ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನೋ ಕಂಡೆ ಗುರುಚಿದಂಬರನಾ ತನು ಗೊಂಡು ಭೂಮಂಡಲದೊಳು ಚರಿಸುವನಾ ಪ ಪರಮಾತ್ಮ ಪರತತ್ವವನು ತಿಳಿದವನ ಧರೆಯ ಜನರನÀು ಪಾವನವ ಮಾಡುವನಾ ಕರುಣ ಸಮುದ್ರ ದೀನರ ದಯಾಪರನಾ ನೆರೆನಂಬಿದವರಿಗೆ ವರವ ಕೊಡುವನಾ 1 ಮಳೆ ಛಳಿ ಬಿಸಿಲು ಹಸಿವಿಗಂಜದವನ ಕಲ್ಲು ಮುಳ್ಳು ಬೆಟ್ಟವೆನ್ನದೆ ಚರಿಸುವನ ನೆಲೆಗಾಣದಂತಹ ಅಪಾರ ಮಹಿಮನು ಕಲಿಮನದೊಡ್ಡದಾನಂದ ನಿರ್ಗುಣನ 2 ಸ್ಮರಹರನಂತೆ ಭಸಿತ ದಿಗಂಬರನಾ ಕೆರೆಬಾವಿ ದೇವಾಲಯವನು ಕಟ್ಟಿಸುವನ ಪುರಹರನಂತೆ ಢಿಕ್ಕನೆ ಧರಿಸಿಹನ ನರ ಗುರಿಗಳು ಬಲ್ಲರೇನೋ ಇಂಥವನಾ 3 ಯಮನಿಯಮ ಅಷ್ಟಾಂಗ ನಿರತನ ಕಮಲಾರಿ ಪಿತನಂತೆ ಗಂಭೀರದವನ ಹಿಮವಂತನಂತೆ ಧೈರ್ಯದೊಳಿರುತಿಹನ ಕಮಲ ಬಾಂಧವನಂತೆ ತೇಜದಿಂದಿರುತಿಹನ 4 ಅರಿಗಳನರುವರ ನುಗ್ಗೊತ್ತಿದವನ ಕರಣೇಂದ್ರಿಯಂಗಳ ನಿಗ್ರಹಿಸಿದವನ ಪರಮ ದಾಸಗೆ ಆಲಿಂಗನವನಿತ್ತನಾ ಸ್ಥಿರ ಚಿದಾನಂದ ಪುರದ ದಿಗಂಬರನ 5
--------------
ಕವಿ ಪರಮದೇವದಾಸರು
ನರನಾದ ಮೇಲೆ |ಹರಿನಾಮ ಜಿಹ್ವೆಯೊಳಿರಬೇಕು ಪ.ಭೂತದಯಾಪರನಾಗಿರಬೇಕು |ಪಾತಕವೆಲ್ಲವ ಕಳೆಯಲು ಬೇಕು |ಮಾತು - ಮಾತಿಗೂಹರಿಎನಬೇಕು1ವೇದ - ಶಾಸ್ತ್ರಗಳನೋದಲು ಬೇಕು |ಭೇದಾಭೇದವ ತಿಳಿಯಲು ಬೇಕು |ಸಾಧು - ಸಜ್ಜನರ ಸಂಗದೊಳಿರಬೇಕು 2ತಂದೆ - ತಾಯಿಗಳ ಸೇವೆಯು ಬೇಕು |ಬಂದುದನುಂಡು ಸುಖಿಸಲು ಬೇಕು |ತಂದೆ ಪುರಂದರವಿಠಲನ ದಯೆಬೇಕು 3
--------------
ಪುರಂದರದಾಸರು