ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶರಣು ಪ ಪರಿಹರಿಸು ಕರುಣಾಳು ಬಿನ್ನಪವ ಕೇಳು ಅ.ಪ. ವಾಸವಾದ್ಯಮರನುತ ವನಜಸಂಭವನ ಸುತ ನೀ ಸಲಹೊ ಕೈಲಾಸವಾಸ ಈಶ ಕ್ಲೇಶ ಮೋದಾದಿ ಸಮ ತಿಳಿದು ಅಶ್ವತ್ಥಾಮ ಶ್ರೀಶುಕ ದುರ್ವಾಸ ಸ್ಫಟಿಕ ಸಮಭಾಸ 1 ವೈಕಾರಿಕಾದಿ ತ್ರೈರೂಪ ನಿನ್ನಯ ಕೋಪ ಶೋಕಕೊಡುವುದು ದೈತ್ಯಜನಕೆ ನಿತ್ಯ ಲೌಕಿಕಗಳೆಲ್ಲ ವೈದಿಕವಾಗಲೆನಗೆ ಮೈ ನಾಕಿ ಹೃತ್ಕುಮುದೇಂದು ಭಕ್ತಜನ ಬಂಧು 2 ಪವಮಾನತನಯ ನಿನ್ನವರಲ್ಲಿ ಕೊಡು ವಿನಯ ದಿವಸ ಸವನಗಳಲ್ಲಿ ಎನ್ನಿರುವ ನೀ ಬಲ್ಲಿ ಪವನ ದ್ವಿತಿಯರೂಪ ಸತತ ಎನ್ನಯಪಾಪ ಅವಲೋಕಿಸದಲೆನ್ನ ಸಲಹೊ ಸುರಮಾನ್ಯ 3 ಶೇಷನಂದನ ಶೇಷಭೂಷಣನೆ ನಿಶೇಷ ದೋಷರಹಿತನ ತೋರು ಕರುಣವನು ಬೀರು ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂದೆ ಶೋಷಿಸು ಭವಾಮಯವ ಬೇಡುವೆನು ದಯವ4 ಗರ್ಗ ಮುನಿಕರಪದುಮ ಪೂಜ್ಯ ಚರಣಾಬ್ಜ ಮಮ ದುರ್ಗುಣಗಳೆಣಿಸದಲೆ ಜಗದೆ ಮೇಲೆ ನಿರ್ಗತಾಶನ ಜಗನ್ನಾಥ ವಿಠಲನ ಸ ನ್ಮಾರ್ಗವನೆ ತೋರು ಈ ದೇಹ ನಿನ ತೇರು 5
--------------
ಜಗನ್ನಾಥದಾಸರು