ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಹಿ ಶ್ರೀ ಉರಗಾದ್ರಿವಾಸವಿಠಲನೇ ಮದ್ಹøಯರಾಂತರಾತ್ಮ ವಿಠಲನೇ ಸಲಹೊ 1 ದೇಹದಲಿ ನಲಿವ ತಾಂಡವ ಕೃಷ್ಣವಿಠಲನೆ ನಿನ್ನಿಷ್ಟ ಭಕುತರ ಮನೋಭೀಘ್ಟವನೆ ಸಲಿಸಯ್ಯ 2 ವಂದಿಪೆ ತಂದೆ ವೇಂಕಟೇಶ ವಿಠಲ ಬಂದು ದಯವೀಯೋ ಜಯಾಪತಿವಿಠಲ ಬಂಧ ಮೋಚಕ ಶಾಂತೀಶ ವಿಠಲನೆ ನಿನ್ನ ಸಂದ ಭಕುತರ ಕಾಯ್ವ ಗಜವರದವಿಠಲ3 ಶೇಷ ಶಯನ ವಿಠಲ ದೋಷರಾಶಿಯ ಕಳೆದು ಮನದಾಶಯ ಸಲಿಸಯ್ಯ ಹರಿವಿಠಲ ಶೈಶವದಿ ಕಾಯ್ದಂತೆ ಧೃವತವರದವಿಠಲನೆ ಈಸಮಯದಲ್ಲೆ ಗುರುವಾಸುದೇವ ವಿಠಲ 4 ವರದ ಲಕ್ಷ್ಮೀ ರಮಣವಿಠಲನೆ ಎನ್ನ ಅವಿದ್ಯೆಯನೆ ಹರಿಸೊ ಪ್ರದ್ಯುಮ್ನವಿಠಲ ಪರಮಪುರುಷಾ ವರದ ವೇಂಕಟೇಶ ವಿಠಲನೆ ಪರಮ ಸಾಧನ ನೀಡೋ ಸುಜ್ಞಾನವಿಠಲ 5 ಶ್ರೀನಾಥವಿಠಲನು ತೈಜಸನು ನೀನೆ ದೀನರಕ್ಷಕ ಭಾರತೀಶಪ್ರಿಯ ವಿಠಲ ಪರಮಪಾವನ ಕಾಯೊ ವರಹವಿಠಲ ಮೂರ್ತೆ ವರಮತಿಯ ನೀಡೊ ಆನಂದಮಯವಿಠಲ 6 ವಿಜ್ಞಾನಮಯ ಮನದ ಅಜ್ಞಾನವನು ಹರಿಸೊ ಸ- ರ್ವಜ್ಞ ನೀನೇ ಶ್ರೀ ಪ್ರಾಜ್ಞವಿಠಲನೆ ಯಜ್ಞ ಭುಗ್ಯಜ್ಞ ಸಾಧಕನು ನೀ ಜಗದ್ಭರಿತ ವಿಠಲ ನೀನೆನ್ನ ಸಲಹೊ 7 ಶುಧ್ದ ಮೂರುತಿ ಶ್ರೀ ವಿಜ್ಞಾನಮಯ ವಿಠಲ ಸರ್ವಕಾರ್ಯದಿ ಮನಶುದ್ಧಿಯ ನೀಡೋ ಮಧ್ವಗುರು ಶ್ರೀಕೃಷ್ಣ ದ್ವೈಪಾಯನ ವಿಠಲ ಮದ್ಭಾರ ನಿಳುಹಿ ನೀ ಉದ್ಧ್ದಾರ ಮಾಡೊ8 ರಕ್ಷಿಸೊ ಲಕ್ಷ್ಮೀಶ ವಿಠಲನೆ ಎನ್ನ ಮನ ದಕ್ಷಿಯೊಳು ನೆಲೆಸೊ ಶ್ರೀ ವೇಂಕಟೇಶವಿಠಲ ಕುಕ್ಷಿಯೊಳು ಬ್ರಹ್ಮಾಂಡ ರಕ್ಷಿಪ ಶ್ರೀರಮಣ ವಿಠಲ ನಿನ್ನದಾಸದಾಸ್ಯವÀ ದೇಹಿ 9 ಶರಣ ಜನ ಪ್ರೀಯ ಶ್ರೀವರದ ವಿಠಲ ದೇವಾ ದುರಿತಾರಿ ಪನ್ನಂಗಶಯನ ವಿಠಲ ಗುರೋರ್ಗುರುಗೋವಿಂದವಿಠಲ ಪಾಹಿ 10 ವರ ತಂದೆ ಮುದ್ದು ಮೋಹನ ವಿಠಲಾತ್ಮಕ ಶ್ರೀ ಉರಗಾದ್ರಿ ವಾಸವಿಠಲ ಸ್ವಾಮಿ ಶರಣರಿಗೆ ಆಯುe್ಞರ್Áನ ಸಂಪತ್ ಭಕ್ತಿಸಾಧನೆಗಳಿತ್ತು ಸಲಹೊ11
--------------
ಉರಗಾದ್ರಿವಾಸವಿಠಲದಾಸರು
ಪ್ರಾಣಾ ನೀ ಕಲ್ಯಾಣಗುಣ ಗೀರ್ವಾಣಾದ್ಯರ ಮಣಿ ಜೀವಗಣ ಗುಣಕಾರ್ಯತ್ರಾಣ ಅಗಣಿತಮಹಿಮ ಪ ಇನ್ನೆಣೆಯುಂಟೆ ತ್ರಿಭುವನ ತ್ರಾಣ ನಿನ್ನ ಆಣತಿಯಂತೆ ಪಂಚಪ್ರಾಣ ಅಣುಘನತೃಣ ಮೊದಲು ಪಣೆಗಣ್ಣ ಸುರ ಗಣಾದ್ಯಮರರೊಳಗನವರತ ನೀ ಘನ್ನ ಫಣಿರಾಜಗುರು ನಿನಗೆಣೆಯುಂಟೆ ನೀರಜಭ ಮುಖ್ಯಪ್ರಾಣ ಬಾದರಾ ಯಣನನುಗ ಆನಂದಗುಣಭರಿತ ಕೃತಿರ- ಮಣನ ಸುತೆ ರಮಣ ನೀ ಕ- ರುಣಿಸಿದರುಂಟು ಶ್ರೀಹರಿಯ ಕರುಣಾಅ.ಪ ಮರುತಾ ಶ್ರೀ ಹರಿಯಿಂದಲನವರತ ಪ್ರೇರಿತನಾಗಿ ನಿರುತಾ ಜಗಕಾರ್ಯದೊಳು ಸತತ ನೀ ಬಿಡದಿರೆಡರಿಲ್ಲ ಮರುತಾ ಜಗಚೇಷ್ಟಪ್ರದ ನೀನಹುದೊ ಶಕ್ತಾ ವರ ಮಂತ್ರಿಯಾಗಿ ನೀ ಹರಿಗೆ ಭಕ್ತಾಗ್ರಣಿಯೆ ಯಂತ್ರೋ- ದ್ಧ್ದಾರ ಶ್ರೀ ಹನುಮಂತಾ ಬಲಭೀಮ ಗುರುಮಧ್ವಶಾಂತಾ ತ್ರಿಕೋ ಟಿರೂಪಧರ ಖ್ಯಾತ ಸುರಾಸುರನರೋರಗಗಳನವರತ ಸರ್ವವ್ಯಾಪಾರ ನೀ ನಡೆಸಿ ಪೊರೆವ ಸದ್ಗುರುವರ ಸುಸಮೀರಾ ನೀರಜಾಂಡವ ಕೂರ್ಮರೂಪದೊಳು ನಿಂತು ನೀ ಭಾರವಹಿಸಿ ಮೆರೆದೆ ಶ್ರೀ ವಾಯುಕುವರಾ1 ಸೃಷ್ಟಿಗೊಡೆಯನಿಗೆ ನೀನಿಷ್ಟಪುತ್ರ ನಿನ್ನಷ್ಟುಜ್ಞಾನ ಪರಮೇಷ್ಠಿಗಲ್ಲದೆ ಎಷ್ಟು ನೋಡಿದರು ಇತರರಲಿ ಎಳ್ಳಷ್ಟಿರೆಣೆಯಿಲ್ಲ ತುಷ್ಠಿಪಡಿಸುವೆ ಹರಿಯ ಜೇಷ್ಟದಾಯರ ಶ್ರೇಷ್ಟ ಮೂರುತಿ ಕವಿಶ್ರೇಷ್ಟ ನೀನೆನಿಸಿ ಲಂಕಾ ಶ್ರೇಷ್ಟನೆನಿಸಿದ ದುಷ್ಟದೈತ್ಯನಾ ಮರವನ್ನ ಹುಟ್ಟನಡಗಿಸಿ ಸುಟ್ಟಿ ಲಂಕಪಟ್ಟಣವನ್ನು ಪುಟ್ಟಿದಾಗಲೆ ಬೆಟ್ಟ ಹಿಟ್ಟನು ಮಾಡಿ ಆ ದುಷ್ಟಭಾಷ್ಯಗಳ ಕಷ್ಟ ಪರಿಹರಿಸಿ ನಿ- ರ್ದುಷ್ಟತತ್ವವ ತೋರ್ದೆ ಎಷ್ಟು ಶಕ್ತನು ಜೀವ- ಶ್ರೇಷ್ಠಮೂರುತಿ ಸರ್ವ ಕಷ್ಟ ಹರಿಸಿ ನಿನ್ನ ಇಷ್ಟಭಕುತರ ಸೇವೆ ಕೊಟ್ಟು ಶ್ರೀ ಹರಿಯ ಶ್ರೇಷ್ಠಮೂರುತಿ ತೋರೋ ಇಷ್ಟದಾಯಕ ಗುರು ಶ್ರೇಷ್ಠ ಮಾರುತಿಯೆ2 ಈಶ ಪ್ರೇರಣೆಯಿಂದ ಈ ನಶ್ವರದೇಹದೊಳು ಆ ಸಮಯದಲಿ ಅಪಾನನಿಂದೊಡಗೂಡಿ ಪ್ರಾಣೇಶ ನಿನ್ನಿಂದ ಎಲ್ಲ ಚೇತನವಿಹುದೋ ವಾಸವಾಗಿರುವನಕ ಈ ಶರೀರ ಕಾರ್ಯ ಶಾಶ್ವತ ನಡೆವುದೋ ಕಲ್ಪಾವಸಾನ ಮೋಕ್ಷಪರಿಯಂತ ಲೇಶ ಬಿಡದಲೆ ಬಪ್ಪ ಜಡದೇಹದೊಳು ನೀ ವಾಸವಾಗಿಹೆ ದೇವ ಶಾಶ್ವತನಾಗಿ ಆಯಾಸವಿಲ್ಲದಲೆ ಊಧ್ರ್ವಗಮನದಿ ಪ್ರಾಣ ಅಪಾನನಿಂದಗಲಲೀದೇಹ ಭೂಶಯನ ವಾಸ ಜಡವೆಂದೆನಿಸಿ ಆ ಶರೀರವು ಭೂತಪಂಚಕದಿ ಸೇರುವುದು ಪ್ರಾಣೇಶ ನೀನಾಗ ಹರಿಯನ್ನು ಸೇರುವೆ ಏಸು ಚರಿತೆಯೊ ಅನಿಲ ಶಾಶ್ವತನು ನೀನು ಅಶಾಶ್ವತ ದೇಹಗಳ ಮಾಳ್ಪ ನಿನ್ನಯ ಕಾರ್ಯ ಏಸುಕಾಲಕು ದೇಹದಿಂ ಮೃತರೈಯ್ಯ ಜೀವರು ಶ್ರೀಶನಾತ್ಮಜ ನೀನಮೃತನೆನಿಸೀ ಮೆರೆವೆ ಈಶ ಪ್ರೇರಣೆ ನಿನಗೆ- ನಿನ್ನ ಪ್ರೇರಣೆ ಎಮಗೆ ಅಸುಪತಿಯೆ ನಿನಗಿದು ಹೊಸ ಪರಿಯಲ್ಲವೊ ಮೀಸಲಾಗಿರಿಸು ಶ್ರೀ ವೇಂಕಟೇಶನ ಪಾದ ದಾಸನೆನಿಸೊ ಪವನೇಶ ಉರಗಾದ್ರಿವಾಸ ವಿಠಲನ ದಾಸ ಎನ್ನ ಮನದಾಸೆ ನೀ ಸಲಿಸಿ ನಿಜ ದಾಸಜನ ಸಹವಾಸವಿತ್ತು ಅನಿಶ ಭವ ಪಾಶ ಸಡಿಲಿಸಿ ಸುಖವಾಸವೀಯೊ ಗುರು ಮಾತರಿಶ್ವ 3
--------------
ಉರಗಾದ್ರಿವಾಸವಿಠಲದಾಸರು
ಮಂದರೋದ್ಧರಾ-ಬಂದು ಕಣ್ಣಮುಂದೆ ನಿಲ್ಲೋ ಪ ಬಡವರೊಡೆಯನೆಂದು ನಿನ್ನ ಅಡಿಯ ಬಿಡದೆ ನಂಬಿದೆನೋ ಕಡುದಯಾನಿಧೆ ಬಡಕುಚೇಲನ ಪಿಡಿಯವಲಿಗೆ ಒಲಿದು ಪೊರೆದೆ1 ಸರ್ವಸಾರಭೋಕ್ತ ನೀನೆ ತೋರ್ವುದಿಲ್ಲ ಕೊಡಲು ನಿನಗೆ ಸರ್ವದೇವಸಾರ್ವಭೌಮನೀ ನೋರ್ವ ವ್ಯಾಪ್ತನಿರ್ಲಿಪ್ತ 2 ಪ್ರಣತಕಾಮದನೆಂದು ಅಂದು ಅಣುಗಧೃವನಾಕ್ಷಣದಿ ದಣಿಸಲಾಗದೋ ದೀನರಕ್ಷಕ 3 ಮುಕುತರೊಡೆಯ ಭಕುತವತ್ಸಲ ಯುಕುತಿತೋರದೊ ನಿನ್ನ ಧ್ಯಾನಕೇ ಶಕುತಿಯಿತ್ತು ಸಲಹೊ ಎನ್ನನು ಸಕಲಲೋಕೋದ್ಧ್ದಾರ ಧೀರ 4 ಎಲ್ಲಜನರ ಪೊರೆಯಲು ಶ್ರೀನಲ್ಲ ನಿಂತೆಯೊ ಶೇಷಶೈಲದಿ ವಲ್ಲಭಾ ಶ್ರೀ ವೆಂಕಟೇಶ ನೀ- ನೆಲ್ಲಬಲ್ಲೆನ್ನ ಸೊಲ್ಲ ಲಾಲಿಸೊ 5
--------------
ಉರಗಾದ್ರಿವಾಸವಿಠಲದಾಸರು