ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನಂಥ ಕರುಣಿಗಳಿನ್ನುಂಟೆ ಭುವಿಯಲ್ಲಿ _ ಧನ್ವಂತರೇ ಪ ಚೆನ್ನ ಪ್ರಸನ್ನ ನೀನಾಗುತ ಇವಗಿನ್ನುಘನ್ನ ರೋಗವ ಕಳೆದುನ್ನುತ ಸುಖವೀಯೋ ಅ.ಪ. ಉಪಟಳ - ಕತ್ತರಿಸು ಶೀಘ್ರದೀಹಸ್ತ ಕಲಶಾಮೃತ - ಸ್ರವಿಸಿ ವೇಗದಿ ಅಪಮೃತ್ಯುವ ಹರಿಸಯ್ಯ - ಭಕ್ತಳ ಭರ್ತುವಿನ1 ಆರ್ತರುದ್ಧಾರಿಯೆ - ಭಕ್ತರ ಪರಿಪಾಲಕರ್ತ ಸಂಹರ್ತ - ಮೂರ್ಜಗಕೆಲ್ಲ ನೀನೇನಿತ್ಯಾನಿತ್ಯದ - ಜಗಕೆಲ್ಲ ಸ್ವಾಮಿಯೆಭೃತ್ಯಳ ಮಾಂಗಲ್ಯ - ಘಟ್ಟಿಯೆಂದೆನಿಸೋ 2 ಪ್ರಾಣ ಗುರು ಜಯ - ವಿಠಲ ದಾಸಿಯಪ್ರಾಣನಾಥನ ಪ್ರಾಣ - ಉಳಿಸುವುದೆನುತಪ್ರಾಣ - ಪ್ರಾಣನೆ ಎನ್ನ - ಬಿನ್ನಪವ ಜಗತ್ರಾಣ ಗುರು ಗೋವಿಂದ ವಿಠಲ - ಸಲ್ಲಿಸೋ 3
--------------
ಗುರುಗೋವಿಂದವಿಠಲರು
ಕೃಪಣ ಶ್ರೀಪಾದಾರ್ಚನೆಯನಿತ್ತು ಪ ಅಪಾರ ಜನುಮದ ಪಾಪೌಘ ಬೆನ್ನಟ್ಟಿ ತಾಪಗೊಳಿಸುತ್ತಿದೆ ಈ ಪರಿಭವದೊಳು ಅ.ಪ. ಪತಿತ ನಾನಾದರೂ ಪತಿತ ಪಾವನ ನೀನು ಪಶುಪತಿ ಪಾಪಹರ ಗತಿಹೀನರಿಗೆ ನೀನೆ ಗತಿದರ್ಶಕನೆಂದು ತುತಿಸುತ್ತಿಹುದು ವೇದತತಿ ಸಮ್ಮತವಾಗಿ 1 ಭವಭವದಲಿ ಬಂದು ಬವಣೆಗಳಲಿ ಬೆಂದು ಬಳಲಿದೆ ಭಕ್ತ ಬಂಧು ಭವಹರ ನೀನೆಂಬುದನು ಭವಿಗಳಿಂ ನಿತ್ಯ ಶ್ರವಣದಿ ಕೇಳಿ ನಿನ್ನವರವನೆನಿಸಿದೆ 2 ಗೌರಿ ಮನೋಹರ ಗೌರಾಂಗ ಭಕ್ತರು ದ್ಧಾರಿಯೆ ಶೂಲಧರ ಸಾರಿದೆ ನಿನ್ನಂಘ್ರಿವಾರಿಜಯುಗಳವ ಕಾರುಣ್ಯದಲಿ ನೋಡು ಅಭಯವ ನೀಡು 3 ಮುಪ್ಪುರಹರ ಮುಕ್ಕಣ್ಣ ಗಂಗಾಧರ ಮೃತ್ಯು ಮೃತ್ಯುವೆ ಶಂಕರಾ ಸರ್ಪಭೂಷಣ ಅಪಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ಸುರೇಶ 4 ಅಜ ಸಂತನಧ್ವರ ಭಜನೆಯ ಕೆಡಿಸಿದ ವಿಜಯ ವಿಗ್ರಹ ಶರೀರ ಸುಜನರ ಹೃದಯಾಂಬುಜದಲ್ಲಿ ಮಿನುಗುವ ರಜದೂರ ಶ್ರೀಕಾಂತ ನಿಜಭಕ್ತ ಗುರುವರ 5
--------------
ಲಕ್ಷ್ಮೀನಾರಯಣರಾಯರು
ಗಣಪತೇ - ಪಾಹಿ - ಗಣಪತೇ ಪ ಗಣಪತಿ ಪಾರ್ವತಿ ತನಯಾ | ಭಕ್ತಜನಕೆ ಕೊಡುವುದು ವಿನಯಾ | ಆಹಮನದೊಳು ನೀನಿಂತು | ಅನುಗಾಲ ಹರಿಗುಣಗಣಗಳ ಪೊಗಳುವ | ಮನವ ನೀ ಪಾಲಿಸೋ ಅ.ಪ. ಬಾಲೇಂದು ಮೌಳಿಯ ತನುಜ | ವರಶೈಲಜೆ ಶರೀರ ಮಲಜಾ | ಪುಟ್ಟಿಶ್ರೀಲೋಲ ಕೃಷ್ಣ ರುಕ್ಮಿಣಿಜ | ನೆಂದುಪೇಳುವರು ಮಾರನನುಜಾ | ಆಹಕಾಳಗದೊಳು ಬಲು | ಅಸುರರ ಅಸುಗಳಕೀಲಿಸುತಲಿ ಬಹು | ಭೂಭಾರ ನಿಳುಹಿದ 1 ಸುಜ್ಞ ಭಕ್ತಾಧೀನ ಗಣಪಾ | ಬಂದವಿಘ್ನಗಳ್ಹರಿಸುವೆ ಭೂಪ | ನೀನುಭಗ್ನ ಗೈಸೋ ಮನಸ್ತಾಪಾ | ಇಂಗಿತಜ್ಞ ಬೇಡುವೆ ತವ ಕೃಪಾ | ಆಹಮಗ್ನ ಮಾಡಿಸು ಮನ | ಮೊದಲಾದ ಕರುಣವಯಜ್ಞೇಶ ಶ್ರೀಹರಿ | ಪದದ್ವಯ ವನಜದಿ 2 ಸಿಂಧುರಾಸ್ಯನೆ ಬಹು ಗುಣ | ಪೂರ್ಣಮಂದರೋದ್ಧಾರಿಯೆ ಕರುಣ | ಪಾತ್ರನೆಂದು ಹೊಕ್ಕನೊ ತವ ಚರಣ | ಕಂದನೆಂದು ಕಾಯೆಲೊ ಬಹು ಕರುಣ | ಆಹನಂದ ನಂದನ ಗುರು | ಗೋವಿಂದ ವಿಠಲನಬಂಧುರ ಚರಣವಾ | ನಂದದಿ ತುತಿಪಂತೆ 3
--------------
ಗುರುಗೋವಿಂದವಿಠಲರು
ಭಜನೆ ಶ್ರೀ ರಾಮ ಭಜನೆ ಆಮ್ನಾಯ ವಿಸ್ತರ | ಭೂಮಾ ಗುಣಾರ್ಣವಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಪ ಶ್ರೀಶನೇ ವಿಭುದೇಶನೇ ||ಅಸುರಿ ವೃಷಹರ | ಶೇಷಾದ್ರಿ ಮಂದಿರಶ್ರೀ ಮನ್ನಾರಾಯಣ | ರಾಮ್ ರಾಮ್ ರಾಮ್ ಅ.ಪ. ಪೃಥ್ವಿಧರಾಧರ | ಸತ್ಯ ಮನೋಹರಭಕ್ತಾರ್ತಿ ಪರಿಹರ | ರಾಮ್ ರಾಮ್ ರಾಮ್‍ನಿತ್ಯನೇ ನಿರ್ಲಿಪ್ತನೇ ||ಶಕ್ತ್ಯಾದಿ ರೂಪಧರ | ಆಪ್ತರೊಳಗೆ ವರಭೃತ್ಯರ್ಗ ಭೀಷ್ವದ | ರಾಮ್ ರಾಮ್ ರಾಮ್ 1 ದಾನವ ಧ್ವಂಸನೆ | ಆನಂದ ಪೂರ್ಣನೆಆನಂದ ಮುನಿನುತ | ರಾಮ್ ರಾಮ್ ರಾಮ್‍ಶ್ರೀ ನಿಧೇ ಕರುಣಾಂಬುಧೇ ||ಮಾನುನಿ ವರದನೆ | ಮೌನಿಯ ಕಾಯ್ದನೆಜ್ಞಾನ ಸುಗಮ್ಯನೆ | ರಾಮ್ ರಾಮ್ ರಾಮ್ 2 ಈಶಾಹಿ ವಂದ್ಯನೆ | ವಾಸಿಷ್ಠ ಕೃಷ್ಣನೆವಸುದೇವ ತನಯನೆ | ರಾಮ್ ರಾಮ್ ರಾಮ್‍ಈಶನೇ ವರದೇಶನೇ ||ದಶಾಸ್ಯ ಕುಲವನ | ಕೃಶಾನು ಎನಿಪನೆದಾಶರಥಿüಯೆ ಪಾಹಿ | ರಾಮ್ ರಾಮ್ ರಾಮ್ 3 ಕಾಯ ಸೂರ್ಯ ವೀರ್ಯದಾತಪ್ರೇರ್ಯ ಪ್ರೇರಕ ಪಾಹಿ | ರಾಮ್ ರಾಮ್ ರಾಮ್ 4 ನೀರದ ನಿಭಕಾಯ | ವಾರಿಜಾಕ್ಷಿಗೆ ಪ್ರಿಯನಾರಿ ಚೋರಾರಿಯೆ | ರಾಮ್ ರಾಮ್ ರಾಮ್‍ಧೀರನೆ ಗಂಭೀರನೇ ||ಮೂರು ಲೋಕಗಳಲ್ಲಿ | ಆರುಂಟು ನಿನ್ನ ಸರಿಕಾರುಣ್ಯ ಮೂರುತಿ | ರಾಮ್ ರಾಮ್ ರಾಮ್5 ಪತಿ | ನಂಬೀದ ಭಕ್ತರಬೆಂಬಿಡದಲೆ ಕಾವ | ರಾಮ್ ರಾಮ್ ರಾಮ್ 6 ಜಗ ಪ್ರಾಣನೊಳಗೆ ಇದ್ದು | ಜಗವನ್ನು ಸೃಜಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್‍ಪ್ರಾಣನೇ ಜಗತ್ತ್ರಾಣನೇ ||ಅಗಜೆ ಪತಿಯೊಳಿದ್ದು | ಜಗವೆಲ್ಲ ಲಯಿಸುವಿಜಗದೇಕ ಕಾರಣ | ರಾಮ್ ರಾಮ್ ರಾಮ್ 7 ಪ್ರಾಣನೀತಾನುಜ | ಪ್ರಾಣದಾತೃ ಹರಿಪ್ರಾಣಂಗೆ ಪ್ರಾಣನೆ | ರಾಮ್ ರಾಮ್ ರಾಮ್‍ಪ್ರಾಣನಾ ಆಲಿಗಂನಾ ||ನೀನಾಗಿ ಮಾಡಿ ಅವಗೆ | ಸಾಷ್ರ್ಣಿ ಮುಕ್ತಿಯನಿತ್ತೆಕಾಣೆ ಕಾರುಣ್ಯ ಕೆಣೆ | ರಾಮ್ ರಾಮ್ ರಾಮ್ 8 ಅಂಜನಿ ಸುತನಾಗಿ | ಕಂಜಸಖನಿಗ್ಹಾರ್ದಸಂಜೀವ ಧರ ಧರ | ರಾಮ್ ರಾಮ್ ರಾಮ್‍ದೈತ್ಯನಾ ಪ್ರಭಂಜನಾ ||ಸಂಜೆಯ ಚರರನು | ಭಂಜಿಸಿ ಅರ್ಪಿಸಿದಸಂಜೀವರಾಯ ಪಿತ | ರಾಮ್ ರಾಮ್ ರಾಮ್ 9 ಪತಿ | ಪದ್ಮಾಸನನ ಪಿತಪದ್ಮನಾಭನೆ ಪಾಹಿ | ರಾಮ್ ರಾಮ್ ರಾಮ್‍ರುದ್ಧನೇ ಅನಿರುದ್ಧನೇ ||ಮುದ್ದಿನ ಮೊಗದವ | ಗೆದ್ದು ಕುಜನ ತತಿಸದ್ಮದೊಳಗೆ ತೋರೊ | ರಾಮ್ ರಾಮ್ ರಾಮ್ 9 ಇಂದಿರೆ ರಮಣನೆ | ಚಂದಿರ ವದನನೆಮಂದರೋದ್ಧಾರಿಯೆ | ರಾಮ್ ರಾಮ್ ರಾಮ್‍ಸುಂದರಾ ಬಹು ಸುಂದರಾ ||ಕಂದರ್ಪ ಕೋಟಿ ಬಹು | ಸುಂದರ ಗುರು ಗೋ-ವಿಂದ ವಿಠಲ ಪಾಹಿ | ರಾಮ್ ರಾಮ್ ರಾಮ್10
--------------
ಗುರುಗೋವಿಂದವಿಠಲರು