ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

351ಆದಿತ್ಯದೇವ ತ್ವತ್ಪಾದಯುಗಳಕಭಿ ವಾದನವ ಮಾಳ್ಪೆ ಅನುದೀನ | ಅನುದೀನ ಸಜ್ಜನರ ವ್ಯಾಧಿಯ ಕಳೆದು ಸುಖವೀಯೊ 1 352ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನೊ ಸ ರ್ವಜ್ಞ ನೀನೆಂದು ಸರ್ವತ್ರ | ಸರ್ವತ್ರ ಎನಗೆ ಬ್ರ ಹ್ಮಜ್ಞಾನ ಭಕುತಿ ಕರುಣೀಸೊ 2 353 ಸೂರಿಗಮ್ಯನೆ ವಾಕ್ಶರೀರ ಬುದ್ಧಿಜವಾದ ಪಾರ ದೋಷಗಳನೆಣಿಸಾದೆ | ಎಣಿಸಾದೆ ಭಗವಂತ ನಾರಾಧನೆಯನಿತ್ತು ಕರುಣೀಸೊ 3 353 ರೋಹಿಣೀರಮಣ ಮದ್ದೇಹಗೇಹಾದಿಗಳ ಮೋಹ ಪರಿಹರಿಸಿ ಮನದಲ್ಲಿ | ಮನದಲ್ಲಿ ಎನಗೆ ಗರುಡ ವಾಹನನ ಸ್ಮರಣೆಯನು ಕರುಣೀಸೊ 4 354ಕ್ಷೀರಾಬ್ದಿಜಾತ ಮಾರಾರಿಮಸ್ತಕಸದನ ವಾರಿಜೋದ್ಭವನ ಆವೇಶ | ಆವೇಶಪಾತ್ರ ಪರಿ ಹಾರ ಗೈಸೆನ್ನ ಭವತಾಪ 5 355 ದತ್ತದೂರ್ವಾಸನನುಜ ಅತ್ರಿಸಂಭವನೆ ತ್ವ ದ್ಭøತ್ಯ ನಾನಯ್ಯ ಎಂದೆಂದು | ಎಂದೆಂದು ಪ್ರಾರ್ಥಿಸುವೆ ಹೃತ್ತಿಮಿರ ಕಳೆದು ಸಂತೈಸೊ 6 356 ಕೋಲ ಭೂನಂದನ ಪ್ರವಾಳ ಸಮವರ್ಣ ಕರ ವಾಳ ಸಮಖೇಟ ನಿಶ್ಯಂಕ | ನಿಶ್ಯಂಕನಾಖ್ಯ ಸುರ ಮೌಳಿ ನೀಯೆನ್ನ 7 357 ಮಂಗಳಾಹ್ವಯನೆ ಸರ್ವೇಂಗಿತಜ್ಞನೆ ಅಂತ ರಂಗದಲಿ ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ ಅನುದಿನ 8 358 ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ ಪಾಮರನಿಗಳವೆ ಎಂದೆಂದು | ಎಂದೆಂದು ಸಜ್ಜನರ ಕಾಮಿತಾರ್ಥವನೆ ಕರುಣೀಸೊ 9 359 ಬುಧನೆ ನೀ ಸುಗುಣವಾರಿಧಿಯೆಂದು ಬಿನ್ನೈಪೆ ಕ್ಷುಧೆಯ ಸಂಹರಿಸಿ ಸುಜ್ಞಾನ | ಸುಜ್ಞಾನ ಸದ್ಭಕ್ತಿ ಸುಧೆಯ ಪಾನವನೆ ಕರುಣೀಸೊ 10 360 ಚಂದ್ರನಂದನ ಸತತ ವಂದಿಸುವೆ ಮನ್ಮನದ ಮಮದೈವ ಸರ್ವ ಗೋ ವಿಂದನಹುದೆಂದು ತಿಳಿಸಯ್ಯಾ 11 361 ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು ತೋರು ಸಜ್ಜನರ ಸನ್ಮಾರ್ಗ | ಸನ್ಮಾರ್ಗ ತೋರಿ ಉ ದ್ಧಾರಗೈಸೆನ್ನ ಭವದಿಂದ 12 362 ನತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನದು ರ್ಮತಿಯ ಪರಿಹರಿಸಿ ಸುಜ್ಞಾನ ಸುಜ್ಞಾನವಿತ್ತು ಶ್ರೀ ಪತಿಯ ತೋರೆನ್ನ ಮನದಲ್ಲಿ 13 363 ಸುರರಾಜಗುರುವೆ ತ್ವಚ್ಚರಣಾರವಿಂದಗಳಿ ಗೆರಗಿ ಬಿನ್ನೈಪೆ ಇಳೆಯೊಳು ಇಳೆಯೊಳುಳ್ಳಖಿಳ ಬ್ರಾಹ್ಮ ಣರ ಸಂತೈಸೋ ದಯದಿಂದ 14 364 ತಾರಾರಮಣನೆ ಮದ್ಬಾರ ನಿನ್ನದೊ ಮಹೋ ದಾರ ನೀನೆಂದು ಬಿನ್ನೈಪೆ | ಬಿನ್ನೈಪೆ ದುರಿತವ ನಿ ವಾರಿಸಿ ತೋರೊ ತವರೂಪ 15 365 ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ ಚಕ್ರಾಬ್ಜಪಾಣಿ ಗುಣರೂಪ | ಗುಣರೂಪ ವ್ಯಾಪಾರ ಪ್ರಕ್ರಿಯವ ತಿಳಿಸೊ ಪ್ರತಿದೀನ 16 366 ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ ಗವತ ಭಾರತ ಮೊದಲಾದ | ಮೊದಲಾದ ಶಾಸ್ತ್ರಗಳ ಶ್ರವಣ ಸುಖವೆನಗೆ ಕರುಣೀಸೊ | 17 367 ನಿಗಮಾರ್ಥ ಕೋವಿದನೆ ಭೃಗುಕುಲೋತ್ತಂಸ ಕೈ ಮುಗಿದು ಬೇಡುವೆನೊ ದೈವಜ್ಞ | ದೈವಜ್ಞ ಹರಿಯ ಓ ಲಗದಲ್ಲಿ ಬುದ್ಧಿಯಿರಲೆಂದು 18 368 ತರಣಿನಂದನ ಶನೈಶ್ಚರ ನಿನ್ನ ದಿವ್ಯ ಪದಾಬ್ಜ ಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಬಹುಜನ್ಮಕೃತ ಪಾಪ ತ್ವರಿತದಿಂದಿಳಿಸಿ ಪೊರೆಯೆಂದು 19 369 ಛಾಯಾತನುಜ ಮನೋವಾಕ್ಕಾಯ ಕ್ಲೇಶಗಳಿಂದ ಸಮಯದಿ ಶ್ರೀ ಲಕ್ಷ್ಮೀನಾ ರಾಯಣನ ಸ್ಮರಣೆ ಕರುಣೀಸೊ 20 370 ಇದನೆ ಬೇಡುವೆ ಪದೇಪದೆಗೆ ಪುಷ್ಕರನ ಗುರುವೆ ಹರಿಮೂರ್ತಿ ಕೀರ್ತನೆಗೆ ಳೊದಗಲೆನಗೆಂದು ಬಿನ್ನೈಪೆ 21 371ಅಹಿಕ ಪಾರತ್ರಿಕದಿ ನರಹರಿಯದಾಸರ ನವ ಗ್ರಹದೇವತೆಗಳು ದಣಿಸೋರೆ | ದಣಿಸೋರೆ ಇವರನ್ನು ಅಹಿತರೆಂದೆನುತ ಕೆಡಬೇಡಿ22 372 ಜಗನ್ನಾಥವಿಠ್ಠಲನ ಬದಿಗರಿವರಹುದೆಂದು ಹಗಲಿರುಳು ಬಿಡದೆ ತುತಿಸುವ | ತುತಿಸುವ ಮಹಾತ್ಮರಿಗೆ ಸುಗತಿಗಳನಿತ್ತು ಸಲಹೋರು 23
--------------
ಜಗನ್ನಾಥದಾಸರು
ಕೃತ್ತಿವಾಸ ಪೂಜ್ಯ ಚರಣೇ | ಮಹತತ್ವಮಾನಿ ಸತಿಯೆ ಸುಗುಣೆ ||ಅ|| ನಿತ್ಯ ನೀಡೆ ಹರಿಯ ಸ್ಮರಣೆ ಅ.ಪ. ವಿಧ್ಯುದ್ವಾಕ್ ದಿಙËಮಾನಿಯೆ | ಹೇದ್ಯುಪೃಥಿವಿ ಭಾರತೀಯೇಪ್ರದ್ಯುಮ್ನ ಕೃತಿಗೆ ಕುಮಾರಿಯೆ | ಬುಧ್ಯಾಭಿಮಾನಿಯೇ ಕಾಯೆವಿದ್ಯುತಿಸ್ಥಿತಿ | ಬುಧ್ಯಾಬ್ದಿಯೆ | ವಿಧ್ಯೇತರ | ಅವಿಧ್ಯೆಯ ಕಳೆಸದ್ಯೋಜನ | ಶ್ರದ್ದಾಂಬಾ | ಮದ್ದೇಹದಿ | ಸಿದ್ಧಿಸು ಹರಿ 1 ಮಂದ ಪತಿ | ಸುಂದರ ಪದ | ಸಂಧಿಸು ಮನ | ಮಂದಿರದಲಿ 2 ಭಿಕ್ಷೆ ನೀಡೆ ತಾಯೇ | ಯುಕುತಿ ಶಾಸ್ತ್ರ ಒಂದನರಿಯೇಸೌಖ್ಯ ತೀರ್ಥ ಮತವನ್ವೊರೆಯೇ ಮುಕುತಿ ಮಾರ್ಗ ತೋರಿ ಪೊರೆಯೇ ||ತೋಕನು ಎನೆ | ಸ್ವೀಕರಿಸುತ | ಲೋಕರುಗಳ | ವಾಕನು ದೂ-ರೀಕರಿಸು ಪ | ರಾಕೆನ್ನುವೆ | ಭೀಕರಭವ | ನೀ ಕರಗಿಸು 3 ಕಡಗ ಕಂಕಣ ದ್ವಾರ ಧಾರೆ | ಜಡಿತ ದುಂಗುರ ದೋಷ ದೂರೆಮುಡಿದ ಮಲ್ಲಿಗೆ ಕುಂಚುಕಧಾರೆ | ಉಡುಗೆ ಬಿಳುಪಿನಂಬರೆ ನೀರೇ || ಒಡ ನಡುವು | ನಿಡಿತೋಳೂ | ತೊಡೆಕದಳೀ | ಬಡುವು ಪರೀ |ಅಡಿಗೆರಗುವೆ | ಪೊಡ ವೀಶನ | ಧೃಡ ಭಕುತಿ | ತಡೆಯದೆ ಕೊಡು4 ಶರಣು ಮುಂದಣ ವಾಣಿ ಕರುಣ | ಗುರು ಗೋವಿಂದ ವಿಠಲ ಚರಣಾ |ಭರಣವೆನಿಪ ಸುಗುಣ ಗಣಾ | ಒರೆದು ಕಳೆಯೆ ಭವದ ಬಂಧನ |ಮಾರಯ್ಯನ | ಆರಾಧನೆ | ಚಾರೀಸದೆ | ಧಾರಾಣಿಗೆಭಾರಾದೆನು | ಕಾರುಣ್ಯವ | ತೋರೂವುದು ಭಾರತಿಯೇ 5
--------------
ಗುರುಗೋವಿಂದವಿಠಲರು
ತಾಳಲಾರೆನು ದೇವ ಪಾಪ ತಪ್ಪಿಸಿ ಬೇಗ ಸಂಜೀವ ಕಾಳಭೈರವನಿಗಪ್ಪಣೆಯ ಕೊಡೊ ದೈತ್ಯಕುಲ ಕಾಲ ಬಿಡಿಸುವುದೆನ್ನ ನೋವ ಪ. ನರಹರಿಯೆ ಸರ್ವತ್ರ ಇರುವಂಥ ನಿನಗೆ ನಾ- ನರುಹಲೇನಿಹುದಿನ್ನು ಜೀಯ ಉರಿಯನುಗುಳುವ ಘೋರ ಶರಗಳೋಲ್ ಪ್ರತಿನಿಮಿಷ ವಿರಿವುತಿದೆ ಬಲ್ಲಿ ಮಹರಾಯ ತರಹರಿಸಿ ದಿನದಿನಕೆ ಕರುಗುತಿಹ ಮದ್ದೇಹ ಸ್ಥಿರವಾಗಲೀ ನಿನ್ನ ಪಾಯ ದರ ಚಕ್ರ ಶಾಙ್ರ್ಗನಂದಕ ಚರ್ಮಗದೆಗಳನು ಧರಿಸಿ ವೋಡಿಸು ಶತ್ರುಮಾಯ 1 ಕಾಶೀಶ ಕಳುಹಿಸಿದ ಪೈಶಾಚ ದಕ್ಷಿಣಾಗ್ನಿಯನು ದೋಷವೆಣಿಸದ ಅಂಬರೀಷನಲಿ ಮುನಿದ ದು- ರ್ವಾಸ ಮುನಿಕೃತ ಕೃತ್ರಿಮವನು ನಾಶಗೈದಖಿಳಗುಣ ಭೂಷಣನೆ ನಿನಗೆನ್ನ ಪೋಷಣೆಯು ಬಹು ಭಾರವೇನು 2 ಸರ್ವಶಕ್ತಿಯೆ ನಿನಗೆದುರ್ವಾದ್ಯವುಂಟೆ ಗುರು ಶರ್ವ ಸುರನಾಥ ಮುಖವಂದ್ಯ ಗೀರ್ವಾಣ ಪಕ್ಷಜನ ನಿರ್ವಹಿಸಿ ನೀನೆ ಯೆನ- ಗಿರ್ವೆ ಗತಿಯಾಗಿ ಸುರವಂದ್ಯ ಬರ್ವ ದುರಿತಗಳ ಮಹದೂರ್ವಣೆಗೆ ಪುಡಿಗೈದು ಗರ್ವಿ ವೈರಿಗಳ ಸದೆ ಬಡಿದು ಪೂರ್ವದಿಂದಲಿ ಸೇವೆ ಸ್ವೀಕರಿಸು ಸರ್ಪವರ ಪರ್ವತೇಶನೆ ಬೇಗ ಒಲಿದು 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಹರಿಗೆ ಪ್ರಥಮಾಂಗ ಮಧ್ವಮೂರ್ತಿ ಪ ದೇಹ ಚತುರದಿ ಇದ್ದು ಜಗವ ಸಲಹುವೆ ದೊರೆಯೆ ಅ.ಪ. ಅಮೃತರೂಪನೆ ಹರಿಯ ಅಮೃತಮಯ ಭಕ್ತಿಯೊಳು ರಮೆ ಸಹಿತ ರಾಜಿಪನ ಅಚ್ಛಿನ್ನ ಅರ್ಚಕನೆ ಸಮರರಿಯೆ ನಿನಗಿನ್ನು ಅಜನುಳಿದು ಜೀವರೊಳು 1 ನಿನ್ನ ನಾಮಸ್ಮರಣೆ ನಿಸ್ವಾರ್ಥಿಯ ಕಥನ ನಿನ್ನ ವೈಭವ ಧ್ಯಾನ ಅಮೃತಪಾನ ನಿನ್ನ ಗುಣ ಕ್ರಿಯ ರೂಪ ನೆನೆನೆನೆದು ಸುಖಿಸುವನು ಧನ್ಯ ಸುರಕುಲದವನು ಜೀವನ್ಮುಕ್ತನವನಿಯೊಳು 2 ನಿನ್ನಲ್ಲಿ ಹರಿ ಇದ್ದು ಜಗವ ನಡೆಸುವ ತಾನು ನಿನ್ನಲ್ಲಿ ಶ್ರೀಹರಿಯ ಒಲುಮೆ ಅಮಿತ ನಿನ್ನ ಕರವಶ ಮುಕ್ತಿ ಮಾಡಿಹನು ಯದುಪತಿಯು ನಿನ್ನ ದಾಸರೆ ಹರಿಯ ಪುರವಾಸಿಗಳು ಸ್ವಾಮಿ3 ಜ್ಞಾನ ಬಲ ಭಕ್ತಿ ವೈರಾಗ್ಯ ಲಾಘವ ಶಕ್ತಿ ಧ್ಯಾನ ವಿದ್ಯಾ ಬುದ್ಧಿ ಕುಶಲ ತೇಜ ಪೂರ್ಣಪ್ರಾಜ್ಞತೆ ಸಿರಿಯ ಮಾಧುರ್ಯ ಶುಭವಾಕು ಪೂರ್ಣಧೈರ್ಯವು ಕಾರ್ಯ ಪೂರ್ಣ ನಿನ್ನಲಿ ಅಭಯ 4 ವಾಣಿ ಭಾರತಿ ನಿನ್ನ ವೈಭವವ ನೆನೆನೆನೆದು ಧೇನಿಸುತ ಆನಂದಮಗ್ನರಾಗಿ ಕಾಣದಲೆ ಕೊನೆ ಮೊದಲು ತತ್ವದ ಕಮಲದಲಿ ಜೇನಾಗಿ ಕ್ರೀಡಿಪರೊ ಮೈಮರೆದು ಸುಖ ಸುರಿದು 5 ಶಿವ ಶೇಷ ದ್ವಿಜ ರಾಜ ಸುರರಾಜ ಮೊದಲಾದ ಕಮಲ ರಜವ ಲವ ಬಿಡದೆ ಪೊತ್ತಿಹರೊ ಆನಂದ ಶರಧಿಯಲಿ 6 ಅಮಿತ ವೈಭವ ಗಾತ್ರ ಕಾಳಕೂಟವನುಂಡು ಮೆರೆದ ಮಹಿಮ ಶ್ರೀಲೋಲ ನಿನ್ನಲ್ಲಿ ಆನಂದ ಲೀಲೆಗಳ ಕೊಲಾಹಲದಿ ಮಾಳ್ಪ ಕಾರುಣ್ಯರೂಪದಲಿ 7 ರೇಣು ತೃಣ ಕಾಷ್ಟ ಬಹಿರಂತರದಲ್ಲಿ ಘನ ಮಹತ್ತು ಅಣು ಜೀವ ಚಿದ್ದೇಹದಲ್ಲಿ ಅನವರತ ಅಲ್ಲಿಪ್ಪ ಸರ್ವಮಂಗಳ ಹರಿಯ ಗುಣನಿಕರಗತ ಚಿತ್ರ ಜಗದಸುವೆ ನಿರ್ದೋಷ 8 ರಾಮದೂತನೆ ಹನುಮ ಹರಿ ಧೌತ್ಯಯನಗೀಯೊ ಬಂಟ ಸತತ ಹರಣ ವೃಕೋದರ ವೀರ ಶ್ರೀ ಮನೋಹರನÀಲ್ಲಿ ದಾಸ್ಯ ದೀಕ್ಷೆಯ ದೇಹಿ 9 ಪನ್ನಗ ರುದ್ರ ಸುರಗಣವು ಮೊದಲಾದ ಚರಾಚರ ಭ್ರೂ ಚಲನ ಮಾತ್ರದಿಂದ ಖರೆ ಸೃಷ್ಟಿ ಸ್ಥಿತಿ ಮುಕ್ತಿಯೈದುವರೊ ಘನ ಮಹಿಮ ವರ ವೇದ ಪ್ರತಿಪಾದ್ಯ 10 ಪರಮಮಂಗಳ ಜಯೇಶವಿಠಲನಂಘ್ರಿ ಸರಸಿಜವ ಬಿಡದ ಮಧುಪರಾಜ ಶರಣರಿಗೆ ಸುಜ್ಞಾನ ಶರಧಿಯನು ಪೊಂದಿಸಿದೆ ಕರುಣನಿಧಿ ಆನಂದಮುನಿ ನಿನ್ನ ಕೃಪೆ ಮುಕ್ತಿ 11
--------------
ಜಯೇಶವಿಠಲ
ಸಿಟ್ಟು ಮಾಡುವುದೆಂದಿಗು ಸಲ್ಲ ಪೂರ್ಣ ಸಿರಿನಲ್ಲ ಪ. ಮೋಹ ಪಾಶ ಮಿಕ್ಕು ಬಿಗಿದಿಹುದು ರಿಪು ವ್ಯೂಹ ಸುತ್ತಮುತ್ತ ನೆಗದಿಹುದು ದೇಹದಿ ದಿನದಿನ ಬಲಕುಂದಿ ಬಂತು ಚಿ- ದ್ದೇಹ ನೀನೊಲಿವ ಸನ್ನಹಗೊಳ್ವದೆಂತೊ 1 ಒಂದು ಸತ್ಕರ್ಮ ಸಾಧಿಸುವಲ್ಲಿ ಬೇಗ ಪಾತಕ ಝಲ್ಲಿ ಮಂದರಧರ ಮಧುಸೂದನ ಮನದಿ ನೀ ನಿಂದು ಸಾರ್ಥಕ ಮಾಳ್ಪ ತೆರವೆಲ್ಲ ಬಲ್ಲಿ 2 ಹಿಂದೆ ಮುಂದಿನ ಸರ್ವ ಕರ್ಮಫಲ ಎನ್ನ ತಂದೆ ಸ್ವೀಕರಿಸಿ ಮಾಡಿಸು ನಿರ್ಮಲ ಇಂದಿರೇಶ ವೆಂಕಟೇಶನೆ ತ್ವಚ್ಚರ- ಣೆಂದೀವರ ನೆರಳಿರಿಸನುಗಾಲ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹದ್ದೇಹಿ ಭಟರಿಂದ ಯಮನಾಜ್ಞೆಯಂತೆ ಪ ಶರಣಜನನಿಂದಕಗೆ ಪರಮಕುಂಭೀಪಾಕ ಪರಮಭೀಕರಜ್ವಾಲೆ ಕರುಣಶೂನ್ಯರಿಗೆ ಪರನಾರಿಗಳುಕುವಗೆ ಮೂತ್ರ ರಕ್ತಾಮೇಧ್ಯ ಉರುಬಾಧೆ ಕರ್ಮದುರ್ಗಾ ಪರಮ ನೀಚರಿಗೆ 1 ಮಾತಾಪಿತದೂಷಕಗೆ ಪ್ರೇತಕ್ರಿಮಿಕುಂತ ಭಯ ಪಾತಕಗೆ ರಾಕ್ಷಸರ ಭೂತಕ್ರಮಿದೀರ್ಘ ಘಾತಕಗೆ ಉಗ್ರತರ ವ್ಯಾಘ್ರಮುಖ ಭಟ ಶಿಕ್ಷೆ ರೋತು ಮಲತ ಮಜ್ಜ ನೀತಿಬಾಹಿರಗೆ 2 ಕಂಚಿನ್ವಾಯಸ ನರಕ ಕೇಳಾ ಕಪಟರಿಗೆ ಪಂಚಮಹಾಪಾತಕರಿಗುಳಿವಿನ ಉರುನರಕ ಕೂಪ 3 ಕಾದ ಉಕ್ಕಿನ ಪ್ರತಿಮೆ ಕಾಮಾಂಧ ಮೂಢರಿಗೆ ಕಾದು ಉರಿವರಗಿನೂಟ ಕಡುಲೋಭಿಗಳಿಗೆ ಕಾದ ಸೀಸದ ಮಡುವು ಮನೆಮುರುಕ ತುಂಟರಿಗೆ ಕಾದೆಣ್ಣೆಕೊಪ್ಪರಿಗೆ ಕುಟಿಲ ಕುಹಕರಿಗೆ 4 ಪರದ್ರವ್ಯಪಹಾರಿಗೆ ಭೇದಿ ಭೈರವಕೂಪ ನೆರೆನಂಬಿ ಕೊಲ್ಲವಗೆ ಮಸೆದಲಗುಕೊಡಲಿ ಪರರೊಗತನರಿದಗೆ ನರಕ ಚಂದ್ರಾರ್ಕಪರಿ ಗುರು ಹಿರಿಯರ್ಹಳಿದರಿಗೆ ಉರಿಸರಳ ಮಂಚ 5 ಕಾಲಯಮಪಾಶವು ತುಳಸಿದಳ ತುಳಿದವರಿಗೆ ಕಾಲಭೈರವ ಮೃತ್ಯು ಮಾಯಮೋಹಿಗಳಿಗೆ ಕಾಲಕರ ಶೂಲ ಕೊಂಡಿ ಚಾಂಡಾಲಗೆ ಸೂಳೆಯರ ಸೇವಕಗೆ ಕಾಲಯಮದಂಡ 6 ಸಂತ ಸಜ್ಜದಾನಸಂಗರಿಯದಧಮರಿಗೆ ಇಂತು ಎಂಬತ್ತು ಕೋಟಿ ನರಕಯಾತನವು ಅಂತಕಾರಿ ನಿನ್ನಾಜ್ಞೆಯಂತೆ ನಡೆಯುತಿವೆ ಎನ್ನ ಅಂತರದಿ ನಿಂತಿದನು ಗೆಲಿಸು ಶ್ರೀರಾಮ7
--------------
ರಾಮದಾಸರು