ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂಧನ ಬಿಡಿಸು ಶ್ರೀಶಾ ಇಂದಿರೇಶಾ ಪ. ಇಂದು ಈ ಭವದಲ್ಲಿ ನೊಂದು ನೊಂದೆನೊ ದೇವಾ ಗೋವಿಂದಾ ಪಾಲಿಸಬೇಕಯ್ಯಾ ಗೋಗಳರಾಯ ಅ.ಪ. ಇಂದಿರೇಶನೆ ನಿನ್ನ ಒಂದಿನಾದಿ ನಾನು ದೈನ್ಯದಿ ಭಜಿಸದೆ ಸುಂದರ ಮೂರುತಿ ನೀನು ಯನ್ನ ಹೃದಯ ಮಂದಿರದಲ್ಲಿ ಸಂದರುಶನ ಕೊಡೊ ಇಲ್ಲಿ 1 ಸದೋಷಿಯು ನಾನು ದೋಷರಹಿತ ನೀನು ಶೇಷಶಯನ ನಿಮ್ಮ ನಾಮವೇ ಭೂಷಣ ಸ್ವರಮಣನೀ ನಿನ್ನ ಸ್ಮರಣೆಯಾ ಮಾಡದೆ ಹಾಳು ಮಾತುಗಳಿಂದ ಹೊತ್ತುಗಳದೆ ಮುಕುಂದಾ 2 ಮತ್ಗ್ಯಾದ್ಯನಂತವತಾರ ನೀನು ತುಚ್ಛದೈತ್ಯಸ ಸಂಹಾರ ಇಚ್ಛಾದಿಂದಲಿ ನೀನು ಸುರರಿಗಾಧಾರ ಕಾಳಿಯಮರ್ದನ ಕೃಷ್ಣಧೀರ ಗಂಭೀರಾಸುತಸುಕುಮಾರಾ 3
--------------
ಕಳಸದ ಸುಂದರಮ್ಮ
ಶ್ರೀಪತೀ-ಎನಗೇನು ಗತೀ ನನಗಾಗಲಿ ನಿನ್ನಲಿ ರತೀ ಪ ಚಪಲ ತನದಿ ಬಹು ಕಪಟಭಕುತಿನಟಿಸಿ ಗುಪಿತ ದೋಷಿಯು ಆದೆ ಅ.ಪ. ಬಟ್ಟೆ ನೋಡಲು ಬಹು ಛಂಧ-ಮೇಲೆ ಘಟ್ಟಿ ಬಣ್ಣದ ಕಾವಿ ಶಾಟಿ ಹಾಗೆ ಪಟ್ಟೆಮಡಿಗಳ ಭಾರೀ ಥಳಕೊ-ಬಹಳ ದಟ್ಟ ತುಳಸೀಸರಗಳ ಹೊಳಪೂ ಆಹಾ ಸೃಷ್ಠಿಗೊಡೆಯನೆ ಎನ್ನ ಕೆಟ್ಟ ತನಗಳನ್ನು ಎಷ್ಟೆಂದು ಬಣ್ಣಿಪೆ ನಿಟ್ಟ ನೆನೆಯದೆ ಪರರ ದೃಷ್ಟಿನೋಡುತ ಹಿಗ್ಗಿ ಅಟ್ಟಹಾಸದಿ ಕುಣಿದು ಮಾನವ ನನಗೇ 1 ವೇದ ವಾದಗಳೇನು ಕಾಣೆ-ಶುದ್ಧ ಸಾಧು ಕರ್ಮಗಳೊಂದು ಇಲ್ಲ-ಜನರ ಮೋದಗೋಸುಗವೇನೆ ಎಲ್ಲ_ಕಾಮ ಕ್ರೋಧವ ನಿಬಿಡಿತೇನೇ ಬಿಚ್ಚೆಹೃದಯಾ ಆಹಾ ಮಧ್ವರಾಯರ ಶಾಸ್ತ್ರ ಗ್ರಂಥ ಸಹ ತಿಳಿಯದೆಲೆ ಸಿದ್ಧ ಸಾಧಕನಂತೆ ಸಾಧುಲಿಂಗವ ತೋರಿ ಮುಗ್ಧಗೈಯ್ಯುತ ಮಂದಿ ಮೆದ್ದು ಪಕ್ವಾನ್ನಗಳ ಗೆದ್ದುಕೊಳ್ಳುವೆ ಬಹಳ ದಕ್ಷಿಣೆ ಬಹುಮಾನ 2 ನೇಮನಿಷ್ಠೆಗಳಾಟ ಹೊರಗೆ-ಗೃಹದಿ ಪ್ರೇಮವಿಲಾಸ ಆಟ ಕೂಟಜನ ಸ್ತೋಮರೆಲ್ಲವ ನುಡಿವ ನೀತಿ ಖ್ಯಾತಿ ಕಾಮುಕನಾಗಿ ಚರಿಸಿದೆ ಜಗದೀ ಆಹಾ ಹೇಮದಾಸೆಗೆ ಸೂಳೆ ಪ್ರೇಮವ ತೋರ್ಪಂತೆ ಕಾಮಿತಪ್ರದ ನಿನ್ನ ನಾಮ ಸವಿಯನುಣ್ಣದೆ ತಾಮಸರಿಗೆ ಉಪದೇಶ ನೀಡುತ ಸತ್ಯ- ಭಾಮೆಯರಸ ನಿನಗೆ ದೂರನಾದೆನಲ್ಲಾ 3 ಹಾಡಿಹಾಡುವೆ ಎತ್ತಿ ಸುತ್ತ ಜನರು ನೋಡಿ ಹಿಗ್ಗುತ ಬಾಪು ಬಾಪು ನುಡಿಗೆ ಹಾಡಿನಲ್ಲಿಹ ಸವಿಯುಣ್ಣ ದೇನೆ ಆಡಿ ಆಡಿಪೆ ಶಿರವ ಜ್ಞಾನಿಯಂತೆ ಆಹಾ ಕೇಡು ಚಿಂತಿಸಿ ಪರರ ಸ್ವಾರ್ಥಗೋಸುಗನಿತ್ಯ ಕಾಡಿ ಬೇಡುತ ಜನರ ದೂಡುತಿಹೆ ಸಂಸಾರ ಪ್ರೌಢ ಭಕ್ತರ ಗೋಷ್ಠಿಕೂಡಿ ಭಜಿಸದ ಎನ್ನ ಗಾಢ ಡಂಭಕೆ ಜಗದಿ ಈಡು ಕಾಣಿಸು ಸ್ವಾಮಿ4 ಭಾರಿ ಶಾಲುಗಳನ್ನೆ ಹೊದ್ದು-ನಿತ್ಯ ಕೇರಿಕೇರಿ ಪುರಾಣಗಳನ್ನು ಮೆದ್ದು-ಹಾರಿ ಹಾರುತ ತತ್ವರಾಶಿ ನುಡಿದು-ಊರು ಜ- ನರಮುಂದೆ ಪಾಂಡಿತ್ಯ ತೋರ್ಪೆ ಆಹಾ ತೋರಿ ತೋರುವೆ ಪರಮವೈರಾಗ್ಯ ಭಕ್ತಿಯ ದೂರಿ ದೂಡುವೆ ಪರರ ಹುಳುಕುಗಳನು ಎತ್ತಿ ಪಾರುಗಾಣದ ಕರುಣ ತೋರದಿದ್ದರೆ ಇನ್ನು 5 ಗುಡಿಗೆ ಹೋಗುವೆ ನಾನು-ನಿತ್ಯ ಅಲ್ಲಿ ಬೆಡಗು ಸ್ತ್ರೀಯರ ಹುಡುಕುವುದೇನೆ ಕೃತ್ಯ ದೃಢಭಕುತಿಯನು ಮಾಡಲೊಲ್ಲೆ ಸತ್ಯ-ನ ಮಡದಿ ಮಕ್ಕಳಿಗಿಲ್ಲ ಭೃತ್ಯಾನುಭೃತ್ಯಾ ಆಹಾ ಹುಡುಕೀ ನೋಡಿದಾಗ್ಯೂ ವಿರಕ್ತಿ ಭಕ್ತಿಗಳಿಲ್ಲ ಬಿಡಲು ಪೊರೆಯೆ ಪುರಾಣಶಾಸ್ತ್ರಗಳನ್ನು ನಿತ್ಯ ಎನ್ನ ಅನಾದಿ ನೀ ಕಲಿಸದಿದ್ದರೆ ಈಗ 6 ದೊಡ್ಡ ಪಂಡಿತ ನಾನೆಂಬ ಹೆಮ್ಮೆ-ಶುದ್ಧ ದಡ್ಡನೆಂಬುದ ಬಲ್ಲೆ ಮನದಿ-ಹಾಗೂ ಅಡ್ಡ ಬೀಳೆನು ಭಕ್ತ ಗಣಕೆ ಸುಳ್ಳು ವೊಡ್ಡುತವರನು ಹಳಿದೂ-ಕುದಿದೇ ಮನದೀ ಆಹಾ ದುಡ್ಡುಗೋಸುಗ ಬಹಳ ದೊಡ್ಡ ದಾಸನು ಎನಿಸೀ ಹೆಡ್ಡಮಂದಿಯ ಮುಂದೆ ದೊಡ್ಡ ಭಾಷಣ ಮಾಳ್ವೆ ಗುಡ್ಡದೊಡೆಯನೆ ಭಕ್ತಜಿಡ್ಡುಲೇಶವು ಕಾಣೆ ದೊಡ್ಡ ನಾಮವ ಹಾಕಿ ಸಡ್ಡೆ ಮಾಡದೆ ತಿರಿವ 7 ಕಚ್ಚಿ ಬಿಡದಿಹ ತುಚ್ಛ ಕಲಿಯು-ಬಹಳ ಮೆಚ್ಚಿ ಬಂದಿಹ ನವನು ಬಿಡುವನೇನು ಇಚ್ಛೆ ನನ್ನದು ನಡೆಯದೇ ನೊಂದು ತುಚ್ಛ ವಿಷಯದಿ ಸೆಳೆದು ಸೆಳೆಯುತಿಹನು ಆಹಾ ಇಚ್ಛೆಯಿಂದಲಿ ಜಗವ ಸೃಜಿಸಿ ಪಾಲಿಪಲೀಲೆ ಹಚ್ಚಿಕೊಂಡಿಹ ನಿನಗೆ ನನ್ನ ಪಾಲಿಪುದೇನು ಹೆಚ್ಚು ಕಾರ್ಯವೆ ಜೀಯ ಮುಚ್ಚಿಕೊಂಡಹ ನಿನ್ನ ಸ್ವಚ್ಛ ಬಿಂಬವ ತೊರಿ ಮೆಚ್ಚಿ ಕೊಡದಿರೆ ಜ್ಞಾನ 8 ಶ್ವಾಸಮತದಲಿ ಜನ್ಮ ವಿತ್ತೆ-ವಿಜಯ ದಾಸರ ಪ್ರಿಯ ಮೋಹನ್ನ ಪರಂಪರೆಯ ದಾಸನೆನಿಸಿ ಯೆನ್ನ ಮೆರೆಸಿ ಹೀಗೆ ದೋಷಿಗೈವುದು ಥರವೆ ಶ್ರೀಭಕ್ತಪ್ರಿಯ ಆಹಾ ವಾಸುದೇವನೆ ತುರ್ಯಲೇಸು ದೃಷ್ಟಿಯ ಬೀರೆ ನಾಶವಾಗದೆ ದೋಷ ಭಾಸವಾಗದೆ ಜ್ಞಾನ ಕಾಸುಬೀಡೆನು ಹಿರಿಯ ದಾಸರ ಗುಣ ನೋಡಿ ಲೇಸು ನೀಡೆಂತೆಂಬೆ ಶ್ರೀಕೃಷ್ಣವಿಠಲಾ9
--------------
ಕೃಷ್ಣವಿಠಲದಾಸರು
ಏಕೆ ಕಡೆಗಣ್ಣಿಂದ ನೋಡುವೆ - ಕೃಷ್ಣ |ನೀ ಕರುಣಾಕರನಲ್ಲವೆ ? ಪಭಕ್ತ ವತ್ಸಲ ನೀನಲ್ಲವೆ -ಕೃಷ್ಣ |ಚಿತ್ಸುಖದಾತ ನೀನಲ್ಲವೆ ? ||ಅತ್ಯಂತ ಅಪರಾಧಿ ನಾನಾದಡೇನಯ್ಯ|ಇತ್ತಿತ್ತ ಬಾ ಎನ್ನಬಾರದೆ ರಂಗ 1ಇಂದಿರೆಯರಸ ನೀನಲ್ಲವೆ - ಬಹುಸೌಂದರ್ಯನಿಧಿ ನೀನಲ್ಲವೆ ? ||ಮಂದಮತಿ ನಾನಾದಡೇನು ಕೃಪಾ-ಸಿಂಧುನೀ ರಕ್ಷಿಸಬಾರದೆ ರಂಗ2ದೋಷಿಯು ನಾನಾದಡೇನಯ್ಯ - ಸರ್ವ -ದೋಷರಹಿತ ನೀನಲ್ಲವೆ ? ||ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ |ಶೇಷಶಾಯಿ ಶ್ರೀಪುರಂದರವಿಠಲ3
--------------
ಪುರಂದರದಾಸರು
ಯಾಕೆ ಕಡೆಗಣ್ಣಿಂದ ನೋಡುವೆ-ಕೃಷ್ಣನೀ ಕರುಣಾಕರನಲ್ಲವೆ? ಪಭಕ್ತವತ್ಸಲ ನೀನಲ್ಲವೆ-ಕೃಷ್ಣ ಚಿತ್ತಸುಖದಾತ ನೀನಲ್ಲವೆ?ಅತ್ಯಂತ ಅಪರಾಧಿ ನಾನಾದಡೇನಯ್ಯಇತ್ತಿತ್ತ ಬಾ ಎನ್ನಬಾರದೆ ರಂಗ 1ಇಂದಿರೆಯರಸ ನೀನಲ್ಲವೆ ಬಹು ಸೌಂದರ್ಯನಿಧಿ ನೀನಲ್ಲವೆ?ಮಂದಮತಿ ನಾನಾದಡೇನು ಕೃಪಾಸಿಂಧುನೀ ರಕ್ಷಿಸಬಾರದೆ ರಂಗ2ದೋಷಿಯು ನಾನಾದಡೇನಯ್ಯ-ಸರ್ವ ದೋಷರಹಿತ ನೀನಲ್ಲವೆ?ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯಶೇಷಶಾಯಿ ಶ್ರೀಪುರಂದರವಿಠಲ3
--------------
ಪುರಂದರದಾಸರು