ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಲಧಿ ಪವನಜ ಪ್ರೇಮಾ ಪ ಪರಮ ಪಾವನ ನಾಮ | ಲೋಕಾಭಿರಾಮಾ ಅ.ಪ ಜಾನಕಿ ರಾಮ | ದಾನವ ಭೀಮಾ ಭಾನು ಕುಲೋದ್ದಾಮಾ | ನೀರದ ಶ್ಯಾಮ 1 ಮೌನಿಜನಾರಾಮ | ಶಿವನುತರಾಮ ಅನುಪಮಸೀಮ | ಮಾಂಗಿರಿಧಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿರ್ಜರ ಸಾರ್ವ ಭೌಮಾ ದನುಜಕುಲಭೀಮಾ ಭೀಮಾ ರಘು ಸದ್ವಂಶದೊಳು ದ್ದಾಮಾ ಕಾದುಕೋ ನಿನ್ನ ಭಕ್ತ ಸ್ತೋಮ ಮಂಗಳನಾಮ ಹನುಮ ತ್ಪ್ರೇಮಾತಮ ಸೀತಾ ಮನೋಭಿರಾಮ ಪ ಸರಸಿಜೋದ್ಭವನ ಮಂದಿರದೊಳರ್ಚನೆಗೊಂಡು ನಿರುತಾ ಪಾವನತರ ಚರಿತಾ ಸರ್ವದೇವರ ದೇವ ಇಷ್ಟಾಕರ ರಸನ್ವಯ ನೃ ಪರಕರವಾರಿರುಹ ಪೂಜಿತನಾಗಿ ದಶರಥಾ ನರಸಿ ಜಠರದಿ ಜನಿಸಿ ಮೆರೆದಿಹ ರಾಮಾ 1 ಗಾಧಿನಂದನನ ಸುಮೇಧಾ ರಕ್ಷಿಸಿದಾ ಗಾಧನಂದ ಬಲಬೋಧಾ ಮೇದಿನಿ ಜಾತಳನೊಲಿಸಲು ನೀಲ ಪ ಯೋಧರ ಶಾಮಲ ಸುಮನಸ ವಿ ರೋಧಿ ಲೋಕಮಯ ಸದೆದ ರಘುರಾಮಾ 2 ಚತುರವಿಂಶತಿ ದಶಶತ ಸಹಸ್ರ ಜಿತಾದ್ಯಮಿತಾ ಆದ್ಯಮಿತ ರೂಪ ಜಗನ್ನಮಿತಾ ಅತುಳ ಭುಜಬಲ ರಾವಣನ ಸಂ ತತಿ ಸವರಿ ಲಂಕಾಧಿಪತ್ಯ ನತ ವಿಭೀಷಣಗಿತ್ತಾ ವರದೇಂದ್ರ ಯತಿ ವರದ ಜಗನ್ನಾಥ ವಿಠ್ಠಲ ರಾಮಾ 3
--------------
ಜಗನ್ನಾಥದಾಸರು