ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತಿ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ ಪ ಭವ ಸಂಹಾರಣ ಪರಾಶರ ಮತ ವಿಸ್ತರಣಅ.ಪ. ತ್ರೇತೆಯೊಳಂಜನೆ ಉದರದಿ ಜನಿಸಿ ಸೀತಾನಾಥನ ಪಾದಕೆ ನಮಿಸಿ ದೌತ್ಯವ ವಹಿಸಿ ಕೀರ್ತಿಯ ಗಳಿಸಿ ಭಕ್ತಾಗ್ರಣಿಯೆನಿಸಿದ ಗುರುವೆ 1 ದ್ವಾಪರದಲಿ ನೃಪ ಕುಲದಲಿ ಬಂದು ಪಾಪಿ ಮಾರ್ಗದ ಪ್ರಮುಖರ ಕೊಂದು ದ್ರೌಪದಿ ಬೇಡಿದ ಸುಮವನು ತಂದು ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ 2 ಕಲಿಯೊಳು ಕುಜನರ ಮತಗಳ ಜರಿದು ಸುಲಲಿತ ಭಕ್ತಿಯ ಮತವನು ಒರೆದು ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ ತುಳುವ ವಿಪ್ರನಲಿ ಉದಿಸಿದೆ ಗುರುವೆ 3
--------------
ಲಕ್ಷ್ಮೀನಾರಯಣರಾಯರು