ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ದಯಾಕರನು ನೋಡೆ ಸದ್ಗುರುರಾಯಎಂಥಾ ದಯಾಕರನು ನೋಡೆ ಅಂತರಂಗದ ತಾಪವ ಹರಿಸಿ ಅಂತರಾತ್ಮನ ತೋರಿದ ಪ ಹಸಿವು ತೃಷೆ ಪರಿಹರಿಸಿ ನಾನಾಬಗೆವಿಷಯವೆಲ್ಲವ ತೊರೆಸಿಮುಸುಕ ನುಗಿದು ಮಾಯೆಯಪರಂಜ್ಯೋತಿಯ ಬೆಳಗಿಸಿದನು ನೋಡೆ 1 ಸಂಸಾರದ ಬಹು ದುಃಖವ ಹರಿಸಿಶಿಂಶುಮಾರ ಚಕ್ರವ ಹಂಸೋಹಂಸೋಹಮೆಂದೆನ್ನನೇರಿಸಿಸಂಶಯ ಹರಿಸಿದನೆ2 ನಿರುಪಮ ನೀನೆ ಎಂದು ನಿರ್ಗುಣಪರಮ ಪುರುಷನೆ ಬಂದುಗುರು ಚಿದಾನಂದ ಸಾಕ್ಷಾತ್ಕಾರ ನೀನೆಂದುಗುರು ನೀನೆ ನಿಜವೆಂದನೆ 3
--------------
ಚಿದಾನಂದ ಅವಧೂತರು
ಏತಕಿನಿತು ಕೋಪವಾಂತು ಭೀತಿಗೊಳಿಸುವೆ ರೀತಿಯೇನಿದನಾಥ ನಾಥ ನೀತಿಯೆನಿಪುದೆ ಪ. ಪರಮದಯಾಕರನು ನೀನೆನುತೊರೆವುದಾಗಮ ಪರಿಯ ನೋಡಲು, ಕರುಣೆ ನಿನ್ನೊಳಿರುವುದರಿಯೆ ನಾ1 ಪಾಲನೂಡಿದ ನಾರಿಗಂದು ಕಾಲನೆನಿಸಿದೆ ಕಾಲಕಾಲ ಶೂಲಿವಿನುತ ನೀಲವರ್ಣನೆ 2 ವರವನೀವ ವರದನೆಂದೇ ಹಿರಿಯರೊರೆವರು ಚರಣತಲದಿ ಶಿರವನಿಟ್ಟರು ತೆರೆಯೆ ಕಣ್ಗಳಂ3 ಅಡಿಯ ಪಿಡಿದು ಬೇಡಿಕೊಂಬೆ ಪೊಡವಿಗೊಡೆಯನೆ ಬಿಡದೆ ಕೈಯಪಿಡಿದು ಸಲಹೊ ಒಡೆಯ ಬೇಗನೆ 4 ಶೇಷಶೈಲ ಶಿಖರಧಾಮ ಯದುಕುಲೋತ್ತಮ ಶೇಷಶಯನ ಸಲಹು ನಮ್ಮ ಸತ್ಯವಿಕ್ರಮ5
--------------
ನಂಜನಗೂಡು ತಿರುಮಲಾಂಬಾ
ಏನೆಂಬೆನು ಪವಮಾನ ದೇವನಲಿ ಶ್ರೀನಿವಾಸ ಕರುಣಾ ತಾನಾಗೀತನಕಡೆಯಲಿ ಬಹ ಲಕ್ಷ್ಮೀಮಾನ, ದೀನ ಶರಣಾ ಪ. ದುರುಳ ದಶಾಸ್ಯನ ಸೆರೆಯೊಳಗಿಕ್ಕಿದ ಸುರವರನಣುಗನನೂ ನೆರೆಯದೆ ಮಾರುತಿ ಇರುವ ನಿಮಿತ್ತದಿ ಕರಿಸಿದ ರವಿಜನನು ತಿರುಗಿ ದ್ವಾಪರದಿ ಬರಲಾರ ರವಿಜನ ನರನಿಂದೊರಸಿದನು ಎರಡು ಯುಗದೊಳೀ ತೆರದಲಿ ಭಾರತಿ ವರನನು ಸೇರಿದನು 1 ಶ್ರೀಕರ ಜೀವರಿಗೇಕೀ ಭಾವವ ಪೋಕ ಮೃಗಗಳಂದೂ ಕಾಕರಟನದಂತೊರೆವದನರಿತು ದಿ- ವೌಕಸಗಣಬಂದು ಶ್ರೀಕಮಲಾಸನ ವಂದ್ಯನೆ ಸಲಹೆನೆ ಸಾಕುವ ತಾನೆಂದೂ ಈ ಕಲ್ಯಾಣ ಗುಣಾಢ್ಯನ ಭೂಮಿಗೆ ತಾ ಕಳುಹಿದನಂದು 2 ಅದರಿಂ ತರುವಾಯದಲಿ ಸುಖಾಂಭುದಿ ಒದಗಿದ ತ್ವರೆಯಿಂದ ಪದುಮನಾಭ ಮೂರುತಿಯ ಕೆಲದಿ ನಿಂ- ದದುಭುತ ಭರದಿಂದಾ ವಿಧಿಭವ ಲೋಕಾದ್ಯಧಿಕೃತ ಪುಣ್ಯಾ ಸ್ಪದ ತೋರುವೆನೆಂದಾ ವಿಧಿ ಪದ ಯೋಗ್ಯನ ಚದುರತನಕೆ ಮೆಚ್ಚಿ ಪೂರ್ಣಾನಂದ 3 ವರ ವೈಕುಂಠವ ರಜತ ಪೀಠ ಸ- ತ್ಪುರದೊಳಗಿರಿಸಿಹನು ವಿರಜೆಯ ಮುನಿಕಡತ ಸರಸಿಗೆ ಕರೆಸಿದ ಮುರದಾನವಹರನು ಚರಣಾಂಬುಜಕಿಂಕರವರ ಚಂದ್ರೇ- ಶ್ವರನಲಿ ಕರುಣವನು ಇರಿಸಿ ಭಜಿಪ ಸುರತರುವೆನಿಸಿದ ಶ್ರೀ- ವರನ ಮಹಾತ್ಮೆಯನು 4 ಜ್ಞಾನಾನಂದಾಂಬುಧಿ ಶೇಷಾದ್ರಿಯ ಶ್ರೀನಿವಾಸನಿವನು ತಾನಾಗಿಲ್ಲಿಗೆ ಬಂದಿಹ ಭಕ್ತಾ- ಧೀನ ದಯಾಕರನು ಮಾನಸಗತ ಮಾಲಿನ್ಯವ ಕಳೆದನು ಮಾನವ ಬಿಡಿಸುವನು ನಾನಾಭೀಷ್ಟವ ನಿರವಧಿ ಕೊಡುತಿಹ ಮೌನಿ ಜನಾರ್ಚಿತನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಹರಿ ಹರಿಯೆನ್ನಿ ಮಂದರಧರನೆ ಗತಿಯೆನ್ನಿ ದೀನ ದಯಾಕರನು ದಿವಿಭುವಿ ಪ. ಮಾನ ಭರಾಕರನು ನೀನೆಂದೊರವರನು ದುರಿತ- ಹೀನರ ಮಾಡುವನು 1 ತರಳನ ಮೊರೆ ಕೇಳಿ ವರ ನರ ಹರಿಯ ರೂಪವ ತಾಳಿ ದುರುಳ ಹಿರಣ್ಯಕನಾ ಕರುಳನು ಕೊರಳೊಳು ಧರಿಸಿದನಾ 2 ಗಜರಾಜನ ಕಾಯ್ದಾ ಬಾಣನ ಭುಂಜ ಪುಂಜವ ಕೊಯ್ದಾ ಗಜಪುರವರಗೊಲಿದಾ ಚರಣಾಂ- ಬುಜವೀವುತ ನಲಿದಾ 3 ನೆನೆದಲ್ಲಿಗೆ ಬರುವಾ ನಂಬಿದ ಜನರ ಸಂಗಡವಿರುವಾ ಅನುಗಾಲವು ಪೊರೆವಾ ಮನಸಿಜ ಜನನಿಯನಪ್ಪಿರುವಾ 4 ದಾಸರ ಸಲಹುವದು ಶೇಷ ಗಿ- ರೀಶನ ಮಹಾ ಬಿರುದು ದೋಷಗಳನು ತರಿದು ಈರೆರ- ಡಾಸೆ ಪೂರಿಪ ನೆರೆದೂ 5
--------------
ತುಪಾಕಿ ವೆಂಕಟರಮಣಾಚಾರ್ಯ