೊಳು ಮುಣಗಿ ಪರಮಸುಖ ಸೂರ್ಯಾಡಿರ್ಯೋ ಗರ್ವಿನಾಹರಿಗೆ ಬಿಟ್ಟು ಹರಿದುಹೋಗ ಬ್ಯಾಡಿರ್ಯೋ ಪರ್ವಣಿದೆ ಗುರುಕರುಣ ಪಡೆದು ಪೂರ್ಣಕೂಡಿರ್ಯೋ 1 ಧುಮ್ಮಸಾಲೆನ್ನಿರ್ಯೋ ಬೆರದು ಬ್ರಹ್ಮ ಸುಖವ ಸಮ್ಯಙÁ್ಞನದಿಂದ ದೂರಮಾಡಿ ಭವದು:ಖವ ನಿಮ್ಮ ನಿಮ್ಮೊಳು ನೋಡಿ ಘನ ಕೌತುಕವ ಹ್ಯಮ್ಮಿಯೊಳಗಾಗಿ ನೀವು ಹೋಗಬ್ಯಾಡಿ ಹೋಕುವ 2 ಕಣ್ಣದ್ಯರದು ನೋಡಿರ್ಯೊ ಚಿನ್ನುಮಯ ರೂಪವ ಭಿನ್ನವೆಲ್ಲದ್ಯದೆ ತನ್ನೊಳು ಸಮೀಪವ ಪುಣ್ಯ ಹಾನಿ ಮಾಡಿಕೊಂಡು ಹಿಡಯಬ್ಯಾಡಿ ಕೋಪವ ಕಣ್ಣ ದ್ಯರಸಿಕುಡುವ ಹಚ್ಚಿ ಗುರು ತಾನ ದೀಪವ 3 ನಮ್ಮ ನಿಮ್ಮ ದ್ಯಾವರೆಂದು ಹೊಯಿದಾಡಬ್ಯಾಡಿರ್ಯೋ ಬೊಮ್ಮನ ಪಡದ ಪರಬ್ರಹ್ಮನೊಬ್ಬ ನೋಡಿರ್ಯೋ ಇಮ್ಮನಕ ಹೋಗದೆ ಒಮ್ಮನವ ಮಾಡಿರ್ಯೋ ಸುಮ್ಮನೆ ಸುವಿದ್ಯದೊಳು ಬೆರದು ನಿಜಗೂಡಿರ್ಯೋ 4 ಸುಗ್ಗಿಯೋ ಸುಗ್ಗಿಯೋ ಸುಙÁ್ಞನದ ಲಗ್ಗಿಯೋ ಭಾಗ್ಯವಿದೆ ನೋಡಿ ಭಕ್ತಿ ಙÁ್ಞನ ವೈರಾಗ್ಯಯೋ ಬಗ್ಗಿ ನಡವ ಸಾಧುಸಂತ ಜನರಿಗಿದು ಯೋಗ್ಯಯೋ ಹಿಗ್ಗಿ ಹರುಷಪಡುವ ಮಹಿಪತಿಯ ನಿಜ ಸ್ರಾಘ್ಯಯೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾವಿನಕೆರೆ 3 ನಮ್ಮೂರ ದ್ಯಾವರೇ ಬೊಮ್ಮನಪ್ಪನು ಎಂದು ಹೊಯ್ಸಿರೋ ಡಂಗುರವನು ಪ ನಿಮ್ಮ ನೆಂಟರಿಗೆಲ್ಲ ನಿಮ್ಮ ಮಕ್ಕಳಿಗೆಲ್ಲಾ ರಂಗಪ್ಪನವನೆಂದು ಸಾರಿಸಾರಿ ಅ.ಪ ಭೋರಪ್ಪನೆಂದರೂ ತಿಮ್ಮಪ್ಪನೆಂದರೂ ಈರಪ್ಪನೆಂದರೂ ಒಬ್ಬನಣ್ಣ ಸಾರಿ ಡಂಗುರವನು ಹೊಯ್ಸಿರಣ್ಣ 1 ಕುರಿಕೋಳಿ ಕೋಣಗಳ ಶಿರವ ತರಿಯಲು ಬೇಡಿ ನರರಂತೆ ಜೀವಿಗಳು ಅವುಗಳಣ್ಣ ಬರಿಯ ಭಕ್ತಿಯೇ ಸಾಕು ಗುರುಡವಾಹನನವನು ಪರಮಾತ್ಮನವನೆಮ್ಮ ಕಾಯ್ವನಣ್ಣ 2 ರಂಗ ನರಶಿಂಗನು ಗಂಗೆಯನು ಹೆತ್ತನೂ ಗಂಗೆಯನು ಹೊತ್ತವನೂ ಒಬ್ಬನಣ್ಣ ಶಿಂಗರದ ಗೋಪಾಲ ಮಾಂಗಿರಿಯ ರಂಗನೂ ಒಬ್ಬನೇ ತಾನೆಂದು ತಿಳಿಯಿರಣ್ಣ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್