ಕರುಣಿಸು ಕರುಣಿಸು ಚನ್ನಕೇಶವನೇ
ಕರುಣಿಸು ನಾ ನಿನ್ನ ದಾಸನೆಂತೆಂದು ಪ
ಸಹÀಸ್ರನಾಮಗಳೀಶ ಬೇಗ ಮುಕ್ತಿಯನು 1
ನಂಬಿದೆ ಹರಿ ನಿನ್ನ ಚರಣವ ದೇವಾ
ಅಂಬುಜ ನಯನನೆ ನಿನ್ನ ಭಕ್ತಿಯನು 2
ಬಹಳ ನೊಂದೆನು ಸಂಸಾರ ಜಾಲದಲೀ
ಇಹ ಯಾತ್ರೆ ಮುಗಿಸುತ್ತ ಪರಗತಿಯನ್ನು 3
ವರ ದೂರ್ವಾಪುರದಲ್ಲಿ ನಿರುತನಾಗಿದ್ದು
ಸರಸದಿ ಭಕ್ತರ ಪೊರೆವ ಶ್ರೀ ಹರಿಯೇ 4