ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಪಿಡಿದೆನ್ನನು ಕಾಪಿಡು ನಲವಿಂ ಕನ್ನಡ ನುಡಿವೆಣ್ಣೆ ಪ. ಈ ಪಸುಳೆಗೈದಾ ಪಾಪವದಾವುದು ಕೋಪಿಸದಿರೆನ್ನಾಣೆ ಅ.ಪ ಮುಳಿವಿಂತೇತಕೆ ನಳಿನದಳಾಂಬಕೆ ಎಳೆಗೂಸಿನ ಮನಕೆ ಕಳವಳದಿಂದತಿ ಬಳಲಿಕೆಯಾದರು ತಳುವುದಿದೇನಿದು ಸಾಕೇ 1 ಮಾತೆಯ ಮಮತೆಗೆ ಸೋತು ಭಜಿಸುವೀ ಪೋತನ ನೆರೆನೋಡಿ ಪ್ರೀತಿಯಿಂ ಕರೆದಾತುಕೋ ನಲ್ವಾತಿನಿಂ ಕೈನೀಡಿ 2 ಪರಿಪರಿಯೆಡರಿನ ಗಿರಿದುರ್ಗಂಗಳಾವರಿಸಿರುತಿಹುದೆ ಪರಿಯಿಂದದನುತ್ತರಿಸಿ ಬಂದಪೆ ಕರುಣಿಸು ಭರದೆ 3 ಕಾರ್ಯ ಕಾರಣ ಕರ್ತೃ ನೀನಹುದಾರ್ಯೆ ಸದಾ ಪೊರೆಯೇ ಕೋರಿಕೆಗಳನೀಡೇರಿಸಿಯಣುಗರ ನಿರಪಾಯದೆ ಕಾಯೇ 4 ಭಾಷೆಗೆ ತಪ್ಪಿದ ದೋಷಿಯೆನ್ನುತುಪೇಕ್ಷಿಸಬೇಡೆನ್ನ ಶೇಷಗಿರೀಶನೆ ಪೋಷಕನಾಗಿರೆ ನಿರ್ದೋಷಿಯೆನಿಸುವೆ ನೀಂ5
--------------
ನಂಜನಗೂಡು ತಿರುಮಲಾಂಬಾ