ಮನೆಗೆ ಬಾರೋ ರಂಗ ಮನಸಿಜಯ್ಯನೆ
ನೆನವು ಬಿಡದು ಎನ್ನ ಕಣ್ಣಿನೊಳಗೂ ನಿನ್ನ ಪ
ಮನಗೆ ಬಾರೋ ರಂಗ ಮನೆಗೆ ಬಾರೋ ಕೃಷ್ಣ
ಮನಗೆ ಬಾರೋ ರಾಮ ಅ.ಪ
ಮನಗೆ ಬಂದರೆ ನಿನ್ನ ಮಹಿಮೆಯ ಪಾಡುತ
ಮನ ದಣಿವಂದದಿ ಕುಣಿದೇನೊ ರಂಗಯ್ಯ 1
ಮನೆಯು ನಿನ್ನದು ಎನ್ನ ತನುವು ನಿನ್ನದು ಮುನ್ನ
ಧನವು ನಿನ್ನದು ಎನ್ನ ಘನವು ನಿನ್ನದು ರನ್ನ 2
ದರಹತಿತಾನನ ಸರಸಿಜನಯನ
ವರದವಿಠಲ ಪುಲಿಗಿರಿ ವರಸದನ 3