ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೆರಳಿಪೋದರು ವಿಠ್ಠಲಾರ್ಯರಿಂದು ಮುರಹರನ ಚರಣವನು ಸ್ಮರಿಸುತಲಿ ಹರಿಪುರಕೆ ಪ ಸುರಪುರದಿ ಜನಿಸಿ ದೇವಾಂಶರೆಂದೆನಿಸಿದರು ಪುರುಹೂತನಂತೆ ಸಕಲೈಶ್ವರ್ಯದಿಂ ಗುರುರಾಘವೇಂದ್ರರೊಲಿವರಿಗೆ ಪಾತ್ರರೆಂದೆನಿಸಿ ನರಯಾನದಲಿ ಕುಳಿತು ಮೆರೆದರತಿ ವೈಭವದಿ1 ಬಂದ ಶಿಷ್ಯರಿಗೆ ನಿರುತ ಅನ್ನೋದಕವನಿತ್ತು ತಂದೆಯಂತೆ ಸಲಹಿ ಪ್ರೀತಿಯಿಂದ ಮಂದಹಾಸದಿ ಶಾಸ್ತ್ರಮರ್ಮಗಳ ಪೇಳಿಬುಧ ರೆಂದೆನಿಸಿದಂಥ ಮಹಾಮಹಿಮರಾನಂದದಲಿ2 ಭಾಗವತ ಪುರಾಣವ ಜನಕೆ ಅತಿಹಿತದಿ ಪೇಳಿ ದುಷ್ಕøತವ ಕಳೆದು ಗತಿಯೆಂದು ನಂಬಿದ ಭಕುತ ಜನಕೆಧರ್ಮಪ ದ್ಧತಿಗಳನು ಪೇಳುತ ಪ್ರತಿಮರೆಂದೆನಿಸಿ 3 ಭೂತಲದಿ ಜನಿಸಿ ಬಹು ಖ್ಯಾತಿಯನು ಪಡೆದು ನರ ನಾಥರಿಂದಲೆ ಮಾನ್ಯರಾಗಿ ಮೆರೆದು ಪ್ರೀತಿಯಿಂ ಭಜಿಪ ಶಿಷ್ಯೋತ್ತಮರನುದ್ದರಿಸಿ ಪತಿ ಬಳಿಗೆ ಪೋಗುವಾ ತುರದಿ4 ಮೋದದಿಂ ಪಿಂಗಲ ಸಮಾ ಮಾಘವದಿ ಪಂಚ ಮೀ ದಿನದಿ ಆದಿವಾರ ಸ್ವಾತಿಯೋಳ್ ಶ್ರೀದಕಾರ್ಪರ ನಾರಶಿಂಹ ವಿಠ್ಠಲನ ಪದ ಸಾದರದಿ ಧೇನಿಸುತ ಮೇದಿನಿಯ ತ್ಯಜಿಸಿ 5
--------------
ಕಾರ್ಪರ ನರಹರಿದಾಸರು
ಪಾಲಿಸಬೇಕಯ್ಯ ಪವಮಾನ ದೂತಾ ಪ. ಬಾಲಕನು ಮಾಡಿರುವ ಅಪರಾಧವೆಣಿಸದೆಲೆ ಅ.ಪ. ಕಾಲ ಶಿಷ್ಟರೊಡೆಯಮುಟ್ಟಿ ಭಜಿಸುವ ನಿನ್ನ ಘಟ್ಟಿ ಜ್ಞಾನಮೃತವಕೊಟ್ಟು ಸಲಹಲಿ ಬೇಕು ದಿಟ್ಟ ಪುರುಷ 1 ಮಧ್ವ ದಾಸರೊಳ್ ನಿಂದು ತಾರತಮ್ಯ ಪಂಚಭೇದಪದ್ಧತಿಗಳನುಸರಿಸಿ ತಿದ್ದಿ ತಿಳುಹಿದೆಯೋ ಶ್ರೀಮಧ್ವರಾಯರೇ ಜಗಕೆಲ್ಲ ಗುರುವೆಂಬಶ್ರದ್ಧೆಯನು ಪುಟ್ಟಿಸಿದೋ ಶೇಷಪದ ಯೋಗ್ಯ 2 ಮಂದಮತಿಯೆಂದು ನಾ ನಿಂದ್ಯ ಮಾಡದೆ ಮನಮಂದಿರದಿ ಛಂದದಲಿ ಪೊಳೆಯಬೇಕುಮಂದರೋದ್ಧರನ ಪದ ಕುಂದದಲೆ ಭಜಿಸುವಸಿಂಧುಶಯನ ತಂದೆವರದವಿಠಲದಾಸ 3
--------------
ಸಿರಿಗುರುತಂದೆವರದವಿಠಲರು
ಸತ್ತು ಚಿತ್ತಾನಂದ ಭಕ್ತಜನಬೆಂಬಲನೆ ಸತ್ಯಾತ್ಮ ಸರ್ವೋತ್ತಮ ಪ ಮೃತ್ಯುಸಂಹರ ಸರ್ಗಮತ್ರ್ಯಪಾತಾಳತ್ರಯ ಶೌರಿ ಅ.ಪ ಬದ್ಧಕುಲಹರಣ ಗೋವರ್ಧನೋದ್ಧಾರ ಕ್ಷೀ ರಾಬ್ಧಿ ಕನ್ನಿಕಾರಮಣ ಬದ್ಧಸಂಸಾರದೊಳಗೆ ಬಿದ್ದು ಬಳಲುವ ಎನ್ನ ನುದ್ಧರಿಸು ದಯಭೂಷಣ ಬಿದ್ದೆ ನಿಮ್ಮಯಪದಕೆ ಮಧ್ವಮುನಿಪ್ರಿಯನೆ ಪರಿ ಶುದ್ಧನೆಂದೆನಿಸೆನ್ನ ಶುದ್ಧಪದ್ಧತಿಗಳನು ತಿದ್ದು ಎನ್ನೊಳಗಿದ್ದು ಶುದ್ಧಚೈತನ್ಯರೂಪ ಭೂಪ 1 ಕಪಟಬುದ್ಧಿಯ ಕಳೆದು ಅಪರೂಪ ನಿಜಜ್ಞಾನ ಕೃಪೆಮಾಡು ಭಕ್ತಲೋಲ ಅಪರೋಕ್ಷಮತಿ ನೀಡಿ ಅಪಮೃತ್ಯು ಪರಿಹರಿಸು ಅಪರಿಮಿತ ಮಹಿಮ ಜಾಲ ಸುಫಲದಾಯಕ ನಿಮ್ಮ ಜಪವೆನ್ನ ಜಿಹ್ವೆಯೊಳು ಸ್ಥಾಪಿಸೈ ಭಜಕಜನಪಾಲ ಕಪಿವರದ ವನಮಾಲ ಕಪಟಗಳಕುಲಕಾಲ ಕೃಪಾದೃಷ್ಟಿನೀಡೆನ್ನೊಳು ಕೇಳು 2 ಭ್ರಷ್ಟನು ಇವನೆಂದು ಬಿಟ್ಟಿ ಬೇಸರ ಬೇಡ ಮುಟ್ಟಿಭಜಿಪೆ ತವಪಾದವ ಎಷ್ಟು ತಪ್ಪಿರ್ದರು ಸುಟ್ಟು ಸಫಲೆನಿಸೆನ್ನ ಕೆಟ್ಟ ಬವಣೆ ಕಳಿಯಭವ ಹುಟ್ಟಿ ಸಾಯುವ ಮಹಕೆಟ್ಟ ಕಷ್ಟದ ಹಾದಿ ಕಟ್ಟುಮಾಡು ಹೇ ಮಾಧವ ದಿಟ್ಟ ಶ್ರೀರಾಮ ಎನ್ನ ಇಷ್ಟದೇವರು ನೀನೆ ಶಿಷ್ಟ ಸಜ್ಜನರ ಪ್ರೇಮಿ ಸ್ವಾಮಿ 3
--------------
ರಾಮದಾಸರು