ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ ಮರೆವರೇನೊ ಹರಿಯಾ ಪ ಬಹು ಜನುಮಗಳಲ್ಲಿ ಬಟ್ಟ ಬವಣಿಗಳರಿಯಾ ಅ.ಪ. ವಿಷಯ ಚಿಂತನೆ ಮಾಡಸಲ್ಲ ಮೇಷ ವೃಷನನಾದನು ಹಿಂದೆ ಪೌಲೋಮಿ ನಲ್ಲ ಝಷ ಕೇತುವಿನ ಮ್ಯಾಳ ಹೊಲ್ಲ ನಿರಾ ಶಿಷನಾಗು ಯಮರಾಯನೆಂದೆಂದೂ ಕೊಲ್ಲ 1 ಧನವೆ ಜೀವನವೆಂಬಿ ನಿನಗೆ ಸುಯೋ ಧನ ನೋಡು ಧನದಿಂದ ಏನಾದ ಕೊನೆಗೆ ಅನಿರುದ್ಧ ದೇವನ ಮನೆಗೆ ಪೋಪ ಘನ ವಿಜ್ಞಾನವನೆ ಸಂಪಾದಿಸು ಕೊನೆಗೆ 2 ಹರಿದಾಸನಾಗಿ ಬಾಳೋ ಗುರು ಹಿರಿಯರ ಪಾದಕಮಲಕೆ ನೀ ಬೀಳೋ ನರರ ನಿಂದಾಸ್ತುತಿ ತಾಳೋ ದೇಹ ಸ್ಥಿರವಲ್ಲ ಸಂಸಾರ ಬಹು ಹೇಯ ಕೇಳೋ 3 ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ ಮಲ ಪೋಯಿತಲ್ಲದೆ ನಿರ್ಮಲ ಜ್ಞಾನ ಫಲಿಸದೆಂದಿಗು ಹೀನ ಬುದ್ಧಿ ಕಳೆದು ಸೇವಿಸು ಸಾಧುಗಳನನುದಿನ 4 ಜಿತವಾಗಿ ಪೇಳುವೆ ಸೊಲ್ಲಾ ಹರಿ ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲಾ ಪ್ರತಿಮೆ ಪೂಜಿಸಿದರೇ ನಿಲ್ಲ ಪರೀ ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲಾ 5 ಜ್ಞಾನೇಚ್ಛಾ ಕ್ರಿಯಾ ಶಕ್ತಿ ತ್ರಯವಾ ತಿಳಿ ದಾನಂದ ಪಡು ಬಯಸದಿರುಭಯವಾ ಸಾನುರಾಗದಿ ಬೇಡು ದಯವಾ ನೀ ಮ ದ್ದಾನೆಯಂದದಿ ಚರಿಸು ಬಿಟ್ಟು ಭಯವಾ 6 ಭಾವ ಕ್ರಿಯಾ ದ್ರವ್ಯಾದ್ವೈತ ತ್ರಯ ಆವಾಗ ಚಿಂತಿಸು ಭೂಮ್ಯಾದಿ ಭೂತಾ ಜೀವಿಗಳೊಳು ಜಗನ್ನಾಥ ವಿಠಲ ಗಾವಾಸ ಯೋಗ್ಯವೆಂದರಿಯೋ ಸಂತತಾ 7
--------------
ಜಗನ್ನಾಥದಾಸರು
ಲೋಕನೀತಿ (ಅ) ಅಂಟಿ ಅಂಟದ ಹಾಗೆ ಇರಬೇಕು ಪ ಈ ತಂಟೆ ಸಂಸಾರದ ಬುದ್ಧಿ ಉಂಟಾದವರಿಗೆಲ್ಲಾ ಅ.ಪ ಎಂಟು ಮದಗಳನ್ನು ಬಿಡಬೇಕು | ಹದಿ- ನೆಂಟನೇ ತತ್ವ ತಿಳಿಯಬೇಕು ಭಂಟನಾಗಿ ವೈಕುಂಠ ಸೇರುವದಕೆ 1 ಶತ್ರುಗಳಾರ್ವರ ಗೆಲ್ಲಬೇಕು | ನಿಜ- ಮಿತ್ರರಾರ್ವರೊಳು ನಿಲ್ಲಬೇಕು ರಾತ್ರಿ ಹಗಲು ಪತ್ನೀಪುತ್ರರೊಡನೆ ಕಮಲ- ಪತ್ರದಿ ನೀರಿದ್ದ ರೀತಿಯಿಂದಲಿ ತಾನು 2 ಮಾನವಮಾನ ಒಂದಾಗಬೇಕು | ಅನು- ಮಾನವಿಲ್ಲದೆ ತಿರುಗಲುಬೇಕು ಇನ್ನೇನಾದರು ಗುರುರಾಮವಿಠಲನಾ- ಧೀನನೆನುತ ಮದ್ದಾನೆಯಂದದಿ ತಾನು 3
--------------
ಗುರುರಾಮವಿಠಲ