ದಾತ ಅವಗುಣ ಧೂತ
ಅವಗುಣ ಧೂತ ದೇವಾಧಿದೇವ ಶ್ರೀದೇವ ಅವಧೂತ ಧ್ರುವ
ಜೀವದ ಜೀವ ದೇವರ ದೇವ
ವಾಸುದೇವ 1
ಪ್ರಾಣಕ ಪ್ರಿಯ ಮುನಿಜನಾಶ್ರಯ
ಙÁ್ಞನಿಗಳಿಗೆ ಸಾಹ್ಯ ಅನುಕೂಲ ನಮ್ಮಯ್ಯ 2
ಅನಾಥ ಬಂಧು ಘನಕೃಪಾಸಿಂಧು
ಅನುದಿನ ದೊರೆವ ದೀನನಾಥನೆಂದೆಂದು 3
ಮನದ ಮಾಣಿಕ ಅಣುರೇಣುಕ ವ್ಯಾಪಕ
ಅನಂತಕೋಟಿ ಬ್ರಹ್ಮಾಂಡ ನಾಯಕ 4
ಪರಮ ಉದಾರ ಕರುಣಾಸಾಗರ
ತರಳ ಮಹಿಪತಿಸ್ವಾಮಿ ಇಹಪರ ಸಹಕಾರ 5